ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಜಸ್ಥಾನದ 15 ಜಿಲ್ಲೆಗಳನ್ನು ಒಳಗೊಂಡ 5,755 ಕೋಟಿ ರೂಪಾಯಿ ಮೌಲ್ಯದ 944 ಅಭಿವೃದ್ಧಿ ಯೋಜನೆಗಳಿಗೆ ಚಿತ್ತೋರ್‌ಗಢದಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರ 21 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ ಗೃಹ ಸಚಿವರು

ದೇಶದ ಸ್ವಾತಂತ್ರ್ಯದ ನಂತರದ 80 ವರ್ಷಗಳಲ್ಲಿ ಮೊದಲ ಬಾರಿಗೆ, ಕೆಂಪು ಕೋಟೆಯಿಂದ ಮತ್ತು ರಾಷ್ಟ್ರದಾದ್ಯಂತ ಸ್ವಾತಂತ್ರ್ಯ ದಿನಾಚರಣೆಗಳಲ್ಲಿ ಮೊಳಗಿನ 'ವಂದೇ ಮಾತರಂ' ಗೀತೆ

ಮತ ಬ್ಯಾಂಕ್ ರಾಜಕೀಯದಿಂದಾಗಿ ಪ್ರಮುಖ ವಿರೋಧ ಪಕ್ಷವು ದಶಕಗಳಿಂದ 'ವಂದೇ ಮಾತರಂ' ಅನ್ನು ನಿರ್ಲಕ್ಷಿಸಿತು; ಅದರ 150 ನೇ ವರ್ಷದಲ್ಲಿ, ನರೇಂದ್ರ ಮೋದಿ ಜಿ ಅವರು ಕೆಂಪು ಕೋಟೆಯಿಂದ ಆ ಅಮರ ಗೀತೆಗೆ ಹೊಸ ಗೌರವವನ್ನು ನೀಡಿದರು

ಮತ ಬ್ಯಾಂಕ್‌ಗಳ ದುರಾಸೆಯಿಂದ, ಪ್ರಮುಖ ವಿರೋಧ ಪಕ್ಷವು 'ವಂದೇ ಮಾತರಂ' ಅನ್ನು ಮರೆತಿತ್ತು

ಪ್ರಧಾನ ವಿರೋಧ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಮುಖ ನಾಯಕರೊಬ್ಬರು 'ವಂದೇ ಮಾತರಂ' ಗಾಯನವನ್ನು ಮಧ್ಯದಲ್ಲಿಯೇ ನಿಲ್ಲಿಸುವಂತೆ ಕೇಳುವ ಮೂಲಕ ಅವಮಾನಿಸಿದರು; ಅದಕ್ಕಾಗಿ ಸಾರ್ವಜನಿಕರು ಅವರನ್ನು ಕ್ಷಮಿಸುವುದಿಲ್ಲ

ಅಟಲ್ ಬಿಹಾರಿ ವಾಜಪೇಯಿ ಜಿ 40 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದರು, ಆದರೆ ಅವರ ಮಾರ್ಗದರ್ಶಿ ತತ್ವಗಳು ದೇಶಭಕ್ತಿ ಮತ್ತು 'ರಾಷ್ಟ್ರ ಮೊದಲು'; ಅವರ ಜೀವನವನ್ನು ಈ ಆದರ್ಶಗಳಿಂದಲೇ ವ್ಯಾಖ್ಯಾನಿಸಲಾಗುವುದು

ಜಾಗತಿಕ ಒತ್ತಡಕ್ಕೆ ಮಣಿಯದೆ ಭಾರತವನ್ನು ಪರಮಾಣು ಶಕ್ತಿಯಾಗಿ ಪರಿವರ್ತಿಸಿದವರು ಅಟಲ್ ಜಿ

ಪತ್ರಕರ್ತರಾಗಿ, ಅಟಲ್ ಜಿ ತಮ್ಮ ಲೇಖನಿಯ ಮೂಲಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದರು; ಕವಿಯಾಗಿ, ಅವರು ತಮ್ಮ ಮಾತುಗಳ ಮೂಲಕ ದೇಶಭಕ್ತಿ ಉತ್ತೇಜಿಸಿದರು; ಮತ್ತು ಪ್ರಧಾನಮಂತ್ರಿಯಾಗಿ, ಅವರು ರಾಷ್ಟ್ರೀಯ ಭದ್ರತೆ ಮತ್ತು ಉತ್ತಮ ಆಡಳಿತವನ್ನು ಮುನ್ನಡೆಸಿದರು

ಅಟಲ್ ಜಿ ಅಧಿಕಾರದಲ್ಲಿದ್ದಾಗ ಅಥವಾ ವಿರೋಧ ಪಕ್ಷದಲ್ಲಿದ್ದಾಗ ತಮ್ಮ ತತ್ವಗಳನ್ನು ಎಂದಿಗೂ ತ್ಯಜಿಸಲಿಲ್ಲ; ಅಂತಹ ಅಪರೂಪದ ನಾಯಕರು ಒಮ್ಮೊಮ್ಮೆ ಮಾತ್ರ ಜನಿಸುತ್ತಾರೆ

ರಾಜಸ್ಥಾನದಲ್ಲಿ ಭಜನ್ ಲಾಲ್ ಶರ್ಮಾ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವತ್ತ ವೇಗವಾಗಿ ಕಾರ್ಯೋನ್ಮುಖವಾಗಿದೆ

ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಅಟಲ್ ಜಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪಿಸಿದರು; ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದ ನರೇಂದ್ರ ಮೋದಿ ಅವರು ಬುಡಕಟ್ಟು ಕಲ್ಯಾಣವನ್ನು ಹೊಸ ಎತ್ತರಕ್ಕೆ  ಒಯ್ದರು, ಎಸ್‌ಟಿ ಘಟಕ ಬಜೆಟ್ 25,000 ಕೋಟಿಯಿಂದ 1,25,000 ಕೋಟಿ ರೂಪಾಯಿಗೆ ಹೆಚ್ಚಳ

ರಾಜಸ್ಥಾನದಲ್ಲಿ, ತಾಯಂದಿರು ಮತ್ತು ಸಹೋದರಿಯರು ಒಮ್ಮೆ ಮೈಲುಗಳಷ್ಟು ದೂರದಿಂದ ತಲೆಯ ಮೇಲೆ ಹಲವು ಮಡಕೆಗಳನ್ನು ಹೊತ್ತುಕೊಂಡು ನೀರು ತರಬೇಕಾಗಿತ್ತು; ಆದರೆ ಪ್ರಮುಖ ವಿರೋಧ ಪಕ್ಷವು 70 ವರ್ಷಗಳಲ್ಲಿ 11 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿತು, ಆದರೆ ಮೋದಿ ಅವರು ಮೋದಿ ಜಿ ಅವರು 64 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿದ್ದಾರೆ

प्रविष्टि तिथि: 16 AUG 2026 5:14PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜಸ್ಥಾನದ ಚಿತ್ತೋರ್‌ಗಢದಲ್ಲಿಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ಕೇಂದ್ರ ಗೃಹ ಸಚಿವರು ರಾಜಸ್ಥಾನ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಸೇರಿದಂತೆ ಹಲವು  ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

100.jpeg

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಇಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು 1.5 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಈ ಪವಿತ್ರ ಭೂಮಿಯಲ್ಲಿ ವಾಜಪೇಯಿ ಜಿ ಅವರ 21 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. 15 ಜಿಲ್ಲೆಗಳಲ್ಲಿ 5,755 ಕೋಟಿ ರೂ. ಮೌಲ್ಯದ 944 ಅಭಿವೃದ್ಧಿ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ ಮತ್ತು ಅವುಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು.

80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಭವ್ಯ ಕಾರ್ಯಕ್ರಮಗಳು ಈ ಬಾರಿ ವಾಡಿಕೆಯಂತೆ  ಇರದೆ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವಾತಂತ್ರ್ಯದ ನಂತರದ 80 ವರ್ಷಗಳಲ್ಲಿ ಮೊದಲ ಬಾರಿಗೆ ಕೆಂಪು ಕೋಟೆಯ ಆವರಣದಿಂದ ಮತ್ತು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 'ವಂದೇ ಮಾತರಂ' ಹಾಡಲಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಲಕ್ಷಾಂತರ ಜನರು ಗಲ್ಲು ಶಿಕ್ಷೆಯನ್ನು ಸ್ವೀಕರಿಸಿದರು, ಗುಂಡುಗಳು ಮತ್ತು ಲಾಠಿ ಚಾರ್ಜ್‌ಗಳನ್ನು ಸಹಿಸಿಕೊಂಡರು ಮತ್ತು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಸಂಯೋಜನೆಯ ಅಮರ ಪದಗಳಾದ 'ವಂದೇ ಮಾತರಂ' ಅನ್ನು ಜಪಿಸುತ್ತಾ ವರ್ಷಗಟ್ಟಲೆ ಜೈಲಿನಲ್ಲಿ ಕಳೆದರು ಎಂದು ಅವರು ಹೇಳಿದರು. ವಿರೋಧ ಪಕ್ಷಗಳು ಮತಬ್ಯಾಂಕ್ ರಾಜಕೀಯದ ದುರಾಸೆಯಿಂದ 'ವಂದೇ ಮಾತರಂ' ಅನ್ನು ಮರೆತುಹೋಗಲು ಅವಕಾಶ ಮಾಡಿಕೊಟ್ಟಿವೆ ಎಂದು ಶ್ರೀ ಶಾ ಟೀಕಿಸಿದರು; ಆದರೂ 'ವಂದೇ ಮಾತರಂ' ರಚನೆಯಾಗಿ 150 ವರ್ಷಗಳನ್ನು ಗುರುತಿಸುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಕೆಂಪು ಕೋಟೆಯಿಂದ ಅದಕ್ಕೆ ಹೊಸ ಜೀವ ತುಂಬಿದ್ದಾರೆ ಎಂದು ಹೇಳಿದರು.

ಪ್ರಮುಖ ವಿರೋಧ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಕ್ಷದ ಪ್ರಮುಖ ನಾಯಕಿಯೊಬ್ಬರು 'ವಂದೇ ಮಾತರಂ' ಅನ್ನು ಅರ್ಧಕ್ಕೆ ನಿಲ್ಲಿಸುವಂತೆ ಕೇಳುವ ಮೂಲಕ ಅವಮಾನಿಸಿದ್ದಾರೆ ಮತ್ತು ಅದಕ್ಕಾಗಿ ಸಾರ್ವಜನಿಕರು ಎಂದೂ ಅವರನ್ನು ಕ್ಷಮಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಬಂಕಿಮ್ ಬಾಬು ಅವರ ಅಮರ ಮಂತ್ರ ಮತ್ತು ಅಮರ ಗೀತೆ 80 ವರ್ಷಗಳ ನಂತರ ಮತ್ತೆ ಗೌರವ ಪಡೆಯುತ್ತಿರುವುದನ್ನು ವಿರೋಧ ಪಕ್ಷ ಇಷ್ಟಪಡುತ್ತಿಲ್ಲ ಎಂದು ಶ್ರೀ ಶಾ ಹೇಳಿದರು. ದೇಶದ 140 ಕೋಟಿ ಜನರು ನಿಮ್ಮನ್ನು ನೋಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷದ ಪ್ರಮುಖ ನಾಯಕರಿಗೆ ಹೇಳಿದರು. ಈ ದೇಶದ ಜನರು ನೀವು ಮಾಡಿದ ಈ ಪಾಪವನ್ನು ಎಂದಿಗೂ ಕ್ಷಮಿಸುವುದಿಲ್ಲ. 'ವಂದೇ ಮಾತರಂ' ಹಾಡನ್ನು ಅಪೂರ್ಣವಾಗಿ ಬಿಡುವ ಕನಸು ಯಾರಾದರೂ ಹೇಗೆ ಕಾಣುತ್ತಾರೆ ಎಂದು ಪ್ರಶ್ನಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಬಾಲ್ಯದಿಂದಲೇ ರಾಷ್ಟ್ರೀಯತೆಯ ಹಾದಿಯಲ್ಲಿ ನಡೆದರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು, ಜನಸಂಘದ ಕಾರ್ಯಕರ್ತರಾದರು ಮತ್ತು ಕೇವಲ 33 ವರ್ಷ ವಯಸ್ಸಿನಲ್ಲೇ ಬಲರಾಂಪುರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಅಟಲ್ ಜೀ ಅವರು ನಾಲ್ಕು ದಶಕಗಳ ಕಾಲ ವಿರೋಧ ಪಕ್ಷದಲ್ಲಿದ್ದರು, ಆದರೆ ಅವರ ಆಲೋಚನೆಗಳು ರಾಷ್ಟ್ರೀಯತೆ ಮತ್ತು ರಾಷ್ಟ್ರಮೊದಲನೆಯದು ಎಂಬುದೇ ಆಗಿದ್ದವು ಮತ್ತು ಅವರ ಜೀವನವು ಈ ಚಿಂತನೆಗಳಿಂದ ಮಾತ್ರ ಮಾರ್ಗದರ್ಶಿಸಲ್ಪಟ್ಟಿತು ಎಂದು ಅವರು ಹೇಳಿದರು. ಅವರು ಜೈಲಿಗೆ ಹೋದರು, ಲಾಠಿ ಪೆಟ್ಟುಗಳನ್ನು ಎದುರಿಸಿದರು, ಆಡಳಿತ ಪಕ್ಷದ ದೌರ್ಜನ್ಯಗಳನ್ನು ಸಹಿಸಿಕೊಂಡರು, ಆದರೆ ತಮ್ಮ ತತ್ವಗಳನ್ನು ಎಂದಿಗೂ ತ್ಯಜಿಸಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾದಾಗ, ಅವರು ಪ್ರಮುಖ ವಿರೋಧ ಪಕ್ಷದ ಸದಸ್ಯರಾಗಿರದ ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದರು.

200.jpeg

ಅಟಲ್‌ಜಿ ಪ್ರಧಾನಮಂತ್ರಿಯಾದ ನಂತರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಜಾಗತಿಕ ಒತ್ತಡಕ್ಕೆ ಮಣಿಯದೆ ಅವರು ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಪರಿವರ್ತಿಸಿದರು ಮತ್ತು ಪ್ರತಿ ಹಳ್ಳಿಯನ್ನು ರಸ್ತೆಗಳೊಂದಿಗೆ ಸಂಪರ್ಕಿಸುವ ಕಾರ್ಯವನ್ನು ಕೈಗೆತ್ತಿಕೊಂಡರು. ಅವರು ಸುವರ್ಣ ಚತುಷ್ಪಥ ( ಗೋಲ್ಡನ್ ಕ್ವಾಡ್ರಿಲ್ಯಾಟರಲ್) ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದರು ಮತ್ತು ಇಂತಹ ಹಲವು ವಿಶಿಷ್ಟ ಉಪಕ್ರಮಗಳನ್ನು ಆರಂಭಿಸಿದರು. ತಮ್ಮ ಆರು ವರ್ಷಗಳ ಅಲ್ಪಾವಧಿಯ ಅಧಿಕಾರಾವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸ್ಥಾಪನೆಯು ಅಟಲ್‌ಜಿ ಅವರ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ ಎಂದು ಶ್ರೀ ಶಾ ಅವರು ಹೇಳಿದರು. ಇದಕ್ಕೂ ಮುನ್ನ ದೇಶದ ಬುಡಕಟ್ಟು ಸಮುದಾಯಗಳಿಗೆ ಮೀಸಲಾಗಿರುವ ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಅಟಲ್‌ಜಿ ಮೊದಲ ಬಾರಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಿದರು; ಅದರ ಪರಿಣಾಮವಾಗಿ ಇಂದು ಬುಡಕಟ್ಟು ಕುಟುಂಬದ ಪುತ್ರಿ - ಭಾರತದ ರಾಷ್ಟ್ರಪತಿ  ಶ್ರೀಮತಿ ದ್ರೌಪದಿ ಮುರ್ಮು - ರಾಷ್ಟ್ರಪತಿ ಭವನವನ್ನು ಅಲಂಕರಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುಡಕಟ್ಟು ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅವರು ಪರಿಶಿಷ್ಟ ಪಂಗಡ (ಎಸ್‌ಟಿ) ಘಟಕಕ್ಕಾಗಿ ಬಜೆಟ್ ಅನ್ನು ಕೇವಲ 25,000 ಕೋಟಿ ರೂಪಾಯಿಗಳಿಂದ 1,25,000 ಕೋಟಿ ರೂಪಾಯಿಗೆ ಹೆಚ್ಚಿಸಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು 'ಜನಜಾತಿಯ ಗೌರವ್ ದಿವಸ್' ಎಂದು ಆಚರಿಸಲು ಅವರು ಚಾಲನೆ ನೀಡಿದರು. ನರೇಂದ್ರ ಮೋದಿ ಅವರು ಛತ್ತೀಸ್‌ಗಢ, ಒಡಿಶಾ ಮತ್ತು ಅರುಣಾಚಲ ಪ್ರದೇಶದಲ್ಲಿ ಬುಡಕಟ್ಟು ನಾಯಕರನ್ನು ಮುಖ್ಯಮಂತ್ರಿಗಳಾಗಿ ನೇಮಿಸಿದರು. ಅವರು 10 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾದ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿದರು ಮತ್ತು 772 ಏಕಲವ್ಯ ವಿದ್ಯಾಪೀಠಗಳನ್ನು ಸ್ಥಾಪಿಸಿದರು - ಈ ಉಪಕ್ರಮವನ್ನು ಮೂಲತಃ ಅಟಲ್ ಜಿ ಆರಂಭಿಸಿದರು. ಅಟಲ್ ಜಿ ಪತ್ರಕರ್ತರಾದಾಗ, ಅವರು ತಮ್ಮ ಲೇಖನಿಯ ಮೂಲಕ ರಾಷ್ಟ್ರೀಯತೆಯನ್ನು ಮುನ್ನಡೆಸಿದರು; ಕವಿಯಾಗಿ, ಅವರು ತಮ್ಮ ಮಾತುಗಳ ಮೂಲಕ ದೇಶಭಕ್ತಿಯನ್ನು ಉತ್ತೇಜಿಸಿದರು; ಮತ್ತು ಪ್ರಧಾನ ಮಂತ್ರಿಯಾಗಿ, ಅವರು ರಾಷ್ಟ್ರೀಯ ಭದ್ರತೆ ಮತ್ತು ಉತ್ತಮ ಆಡಳಿತವನ್ನು ಪ್ರತಿಪಾದಿಸಿದರು ಎಂದು ಗೃಹ ಸಚಿವರು ಸ್ಮರಿಸಿದರು. ಅಧಿಕಾರದಲ್ಲಿದ್ದಾಗ ಅಥವಾ ವಿರೋಧ ಪಕ್ಷದಲ್ಲಿದ್ದಾಗ ಅವರು ತಮ್ಮ ತತ್ವಗಳನ್ನು ಎಂದಿಗೂ ತ್ಯಜಿಸಲಿಲ್ಲ. ಅಂತಹ ಅಪರೂಪದ ನಾಯಕರು, ಅಂತಹ ನಾಯಕರು ಒಮ್ಮೆ ಮಾತ್ರ ಜನಿಸುತ್ತಾರೆ; ಅದಕ್ಕಾಗಿಯೇ ಅಟಲ್ ಜಿ ಅವರನ್ನು ಯಾವಾಗಲೂ 'ಅಜಾತಶತ್ರು' ಎಂದು ಕರೆಯಲಾಗುತ್ತದೆ - ಅವರಿಗೆ ಶತ್ರುಗಳಿರಲಿಲ್ಲ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ 'ಹರ್ ಘರ್ ನಲ್ ಸೆ ಜಲ್' ಯೋಜನೆಯನ್ನು ಆರಂಭಿಸಿದಾಗ ರಾಜ್ಯದಲ್ಲಿ ಕೇವಲ 11 ಲಕ್ಷ ಮನೆಗಳಿಗೆ ನೀರು ತಲುಪುತ್ತಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ರಾಜಸ್ಥಾನದಲ್ಲಿ, ತಾಯಂದಿರು ಮತ್ತು ಸಹೋದರಿಯರು ಮೈಲುಗಟ್ಟಲೆ ದೂರದಿಂದ ತಲೆಯ ಮೇಲೆ ಹಲವು ಮಡಕೆಗಳನ್ನು ಹೊತ್ತುಕೊಂಡು ನೀರು ತರಬೇಕಾಗಿತ್ತು, ಆದರೆ ಪ್ರಮುಖ ವಿರೋಧ ಪಕ್ಷವು 70 ವರ್ಷಗಳಲ್ಲಿ 11 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿದೆ, ಆದರೆ ಮೋದಿ ಜಿ 64 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು. ವಿರೋಧ ಪಕ್ಷವು 70 ವರ್ಷಗಳಲ್ಲಿ ಸಾಧಿಸಿದ್ದಕ್ಕಿಂತ ಮೋದಿ ಜಿ ಎಂಟು ವರ್ಷಗಳಲ್ಲಿ ಆರು ಪಟ್ಟು ಕೆಲಸವನ್ನು ಸಾಧಿಸಿದ್ದಾರೆ ಎಂದು ಅವರು ಉಲ್ಲೇಖಿಸಿ, ಇದು ನಿಖರವಾಗಿ ಮೋದಿ ಜಿ ಅವರ ವಿಭಿನ್ನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದರು.

ರಾಜಸ್ಥಾನದ ಭಜನ್ ಲಾಲ್ ಶರ್ಮಾ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವತ್ತ ವೇಗವಾಗಿ ಕಾರ್ಯೋನ್ಮುಖವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಜಸ್ಥಾನವು ಹಿಂದೆ ನೀರಿನ ಕೊರತೆಗೆ ಹೆಸರುವಾಸಿಯಾಗಿದ್ದರೂ, ಶ್ರೀ ಭಜನ್ ಲಾಲ್ ಜಿ ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ರಾಜ್ಯದ ಅರ್ಧದಷ್ಟು ಬಾಯಾರಿಕೆಯನ್ನು ನೀಗಿಸಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ಈ ಯೋಜನೆಗಳು ಲಕ್ಷಾಂತರ ಜನರಿಗೆ ನೀರು ಒದಗಿಸುತ್ತವೆ ಎಂದು ಶ್ರೀ ಶಾ ಉಲ್ಲೇಖಿಸಿದರು. 'ರೈಸಿಂಗ್ ರಾಜಸ್ಥಾನ' ಕಾರ್ಯಕ್ರಮವು 35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸಿತು ಮತ್ತು 36 ಹೊಸ ನೀತಿಗಳನ್ನು ರೂಪಿಸಲು ಕಾರಣವಾಯಿತು ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಲ್ಲದೆ ಉದ್ಯೋಗ ಮೇಳಗಳ ಮೂಲಕ 178,000 ಉದ್ಯೋಗಗಳನ್ನು ಒದಗಿಸಲಾಗಿದೆ ಮತ್ತು 450 ರೂಪಾಯಿಗಿಂತ ಕಡಿಮೆ ಬೆಲೆಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ; ಈವರೆಗೆ ಒಟ್ಟು 1 ಸಾವಿರದ 128 ಕೋಟಿ ರೂ. ಅನಿಲ ಸಿಲಿಂಡರ್ ಸಬ್ಸಿಡಿಗಳನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸುವ ಮೂಲಕ, ಭಜನ್ ಲಾಲ್ ಸರ್ಕಾರವು ಪ್ರಧಾನ ಮಂತ್ರಿ-ಮುಖ್ಯಮಂತ್ರಿ ಆಯುಷ್ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು 45 ಲಕ್ಷ ಜನರಿಗೆ ವಿಸ್ತರಿಸಿದೆ ಎಂದು ಅವರು ಹೇಳಿದರು. ಸರ್ಕಾರವು 'ಲಡೋ ಪ್ರೋತ್ಸಾಹನ್ ಯೋಜನೆ'ಯನ್ನು ಆರಂಭಿಸಿದೆ ಮತ್ತು ಇಡೀ ರಾಜ್ಯವನ್ನು ಹಚ್ಚ ಹಸಿರಾಗಿಸುವುದಕ್ಕಾಗಿ ಅಭಿಯಾನವನ್ನು ಆರಂಭಿಸಿದೆ.

ರಾಜಸ್ಥಾನದ ಪ್ರಮುಖ ವಿರೋಧ ಪಕ್ಷದ ನಾಯಕರು ಆಂತರಿಕ ಸಂಘರ್ಷಗಳಲ್ಲಿ ತೊಡಗಿಸಿಕೊಂಡಿದ್ದರೂ, ನಮ್ಮ ಪಕ್ಷದ ನಾಯಕರು ಜನರ ಆಶೀರ್ವಾದವನ್ನು ಗೌರವಿಸುತ್ತಾರೆ ಮತ್ತು ಅವರಿಗೆ ಸೇವೆ ಸಲ್ಲಿಸಲು ಬದ್ಧರಾಗಿರುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಅವರ ನೇತೃತ್ವದಲ್ಲಿ ರಾಜಸ್ಥಾನವು ಗಮನಾರ್ಹ ಪ್ರಗತಿಯನ್ನು ಸಾಧಿಸಲು ಸಜ್ಜಾಗಿದೆ ಎಂದು ಅವರು ಹೇಳಿದರು.

 

*****


(रिलीज़ आईडी: 2300222) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Odia , Tamil