ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಕೇಂದ್ರ ಸರ್ಕಾರದಿಂದ ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಗಳ ಮೇಲ್ವಿಚಾರಣೆ ಮತ್ತು ಸಕಾಲಿಕ ವಿತರಣೆ ಬಲವರ್ಧನೆ
ಪರಿಣಾಮಕಾರಿ ನಿಧಿ ಬಳಕೆಗೆ ನಿಗದಿತ ಪರಿಶೀಲನಾ ಸಭೆಗಳು, ನೇರ ನಗದು ವರ್ಗಾವಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳು ಬೆಂಬಲ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಕ್ರಮದಿಂದ ಫಲಾನುಭವಿಗಳಿಗೆ ಸಕಾಲಿಕ ಸೌಲಭ್ಯ ವಿತರಣೆ
ಪ್ರಕಟಣಾ ದಿನಾಂಕ:
28 AUG 2026 1:32PM by PIB Bengaluru
ದೇಶಾದ್ಯಂತ ಪರಿಶಿಷ್ಟ ಜಾತಿ ಸಮುದಾಯಗಳ ಶೈಕ್ಷಣಿಕ ಪ್ರಗತಿ, ಸಾಮಾಜಿಕ-ಆರ್ಥಿಕ ಸಬಲೀಕರಣ, ಜೀವನೋಪಾಯ ಉತ್ತೇಜನ ಮತ್ತು ರಕ್ಷಣೆಗಾಗಿ ಸರ್ಕಾರವು ಸಮಗ್ರ ಶ್ರೇಣಿಯ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
2021-22 ರಿಂದ 2025-26 ರವರೆಗಿನ ಆರ್ಥಿಕ ವರ್ಷಗಳಲ್ಲಿ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್, ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ, ಉನ್ನತ ದರ್ಜೆಯ ಶಿಕ್ಷಣ, ಉಚಿತ ತರಬೇತಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ, ಪ್ರಧಾನ ಮಂತ್ರಿ ಅನುಶುಚಿತ್ ಜಾತಿ ಅಭ್ಯುದಯ ಯೋಜನೆ (ಪಿಎಂ-ಎಜೆಎವೈ), ಉದ್ದೇಶಿತ ಪ್ರದೇಶಗಳಲ್ಲಿನ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಯೋಜನೆ (ಶ್ರೇಷ್ಠ), ಪರಿಶಿಷ್ಟ ಜಾತಿಗಳಿಗೆ ಸಾಹಸೋದ್ಯಮ ಬಂಡವಾಳ ನಿಧಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಪ್ರಮುಖ ಉಪಕ್ರಮಗಳಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ವಿವಿಧ ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಗಳ ಅಡಿಯಲ್ಲಿ ನಿಧಿಗಳ ಅನುಷ್ಠಾನ ಮತ್ತು ಬಳಕೆಯನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯದಿಂದ ಕೈಗೊಳ್ಳಲಾಗುತ್ತಿದೆ. ನಿಧಿಯ ಬಿಡುಗಡೆಯು ಸಂಪೂರ್ಣ ಪ್ರಸ್ತಾವನೆಗಳ ಸ್ವೀಕೃತಿ, ಬಳಕೆ ಪ್ರಮಾಣಪತ್ರಗಳ ಸಲ್ಲಿಕೆ, ಅನ್ವಯವಾಗುವಲ್ಲೆಲ್ಲಾ ಎಸ್ ಎನ್ ಎ-ಸ್ಪರ್ಶ್ ನಲ್ಲಿ ಸೇರ್ಪಡೆ, ಯೋಜನೆಯ ಮಾರ್ಗಸೂಚಿಗಳ ಅನುಸರಣೆ ಮತ್ತು ನಿಗದಿತ ಹಣಕಾಸು ಮಾನದಂಡಗಳ ಅನುಸರಣೆಗೆ ಸಂಬಂಧಿಸಿದೆ.

ವೆಚ್ಚವನ್ನು ಸುಧಾರಿಸಲು ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಯೋಜನೆಗಳ ನಿಗಿದಿತ ಆಂತರಿಕ ಪರಿಶೀಲೆನಗಳನ್ನು ನಡೆಸುತ್ತದೆ. ಅನುಷ್ಠಾನವನ್ನು ನಿರ್ಣಯಿಸಲು ಮತ್ತು ಕಾರ್ಯಕ್ರಮದ ವಿತರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಮೂರನೇ ವ್ಯಕ್ತಿಯ ಮೌಲ್ಯಮಾಪನಗಳು ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಸಹ ಕೈಗೊಳ್ಳಲಾಗುವುದು.
ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗಳನ್ನು ಅತಿ ವೇಗವಾಗಿ ಮತ್ತು ಹೆಚ್ಚು ಪಾರದರ್ಶಕವಾಗಿ ವರ್ಗಾಯಿಸಲು ಅನುಕೂಲವಾಗುವಂತೆ ನೇರ ನಗದು ವರ್ಗಾವಣೆ ವಿಧಾನದ ಮೂಲಕ ವಿದ್ಯಾರ್ಥಿವೇತನ ಸಹಾಯ ಹೆಚ್ಚಾಗಿ ವಿತರಿಸಲಾಗುತ್ತದೆ. ಈ ಕಾರ್ಯವಿಧಾನವು ನಿಖರವಾದ ಫಲಾನುಭವಿ ಗುರಿ ಬೆಂಬಲಿಸುತ್ತದೆ ಮತ್ತು ವಿತರಣೆಯಲ್ಲಿನ ವಿಳಂಬ ತಗ್ಗಿಸುತ್ತದೆ.
ಸಚಿವಾಲಯವು ನಿಗದಿತವಾಗಿ ರಾಷ್ಟ್ರ ಮಟ್ಟದ ಚಿಂತನ ಶಿಬಿರಗಳು, ಪ್ರಾದೇಶಿಕ ಸಭೆಗಳು, ರಾಷ್ಟ್ರೀಯ ಸಮ್ಮೇಳನಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲುದಾರರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆಗಳ ಮೂಲಕ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
ಅನುಷ್ಠಾನದಲ್ಲಿನ ನೂನ್ಯತೆಗಳನ್ನು ಗುರುತಿಸಲು ಮತ್ತು ಸಕಾಲಿಕ ಸರಿಪಡಿಸುವ ಕ್ರಮಗಳನ್ನು ಸುಗಮಗೊಳಿಸಲು ಮಾಸಿಕ ಮತ್ತು ತ್ರೈಮಾಸಿಕವಾಗಿ ವೆಚ್ಚದ ಗುರಿಗಳನ್ನು ಪರಿಶೀಲಿಸಲಾಗುತ್ತದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ಅಭಿಯಾನಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಗದಿತ ಅನುಸರಣೆಯ ಮೂಲಕ ಜಾಗೃತಿ ಮತ್ತು ಸಂಪರ್ಕ ಉಪಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತದೆ.
ಈ ಪ್ರಯತ್ನಗಳು ಅರ್ಹ ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸುವುದು, ಪ್ರಸ್ತಾವನೆಗಳ ಸಲ್ಲಿಕೆಯನ್ನು ಸುಧಾರಿಸುವುದು ಮತ್ತು ಹಂಚಿಕೆಯಾದ ನಿಧಿಗಳ ಸಕಾಲಿಕ ಬಳಕೆ ಖಾತ್ರಿಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.
ಮೇಲ್ವಿಚಾರಣೆ ಬಲವರ್ಧನೆ, ಡಿಜಿಟಲ್ ನಿಧಿ-ನಿರ್ವಹಣಾ ವ್ಯವಸ್ಥೆಗಳು, ಪ್ರಯೋಜನಗಳ ನೇರ ವರ್ಗಾವಣೆ, ನಿಗದಿತ ಮೌಲ್ಯಮಾಪನ ಮತ್ತು ಅನುಷ್ಠಾನ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದ ಮೂಲಕ, ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳನ್ನು ಪರಿಣಾಮಕಾರಿಯಾಗಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.
ದೇಶಾದ್ಯಂತ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಶಿಕ್ಷಣ, ಘನತೆ, ಜೀವನೋಪಾಯ ಭದ್ರತೆ ಮತ್ತು ಸಾಮಾಜಿಕ-ಆರ್ಥಿಕ ಸಬಲೀಕರಣವನ್ನು ಮುನ್ನಡೆಸಲು ಈ ಉಪಕ್ರಮಗಳು ಪ್ರಯತ್ನಿಸುತ್ತವೆ.
*****
(ಪ್ರಕಟಣೆ ಐ.ಡಿ.: 2304193)
ವಿಸಿಟರ್ ಕೌಂಟರ್ : 16