ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಆರೋಗ್ಯ ಸಂಶೋಧನಾ ಇಲಾಖೆ- ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಡಿ ಎಚ್‌ ಆರ್-ಐಸಿಎಂಆರ್‌) ಯಿಂದ ದೇಶಾದ್ಯಂತ 'S.H.I.N.E.' ಆಯೋಜನೆ: ಶಾಲಾ ವಿದ್ಯಾರ್ಥಿಗಳಿಗೆ 'ಒಂದು ದಿನ ವಿಜ್ಞಾನಿಯಾಗಿ' ಕಳೆಯಲು ಆಹ್ವಾನ


S.H.I.N.E. 2026: ಮುಂದಿನ ಪೀಳಿಗೆಯ ಅನ್ವೇಷಕರಿಗೆ ವಿಜ್ಞಾನ, ಆರೋಗ್ಯ ಮತ್ತು ನಾವೀನ್ಯತೆ

ಡಿ ಎಚ್‌ ಆರ್-ಐಸಿಎಂಆರ್‌ ನ S.H.I.N.E. ತನ್ನ ಎರಡನೇ ಆವೃತ್ತಿಯೊಂದಿಗೆ ಮರಳಿದೆ, ದೇಶಾದ್ಯಂತ ಶಾಲೆಗಳ ಸಂಪರ್ಕ ಅಭಿಯಾನವನ್ನು ವಿಸ್ತರಿಸುತ್ತಿದೆ

ಎರಡು ದಿನಗಳ S.H.I.N.E. 2026 ಭಾರತದಾದ್ಯಂತ 83 ಸ್ಥಳಗಳಲ್ಲಿ ವಿದ್ಯಾರ್ಥಿಗಳನ್ನು ವಿಜ್ಞಾನಿಗಳೊಂದಿಗೆ ಮುಖಾಮುಖಿಯಾಗಿಸಲಿದೆ

9 ರಿಂದ 12ನೇ ತರಗತಿಯ ಸುಮಾರು 30,000 ವಿದ್ಯಾರ್ಥಿಗಳು ಐಸಿಎಆರ್ ಸಂಶೋಧನೆ, ಪ್ರಯೋಗಾಲಯಗಳು ಮತ್ತು ವೈಜ್ಞಾನಿಕ ನಾವೀನ್ಯತೆಯನ್ನು ಅನುಭವಿಸಲಿದ್ದಾರೆ

ಪ್ರಕಟಣಾ ದಿನಾಂಕ: 10 AUG 2026 8:59PM by PIB Bengaluru

"ಒಂದು ದಿನವನ್ನು ವಿಜ್ಞಾನಿಯಾಗಿ ಕಳೆಯಿರಿ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ನೀಡಿದ ಕರೆಯಿಂದ ಪ್ರೇರಿತರಾಗಿ, ಆರೋಗ್ಯ ಸಂಶೋಧನಾ ಇಲಾಖೆ- ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಡಿ ಎಚ್‌ ಆರ್-ಐಸಿಎಂಆರ್‌) ದೇಶಾದ್ಯಂತ ಶಾಲಾ ಸಂಪರ್ಕ ಅಭಿಯಾನದ ಉಪಕ್ರಮವಾದ 'S.H.I.N.E. – ಸೈನ್ಸ್, ಹೆಲ್ತ್ ಅಂಡ್ ಇನ್ನೋವೇಶನ್ ಫಾರ್ ನೆಕ್ಸ್ಟ್‌ ಜೆನ್ ಎಕ್ಸ್‌ ಪ್ಲೋರರ್ಸ್' ನ ಎರಡನೇ ಆವೃತ್ತಿಯನ್ನು 11-12, ಆಗಸ್ಟ್ 2026 ರಂದು ಆಯೋಜಿಸಲು ಸಜ್ಜಾಗಿದೆ.

ಈ ಎರಡು ದಿನಗಳ ಕಾರ್ಯಕ್ರಮವನ್ನು ಐಸಿಎಂಆರ್ ಸಂಸ್ಥೆಗಳು, ಡಿ ಎಚ್‌ ಆರ್-ಮಾದರಿ ಗ್ರಾಮೀಣ ಆರೋಗ್ಯ ಸಂಶೋಧನಾ ಘಟಕಗಳು (MRHRU) ಮತ್ತು ಸಂಯೋಜಿತ ಕ್ಷೇತ್ರ ಘಟಕಗಳು ಸೇರಿದಂತೆ ದೇಶಾದ್ಯಂತ 83 ಸ್ಥಳಗಳಲ್ಲಿ ಆಯೋಜಿಸಲಾಗುವುದು. ಇದು ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು, ವೈಜ್ಞಾನಿಕ ಸಂಶೋಧನೆಯನ್ನು ಅನ್ವೇಷಿಸಲು ಹಾಗೂ ಆರೋಗ್ಯ ಮತ್ತು ನಾವೀನ್ಯತೆಯ ಪ್ರಪಂಚವನ್ನು ಪ್ರತ್ಯಕ್ಷವಾಗಿ ಅನುಭವಿಸಲು ಅವಕಾಶವನ್ನು ನೀಡುತ್ತದೆ.

ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಮತ್ತು ಐಸಿಎಂಆರ್ ಮಹಾನಿರ್ದೇಶಕರಾದ ಡಾ. ರಾಜೀವ್ ಬಹ್ಲ್ ಅವರು ಭಾಗವಹಿಸುವ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು, ಸಂಶೋಧನಾ ಪ್ರಯೋಗಾಲಯಗಳನ್ನು ಅನ್ವೇಷಿಸಲು ಹಾಗೂ ಆರೋಗ್ಯ ಮತ್ತು ನಾವೀನ್ಯತೆಯ ಪ್ರಪಂಚವನ್ನು ಪ್ರತ್ಯಕ್ಷವಾಗಿ ಅನುಭವಿಸಲು ಈ ಅವಕಾಶವನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯದರ್ಶಿ, ಡಿ ಎಚ್‌ ಆರ್ ಮತ್ತು ಡಿಜಿ, ಐಸಿಎಂಆರ್ ಅವರ ಸಂದೇಶ.

S.H.I.N.E. ಸರ್ಕಾರಿ ಮತ್ತು ಖಾಸಗಿ ಶಾಲೆಗಳ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನೈಜ ಪ್ರಪಂಚದ ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ವೈಜ್ಞಾನಿಕ ಚಿಂತನೆಯನ್ನು ಅನ್ವಯಿಸಲು ಆಹ್ವಾನಿಸುತ್ತದೆ.

ಭಾರತದ ವಿಕಸಿತ ಭಾರತ 2047ರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಉಪಕ್ರಮವು ಯುವ ಕಲಿಕಾರ್ಥಿಗಳಲ್ಲಿ ಸಾರ್ವಜನಿಕ ಆರೋಗ್ಯ ಪರಿಹಾರಗಳಿಗಾಗಿ ವೈಜ್ಞಾನಿಕ ಕುತೂಹಲವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ವರ್ಷ, ಐಸಿಎಂಆರ್ ಪ್ರಯೋಗಾಲಯಗಳು ಹತ್ತಿರದ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಈ ಉಪಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುವ ಮೂಲಕ ಆಹ್ವಾನದ ಆಧಾರದ ಮೇಲೆ ಭಾಗವಹಿಸುವಿಕೆಯನ್ನು ನೀಡಲಾಗಿದ್ದು, ಇದು 30,000 ವಿದ್ಯಾರ್ಥಿಗಳನ್ನು ತಲುಪುವ ನಿರೀಕ್ಷೆಯಿದೆ.

ಎರಡು ದಿನಗಳಲ್ಲಿ, ಭಾಗವಹಿಸುವ ವಿದ್ಯಾರ್ಥಿಗಳು ಮಾರ್ಗದರ್ಶಿತ ಪ್ರಯೋಗಾಲಯ ಪ್ರವಾಸಗಳು, ಸಂಶೋಧನಾ ಪ್ರದರ್ಶನಗಳು, ಪೋಸ್ಟರ್ ವಾಕ್‌ ಗಳು, ವೀಡಿಯೊ ಪ್ರಸ್ತುತಿಗಳು ಮತ್ತು ನಡೆಯುತ್ತಿರುವ ವೈಜ್ಞಾನಿಕ ಕಾರ್ಯಗಳ ನೇರ ಪ್ರದರ್ಶನಗಳು ಸೇರಿದಂತೆ ವಿವಿಧ ಸಂವಾದಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಐಸಿಎಂಆರ್ ವಿಜ್ಞಾನಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶವನ್ನು ಸಹ ಪಡೆಯಲಿದ್ದು, ಅವರ ಸಂಶೋಧನಾ ಪಯಣ, ಪರಿಣತಿಯ ಕ್ಷೇತ್ರಗಳು ಮತ್ತು ಸಾರ್ವಜನಿಕ ಆರೋಗ್ಯದಲ್ಲಿನ ದೈನಂದಿನ ಕೆಲಸದ ಬಗ್ಗೆ ಒಳನೋಟವನ್ನು ಪಡೆಯಲಿದ್ದಾರೆ.

ತನ್ನ ಸಂಸ್ಥೆಗಳು ಮತ್ತು ಗ್ರಾಮೀಣ ಸಂಶೋಧನಾ ಘಟಕಗಳ ಬಾಗಿಲುಗಳನ್ನು ಯುವ ವಿದ್ಯಾರ್ಥಿಗಳಿಗೆ ತೆರೆಯುವ ಮೂಲಕ, S.H.I.N.E. ವಿಜ್ಞಾನವನ್ನು ಸ್ಪಷ್ಟ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತದೆ. ಸಂಶೋಧನೆಯು ಅವರ ಸ್ವಂತ ಸಮುದಾಯಗಳು ಎದುರಿಸುತ್ತಿರುವ ಆರೋಗ್ಯ ಸವಾಲುಗಳನ್ನು ಹೇಗೆ ಪರಿಹರಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತೋರಿಸುತ್ತದೆ ಮತ್ತು ವೈಜ್ಞಾನಿಕ ಅನ್ವೇಷಣೆಯಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ.

ಈ ಉಪಕ್ರಮದ ಮೂಲಕ, ಭಾರತದ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಪೋಷಿಸಲು ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನದಡಿಯಲ್ಲಿ ದೇಶದ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುವ ಮುಂದಿನ ಪೀಳಿಗೆಯ ಸಂಶೋಧಕರನ್ನು ಪ್ರೇರೇಪಿಸಲು ಐಸಿಎಂಆರ್ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

 

*****

 


(ಪ್ರಕಟಣೆ ಐ.ಡಿ.: 2297433) ವಿಸಿಟರ್ ಕೌಂಟರ್ : 94
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Telugu