ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಯುಪಿಐನ 10 ವರ್ಷಗಳನ್ನು ಆಚರಿಸಿದರು, ಪ್ರತಿಯೊಬ್ಬ ಭಾರತೀಯನ ವಾಲೆಟ್ ಫೋನ್ ಆಗಿದೆ

ಪ್ರಕಟಣಾ ದಿನಾಂಕ: 25 AUG 2026 10:00AM by PIB Bengaluru

ಏಕೀಕೃತ ಪಾವತಿ ಇಂಟರ್ಫೇಸ್ (ಯು.ಪಿ.ಐ.) ವ್ಯವಸ್ಥೆಯು 10 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮವನ್ನು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಆಚರಿಸಿದರು.

'ಎಕ್ಸ್' ತಾಣದ ಸಂದೇಶದಲ್ಲಿ ಕೇಂದ್ರ ರಾಜ್ಯ ಸಚಿವರು, ಹಣವನ್ನು ಕೊಂಡೊಯ್ಯುವುದು ಅತ್ಯಗತ್ಯವಾಗಿದ್ದ ಕಾಲವಿತ್ತು, ಆದರೆ ಇಂದು ಫೋನ್ ಹಣದ ಕೈಚೀಲವಾಗಿದೆ ಎಂದು ಹೇಳಿದರು. ಚಹಾದ ಅಂಗಡಿಗಳಿಂದ ಹಿಡಿದು ಕಾಲೇಜು ಕ್ಯಾಂಟೀನ್ ಗಳವರೆಗೆ ಮತ್ತು ಹಳ್ಳಿಗಳಿಂದ ದೊಡ್ಡ ವ್ಯವಹಾರಗಳವರೆಗೆ, ಹಣ ಪಾವತಿಗಳನ್ನು ಯುಪಿಐ ಗಮನಾರ್ಹವಾಗಿ ಸರಳಗೊಳಿಸಿದೆ - ಬೆರಳತುದಿಯ ಕೆಲವು ಟ್ಯಾಪ್ ಗಳು, ಕೆಲವು ಸೆಕೆಂಡುಗಳು ಮತ್ತು ಯಾವುದೇ ತೊಂದರೆ ಇಲ್ಲದೆ ಹಣದ ವ್ಯವಹಾರ ನಡೆಯುತ್ತಿದೆ ಎಂದು ಅವರು ಹೇಳಿದರು.

ಡಿಜಿಟಲ್ ಪಾವತಿಗಳ ಈ ಸುಲಭ ಮತ್ತು ವೇಗದ ಹೆಜ್ಜೆಯು ಇಂದು ನಿರ್ಮಿಸಲಾಗುತ್ತಿರುವ ಅಧುನಿಕ ಭಾರತವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2303131) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , हिन्दी , Gujarati