ಕೃಷಿ ಸಚಿವಾಲಯ
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಹಸಿರು ಉಪಕ್ರಮದಡಿ ಹಸಿರು ಅಮವಾಸ್ಯೆಯಂದು 31 ರಾಜ್ಯಗಳಲ್ಲಿ 50,000ಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡಲಾಯಿತು
ಪ್ರಧಾನಮಂತ್ರಿ ಮೋದಿ ಅವರ ‘ಏಕ್ ಪೆಡ್ ಮಾ ಕೆ ನಾಮ್’ ಕರೆಯಂತೆ, ವೃಕ್ಷ ಮಿತ್ರ ಪರಿವಾರವು ರಾಷ್ಟ್ರವ್ಯಾಪಿ ಸಸಿ ನೆಡುವ ಅಭಿಯಾನ ಮುನ್ನಡೆಸುತ್ತಿದೆ
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹಸಿರು ಅಮವಾಸ್ಯೆಯಂದು ದೆಹಲಿಯಲ್ಲಿ ಪ್ರಮುಖವಾಗಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು
ವೃಕ್ಷ ಮಿತ್ರ ಪರಿವಾರ್ ರಾಷ್ಟ್ರವ್ಯಾಪಿ ಹಸಿರು ಆಂದೋಲನದ ಮುಖವಾಗಿ ಹೊರಹೊಮ್ಮುತ್ತಿದೆ
ಸಸಿಗಳನ್ನು ನೆಡುವುದೆಂದರೆ ಭವಿಷ್ಯವನ್ನು ಭದ್ರಪಡಿಸುವುದಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಭವಿಷ್ಯದ ಪೀಳಿಗೆ ರಕ್ಷಿಸಲು ಪ್ರಕೃತಿಯನ್ನು ಗೌರವಿಸುವುದು ಉತ್ತಮ ಮಾರ್ಗ; ಸಸಿಗಳನ್ನು ನೆಡುವುದು ಮಾತ್ರವಲ್ಲ, ಅವುಗಳನ್ನು ಸಂರಕ್ಷಿಸುವುದು ನಿಜವಾದ ಬದ್ಧತೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಸಿರು ಉಪಕ್ರಮದಿಂದ ದೆಹಲಿ ಬಹಳಷ್ಟು ಕಲಿತಿದೆ, ಸಚಿವರಾದ ಶ್ರೀ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿಕೆ
ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಸಾಗಬೇಕು, ಸಚಿವರಾದ ಶ್ರೀ ಪರ್ವೇಶ್ ವರ್ಮಾ ಹೇಳಿಕೆ
प्रविष्टि तिथि:
12 AUG 2026 4:34PM by PIB Bengaluru
ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ "ವೃಕ್ಷ ಮಿತ್ರ ಪರಿವಾರ್" ಸಹಯೋಗದೊಂದಿಗೆ ನಡೆದ ರಾಷ್ಟ್ರವ್ಯಾಪಿ ಸಸಿ ನೆಡುವ ಅಭಿಯಾನದ ಭಾಗವಾಗಿ ಹಸಿರು ಅಮವಾಸ್ಯೆಯಂದು 31 ರಾಜ್ಯಗಳಲ್ಲಿ 50,000ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಏಕ್ ಪೆಡ್ ಮಾ ಕೆ ನಾಮ್" ಉಪಕ್ರಮದಿಂದ ಈ ಅಭಿಯಾನವು ಮತ್ತಷ್ಟು ವೇಗ ಪಡೆದುಕೊಂಡಿದೆ. ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣ ಬಳಿಯ ಸೆಂಟ್ರಲ್ ರಿಡ್ಜ್‌ನ ಪಿಬಿಜಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಿತು. ಅಲ್ಲಿ ಸಚಿವರು, ಸಂಸತ್ ಸದಸ್ಯರು, ಸರ್ಕಾರಿ ಅಧಿಕಾರಿಗಳು, ರೈತರು, ಯುವಕರು ಮತ್ತು ನಾಗರಿಕರು ಸಸಿ ನೆಡುವ ಅಭಿಯಾನದಲ್ಲಿ ಭಾಗವಹಿಸಿದ್ದರು. ಸಸಿಗಳಿಗೆ ನೀರು ಹಾಕುವುದು ಮತ್ತು ವಂದೇ ಮಾತರಂ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ಸಾಮೂಹಿಕವಾಗಿ ಸಸಿ ನೆಡಲಾಯಿತು. ದೇಶದ ವಿವಿಧ ಭಾಗಗಳಲ್ಲಿರುವ ಹಳ್ಳಿಗಳು, ಪಟ್ಟಣಗಳು, ಪಂಚಾಯತ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರೀತಿಯ ಸಸಿ ನೆಡುವ ಅಭಿಯಾನಗಳನ್ನು ಆಯೋಜಿಸಲಾಗಿತ್ತು. ವೃಕ್ಷ ಮಿತ್ರ ಪರಿವಾರ್ ಸದಸ್ಯರು ನಾಗರಿಕರನ್ನು ಸಜ್ಜುಗೊಳಿಸುವಲ್ಲಿ ಮತ್ತು ಕನಿಷ್ಠ ಒಂದು ಸಸಿ ನೆಡುವುದನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರಾದ ಶ್ರೀ ಚೌಹಾಣ್, ಹಸಿರು ಅಮವಾಸ್ಯೆ ಕೇವಲ ಧಾರ್ಮಿಕ ಸಂದರ್ಭವಲ್ಲ, ಪ್ರಕೃತಿಗೆ ಕೃತಜ್ಞತೆ ವ್ಯಕ್ತಪಡಿಸಲು ಸಿಕ್ಕ ಒಂದು ಅವಕಾಶವೂ ಆಗಿದೆ. ಭಾರತೀಯ ಸಂಪ್ರದಾಯಗಳು ಮಾನವರು, ಪ್ರಾಣಿಗಳು, ಪಕ್ಷಿಗಳು, ನದಿಗಳು, ಪರ್ವತಗಳು ಮತ್ತು ಮರಗಳನ್ನು ನೈಸರ್ಗಿಕ ಪರಿಸರ ವ್ಯವಸ್ಥೆಯ ಪರಸ್ಪರ ಸಂಬಂಧ ಹೊಂದಿರುವ ಅಂಶಗಳಾಗಿ ನೋಡುತ್ತವೆ. "ಸಸಿಗಳನ್ನು ನೆಡುವುದು ಕೇವಲ ಹಸಿರನ್ನು ಸೇರಿಸುವುದಲ್ಲ, ಇದು ಮುಂಬರುವ ಪೀಳಿಗೆಯ ಭವಿಷ್ಯದಲ್ಲಿ ಮಾಡುವ ಹೂಡಿಕೆಯಾಗಿದೆ". ಸಸಿಗಳನ್ನು ನೆಡುವುದರೊಂದಿಗೆ ಅವುಗಳ ರಕ್ಷಣೆ ಮತ್ತು ನಿಯಮಿತ ಆರೈಕೆಗೆ ಬದ್ಧತೆ ತೋರಬೇಕು. ಪ್ರತಿಯೊಬ್ಬ ನಾಗರಿಕ ಪ್ರತಿ ವರ್ಷ ಕನಿಷ್ಠ ಒಂದು ಸಸಿ ನೆಡಬೇಕು, ಇತರೆ 5 ಜನರನ್ನು ಈ ಅಭಿಯಾನಕ್ಕೆ ಸೇರುವಂತೆ ಪ್ರೋತ್ಸಾಹಿಸಬೇಕು. ಹುಟ್ಟುಹಬ್ಬಗಳು, ವಿವಾಹ ವಾರ್ಷಿಕೋತ್ಸವಗಳು, ಮಕ್ಕಳ ಜನನ ಮತ್ತು ಪೋಷಕರ ಮರಣೋತ್ಸವಗಳಲ್ಲಿ ಸಸಿಗಳನ್ನು ನೆಡುವ ಮೂಲಕ "ವೃಕ್ಷ ಪರ್ವ" ಆಚರಿಸುವಂತೆ ಅವರು ದೇಶದ ಜನತೆಗೆ ಸಲಹೆ ನೀಡಿದರು.

ಸಸಿಗಳನ್ನು ದೀರ್ಘಕಾಲದವರೆಗೆ ರಕ್ಷಿಸಲು ಮತ್ತು ನಿರ್ವಹಿಸಲು ಸಾಧ್ಯವಾಗುವಂತೆ ಸಸಿ ನೆಡುವ ಜಾಗಗಳನ್ನು ಗುರುತಿಸಲು ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಿಗೆ ಶ್ರೀ ಚೌಹಾಣ್ ಕರೆ ನೀಡಿದರು. ಪರಿಸರ ಸುಸ್ಥಿರತೆ ಮತ್ತು ಕೃಷಿಯ ನಡುವಿನ ನಿಕಟ ಸಂಬಂಧವನ್ನು ಪ್ರಸ್ತಾಪಿಸಿದ ಅವರು, ಪರಿಸರ ನಾಶವು ಕೃಷಿ, ನೀರಿನ ಲಭ್ಯತೆ, ಮಣ್ಣಿನ ಆರೋಗ್ಯ ಮತ್ತು ಮಾನವ ಯೋಗಕ್ಷೇಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀರಿನ ಪ್ರವೇಶ ಮತ್ತು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ರೈತರಿಗೆ ಬೀಜಗಳು ಮತ್ತು ರಸಗೊಬ್ಬರಗಳ ಲಭ್ಯತೆಯಷ್ಟೇ ಮುಖ್ಯ. ಪರಿಸರ ಸಂರಕ್ಷಣೆ ಬಲಪಡಿಸಲು ಮಿಷನ್ ಲೈಫ್, ಇಂಧನ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. "ಪ್ರಕೃತಿಯನ್ನು ಶೋಷಣೆ ಮಾಡಬಾರದು; ಅದರ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು ಮತ್ತು ಭವಿಷ್ಯಕ್ಕಾಗಿ ಸಂರಕ್ಷಿಸಬೇಕು" ಎಂದು ಅವರು ಹೇಳಿದರು.

ಸಚಿವರಾದ ಶ್ರೀ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡಿ, ಶ್ರೀ ಚೌಹಾಣ್ ಅವರ ಹಸಿರು ಉಪಕ್ರಮದಿಂದ ದೆಹಲಿ ಸರ್ಕಾರವು ಅಮೂಲ್ಯವಾದ ಪಾಠಗಳನ್ನು ಕಲಿತಿದೆ. ದೆಹಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಈ ಅಭಿಯಾನದೊಂದಿಗೆ ಸಂಪರ್ಕ ಹೊಂದಿದ್ದಾರೆ, ಆದರೆ ಶಾಲೆಗಳು, ಕಾಲೇಜುಗಳು ಮತ್ತು ಇತರೆ ಸಂಘ ಸಂಸ್ಥೆಗಳು ಸಹ ತೋಟಗಾರಿಕೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಪರಿಸರ ಸಂರಕ್ಷಣೆಗಾಗಿ ಸಾಮೂಹಿಕ ಸಂಕಲ್ಪ ಸ್ವೀಕರಿಸಲು ಮತ್ತು ತೋಟಗಾರಿಕೆ ಅಭಿಯಾನಕ್ಕೆ ಕೊಡುಗೆ ನೀಡಲು ನಾಗರಿಕರು ಹೆಚ್ಚಾಗಿ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಸಚಿವರಾದ ಶ್ರೀ ಪರ್ವೇಶ್ ವರ್ಮಾ ಮಾತನಾಡಿ, "ಏಕ್ ಪೆಡ್ ಮಾ ಕೆ ನಾಮ್" ಉಪಕ್ರಮವು ಪ್ರತಿಯೊಬ್ಬ ನಾಗರಿಕನಿಗೆ ಪರಿಸರ ರಕ್ಷಿಸುವ ಜವಾಬ್ದಾರಿ ಸ್ವೀಕರಿಸುವಂತೆ ಪ್ರೇರೇಪಿಸಬೇ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜತೆ ಜತೆಯಾಗಿ ಸಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಮೂಲಸೌಕರ್ಯ ವಿಸ್ತರಣೆ ಮತ್ತು ಹಸಿರು ಹೊದಿಕೆಯ ಸಂರಕ್ಷಣೆಯ ನಡುವೆ ಸಮತೋಲನದ ಅಗತ್ಯವಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಸದ ಶ್ರೀ ದರ್ಶನ್ ಸಿಂಗ್ ಚೌಧರಿ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಕೃಷಿ ವಿಶ್ವವಿದ್ಯಾಲಯಗಳ ಅಧಿಕಾರಿಗಳು, ಐಸಿಎಆರ್, ಡಿಎಆರ್ ಇ ಮತ್ತು ಕೆವಿಕೆಗಳ ಸಿಬ್ಬಂದಿ ಮತ್ತು ವೃಕ್ಷ ಮಿತ್ರ ಪರಿವಾರದ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸಿದ್ದರು. ದೇಶಾದ್ಯಂತ ಈ ಅಭಿಯಾನವನ್ನು ಸಸಿ ನೆಡುವ ಕಾರ್ಯಕ್ರಮವಾಗಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ನಿರಂತರ ಸಾರ್ವಜನಿಕ ಭಾಗವಹಿಸುವಿಕೆ ಹೆಚ್ಚಿಸುವ ಪ್ರಯತ್ನವಾಗಿ ಇರಿಸಲಾಗಿತ್ತು. ಸಸಿ ನೆಡುವುದು ಕೇವಲ ಮೊದಲ ಹೆಜ್ಜೆ, ಆದರೆ ಅದರ ಸಂರಕ್ಷಣೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯವಾದ ಜವಾಬ್ದಾರಿ ಎಂದು ಅಭಿಯಾನವು ಒತ್ತಿಹೇಳಿತು. ವೃಕ್ಷ ಮಿತ್ರ ಪರಿವಾರದ ಸದಸ್ಯರು ದೇಶಾದ್ಯಂತ ಸಮುದಾಯಗಳಿಗೆ ಈ ಸಂದೇಶ ಕೊಂಡೊಯ್ಯುವುದನ್ನು ಮುಂದುವರಿಸುತ್ತಿದ್ದಾರೆ.

*****
(रिलीज़ आईडी: 2298441)
आगंतुक पटल : 21