ರೈಲ್ವೇ ಸಚಿವಾಲಯ
ಸಮಸ್ತಿಪುರ ವಿಭಾಗದ 21 ನಿಲ್ದಾಣಗಳಲ್ಲಿ 233 ಕೋಟಿ ರೂ.ಗೆ ವೆಚ್ಚದಲ್ಲಿ ‘ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್’ ಅಳವಡಿಕೆಗೆ ಭಾರತೀಯ ರೈಲ್ವೆ ಅನುಮೋದನೆ
ಸಿಗ್ನಲಿಂಗ್ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಕವಚ್ ಅನುಷ್ಠಾನವನ್ನು ಬೆಂಬಲಿಸಲು ಆಧುನಿಕ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆ
ಪ್ರಕಟಣಾ ದಿನಾಂಕ:
01 SEP 2026 11:35AM by PIB Bengaluru
ಪೂರ್ವ ಮಧ್ಯ ರೈಲ್ವೆಯ (ಇಸಿಆರ್) ಸಮಸ್ತಿಪುರ ವಿಭಾಗದ 21 ನಿಲ್ದಾಣಗಳಲ್ಲಿ ಒಟ್ಟು 233 ಕೋಟಿ ರೂ.ಗಳ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (ಇಐ) ಒದಗಿಸಲು ಭಾರತೀಯ ರೈಲ್ವೆ ಅನುಮೋದನೆ ನೀಡಿದೆ.
21 ನಿಲ್ದಾಣಗಳಲ್ಲಿ ಸಿಗ್ನಲಿಂಗ್ ಮೂಲಸೌಕರ್ಯಗಳ ಆಧುನೀಕರಣ
ಅನುಮೋದಿತ ಕಾಮಗಾರಿಯು, ಸಮಸ್ತಿಪುರ್ ವಿಭಾಗದ 21 ನಿಲ್ದಾಣಗಳಲ್ಲಿ ಪ್ರಸ್ತುತ ಇರುವ ‘ಪ್ಯಾನೆಲ್ ಇಂಟರ್‌ಲಾಕಿಂಗ್’ ವ್ಯವಸ್ಥೆ ಬದಲಿಗೆ ‘ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್’ ಅನ್ನು ಅಳವಡಿಸುವುದನ್ನು ಒಳಗೊಂಡಿದೆ. ಆಧುನಿಕ ಸಿಗ್ನಲಿಂಗ್ ವ್ಯವಸ್ಥೆಯು ವಿಭಾಗದಾದ್ಯಂತ ರೈಲ್ವೆ ಸಿಗ್ನಲಿಂಗ್ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾದ 'ಕವಚ್' ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುತ್ತದೆ.
ರೈಲ್ವೆ ಸುರಕ್ಷತೆ ಮತ್ತು ಕಾರ್ಯಾಚರಣೆ ದಕ್ಷತೆ ಬಲವರ್ಧನೆ
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಅಳವಡಿಕೆಯು ಗುರುತಿಸಲಾದ ನಿಲ್ದಾಣಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಆಧುನೀಕರಿಸುತ್ತದೆ ಮತ್ತು ‘ಕವಚ್’ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಚ್ಚು ಸುಧಾರಿತ ಸಿಗ್ನಲಿಂಗ್ ಮೂಲಸೌಕರ್ಯವನ್ನು ಒದಗಿಸುತ್ತದೆ.
‘ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್’ ಎಂಬುದು ಆಧುನಿಕ ಸಿಗ್ನಲಿಂಗ್ ತಂತ್ರಜ್ಞಾನವಾಗಿದ್ದು, ಇದು ಹಳೆಯ ರಿಲೇ-ಆಧಾರಿತ ವ್ಯವಸ್ಥೆಗಳನ್ನು ಕಂಪ್ಯೂಟರ್-ಆಧಾರಿತ ಇಂಟರ್‌ಲಾಕಿಂಗ್‌ನೊಂದಿಗೆ ಬದಲಾಯಿಸುತ್ತದೆ. ಇದು ಹೆಚ್ಚಿನ ವಿಶ್ವಾಸಾರ್ಹತೆ, ತ್ವರಿತ ದೋಷ ಪತ್ತೆ, ಸುಲಭ ನಿರ್ವಹಣೆ ಮತ್ತು ಕಾರ್ಯಾಚರಣೆಯ ನಮ್ಯತೆಯನ್ನು ಖಚಿತಪಡಿಸುತ್ತದೆ.
ಈ ಉಪಕ್ರಮವು ಸಿಗ್ನಲಿಂಗ್ ವ್ಯವಸ್ಥೆಗಳ ಆಧುನೀಕರಣ, ರೈಲ್ವೆ ಸುರಕ್ಷತೆಯ ಬಲವರ್ಧನೆ ಮತ್ತು ತನ್ನ ಜಾಲದಾದ್ಯಂತ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಒಂದು ಭಾಗವಾಗಿದೆ.
*****
(ಪ್ರಕಟಣೆ ಐ.ಡಿ.: 2305378)
ವಿಸಿಟರ್ ಕೌಂಟರ್ : 8