ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸಾಮಾಜಿಕ ವಿರೋಧದಿಂದ ಸಂತೋಷಕರ ವೈವಾಹಿಕ ಕುಟುಂಬ ವರೆಗೆ: ಅಂತರ-ಜಾತಿ ವಿವಾಹ ಪ್ರೋತ್ಸಾಹಕ ಧನದ ಬೆಂಬಲವು ಅಶೋಕ್ ಮತ್ತು ಸಬಿತಾ ಅವರುಗಳಿಗೆ ಸುಸ್ಥಿರ ಜೀವನವನ್ನು ನಿರ್ಮಿಸಲು ಸಹಾಯ ಮಾಡಿತು
प्रविष्टि तिथि:
17 AUG 2026 6:10PM by PIB Bengaluru
ಮದುವೆಯು ಕುಟುಂಬ ಮತ್ತು ಸಾಮಾಜಿಕ ಜೀವನದ ಒಂದು ಪ್ರಮುಖ ಭಾಗವಾಗಿದೆ, ಆದರೆ ವಿಭಿನ್ನ ಜಾತಿ ಹಿನ್ನೆಲೆಯ ದಂಪತಿಗಳು ಕೆಲವೊಮ್ಮೆ ಸಾಮಾಜಿಕ ವಿರೋಧ ಮತ್ತು ಸವಾಲುಗಳನ್ನು ಎದುರಿಸಬಹುದು. ಅಂತರ್ಜಾತಿ ವಿವಾಹಗಳನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಉಪಕ್ರಮಗಳು, ಅರ್ಹ ದಂಪತಿಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಸಮಾನತೆ, ಸಾಮಾಜಿಕ ಸಾಮರಸ್ಯ ಮತ್ತು ಸ್ವೀಕಾರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಸಕಾಲಿಕ ಕೇಂದ್ರ ಸರ್ಕಾರದ ಯೋಜನೆಗಳ ಬೆಂಬಲವು ದಂಪತಿಗಳು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ. 33 ವರ್ಷ ವಯಸ್ಸಿನ ಶ್ರೀ ಅಶೋಕ್ ಕುಮಾರ್ ಸಮಂತರಾಯ್ ಮತ್ತು 30 ವರ್ಷ ವಯಸ್ಸಿನ ಶ್ರೀಮತಿ ಸಬಿತಾ ದಾಸ್ ವಿಭಿನ್ನ ಜಾತಿ ವರ್ಗಗಳಿಗೆ ಸೇರಿದವರಾಗಿದ್ದರೂ ಮದುವೆಯಾಗಲು ನಿರ್ಧರಿಸಿದರು. ಅಶೋಕ್ ಅವರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ, ಸಬಿತಾ ಅವರು ಕೈಬರ್ತ (ಎಸ್.ಸಿ.) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಡಿಶಾದ ಖೋರ್ಧಾ ಜಿಲ್ಲೆಯ ನಿರಾಕರ್ಪುರ ಮತ್ತು ಜಟಾನಿಯ ಈ ದಂಪತಿಗಳು ತಮ್ಮ ವಿಭಿನ್ನ ಜಾತಿ ಹಿನ್ನೆಲೆಯಿಂದಾಗಿ ಅವರ ಕುಟುಂಬಗಳು ಮತ್ತು ಸ್ಥಳೀಯ ಸಮುದಾಯಗಳಿಂದ ತೀವ್ರ ವಿರೋಧವನ್ನು ಎದುರಿಸಿದರು. ಸಾಮಾಜಿಕ ಒತ್ತಡ ಮತ್ತು ತೊಂದರೆಗಳ ಹೊರತಾಗಿಯೂ, ಅವರು ತಮ್ಮ ಜೀವನವನ್ನು ಒಟ್ಟಿಗೆ ನಿರ್ಮಿಸಲು ಬದ್ಧರಾಗಿದ್ದರು. ಅಶೋಕ್ ಅವರು ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಸಬಿತಾ ಗೃಹಿಣಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಅಂತರ್-ಜಾತಿ ವಿವಾಹ ಪ್ರೋತ್ಸಾಹದಡಿಯಲ್ಲಿ, ಈ ದಂಪತಿಗೆ ₹2.5 ಲಕ್ಷ ಆರ್ಥಿಕ ನೆರವು ದೊರೆಯಿತು. ಈ ಬೆಂಬಲವು ಅವರ ಕುಟುಂಬಕ್ಕೆ ಸಕಾಲಿಕ ಆರ್ಥಿಕ ಪರಿಹಾರವನ್ನು ತಂದುಕೊಟ್ಟಿತು ಮತ್ತು ಅವರ ವೈವಾಹಿಕ ಜೀವನವನ್ನು ಹೆಚ್ಚಿನ ಸ್ಥಿರತೆಯೊಂದಿಗೆ ಪ್ರಾರಂಭಿಸಲು ಸಹಾಯ ಮಾಡಿತು. ಸರ್ಕಾರದ ಮನ್ನಣೆ ಮತ್ತು ಬೆಂಬಲವು ಅವರ ಕುಟುಂಬಗಳು ಮತ್ತು ಸಮುದಾಯದ ವಿವಾಹದ ಮನೋಭಾವದಲ್ಲಿ ಕ್ರಮೇಣ ಬದಲಾವಣೆಗೆ ಕಾರಣವಾಯಿತು.

ಆರ್ಥಿಕ ನೆರವು ಮತ್ತು ಹೆಚ್ಚುತ್ತಿರುವ ಕುಟುಂಬ ಸ್ವೀಕಾರದೊಂದಿಗೆ, ಅಶೋಕ್ ಮತ್ತು ಸಬಿತಾ ಅವರುಗಳು ಈಗ ಸಂತೋಷದ ಮತ್ತು ಸ್ಥಿರವಾದ ಜೀವನವನ್ನು ನಡೆಸುತ್ತಿದ್ದಾರೆ. ದಂಪತಿಗೆ ಹೆಣ್ಣು ಮಗು ಜನಿಸಿದೆ, ಆಕೆಯ ಭವಿಷ್ಯ ಮತ್ತು ಶಿಕ್ಷಣವು ಅವರ ಪ್ರಾಥಮಿಕ ಆಕಾಂಕ್ಷೆಯಾಗಿದೆ. ತಮ್ಮ ಮಗಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಸರ್ಕಾರದ ಈ ಧನ ಸಹಾಯವನ್ನು ಬಳಸುವ ಉದ್ದೇಶದಿಂದ ಅವರು ಈ ಸರ್ಕಾರಿ ಧನ ಸಹಾಯವನ್ನು ಸುರಕ್ಷಿತವಾಗಿ ಉಳಿಸಿಕೊಂಡಿದ್ದಾರೆ.
ಅಶೋಕ ಮತ್ತು ಸಬಿತಾ ಅವರು 'ಸರ್ಕಾರದ ಹಣವು ನಮ್ಮ ಮಗಳಿಗೆ ದೊಡ್ಡ ಆಶೀರ್ವಾದವಾಗಿದೆ. ಇದು ಅವಳ ಶಿಕ್ಷಣ ಮತ್ತು ಭವಿಷ್ಯವನ್ನು ನೋಡಿಕೊಳ್ಳುತ್ತದೆ, ಆದ್ದರಿಂದ ಅವಳು ಹೆಮ್ಮೆಯಿಂದ ಬೆಳೆದು ತನ್ನ ಕನಸುಗಳನ್ನು ಸಾಧಿಸಬಹುದು.' ಎಂದು ಹೇಳಿದ್ದಾರೆ.
ಅಶೋಕ್ ಕುಮಾರ್ ಸಮಂತರಾಯ್ ಮತ್ತು ಸಬಿತಾ ದಾಸ್ ಅವರ ಪ್ರಯಾಣವು ಅಂತರ್ಜಾತಿ ವಿವಾಹಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬೆಂಬಲವು ಸಾಮಾಜಿಕ ಸ್ವೀಕಾರ ಮತ್ತು ಸಮಾನತೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಅರ್ಥಪೂರ್ಣ ಆರ್ಥಿಕ ಸಹಾಯವನ್ನು ಹೇಗೆ ಒದಗಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿರೋಧ ಮತ್ತು ಸಾಮಾಜಿಕ ಒತ್ತಡವನ್ನು ಎದುರಿಸುವುದರಿಂದ ಹಿಡಿದು ಸಂತೋಷದಾಯಕ ಕುಟುಂಬ ಜೀವನವನ್ನು ನಿರ್ಮಿಸುವವರೆಗೆ, ಅವರ ಕಥೆಯು ಸ್ಥಿತಿಸ್ಥಾಪಕತ್ವ, ಧೈರ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಸಕಾರಾತ್ಮಕ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.
*****
(रिलीज़ आईडी: 2300737)
आगंतुक पटल : 8