ರೈಲ್ವೇ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರೈಲ್ವೆ ಭವನದಲ್ಲಿ ರೈಲ್ವೆ ಸಚಿವರ ನೇತೃತ್ವದಲ್ಲಿ ತ್ರಿವರ್ಣ ಪಥಸಂಚಲನ (ತಿರಂಗಾ ರ್ಯಾಲಿ)


ಭಾರತೀಯ ರೈಲ್ವೆಯಿಂದ ದೇಶಭಕ್ತಿಯ ಕುರಿತಾದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 'ಹರ್ ಘರ್ ತಿರಂಗಾ' ಅಭಿಯಾನದ ಆಚರಣೆ

प्रविष्टि तिथि: 14 AUG 2026 6:09PM by PIB Bengaluru

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರೈಲ್ವೆ ಭವನದ ಆವರಣದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ತ್ರಿವರ್ಣ ಪಥಸಂಚಲನದ (ತಿರಂಗಾ ರ್ಯಾಲಿ) ನೇತೃತ್ವ ವಹಿಸಿದರು. ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಶ್ರೀ ಸತೀಶ್ ಕುಮಾರ್, ಮಂಡಳಿಯ ಸದಸ್ಯರು, ಡಿಜಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ರ್ಯಾಲಿಯಲ್ಲಿ ಭಾಗವಹಿಸಿ, ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಾಮೂಹಿಕ ಮನೋಭಾವವನ್ನು ಪುನರುಚ್ಚರಿಸಿದರು.

ಭಾರತೀಯ ರೈಲ್ವೆ ದೇಶಾದ್ಯಂತ ದೇಶಭಕ್ತಿ, ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಚೈತನ್ಯವನ್ನು ಆಚರಿಸುವ ರಾಷ್ಟ್ರವ್ಯಾಪಿ 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. 'ವಂದೇ ಮಾತರಂ'ನ 150 ವರ್ಷಗಳ ಸ್ಮರಣಾರ್ಥದ ಮೂರನೇ ಹಂತದ ಏಕೀಕರಣದೊಂದಿಗೆ ಈ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಅಪ್ರತಿಮ ರಾಷ್ಟ್ರೀಯ ಗೀತೆಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಮಹತ್ವವನ್ನು ಎತ್ತಿ ತೋರಿಸಲು ರೈಲ್ವೆ ಭವನದಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಆಚರಣೆಯ ಭಾಗವಾಗಿ, ಆಗಸ್ಟ್ 10, 2026 ರಂದು ರೈಲ್ವೆ ಭವನದಲ್ಲಿ 'ವಂದೇ ಮಾತರಂನ 150 ವರ್ಷಗಳ ಪಯಣ' ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಅಧಿಕಾರಿಗಳಿಗೆ ರಾಷ್ಟ್ರೀಯ ಗೀತೆಯ ಶ್ರೀಮಂತ ಇತಿಹಾಸ ಮತ್ತು ನಿರಂತರ ಪರಂಪರೆಯೊಂದಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸಿತು.

ಆಗಸ್ಟ್ 11, 2026 ರಂದು ರೈಲ್ವೆ ಭವನದಲ್ಲಿ 'ದೇಶಭಕ್ತಿ ಗೀತೆಗಳು' ಕುರಿತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಉತ್ಸಾಹಭರಿತ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು ಮತ್ತು ಸಂಗೀತ ಪ್ರದರ್ಶನಗಳ ಮೂಲಕ ದೇಶಭಕ್ತಿಯ ಚೈತನ್ಯವನ್ನು ಆಚರಿಸಿತು.

ಆಗಸ್ಟ್ 14, 2026 ರಂದು ರೈಲ್ವೆ ಭವನದಲ್ಲಿ 'ವಂದೇ ಮಾತರಂ'ನ ಸಾಮೂಹಿಕ ಗಾಯನವನ್ನು ಸಹ ಆಯೋಜಿಸಲಾಗಿತ್ತು.

ದೇಶಭಕ್ತಿ, ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಆಚರಣೆ

ಈ ಕಾರ್ಯಕ್ರಮಗಳ ಮೂಲಕ, ಭಾರತೀಯ ರೈಲ್ವೆಯು 'ವಂದೇ ಮಾತರಂ'ನ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ಜೊತೆಗೆ ತನ್ನ ಅಧಿಕಾರಿಗಳು ಮತ್ತು ಉದ್ಯೋಗಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿನ ಆಚರಣೆಗಳು ರಾಷ್ಟ್ರದ ಪರಂಪರೆ ಮತ್ತು ಆಧುನಿಕ ಹಾಗೂ ಪ್ರಗತಿಪರ ಭಾರತಕ್ಕಾಗಿನ ಅದರ ಆಕಾಂಕ್ಷೆಗಳನ್ನು ಆಚರಿಸುವಲ್ಲಿ ಭಾರತೀಯ ರೈಲ್ವೆಯ ಸಾಮೂಹಿಕ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತವೆ.

 

******


(रिलीज़ आईडी: 2299664) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Gujarati , Odia , Telugu