ರೈಲ್ವೇ ಸಚಿವಾಲಯ
azadi ka amrit mahotsav

ಮೊರಾದಾಬಾದ್ ವಿಭಾಗದ ಉಳಿದ 712 ಆರ್.ಕಿ.ಮೀ ವ್ಯಾಪ್ತಿಯಲ್ಲಿ ‘ಕವಚ್ 4.0’ ಅಳವಡಿಕೆಗಾಗಿ 170 ಕೋಟಿ ರೂ.ಗಳನ್ನು ಅನುಮೋದಿಸಿದ ಭಾರತೀಯ ರೈಲ್ವೆ

ಪ್ರಕಟಣಾ ದಿನಾಂಕ: 01 SEP 2026 11:03AM by PIB Bengaluru

ಉತ್ತರ ರೈಲ್ವೆಯ ಮೊರಾದಾಬಾದ್ ವಿಭಾಗದ ಉಳಿದ 712 ರೂಟ್ ಕಿಲೋಮೀಟರ್ (ಆರ್‌.ಕೆ.ಎಂ) ವ್ಯಾಪ್ತಿಯಲ್ಲಿ ಒಟ್ಟು 170 ಕೋಟಿ ರೂ.ಗಳ ವೆಚ್ಚದಲ್ಲಿ ‘ಕವಚ್ ಆವೃತ್ತಿ 4.0’ ಅನ್ನು ಅಳವಡಿಸಲು ಭಾರತೀಯ ರೈಲ್ವೆ ಅನುಮೋದನೆ ನೀಡಿದೆ.

ಅನುಮೋದಿತ ಕಾಮಗಾರಿಯು, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ರಕ್ಷಣಾ (ಎಟಿಪಿ) ವ್ಯವಸ್ಥೆಯ ನಿಯೋಜನೆಯ ಮೂಲಕ ವಿಭಾಗದ ರೈಲ್ವೆ ಸುರಕ್ಷತಾ ಮೂಲಸೌಕರ್ಯವನ್ನು ಬಲಪಡಿಸುತ್ತದೆ. ‘ಕವಚ್ 4.0’ರ ಅನುಷ್ಠಾನವು ಗುರುತಿಸಲಾದ ವಿಭಾಗಗಳಾದ್ಯಂತ ರೈಲು ಕಾರ್ಯಾಚರಣೆಗಳಿಗೆ ಸುಧಾರಿತ ಸುರಕ್ಷತಾ ವ್ಯವಸ್ಥೆಯನ್ನು ಒದಗಿಸುತ್ತದೆ.

ಸ್ಥಳೀಯ ಕವಚ್ ತಂತ್ರಜ್ಞಾನದೊಂದಿಗೆ ರೈಲ್ವೆ ಸುರಕ್ಷತೆಯ ಬಲವರ್ಧನೆ

ಕವಚ್ ಎಂಬುದು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣಾ (ಎಟಿಪಿ) ವ್ಯವಸ್ಥೆಯಾಗಿದೆ. ಇದು ‘ಸಿಗ್ನಲ್ ಪಾಸಿಂಗ್ ಅಟ್ ಡೇಂಜರ್’ (ಎಸ್‌ಪಿಎಡಿ) ಅನ್ನು ತಡೆಯಲು ಸಹಾಯ ಮಾಡುತ್ತದೆ, ಅಸುರಕ್ಷಿತ ಸಂದರ್ಭಗಳನ್ನು ತಪ್ಪಿಸಲು ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್ ಹಾಕುತ್ತದೆ, ನಿರ್ಣಾಯಕ ಪರಿಸ್ಥಿತಿಗಳಲ್ಲಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ ಮತ್ತು ಡಿಕ್ಕಿ ಹೊಡೆಯುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಈ ಉಪಕ್ರಮವು ಭಾರತೀಯ ರೈಲ್ವೆಯು ತನ್ನ ಜಾಲದಾದ್ಯಂತ ಕವಚ್ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ರೈಲ್ವೆ ಸಿಗ್ನಲಿಂಗ್ ಹಾಗೂ ರೈಲು ರಕ್ಷಣಾ ವ್ಯವಸ್ಥೆಗಳನ್ನು ಆಧುನೀಕರಿಸುವ ನಿರಂತರ ಪ್ರಯತ್ನಗಳ ಒಂದು ಭಾಗವಾಗಿದೆ.

 

*****


(ಪ್ರಕಟಣೆ ಐ.ಡಿ.: 2305366) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Telugu