ಪ್ರಧಾನ ಮಂತ್ರಿಯವರ ಕಛೇರಿ
ಉಜ್ಬೇಕಿಸ್ತಾನ್ ನ ಯುವ ಸ್ನೇಹಿತರ ಉತ್ಸಾಹಕ್ಕೆ ಪ್ರಧಾನಮಂತ್ರಿ ಸಂತಸ
ಪ್ರಕಟಣಾ ದಿನಾಂಕ:
29 AUG 2026 5:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಜ್ಬೇಕಿಸ್ತಾನ್ ದೇಶಕ್ಕೆ ಭೇಟಿ ನೀಡುವ ಮೊದಲು ಉಜ್ಬೇಕಿಸ್ತಾನದ ಯುವ ಸ್ನೇಹಿತರ ಉತ್ಸಾಹಕ್ಕೆ ಸಂತೋಷ ವ್ಯಕ್ತಪಡಿಸಿದರು. ಅವರ ಉತ್ಸಾಹವನ್ನು ಪ್ರದರ್ಶಿಸುವ ವೀಡಿಯೊವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಅವರು ಹಿಂದಿಯಲ್ಲಿ ತುಂಬಾ ಸುಂದರವಾಗಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುವುದನ್ನು ನೋಡುವುದು ವಿಶೇಷವಾಗಿ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು.
ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಪ್ರಕಟ ಮಾಡಿದ್ದಾರೆ:
ನಾನು ನನ್ನ ಉಜ್ಬೇಕಿಸ್ತಾನ್ ಭೇಟಿಯನ್ನು ಪ್ರಾರಂಭಿಸಲಿರುವಾಗ, ಉಜ್ಬೇಕಿಸ್ತಾನ್ ದೇಶದ ನನ್ನ ಯುವ ಸ್ನೇಹಿತರ ಉತ್ಸಾಹವನ್ನು ಈ ವೀಡಿಯೊದಲ್ಲಿ ಸುಂದರವಾಗಿ ವ್ಯಕ್ತಪಡಿಸಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.
ಇದನ್ನು ಇನ್ನಷ್ಟು ವಿಶೇಷವಾಗಿಸುವುದು ಅವರು ಹಿಂದಿಯಲ್ಲಿ ವೀಡಿಯೊ ಮಾಡಿದರು ಮತ್ತು ಅವರು ಅದನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ!
*****
(ಪ್ರಕಟಣೆ ಐ.ಡಿ.: 2304834)
ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam