ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಬಾಲ್ಯ ವಿವಾಹ ನಿರ್ಮೂಲನೆ ನಮ್ಮ ರಾಷ್ಟ್ರೀಯ ಬದ್ಧತೆ: ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ

ಪ್ರಕಟಣಾ ದಿನಾಂಕ: 26 AUG 2026 2:40PM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಭಾರತವನ್ನು ಬಾಲ್ಯವಿವಾಹದಿಂದ ಮುಕ್ತಗೊಳಿಸುವ ರಾಷ್ಟ್ರದ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.

ಭಾರತವನ್ನು ಬಾಲ್ಯವಿವಾಹದಿಂದ ಮುಕ್ತಗೊಳಿಸಲು ನಾವೆಲ್ಲರೂ ಒಟ್ಟಾಗಿ ಸಂಕಲ್ಪ ಮಾಡಿದ್ದೇವೆ ಎಂದು ಕೇಂದ್ರ ಸಚಿವರು ಎಕ್ಸ್ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ. ಪ್ರತಿಯೊಬ್ಬ ಹೆಣ್ಣು ಮಗು ಸುರಕ್ಷಿತ, ಶಿಕ್ಷಿತ ಮತ್ತು ಸಬಲೀಕೃತ ಭವಿಷ್ಯದತ್ತ ಮುನ್ನಡೆಯುವಂತಾಗಲು ಬಾಲ್ಯವಿವಾಹ ನಿರ್ಮೂಲನೆಯು ನಮ್ಮ ರಾಷ್ಟ್ರೀಯ ಬದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲ್ ವಿವಾಹ್ ಮುಕ್ತ್ ಭಾರತ್ (ಬಾಲ್ಯ ವಿವಾಹ ಮುಕ್ತ ಭಾರತ)ದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲು ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2303731) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी