ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದಾದ ಕೈಮಗ್ಗವನ್ನು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 AUG 2026 2:51PM by PIB Bengaluru

ರಾಷ್ಟ್ರೀಯ ಕೈಮಗ್ಗ ದಿನದಂದು ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಈ ಲೇಖನವು ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದಾದ ಕೈಮಗ್ಗವನ್ನು ಮತ್ತು ಭಾರತೀಯ ಜವಳಿಗಳ ಅಸಂಖ್ಯಾತ ಪ್ರಾದೇಶಿಕ ಸಂಪ್ರದಾಯಗಳನ್ನು ಉಲ್ಲೇಖಿಸುತ್ತದೆ.

"ಭಾರತದ ಯುವಕರು ಭಾರತೀಯ ಪರಂಪರೆ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮವನ್ನು ಒಟ್ಟುಗೂಡಿಸಲು, ಕೈಮಗ್ಗ ಕ್ಷೇತ್ರದ ಮುಂದಿನ ಅಧ್ಯಾಯವನ್ನು ರೂಪಿಸಲು, ಆ ಮೂಲಕ ನೇಕಾರರ ಜೀವನೋಪಾಯವನ್ನು ಬಲಪಡಿಸಲು ಸಚಿವರು ಲೇಖನದ ಮೂಲಕ ಕರೆ ನೀಡಿದ್ದಾರೆ" ಎಂದು ಶ್ರೀ ಮೋದಿ ಅವರು ಹೇಳಿದರು.

ಎಕ್ಸ್‌ ತಾಣದಲ್ಲಿ ಶ್ರೀ ಮೋದಿ ಅವರು ಹೀಗೆ ಪೋಸ್ಟ್ ಮಾಡಿದ್ದಾರೆ:

ಭಾರತವು ಇಂದು #NationalHandloomDay ಆಚರಿಸುತ್ತಿರುವಾಗ, ಕೇಂದ್ರ ಸಚಿವರಾದ ಶ್ರೀ @girirajsinghbjp ಅವರು ಕೈಮಗ್ಗವನ್ನು ಭಾರತದ ಶ್ರೇಷ್ಠ ನಾಗರಿಕತೆಯ ಶಕ್ತಿಗಳಲ್ಲಿ ಒಂದು ಎಂದು ಶ್ಲಾಘಿಸಿದ್ದಾರೆ, ಭಾರತೀಯ ಜವಳಿಗಳ ಅಸಂಖ್ಯಾತ ಪ್ರಾದೇಶಿಕ ಸಂಪ್ರದಾಯಗಳನ್ನು ಅವರು ಉಲ್ಲೇಖಿಸಿದ್ದಾರೆ.

ಭಾರತದ ಯುವಕರು ಪರಂಪರೆ ಮತ್ತು ತಂತ್ರಜ್ಞಾನ, ಸೃಜನಶೀಲತೆ ಮತ್ತು ಉದ್ಯಮವನ್ನು ಒಟ್ಟುಗೂಡಿಸಲು, ಕೈಮಗ್ಗದ ಮುಂದಿನ ಅಧ್ಯಾಯವನ್ನು ರೂಪಿಸಲು, ಆ ಮೂಲಕ ನೇಕಾರರ ಜೀವನೋಪಾಯವನ್ನು ಬಲಪಡಿಸಲು ಕರೆ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2296980) ವಿಸಿಟರ್ ಕೌಂಟರ್ : 42