ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಕರೆಯ ಮೇರೆಗೆ, 'ಹರಿಯಾಳಿ ಅಮಾವಾಸ್ಯೆ'ಯ ಪವಿತ್ರ ಸಂದರ್ಭದಲ್ಲಿ ದೇಶಾದ್ಯಂತ ವೃಕ್ಷ ಮಿತ್ರ ಪರಿವಾರದ ಸದಸ್ಯರಿಂದ ಗಿಡ ನೆಡುವ ಅಭಿಯಾನ; 50,000 ಕ್ಕೂ ಹೆಚ್ಚು ಸಸಿಗಳನ್ನು ನೆಡಲು ನಿರ್ಧಾರ
‘ಹರಿಯಾಳಿ ಅಮಾವಾಸ್ಯೆ’ಯು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ
ವೃಕ್ಷ ಮಿತ್ರ ಪರಿವಾರದ ಸದಸ್ಯರು ತಮ್ಮ ತಮ್ಮ ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಸಸಿಗಳನ್ನು ನೆಡಲಿದ್ದಾರೆ
ದೇಶಾದ್ಯಂತ 50,000ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಪ್ರತಿಜ್ಞೆ
ಗಿಡ ನೆಡುವ ಅಭಿಯಾನದೊಂದಿಗೆ ಜನರ ಮಧ್ಯೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಪಸರಿಸುವುದು
“ಹರಿಯಾಳಿ ಅಮಾವಾಸ್ಯೆಯಂದು ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ಒಂದು ಸಸಿಯನ್ನಾದರೂ ನೆಡಬೇಕು”: ಶ್ರೀ ಶಿವರಾಜ್ ಸಿಂಗ್ ಚೌಹಾಣ್
प्रविष्टि तिथि:
11 AUG 2026 9:09PM by PIB Bengaluru
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಆಗಸ್ಟ್ 12, ಬುಧವಾರದಂದು ‘ಹರಿಯಾಳಿ ಅಮಾವಾಸ್ಯೆ’ಯ ಪವಿತ್ರ ಸಂದರ್ಭದಲ್ಲಿ ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದ ಬಳಿಯ ಸಿಪಿಜಿ ಗ್ರೌಂಡ್, ಸೆಂಟ್ರಲ್ ರೇಂಜ್‌ನಲ್ಲಿ ನೂರಾರು ಸಹೋದ್ಯೋಗಿಗಳೊಂದಿಗೆ ಗಿಡ ನೆಡುವ ಅಭಿಯಾನವನ್ನು ಕೈಗೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ವೃಕ್ಷ ಮಿತ್ರ ಅಭಿಯಾನದೊಂದಿಗೆ ಸಂಯೋಜಿತಗೊಂಡಿರುವ ದೇಶಾದ್ಯಂತದ ಸಾವಿರಾರು ಸದಸ್ಯರು ಸಹ ಅವರ ಕರೆಗೆ ಸ್ಪಂದಿಸಿ ತಮ್ಮ ತಮ್ಮ ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಗಿಡ ನೆಡುವ ಅಭಿಯಾನವನ್ನು ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ, ದೇಶಾದ್ಯಂತ 50,000ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಸಾಮೂಹಿಕ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗಿದೆ. ಗಿಡ ನೆಡುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹರಿಯಾಳಿ ಅಮಾವಾಸ್ಯೆಯನ್ನು ಆಚರಿಸಲು ಜನರನ್ನು ಪ್ರೋತ್ಸಾಹಿಸುವುದು ಮತ್ತು ಪರಿಸರವನ್ನು ರಕ್ಷಿಸುವ ಹಾಗೂ ಪೋಷಿಸುವ ಪ್ರಾಮುಖ್ಯತೆಯನ್ನು ಬಲಪಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ವೃಕ್ಷ ಮಿತ್ರ ಅಭಿಯಾನದ ಸದಸ್ಯರು ದೇಶದ ವಿವಿಧ ಭಾಗಗಳಿಂದ ಈ ಉಪಕ್ರಮದಲ್ಲಿ ಭಾಗವಹಿಸಲಿದ್ದು, ತಮ್ಮ ತಮ್ಮ ಸಮುದಾಯಗಳಿಗೆ ಪರಿಸರ ಜವಾಬ್ದಾರಿಯ ಸಂದೇಶವನ್ನು ಕೊಂಡೊಯ್ಯಲಿದ್ದಾರೆ ಮತ್ತು ಗಿಡ ನೆಡುವ ಚಟುವಟಿಕೆಗಳಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಿದ್ದಾರೆ.
ಹರಿಯಾಳಿ ಅಮಾವಾಸ್ಯೆಯು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಆಗಸ್ಟ್ 12 ಹರಿಯಾಳಿ ಅಮಾವಾಸ್ಯೆಯ ಪವಿತ್ರ ಸಂದರ್ಭವಾಗಿದೆ ಎಂದು ಹೇಳಿದರು. ನಮ್ಮ ದೇಶದ ಪ್ರತಿಯೊಂದು ಹಬ್ಬದ ಹಿಂದೆಯೂ ವೈಜ್ಞಾನಿಕ ದೃಷ್ಟಿಕೋನದ ಜೊತೆಗೆ ಜೀವನವನ್ನು ಉತ್ತಮಗೊಳಿಸುವ ಉದ್ದೇಶದ ಸಂದೇಶವೂ ಅಡಗಿದೆ ಎಂದು ಅವರು ಹೇಳಿದರು. ಹರಿಯಾಳಿ ಅಮಾವಾಸ್ಯೆಯು ಪ್ರಕೃತಿಗೆ ಕೃತಜ್ಞತೆ ಸಲ್ಲಿಸಲು ಅವಕಾಶವನ್ನು ಒದಗಿಸುವ ಹಬ್ಬವಾಗಿದೆ. ಹೊಲಗಳಲ್ಲಿ ಹರಡಿರುವ ಹಸಿರು ಮತ್ತು ಹೊಸ ಬೆಳೆ ಬರುವ ಭರವಸೆಯು ಮನಸ್ಸನ್ನು ಸಂತೋಷ ಮತ್ತು ಉತ್ಸಾಹದಿಂದ ತುಂಬಿಸುತ್ತದೆ. ಪ್ರಕೃತಿಯ ಮೇಲಿನ ಕೃತಜ್ಞತೆಯನ್ನು ಕೇವಲ ಮಾತುಗಳ ಮೂಲಕ ವ್ಯಕ್ತಪಡಿಸಬಾರದು, ಬದಲಿಗೆ ಮರಗಳನ್ನು ನೆಡುವ ಮೂಲಕ ಕ್ರಿಯೆಯ ರೂಪದಲ್ಲಿ ಪ್ರದರ್ಶಿಸಬೇಕು ಎಂದು ಅವರು ಹೇಳಿದರು. ಶ್ರೀ ಚೌಹಾಣ್ ಅವರ ಪ್ರಕಾರ, ಈ ಸಂದರ್ಭವು ಜನರು ಪ್ರಕೃತಿಯ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಅರ್ಥಪೂರ್ಣ ಕ್ರಿಯೆಯ ಮೂಲಕ ಅದರ ರಕ್ಷಣೆಗೆ ಕೊಡುಗೆ ನೀಡಲು ಅವಕಾಶವನ್ನು ಒದಗಿಸುತ್ತದೆ. ಆದ್ದರಿಂದ ಗಿಡ ನೆಡುವುದು ನೈಸರ್ಗಿಕ ಪರಿಸರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮಾರ್ಗವಾಗಬಹುದು, ಜೊತೆಗೆ ಅದರ ಸಂರಕ್ಷಣೆಯತ್ತ ಜವಾಬ್ದಾರಿಯ ಭಾವನೆಯನ್ನು ಪ್ರೋತ್ಸಾಹಿಸುತ್ತದೆ. ಸಕ್ರಿಯವಾಗಿ ಭಾಗವಹಿಸುವ ಮೂಲಕ ಮತ್ತು ತಮ್ಮ ಸುತ್ತಮುತ್ತ ಹೆಚ್ಚಿನ ಹಸಿರನ್ನು ಸೇರಿಸುವ ಮೂಲಕ ಈ ಹಬ್ಬವನ್ನು ಪ್ರಕೃತಿಯ ಆಚರಣೆಯನ್ನಾಗಿ ಮಾಡಲು ಅವರು ಜನರಿಗೆ ಕರೆ ನೀಡಿದರು.
ಸಸಿಗಳನ್ನು ನೆಡಲಿರುವ ವೃಕ್ಷ ಮಿತ್ರ ಪರಿವಾರದ ಸಾವಿರಾರು ಸದಸ್ಯರು
ವೃಕ್ಷ ಮಿತ್ರ ಪರಿವಾರದ ಸದಸ್ಯರು ತಮ್ಮ ಗ್ರಾಮಗಳು, ನಗರಗಳು ಮತ್ತು ಪಂಚಾಯತಿಗಳಲ್ಲಿ ಗಿಡ ನೆಡುವ ಅಭಿಯಾನಗಳನ್ನು ಕೈಗೊಳ್ಳುವ ಮೂಲಕ ಆಗಸ್ಟ್ 12 ರಂದು ಹರಿಯಾಳಿ ಅಮಾವಾಸ್ಯೆಯನ್ನು ಆಚರಿಸಲು ಸಂಕಲ್ಪ ಮಾಡಿದ್ದಾರೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ತಾವು ಕೂಡ ಅಂದು ದೆಹಲಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಸಸಿಗಳನ್ನು ನೆಡುವುದಾಗಿ ಅವರು ಹೇಳಿದರು. ಹರಿಯಾಳಿ ಅಮಾವಾಸ್ಯೆಯ ಈ ಪವಿತ್ರ ಸಂದರ್ಭದಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ಮೂಲಕ ಇದನ್ನು ಸ್ಮರಣೀಯವಾಗಿಸಬೇಕೆಂದು ಅವರು ದೇಶದ ಜನರಲ್ಲಿ ಮನವಿ ಮಾಡಿದರು. ದೇಶಾದ್ಯಂತ ವೃಕ್ಷ ಮಿತ್ರ ಪರಿವಾರದ ಸಾವಿರಾರು ಸದಸ್ಯರ ಭಾಗವಹಿಸುವಿಕೆಯು ಗಿಡ ನೆಡುವ ಉಪಕ್ರಮವನ್ನು ವಿವಿಧ ಸಮುದಾಯಗಳು ಮತ್ತು ಸ್ಥಳಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಹಳ್ಳಿಗಳು, ನಗರಗಳು ಮತ್ತು ಪಂಚಾಯತಿಗಳಲ್ಲಿ ಗಿಡ ನೆಡುವ ಅಭಿಯಾನಗಳನ್ನು ಕೈಗೊಳ್ಳುವ ಮೂಲಕ, ಸದಸ್ಯರು ತಮ್ಮ ಸುತ್ತಮುತ್ತ ಹಸಿರನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪರಿಸರ ರಕ್ಷಣೆ ಮತ್ತು ಸಾಮೂಹಿಕ ಜವಾಬ್ದಾರಿಯ ಸಂದೇಶವನ್ನು ಮುನ್ನಡೆಸಲಿದ್ದಾರೆ. ನಾಗರಿಕರು ಉತ್ಸಾಹದಿಂದ ಈ ಉಪಕ್ರಮದಲ್ಲಿ ಭಾಗವಹಿಸಬೇಕು ಮತ್ತು ಗಿಡ ನೆಡುವುದನ್ನು ಹರಿಯಾಳಿ ಅಮಾವಾಸ್ಯೆಯ ಆಚರಣೆಯ ಅರ್ಥಪೂರ್ಣ ಭಾಗವನ್ನಾಗಿ ಮಾಡಬೇಕೆಂದು ಶ್ರೀ ಚೌಹಾಣ್ ಆಗ್ರಹಿಸಿದರು.
ಪ್ರತಿಯೊಬ್ಬ ವ್ಯಕ್ತಿಯೂ ಒಂದು ಸಸಿಯನ್ನು ನೆಡಬೇಕು
ಸಸಿಯನ್ನು ನೆಡುವುದು ಕೇವಲ ಪರಿಸರವನ್ನು ರಕ್ಷಿಸುವ ಕ್ರಿಯೆಯಲ್ಲ, ಬದಲಿಗೆ ಮುಂಬರುವ ಪೀಳಿಗೆಗೆ ಸುರಕ್ಷಿತ, ಭದ್ರ ಮತ್ತು ಸುಂದರ ಭವಿಷ್ಯಕ್ಕೆ ತಡಿಪಾಯ ಹಾಕುವ ಮಾರ್ಗವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಆಗಸ್ಟ್ 12 ರಂದು ಹರಿಯಾಳಿ ಅಮಾವಾಸ್ಯೆಯ ಸಂದರ್ಭದಲ್ಲಿ ದೇಶಾದ್ಯಂತದ ಎಲ್ಲಾ ವೃಕ್ಷ ಮಿತ್ರರು ಮತ್ತು ನಾಗರಿಕರು ಕನಿಷ್ಠ ಒಂದು ಮರವನ್ನಾದರೂ ನೆಡುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಅದೇ ಸಮಯದಲ್ಲಿ, ಜನರು ತಮ್ಮ ಗಿಡ ನೆಡುವ ಪ್ರತಿಜ್ಞೆಗೆ ಇನ್ನೂ ಐದು ಜನರನ್ನು ಸೇರಿಸಿಕೊಳ್ಳುವಂತೆ ಮತ್ತು ಆ ಐದು ಜನರಲ್ಲಿ ಪ್ರತಿಯೊಬ್ಬರೂ ಮತ್ತಷ್ಟು ಐದು ಜನರನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕೆಂದು ಕೇಂದ್ರ ಸಚಿವರು ಆಗ್ರಹಿಸಿದರು, ಇದರಿಂದ ಈ ಅಭಿಯಾನವು ಸಾಧ್ಯವಾದಷ್ಟು ಗರಿಷ್ಠ ಜನರನ್ನು ತಲುಪಬಹುದು. ಭಾಗವಹಿಸುವಿಕೆಯ ಈ ಸರಣಿಯು ಗಿಡ ನೆಡುವುದನ್ನು 'ಜನ ಆಂದೋಲನ'ವನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ, ಪ್ರತ್ಯೇಕ ವ್ಯಕ್ತಿಗಳು ತಮ್ಮ ಕುಟುಂಬಗಳು, ಸ್ನೇಹಿತರು, ನೆರೆಹೊರೆಯವರು ಮತ್ತು ವಿಶಾಲ ಸಮುದಾಯಗಳನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತಾರೆ ಎಂದು ಅವರು ಹೇಳಿದರು. ನಾಗರಿಕರು ತಮ್ಮ ಗಿಡ ನೆಡುವ ಚಟುವಟಿಕೆಗಳ ಮಾಹಿತಿ ಮತ್ತು ಛಾಯಾಚಿತ್ರಗಳನ್ನು shivrajsinghchouhan.co.in ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಅವರು ಮನವಿ ಮಾಡಿದರು, ಇದರಿಂದ ಈ ಉಪಕ್ರಮವು ಸಮಾಜದ ಎಲ್ಲಾ ವರ್ಗದ ಜನರ ಭಾಗವಹಿಸುವಿಕೆಯನ್ನು ಆಧರಿಸಿದ ಅಭಿಯಾನವಾಗಬಹುದು.
*****
(रिलीज़ आईडी: 2298018)
आगंतुक पटल : 18