ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಕೈಮಗ್ಗ ದಿನದಂದು ದೇಶದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 07 AUG 2026 11:14AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಕೈಮಗ್ಗ ದಿನದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದರು ಮತ್ತು ಭಾರತದ ಶ್ರೀಮಂತ ಮತ್ತು ರೋಮಾಂಚಕ ಕೈಮಗ್ಗ ಪರಂಪರೆಯನ್ನು ಆಚರಿಸಿದರು. ದೇಶದ ನೇಕಾರರು ಮತ್ತು ಕುಶಲಕರ್ಮಿಗಳ ಕೌಶಲ್ಯ, ಸೃಜನಶೀಲತೆ ಮತ್ತು ಸಮರ್ಪಣೆಗೆ ಗೌರವ ಸಲ್ಲಿಸಿದ ಅವರು, ತಲೆಮಾರುಗಳಿಂದ ಅವರು ತಮ್ಮ ಕರಕುಶಲತೆಯ ಮೂಲಕ ಭಾರತದ ಕಾಲಾತೀತ ಸಂಪ್ರದಾಯಗಳನ್ನು ಸಂರಕ್ಷಿಸಿದ್ದಾರೆ ಮತ್ತು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಕೈಮಗ್ಗ ಕ್ಷೇತ್ರವನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ನರೇಂದ್ರ ಮೋದಿ, ಕೈಮಗ್ಗ ಕ್ಷೇತ್ರವು ಗ್ರಾಮೀಣ ಸಬಲೀಕರಣ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಬಣ್ಣಿಸಿದರು. ನಾಗರಿಕರು ತಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳು ಮತ್ತು ಜಿಆರ್ ಡಬ್ಲ್ಯೂಎಂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಂತೆ ಪ್ರಧಾನಮಂತ್ರಿ ಒತ್ತಾಯಿಸಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

ಇಂದು, ರಾಷ್ಟ್ರೀಯ ಕೈಮಗ್ಗ ದಿನದಂದು, ನಾವು ಭಾರತದ ಶ್ರೀಮಂತ ಮತ್ತು ರೋಮಾಂಚಕ ಕೈಮಗ್ಗ ಪರಂಪರೆಯನ್ನು ಆಚರಿಸುತ್ತೇವೆ. ನಮ್ಮ ನೇಕಾರರು ಮತ್ತು ಕುಶಲಕರ್ಮಿಗಳ ಕೌಶಲ್ಯ, ಸೃಜನಶೀಲತೆ ಮತ್ತು ಸಮರ್ಪಣೆಗೆ ನಾವು ನಮಸ್ಕರಿಸುತ್ತೇವೆ. ತಲೆಮಾರುಗಳಿಂದ, ಅವರು ನಮ್ಮ ಸಂಪ್ರದಾಯಗಳನ್ನು ಸಂರಕ್ಷಿಸಿದ್ದಾರೆ ಮತ್ತು ಶ್ರೀಮಂತಗೊಳಿಸಿದ್ದಾರೆ.

ಗ್ರಾಮೀಣ ಸಬಲೀಕರಣ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವ ಪ್ರಮುಖ ಆಧಾರಸ್ತಂಭವಾಗಿರುವ ಕೈಮಗ್ಗ ಕ್ಷೇತ್ರಕ್ಕೆ ನಮ್ಮ ಸರ್ಕಾರ ಬೆಂಬಲ ನೀಡುತ್ತಲೇ ಇರುತ್ತದೆ.

ನಿಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳು ಮತ್ತು ಜಿ ಆರ್ ಡಬ್ಲ್ಯೂ ಎಂ ವಿಡಿಯೊಗಳನ್ನು #NationalHandloomDay ಬಳಸಿ ಹಂಚಿಕೊಳ್ಳಿ, ಇದು ಈ ವಲಯಕ್ಕೆ ಸಂಬಂಧಿಸಿದವರನ್ನು ಪ್ರೋತ್ಸಾಹಿಸುತ್ತದೆ.

 

*****


(रिलीज़ आईडी: 2295945) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Manipuri , Bengali , Assamese , Punjabi , Gujarati , Tamil , Malayalam