ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸರ್ಕಾರದಿಂದ ಎಸ್‌ ಎಂ ಇ ಎಲ್ ಇ ಯೋಜನೆಯ ಮೂಲಕ ಸಮಗ್ರ ಪುನರ್ವಸತಿ ಮತ್ತು ಸಾಮಾಜಿಕ ಸೇರ್ಪಡೆಯ ಬಲವರ್ಧನೆ


ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ದುರ್ಬಲ ವರ್ಗದವರಿಗೆ ಸಮಗ್ರ ಪುನರ್ವಸತಿ, ಆರೋಗ್ಯ ರಕ್ಷಣೆ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಬೆಂಬಲ ವಿಸ್ತರಣೆ

प्रविष्टि तिथि: 17 AUG 2026 6:51PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದುರ್ಬಲ ವರ್ಗದವರ ಸಮಗ್ರ ಪುನರ್ವಸತಿ ಮತ್ತು ಸಾಮಾಜಿಕ-ಆರ್ಥಿಕ ಸಬಲೀಕರಣದ ಗುರಿಯನ್ನು ಹೊಂದಿರುವ ಕೇಂದ್ರ ವಲಯ ಯೋಜನೆಯಾಗಿ, ಜೀವನೋಪಾಯ ಮತ್ತು ಉದ್ದಿಮೆಗೆ ಬೆಂಬಲ (ಎಸ್‌ ಎಂ ಐ ಎಲ್‌ ಇ - ಸ್ಮೈಲ್) ಅನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯು ಪರಿಣಾಮಕಾರಿ ಒಮ್ಮತದ ವಿಧಾನದ ಮೂಲಕ ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳು, ಸಮಾಲೋಚನೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳ ಮೇಲೆ ಕೇಂದ್ರೀಕೃತವಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿ ಉಪ-ಯೋಜನೆಯನ್ನು ಒಳಗೊಂಡಿದೆ. ಈ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು, ಜಿಲ್ಲಾಡಳಿತ, ನಗರ ಸ್ಥಳೀಯ ಸಂಸ್ಥೆಗಳು, ಪುರಸಭೆಗಳು ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡುವ ಇತರ ಸಂಸ್ಥೆಗಳು ಮತ್ತು ಏಜೆನ್ಸಿಗಳ ಬೆಂಬಲದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.

ಸ್ಮೈಲ್ ಯೋಜನೆಯು ದುರ್ಬಲ ವರ್ಗದ ವ್ಯಕ್ತಿಗಳು ಕಲ್ಯಾಣ ಸೇವೆಗಳನ್ನು ಪಡೆಯಲು, ಕೌಶಲ್ಯ ಮತ್ತು ಜೀವನೋಪಾಯ ಸಾಮರ್ಥ್ಯಗಳನ್ನು ವರ್ಧಿಸಿಕೊಳ್ಳಲು ಹಾಗೂ ಘನತೆ ಮತ್ತು ಆತ್ಮ ವಿಶ್ವಾಸದೊಂದಿಗೆ ಮುಖ್ಯವಾಹಿನಿಯ ಸಮಾಜಕ್ಕೆ ಮರುಸಂಘಟಿಸಲು ಅನುವು ಮಾಡಿಕೊಡುವ ಮೂಲಕ ಎಲ್ಲರನ್ನೂ ಒಳಗೊಂಡ ಸಮಾಜವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಪುನರ್ವಸತಿಗೆ ತಕ್ಷಣದ ಬೆಂಬಲ ಹಾಗೂ ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಪುನರ್ಜೋಡಣೆಗೆ ಕೊಡುಗೆ ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರದ ವಿಧಾನವು ವಿವಿಧ ಪಾಲುದಾರರಲ್ಲಿ ಸಂಘಟಿತ ಕ್ರಮ ಮತ್ತು ಒಮ್ಮುಖಕ್ಕೆ ಒತ್ತು ನೀಡುತ್ತದೆ. ಪುನರ್ವಸತಿಗೆ ತಕ್ಷಣದ ಬೆಂಬಲ ಸೇರಿದಂತೆ ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಪುನರ್‌  ಏಕೀಕರಣಕ್ಕೆ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ವಿಧಾನವು ವಿವಿಧ ಪಾಲುದಾರರಲ್ಲಿ ಸಂಘಟಿತ ಕ್ರಮ ಮತ್ತು ಏಕಾಭಿಪ್ರಾಯಕ್ಕೆ ಒತ್ತು ನೀಡುತ್ತದೆ.

ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿನ ಉಪ-ಯೋಜನೆಯಡಿಯಲ್ಲಿ ಸಚಿವಾಲಯವು ದೇಶಾದ್ಯಂತ ಗುರುತಿಸುವಿಕೆ, ಸಜ್ಜುಗೊಳಿಸುವಿಕೆ ಮತ್ತು ಪುನರ್ವಸತಿ ಮಧ್ಯಸ್ಥಿಕೆ ಕಾರ್ಯಗಳನ್ನು ಕೈಗೊಂಡಿದೆ. ಅಧಿಕೃತ ಸ್ಮೈಲ್‌ - ಬೆಗ್ಗರಿ ಪೋರ್ಟಲ್ ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, 42,589 ವ್ಯಕ್ತಿಗಳನ್ನು ಗುರುತಿಸಲಾಗಿದೆ/ಸಮೀಕ್ಷೆ ಮಾಡಲಾಗಿದೆ ಮತ್ತು 12,710 ವ್ಯಕ್ತಿಗಳಿಗೆ ಈ ಉಪಕ್ರಮದಡಿಯಲ್ಲಿ ಪುನರ್ವಸತಿ ನೀಡಲಾಗಿದೆ. 

ವೈದ್ಯಕೀಯ ಸೌಲಭ್ಯಗಳು, ಸಮಾಲೋಚನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವಾರು ಪೂರಕ ಕ್ರಮಗಳನ್ನು ಪುನರ್ವಸತಿ ಚೌಕಟ್ಟು ಒಳಗೊಂಡಿದೆ. ಫಲಾನುಭವಿಗಳು ಸಾಮರ್ಥ್ಯ ಪಡೆಯಲು ಹಾಗೂ ಸುಸ್ಥಿರ ಜೀವನೋಪಾಯ ಮತ್ತು ಘನತೆಯ ಜೀವನದತ್ತ ರೂಪಾಂತರಗೊಳ್ಳಲು ಬೆಂಬಲ ನೀಡುವ ಅವಕಾಶಗಳನ್ನು ಹೊಂದಬಹುದಾದಂತೆ ಈ ಉಪಕ್ರಮಗಳನ್ನು ವಿನ್ಯಾಸ ಮಾಡಲಾಗಿದೆ. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಕಲ್ಯಾಣ ಮತ್ತು ಪುನರ್ವಸತಿಗಾಗಿ ಕಾರ್ಯನಿರ್ವಹಿಸುವ ಸ್ಥಳೀಯ ಸಂಸ್ಥೆಗಳು ಮತ್ತು ಏಜೆನ್ಸಿಗಳೊಂದಿಗೆ ಸಹಮತದ ಅನುಷ್ಠಾನ ಚೌಕಟ್ಟನ್ನು ಇದು ಉತ್ತೇಜಿಸಲಿದೆ.

ಅಧಿಕೃತ ಸ್ಮೈಲ್‌ - ಬೆಗ್ಗರಿ ಪೋರ್ಟಲ್ ಪ್ರಕಾರ, ಈ ಉಪ-ಯೋಜನೆಯನ್ನು 2022ರ ಫೆಬ್ರವರಿ 12 ರಂದು ಪ್ರಾರಂಭಿಸಲಾಗಿದೆ ಹಾಗೂ ಸಮಗ್ರ ಪುನರ್ವಸತಿ ಮತ್ತು ಸಂಘಟಿತ ಕ್ರಮದ ಮೂಲಕ ಭಾರತವನ್ನು "ಭಿಕ್ಷಾವೃತ್ತಿಮುಕ್ತ ಭಾರತ"ವನ್ನಾಗಿ ಮಾಡುವ ಉದ್ದೇಶದಿಂದ ಇದನ್ನು ಕಾರ್ಯಗತಗೊಳಿಸಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಆತ್ಮವಿಶ್ವಾಸ ಮತ್ತು ಅವಕಾಶಗಳ ಲಭ್ಯತೆ ಬಲಪಡಿಸುವುದರ ಜೊತೆಗೆ ಮುಖ್ಯವಾಹಿನಿಯ ಸಮಾಜಕ್ಕೆ ಅವರನ್ನು ಮರುಸಂಘಟಿಸಲು ಈ ವಿಧಾನವು ಪ್ರಯತ್ನಿಸುತ್ತದೆ. ಈ ವಿಧಾನವು ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಮುಖ್ಯವಾಹಿನಿಯ ಸಮಾಜಕ್ಕೆ ಮರುಸೇರ್ಪಡೆಗೊಳಿಸಲು ಹಾಗೂ ಅವರ ಆತ್ಮವಿಶ್ವಾಸ ಮತ್ತು ಅವಕಾಶಗಳ ಲಭ್ಯತೆ ಬಲಪಡಿಸಲು ಪ್ರಯತ್ನಿಸುತ್ತದೆ.

ವಿಶಾಲವಾದ ಎಸ್ ಎಂ ಐ ಎಲ್ ಇ ಚೌಕಟ್ಟು ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ಸಮಗ್ರ ಪುನರ್ವಸತಿ ಅಂಶವನ್ನೂ ಸಹ ಒಳಗೊಂಡಿದೆ. ಇದರಡಿಯಲ್ಲಿ, ಸರ್ಕಾರವು 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 23 ಗರಿಮಾ ಗೃಹ ಸ್ಥಾಪಿಸಿದ್ದು, ಇದು ನಿರ್ಗತಿಕ ತೃತೀಯ ಲಿಂಗಿ ವ್ಯಕ್ತಿಗಳಿಗೆ ಆಶ್ರಯ ಮತ್ತು ಬೆಂಬಲವನ್ನು ಒದಗಿಸಲಿದೆ. ಕಳೆದ ಮೂರು ವರ್ಷಗಳಲ್ಲಿ, ಗರಿಮಾ ಗೃಹ್ ಮೂಲಕ 1,041 ತೃತೀಯ ಲಿಂಗಿ ವ್ಯಕ್ತಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಸರ್ಕಾರವು ತೃತೀಯ ಲಿಂಗಿ ವ್ಯಕ್ತಿಗಳಿಗೆ ಆರೋಗ್ಯ ರಕ್ಷಣೆ, ಗುರುತಿನ ದಾಖಲಾತಿ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಸಹ ಕೈಗೊಂಡಿದೆ.

ಅರ್ಹ ವ್ಯಕ್ತಿಗಳಿಗೆ ತೃತೀಯಲಿಂಗಿ ಪ್ರಮಾಣಪತ್ರಗಳು ಮತ್ತು ಗುರುತಿನ ಚೀಟಿಗಳನ್ನು ವಿತರಿಸಲು ಅನುಕೂಲವಾಗುವಂತೆ ತೃತೀಯ ಲಿಂಗಿಗಳಿಗಾಗಿನ ರಾಷ್ಟ್ರೀಯ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಪೋರ್ಟಲ್ ಮೂಲಕ 33,303 ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಅಧಿಕೃತ ದಾಖಲೆಯಲ್ಲಿರುವ ಮಾಹಿತಿಯ ಪ್ರಕಾರ 147 ಆಯುಷ್ಮಾನ್‌ ಭಾರತ್‌ ಪಿಎಂ - ಜೆಎವೈ ತೃತೀಯ ಲಿಂಗಿ ಕಾರ್ಡ್ ಗಳನ್ನು ನೀಡುವುದರೊಂದಿಗೆ, ಆಯುಷ್ಮಾನ್ ಭಾರತ್ ನೊಂದಿಗೆ ಒಮ್ಮುಖವಾಗಲು ಸರ್ಕಾರವು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ತಿಳುವಳಿಕೆ ಒಪ್ಪಂದ ಮಾಡಿಕೊಂಡಿದೆ.

ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಚಿವಾಲಯವು ಅವಕಾಶಗಳನ್ನು ಮತ್ತಷ್ಟು ಬಲಪಡಿಸಿದೆ. 725 ತೃತೀಯ ಲಿಂಗಿ ವ್ಯಕ್ತಿಗಳು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದಿದ್ದರೆ, 150 ತೃತೀಯ ಲಿಂಗಿ ವ್ಯಕ್ತಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ತರಬೇತಿ ನೀಡಲಾಗಿದೆ. ಮೂರು ರಾಷ್ಟ್ರೀಯ ತೃತೀಯ ಲಿಂಗಿ ಉದ್ಯೋಗ ಮೇಳಗಳನ್ನು ಸಹ ಆಯೋಜಿಸಲಾಗಿದ್ದು, 223 ತೃತೀಯ ಲಿಂಗಿ ವ್ಯಕ್ತಿಗಳಿಗೆ ಇದರಿಂದ ಅನುಕೂಲವಾಗಿದೆ.
ರಕ್ಷಣೆ, ಕಲ್ಯಾಣ ಮತ್ತು ಸರ್ಕಾರಿ ಯೋಜನೆಗಳ ಲಭ್ಯತೆ ಖಾತರಿಗೆ ಸಾಂಸ್ಥಿಕ ಕಾರ್ಯವಿಧಾನಗಳನ್ನು ಸಹ ಬಲಪಡಿಸಲಾಗಿದೆ. 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತೃತೀಯ ಲಿಂಗಿ ಸಂರಕ್ಷಣಾ ಕೋಶಗಳನ್ನು ತೆರೆಯಲಾಗಿದೆ, ಅಲ್ಲದೇ ಲಿಂಗ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಕಲ್ಯಾಣ ಕ್ರಮಗಳಿಗೆ ಪ್ರವೇಶಾವಕಾವನ್ನು ಸುಲಭಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ತೃತೀಯ ಲಿಂಗಿ ಕಲ್ಯಾಣ ಮಂಡಳಿಗಳನ್ನು ತೆರೆಯಲಾಗಿದೆ.

ಸರ್ಕಾರವು ಎಸ್‌ ಎಂ ಐ ಎಲ್ ಇ ಯೋಜನೆಯ ಅನುಷ್ಠಾನದ ಸ್ವತಂತ್ರ ಮೌಲ್ಯಮಾಪನವನ್ನು ಸಹ ಕೈಗೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್ 2025 ರಲ್ಲಿ ಹೈದರಾಬಾದ್ ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎನ್‌ ಐ ಆರ್ ಡಿ ಪಿ ಆರ್) ಮೂರನೇ ವ್ಯಕ್ತಿಯಾಗಿ ಮೌಲ್ಯಮಾಪನವನ್ನು ನಡೆಸಿತು. ಇದರ ಪ್ರಮುಖ ಶೋಧನೆಗಳು ಮತ್ತು ಶಿಫಾರಸುಗಳನ್ನು 2026-27 ರಿಂದ 2030-31 ರವರೆಗಿನ 16 ನೇ ಹಣಕಾಸು ಆಯೋಗದ ಅವಧಿಯಲ್ಲಿ ಯೋಜನೆಯ ಮುಂದುವರಿಕೆಗಾಗಿ ಪರಿಷ್ಕೃತ ಯೋಜನಾ ಮಾರ್ಗಸೂಚಿಗಳಲ್ಲಿ ಸೇರಿಸಲಾಗಿದೆ.

ಎಸ್‌ ಎಂ ಐ ಎಲ್ ಇ – ಸ್ಮೈಲ್ ಯೋಜನೆ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದುರ್ಬಲ ವರ್ಗದ ವ್ಯಕ್ತಿಗಳಿಗೆ ಪುನರ್ವಸತಿ, ಸಾಮಾಜಿಕ ರಕ್ಷಣೆ, ಆರೋಗ್ಯ ರಕ್ಷಣೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಬೆಂಬಲದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ಕಾರ್ಯಪ್ರವೃತ್ತವಾಗಿದೆ. ಯೋಜನೆಯ ಒಮ್ಮುಖ ಆಧಾರಿತ ವಿಧಾನವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತಗಳು, ಸ್ವಯಂಸೇವಾ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನು ಒಟ್ಟುಗೂಡಿಸಿ ಸಾಮಾಜಿಕ ಸೇರ್ಪಡೆ ಮತ್ತು ಆರ್ಥಿಕ ಸಬಲೀಕರಣದ ಕಡೆಗೆ ಸುಸ್ಥಿರ ಮಾರ್ಗಗಳನ್ನು ಒದಗಿಸಲಿದೆ. ದುರ್ಬಲ ವರ್ಗದ ವ್ಯಕ್ತಿಗಳು ಘನತೆ ಮತ್ತು ಆತ್ಮ ವಿಶ್ವಾಸದಿಂದ ಮುಖ್ಯವಾಹಿನಿಯ ಸಮಾಜದಲ್ಲಿ ತೊಡಗಿಕೊಳ್ಳುತ್ತಾ ಹೆಚ್ಚಿನ ಅವಕಾಶಗಳೊಂದಿಗೆ ಜೀವಿಸಲು ಸಾಧ್ಯವಾಗಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.

 

*****


(रिलीज़ आईडी: 2300732) आगंतुक पटल : 5
इस विज्ञप्ति को इन भाषाओं में पढ़ें: English , Gujarati , Urdu , हिन्दी , Tamil