ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಆರ್ಥಿಕ ಅಡೆತಡೆಗಳಿಂದ ʻಎಂಬಿಎʼ ಆಕಾಂಕ್ಷೆಗಳವರೆಗೆ: ತೇಲು ಝಾನ್ಸಿ ವಿಜಯ್ ಕೃಷ್ಣ ಅವರ ಉನ್ನತ ಶಿಕ್ಷಣ ಮುಂದುವರಿಕೆಗೆ ಸರಕಾರದ ಆರ್ಥಿಕ ಬೆಂಬಲವು ಸಹಾಯ ಮಾಡಿದ ಪರಿ

प्रविष्टि तिथि: 08 AUG 2026 2:04PM by PIB Bengaluru

ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣವು ಯುವಜನರಿಗೆ ಅರ್ಥಪೂರ್ಣ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಹೊಸ ಮಾರ್ಗಗಳನ್ನು ತೆರೆಯಬಲ್ಲದು. ಆದರೆ, ಹಣಕಾಸಿನ ಅಡಚಣೆಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುಣಮಟ್ಟದ ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿಸುತ್ತವೆ.

ಶೈಕ್ಷಣಕ್ಕೆ ಆರ್ಥಿಕ ನೆರವು ದೊರೆಯುವುದರಿಂದ ಆಗುವ ಕ್ರಾಂತಿಕಾರಿ ಪರಿಣಾಮಕ್ಕೆ ನಿದರ್ಶನವೆಂಬಂತೆ, ಎನ್‌ಸಿ-ಒಬಿಸಿ ಸಮುದಾಯಕ್ಕೆ ಸೇರಿದವರಾದ 25 ವರ್ಷದ ಕರ್ನಾಟಕದ ವಿದ್ಯಾರ್ಥಿ ತೇಲು ಝಾನ್ಸಿ ವಿಜಯ್ ಕೃಷ್ಣ ಅವರು, ಸಾಮಾಜಿಕ  ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಒಬಿಸಿ, ಇಬಿಸಿ ಮತ್ತು ಡಿಎನ್‌ಟಿ ವಿದ್ಯಾರ್ಥಿಗಳ ಕಾಲೇಜಿನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಶ್ರದ್ಧೆಯೊಂದಿಗೆ ʻಎಂಬಿಎʼ ಮುಂದುವರಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ ಸಚಿವಾಲಯದ ಬೆಂಬಲದಿಂದ ಇದು ಸಾಧ್ಯವಾಗಿದೆ.

ಶಿಕ್ಷಣದ ಬಗ್ಗೆ ಗೌರವವುಳ್ಳ, ಆದರೆ ಆರ್ಥಿಕ ಮಿತಿಗಳನ್ನು ಹೊಂದಿರುವ ಕುಟುಂಬದಿಂದ ಬಂದ ವಿಜಯ್ ಕೃಷ್ಣ ಅವರು ಉನ್ನತ ಶಿಕ್ಷಣವನ್ನು ಪಡೆಯುವಾಗ ಗಮನಾರ್ಹ ಆರ್ಥಿಕ ಒತ್ತಡವನ್ನು ಅನುಭವಿಸಬೇಕಾಯಿತು. ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಸಿದ್ಧತೆಗೆ ಸಂಬಂಧಿಸಿದ ಖರ್ಚುಗಳನ್ನು ಭರಿಸುವುದು ದೊಡ್ಡ ಸವಾಲಾಗಿತ್ತು. ಆರ್ಥಿಕ ಅಡಚಣೆಗಳ ಜೊತೆಗೆ, ಅವರು ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಎನ್‌ಸಿ-ಒಬಿಸಿ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಯೊಬ್ಬರು ʻಎಂಬಿಎʼ ಮಾಡಲು ಸಾಮಾಜಿಕ ಮತ್ತು ಮಾನಸಿಕ ಅಡೆತಡೆಗಳನ್ನು ಸಹ ಎದುರಿಸುತ್ತಿದ್ದರು.

ಈ ಸವಾಲುಗಳ ಹೊರತಾಗಿಯೂ, ವಿಜಯ್ ಕೃಷ್ಣ ಅವರ ವೃತ್ತಿಪರ ಮತ್ತು ವ್ಯವಸ್ಥಾಪಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು, ಜೊತೆಗೆ ಸ್ಥಿರ ಮತ್ತು ಪರಿಣಾಮಕಾರಿ ವೃತ್ತಿಜೀವನವನ್ನು ನಿರ್ಮಿಸಲು ದೃಢ ಸಂಕಲ್ಪ ಮಾಡಿದರು. ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ, ವಿಶೇಷವಾಗಿ ವ್ಯಾಪಾರ ಮತ್ತು ನವೋದ್ಯಮಗಳ ಮೂಲಕ ಅರ್ಥಪೂರ್ಣವಾಗಿ ಕೊಡುಗೆ ನೀಡುವುದು ಅವರ ದೀರ್ಘಕಾಲೀನ ಆಕಾಂಕ್ಷೆಯಾಗಿದೆ. ಅವರ ತಂದೆ ಮತ್ತು ಕುಟುಂಬವು ಆರ್ಥಿಕ ಮಿತಿಗಳ ಹೊರತಾಗಿಯೂ ವಿಜಯ್‌ ಕೃಷ್ಣ ಅವರ ಶೈಕ್ಷಣಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸಿತು.

ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಶೈಕ್ಷಣಿಕ ಆಕಾಂಕ್ಷೆಗಳನ್ನು ಬಲಪಡಿಸುವುದು

ಒಬಿಸಿ, ಇಬಿಸಿ ಮತ್ತು ಡಿಎನ್‌ಟಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಲು ಅನುವು ಮಾಡಿಕೊಡುವ ಮಹತ್ವವನ್ನು ಗುರುತಿಸಿ, 2026ರ ಏಪ್ರಿಲ್ 23 ರಂದು ʻಒಬಿಸಿ, ಇಬಿಸಿ ಮತ್ತು ಡಿಎನ್‌ಟಿ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಉನ್ನತ ದರ್ಜೆಯ ಶಿಕ್ಷಣ ಯೋಜನೆಯಡಿಯಲ್ಲಿ ವಿಜಯ್ ಕೃಷ್ಣ ಅವರಿಗೆ 10.27 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಯಿತು.

ತೇಲು ಝಾನ್ಸಿ ವಿಜಯ್‌ ಕೃಷ್ಣ ಅವರು ಈ ನೆರವಿಗಾಗಿ ತಮ್ಮದೇ ಮಾತುಗಳಲ್ಲಿ ಹೀಗೆ ಕೃತಜ್ಞತೆ ಸಲ್ಲಿಸಿದ್ದಾರೆ:

"ಹೆಚ್ಚಿನ ಆತ್ಮವಿಶ್ವಾಸ ಮತ್ತು ಶ್ರದ್ಧೆಯಿಂದ ನನ್ನ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಿದ್ದಕ್ಕಾಗಿ, ಆರ್ಥಿಕ ನೆರವು ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ವಿನಮ್ರವಾಗಿ ಧನ್ಯವಾದ ಸಲ್ಲಿಸಲು ನಾನು ಬಯಸುತ್ತೇನೆ."

ವಿದ್ಯಾರ್ಥಿವೇತನವು ವಿಜಯ್‌ ಕೃಷ್ಣ ಅವರ ಶಿಕ್ಷಣಕ್ಕೆ ಸಂಬಂಧಿಸಿದ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿತು. ವಿಜಯ್ ಕೃಷ್ಣ ಅವರ ಪ್ರಕಾರ, ಈ ನೆರವು ಅವರ ಶೈಕ್ಷಣಿಕ ಸಾಲದ ಹೊರೆಯನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡಲು ಸಹಾಯ ಮಾಡಿತು, ಅತ್ಯವಶ್ಯವಾಗಿದ್ದ ಆರ್ಥಿಕ ಪರಿಹಾರವನ್ನು ಒದಗಿಸಿತು ಮತ್ತು ಉನ್ನತ ಶಿಕ್ಷಣದ ವೆಚ್ಚವನ್ನು ನಿರ್ವಹಿಸುವ ವಿಚಾರದಲ್ಲಿ ಇದ್ದ ಒತ್ತಡವನ್ನು ಕಡಿಮೆ ಮಾಡಿತು.

ಸಚಿವಾಲಯದ ಬೆಂಬಲವು ವಿಜಯ್‌ ಕೃಷ್ಣ ಅವರು ತಮ್ಮ ಎಂಬಿಎ ಮತ್ತು ವೃತ್ತಿ ಜೀವನದ ಮೇಲೆ ಹೆಚ್ಚು ವಿಶ್ವಾಸದಿಂದ ಗಮನ ಹರಿಸಲು ಅನುವು ಮಾಡಿಕೊಟ್ಟಿದೆ. ಕಡಿಮೆ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ, ಅವರು ತಮ್ಮ ಶಿಕ್ಷಣಕ್ಕೆ ಹೆಚ್ಚಿನ ಗಮನವನ್ನು ನೀಡಲು ಮತ್ತು ಅವರ ದೀರ್ಘಕಾಲೀನ ವೃತ್ತಿಜೀವನದ ಆಕಾಂಕ್ಷೆಗಳ ಕಡೆಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಹೆಚ್ಚಿನ  ಆತ್ಮವಿಶ್ವಾಸ ಮತ್ತು ಶ್ರದ್ಧೆಯಿಂದ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವಿನ ಮೂಲಕ ಸಹಾಯ ಮಾಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ವಿಜಯ್ ಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಶೈಕ್ಷಣಿಕ ಬೆಂಬಲವು ವಿದ್ಯಾರ್ಥಿಗಳಿಗೆ ಆರ್ಥಿಕ ಅಡೆತಡೆಗಳನ್ನು ಪರಿಹರಿಸಲು ಮತ್ತು ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೇಲು ಝಾನ್ಸಿ ವಿಜಯ್ ಕೃಷ್ಣ ಅವರ ಪ್ರಯಾಣವು ವಿವರಿಸುತ್ತದೆ. ಈ ಯೋಜನೆಯು ಉನ್ನತ ಶಿಕ್ಷಣದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಮೂಲಕ ಒಬಿಸಿ, ಇಬಿಸಿ ಮತ್ತು ಡಿಎನ್‌ಟಿ ಸಮುದಾಯಗಳ ಯುವ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು, ಅವರ ಆಕಾಂಕ್ಷೆಗಳನ್ನು ಮುಂದುವರಿಸಲು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ.

 

*****


(रिलीज़ आईडी: 2296506) आगंतुक पटल : 23
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil