ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳಾ ಚಾಲಿತ ಗ್ರಾಮೀಣ ಉದ್ಯಮಗಳ ಬೆಳವಣಿಗೆಯನ್ನು ವೇಗಗೊಳಿಸುವ ಪ್ರಸ್ತಾಪಗಳನ್ನು ಪರಿಶೀಲಿಸಿದ ಸಶಕ್ತ ಸಮಿತಿ

प्रविष्टि तिथि: 22 AUG 2026 9:53AM by PIB Bengaluru

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಶಕ್ತ ಸಮಿತಿಯ ಸಭೆಯು, ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ನ ಕೃಷಿಯೇತರ ಜೀವನೋಪಾಯ (ಎನ್‌ಎಫ್‌ಎಲ್‌) ವಿಭಾಗದ ಅಡಿಯಲ್ಲಿ ವಿವಿಧ ಪ್ರಸ್ತಾಪಗಳನ್ನು ಇಂದು ಪರಿಶೀಲಿಸಿತು. ಮಹಿಳಾ ಚಾಲಿತ ಗ್ರಾಮೀಣ ಉದ್ಯಮಗಳನ್ನು ಸಬಲೀಕರಣಗೊಳಿಸುವುದು, ವಿಸ್ತರಿಸುವುದು ಮತ್ತು ಸಣ್ಣ ಪ್ರಮಾಣದ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಉದ್ಯಮಗಳನ್ನು ಉನ್ನತ ಮಟ್ಟದ, ಪ್ರಗತಿಪರ ವ್ಯವಹಾರಗಳಾಗಿ ಪರಿವರ್ತಿಸಲು ಮಾರ್ಗವನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

Image

ಈ ಸಭೆಯಲ್ಲಿ ಜಂಟಿ ಕಾರ್ಯದರ್ಶಿ (ಗ್ರಾಮೀಣ ಜೀವನೋಪಾಯ) ಶ್ರೀ ಅಮಿತ್ ಶುಕ್ಲ ಮತ್ತು ಜಂಟಿ ಕಾರ್ಯದರ್ಶಿ (ಗ್ರಾಮೀಣ ಜೀವನೋಪಾಯ) ಶ್ರೀಮತಿ ಸ್ವಾತಿ ಶರ್ಮಾ ಸಹ ಉಪಸ್ಥಿತರಿದ್ದರು. ಗ್ರಾಮೀಣ ಮಹಿಳೆಯರಿಗೆ ಉದ್ಯಮಶೀಲತೆ ಆಧಾರಿತ ಜೀವನೋಪಾಯದ ಅವಕಾಶಗಳನ್ನು ವೇಗಗೊಳಿಸುವುದು ಮತ್ತು 6 ಕೋಟಿ ಲಖ್‌ಪತಿ ದೀದಿಗಳನ್ನು ಸೃಷ್ಟಿಸುವ ರಾಷ್ಟ್ರೀಯ ಗುರಿಗೆ ಕೊಡುಗೆ ನೀಡುವುದರ ಕುರಿತು ಚರ್ಚೆ ನಡೆಸಲಾಯಿತು.

Image

ಸಮಿತಿಯು ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ನಾಲ್ಕು ಹೊಸ ಇನ್‌ಕ್ಯುಬೇಟರ್ ಪ್ರಸ್ತಾಪಗಳನ್ನು ಪರಿಶೀಲಿಸಿತು. ಇವುಗಳಿಗೆ ಕ್ರಮವಾಗಿ ಐಐಟಿ ಪಟ್ನಾ, ಐಐಎಂ ಜಮ್ಮು, ಐಐಎಂ ಲಕ್ನೋ ಮತ್ತು ಐಐಟಿ ಗಾಂಧಿನಗರ ಸಂಸ್ಥೆಗಳನ್ನು ಇನ್‌ಕ್ಯುಬೇಟರ್ ಪಾಲುದಾರರನ್ನಾಗಿ ಪ್ರಸ್ತಾವಿಸಲಾಗಿದೆ. ಆಯಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು, ಎಸ್‌ಆರ್‌ಎಲ್‌ಎಮ್‌ಗಳ ರಾಜ್ಯ ಮಿಷನ್ ನಿರ್ದೇಶಕರು/ಸಿಇಒಗಳು ಮತ್ತು ಪ್ರಸ್ತಾವಿತ ಇನ್‌ಕ್ಯುಬೇಟರ್ ಸಂಸ್ಥೆಗಳ ಪ್ರತಿನಿಧಿಗಳು ಈ ಪ್ರಸ್ತಾಪಗಳನ್ನು ಮಂಡಿಸಿದರು. ಈ ನಾಲ್ಕು ಕಾರ್ಯಕ್ರಮಗಳು ವ್ಯವಹಾರ ತಂತ್ರ, ಮಾರ್ಗದರ್ಶನ, ಹಣಕಾಸು ಯೋಜನೆ, ಸಾಂಸ್ಥಿಕೀಕರಣ, ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಸಂಪರ್ಕ ಮತ್ತು ಹಣಕಾಸಿನ ಸೌಲಭ್ಯಗಳ ಮೂಲಕ 600ಕ್ಕೂ ಹೆಚ್ಚು ಹೆಚ್ಚಿನ ಸಾಮರ್ಥ್ಯವಿರುವ ಗ್ರಾಮೀಣ ಉದ್ಯಮಗಳಿಗೆ ಬೆಂಬಲ ನೀಡಲು ಉದ್ದೇಶಿಸಿವೆ.

Image

ಇನ್‌ಕ್ಯುಬೇಟರ್ ಉಪ-ಯೋಜನೆಯು ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಮುಕ್ತಾಯಗೊಂಡ ನಾಲ್ಕು ಇನ್‌ಕ್ಯುಬೇಟರ್ ಕಾರ್ಯಕ್ರಮಗಳ ಅನುಭವದ ಆಧಾರದ ಮೇಲೆ ರೂಪುಗೊಂಡಿದೆ. ಅವು 600ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಉದ್ಯಮಗಳಿಗೆ ಬೆಂಬಲ ನೀಡಿದ್ದವು. ಈ ಕಾರ್ಯಕ್ರಮವು ಈಗ ಗಣನೀಯವಾಗಿ ವಿಸ್ತರಿಸಿದ್ದು, ಪ್ರಸ್ತುತ 13 ರಾಜ್ಯಗಳಲ್ಲಿ 14 ಇನ್‌ಕ್ಯುಬೇಟರ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಐಐಎಂ, ಐಐಟಿ ಮತ್ತು ಪ್ರಮುಖ ಇನ್‌ಕ್ಯುಬೇಷನ್ ಸಂಸ್ಥೆಗಳು ಸೇರಿದಂತೆ ಉನ್ನತ ಶೈಕ್ಷಣಿಕ ಮತ್ತು ವಾಣಿಜ್ಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸುಮಾರು 2,100 ಗ್ರಾಮೀಣ ಸ್ವಸಹಾಯ ಗುಂಪುಗಳ ಉದ್ಯಮಗಳಿಗೆ ಬೆಂಬಲ ನೀಡಲಾಗುತ್ತಿದೆ. ಹಿಂದಿನ ಕಾರ್ಯಕ್ರಮಗಳು ಆದಾಯ ಹೆಚ್ಚಳ, ಸುಧಾರಿತ ವಾಣಿಜ್ಯ ಸಾಂಸ್ಥಿಕೀಕರಣ ಮತ್ತು ಹೆಚ್ಚುವರಿ ಉದ್ಯೋಗ ಸೃಷ್ಟಿ ಸೇರಿದಂತೆ ಸ್ಪಷ್ಟ ಫಲಿತಾಂಶಗಳನ್ನು ತೋರಿಸಿವೆ.

Image

ಹೊಸ ಇನ್‌ಕ್ಯುಬೇಟರ್‌ಗಳು ಆಹಾರ ಮತ್ತು ಕೃಷಿ ಸಂಸ್ಕರಣೆ, ಜವಳಿ ಮತ್ತು ಕರಕುಶಲ ವಸ್ತುಗಳು, ತಯಾರಿಕೆ, ಚಿಲ್ಲರೆ ಮತ್ತು ಸೇವೆಗಳು, ಪ್ರವಾಸೋದ್ಯಮ ಆಧಾರಿತ ಚಟುವಟಿಕೆಗಳು, ಡಿಜಿಟಲ್ ಉದ್ಯಮಗಳು ಮತ್ತು ಇತರ ಸ್ಥಳೀಯವಾಗಿ ಸೂಕ್ತವಾದ ಬೆಳೆಯುತ್ತಿರುವ ವಲಯಗಳ ಮೇಲೆ ಗಮನಹರಿಸಲಿವೆ. ಉತ್ತಮ ಪ್ರಗತಿಯ ಸಾಮರ್ಥ್ಯವಿರುವ ಉದ್ಯಮಗಳನ್ನು ಆಯ್ಕೆ ಮಾಡಲು ಪಾರದರ್ಶಕ ಮತ್ತು ಅರ್ಹತಾ ಆಧಾರಿತ 'ಚಾಲೆಂಜ್ ಫಂಡ್' ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳ ಅಡಿಯಲ್ಲಿ ಉದ್ಯಮ ಬೆಂಬಲವನ್ನು ಬಲಪಡಿಸಲು ಪ್ರತ್ಯೇಕ 'ರಾಜ್ಯ ಇನ್‌ಕ್ಯುಬೇಷನ್ ಘಟಕ'ಗಳನ್ನು ಸ್ಥಾಪಿಸುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ.

ಗ್ರಾಮೀಣ ಕೃಷಿಯೇತರ ಉದ್ಯಮಶೀಲತೆಯ ವಾತಾವರಣವನ್ನು ಮತ್ತಷ್ಟು ಬಲಪಡಿಸಲು ಮತ್ತು ಹೆಚ್ಚಿನ ಸ್ವಸಹಾಯ ಗುಂಪಿನ ಸದಸ್ಯರು ಸುಸ್ಥಿರ ಉದ್ಯಮಗಳನ್ನು ಸ್ಥಾಪಿಸಲು ಹಾಗೂ ಬೆಳೆಸಲು ನೆರವಾಗುವಂತೆ ಪಶ್ಚಿಮ ಬಂಗಾಳ ಮತ್ತು ಗೋವಾಗಳಲ್ಲಿ 'ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ' (SVEP) ವಿಸ್ತರಣೆಯ ಪ್ರಸ್ತಾಪಗಳನ್ನು ಸಹ ಸಮಿತಿಯು ಪರಿಶೀಲಿಸಿತು.

ಗ್ರಾಮೀಣ ಮಹಿಳಾ ಉದ್ಯಮಿಗಳು ಜೀವನೋಪಾಯ ಮಟ್ಟದ ಸಣ್ಣ ಉದ್ಯಮಗಳಿಂದ ಹೆಚ್ಚಿನ ವಹಿವಾಟು, ಬಲವಾದ ಮಾರುಕಟ್ಟೆ ಸಂಪರ್ಕ, ಸುಧಾರಿತ ಹಣಕಾಸು ನೆರವು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಹೊಂದಿರುವ ಉದ್ಯಮಗಳಾಗಿ ಬೆಳೆಯಲು ಸಹಾಯ ಮಾಡುವ ಮೂಲಕ ಈ ಉಪಕ್ರಮಗಳು ಮಹಿಳಾ ಚಾಲಿತ ಆರ್ಥಿಕ ಅಭಿವೃದ್ಧಿ ಮತ್ತು 'ಲಖ್‌ಪತಿ ದೀದಿ' ಯೋಜನೆಯ ಬಗ್ಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತವೆ.

ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಮಹಿಳಾ ಚಾಲಿತ ಗ್ರಾಮೀಣ ಉದ್ಯಮಗಳ ಇನ್‌ಕ್ಯುಬೇಷನ್ ಮತ್ತು ಸುಸ್ಥಿರ ಬೆಳವಣಿಗೆಗೆ ಬಲವಾದ ರಾಷ್ಟ್ರೀಯ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದಿಂದ, ಸಶಕ್ತ ಸಮಿತಿಯು ನಾವೀನ್ಯತೆ, ಸಾಂಸ್ಥಿಕ ಸಹಭಾಗಿತ್ವ, ಸಮನ್ವಯತೆ, ಡಿಜಿಟಲ್ ಅಳವಡಿಕೆ, ಮಾರುಕಟ್ಟೆ ಪ್ರವೇಶ ಮತ್ತು ಫಲಿತಾಂಶ ಆಧಾರಿತ ಮೇಲ್ವಿಚಾರಣೆಗೆ ಒತ್ತು ನೀಡಿತು.

 

*****


(रिलीज़ आईडी: 2302396) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil