ಜಲ ಶಕ್ತಿ ಸಚಿವಾಲಯ
azadi ka amrit mahotsav

ಜಲ ಜೀವನ್ ಮಿಷನ್ 2.0 ಕ್ಕೆ ಮತ್ತಷ್ಟು ವೇಗ:


2026–27ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು ₹6,154.96 ಕೋಟಿ ಹಣ ಬಿಡುಗಡೆ ಮಾಡಿದ ಕೇಂದ್ರ

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರಿಂದ ರಾಜ್ಯವಾರು ಸಂಬಂಧಿತ ಸಂಸದರೊಂದಿಗೆ ಸಂವಾದ ಸಭೆಗಳು

प्रविष्टि तिथि: 06 AUG 2026 4:33PM by PIB Bengaluru

 

ಜಲ ಜೀವನ್ ಮಿಷನ್ (ಜೆಜೆಎಮ್) ಅನುಷ್ಠಾನದ ವೇಗವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಉತ್ತೇಜನವಾಗಿ, ಭಾರತ ಸರ್ಕಾರವು 2026–27ನೇ ಹಣಕಾಸು ವರ್ಷದಲ್ಲಿ 10 ರಾಜ್ಯಗಳಿಗೆ ಕೇಂದ್ರದ ಪಾಲಿನ ₹5,289.09 ಕೋಟಿ ಮೊತ್ತವನ್ನು ಮರುಪಾವತಿಸಿದೆ, ಜೊತೆಗೆ 13 ರಾಜ್ಯಗಳಿಗೆ ಎಸ್‌ಎನ್‌ಎ ಸ್ಪರ್ಶ್ (SNA SPARSH) ವೇದಿಕೆಯ ಮೂಲಕ ₹865.87 ಕೋಟಿ ಬಿಡುಗಡೆ ಮಾಡಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2026ರ ಮಾರ್ಚ್‌ 10ರಂದು ಜಲ ಜೀವನ್ ಮಿಷನ್ 2.0ಗೆ ಅನುಮೋದನೆ ನೀಡಿದ್ದು, ಈ ಮಿಷನ್‌ನ ಅವಧಿಯನ್ನು 2028ರ ಡಿಸೆಂಬರ್‌ವರೆಗೆ ವಿಸ್ತರಿಸಿದೆ. ಪ್ರತಿ ಗ್ರಾಮೀಣ ಕುಟುಂಬಕ್ಕೂ ವಿಶ್ವಾಸಾರ್ಹ, ಸಮರ್ಪಕ ಹಾಗೂ ಸುರಕ್ಷಿತ ಕುಡಿಯುವ ನೀರಿನ ಸೇವೆಗಳನ್ನು ಖಚಿತಪಡಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವತ್ರಿಕ ಹಾಗೂ ಸುಸ್ಥಿರ ಕುಡಿಯುವ ನೀರಿನ ವ್ಯಾಪ್ತಿಯನ್ನು ಸಾಧಿಸಲು ನೆರವಾಗುವ ಉದ್ದೇಶದಿಂದ, ಈ ಮಿಷನ್‌ಗೆ ₹3.59 ಲಕ್ಷ ಕೋಟಿ ಕೇಂದ್ರದ ನೆರವು ಸೇರಿದಂತೆ ಒಟ್ಟು ₹8.69 ಲಕ್ಷ ಕೋಟಿ ವೆಚ್ಚವನ್ನು ಅನುಮೋದಿಸಲಾಗಿದೆ.

ಜಲ ಜೀವನ್ ಮಿಷನ್ 1.0 ಪೂರ್ಣಗೊಂಡ ನಂತರ ಹಾಗೂ ಜಲ ಜೀವನ್ ಮಿಷನ್ 2.0ಗೆ ಅನುಮೋದನೆ ದೊರೆಯುವ ನಡುವಿನ ಪರಿವರ್ತನಾ ಅವಧಿಯಲ್ಲಿ ಮಿಷನ್‌ನ ಪ್ರಗತಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು, ಹಲವು ರಾಜ್ಯಗಳು ತಮ್ಮ ಸ್ವಂತ ಹಣಕಾಸು ಸಂಪನ್ಮೂಲಗಳನ್ನು ಬಳಸಿಕೊಂಡು ಈಗಾಗಲೇ ಅನುಮೋದಿತ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಮುಂದುವರಿಸಿದ್ದವು.

ರಾಜ್ಯಗಳ ಈ ಪ್ರಯತ್ನಗಳನ್ನು ಪರಿಗಣಿಸಿ ಹಾಗೂ ಅನುಷ್ಠಾನದ ವೇಗವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ, ಭಾರತ ಸರ್ಕಾರವು 2026–27ನೇ ಹಣಕಾಸು ವರ್ಷದಲ್ಲಿ 10 ರಾಜ್ಯಗಳಿಗೆ ಕೇಂದ್ರದ ಪಾಲಿನ ₹5,289.09 ಕೋಟಿ ಮರುಪಾವತಿ ಮಾಡಿದೆ. ಅದರ ವಿವರಗಳು ಈ ಕೆಳಗಿನಂತಿವೆ:

ಕ್ರ.ಸಂ.

ರಾಜ್ಯ

ಮೊತ್ತ ( ಕೋಟಿಗಳಲ್ಲಿ)

1

ಉತ್ತರ ಪ್ರದೇಶ

2,711.52

2

ಒಡಿಶಾ

221.44

3

ಕರ್ನಾಟಕ

795.74

4

ರಾಜಸ್ಥಾನ

537.72

5

ಛತ್ತೀಸಗಢ

149.50

6

ಆಂಧ್ರಪ್ರದೇಶ

23.25

7

ಮಧ್ಯಪ್ರದೇಶ

14.10

8

ತಮಿಳುನಾಡು

96.52

9

ಮಹಾರಾಷ್ಟ್ರ

594.44

10

ಕೇರಳ

144.66

ಒಟ್ಟು

 

5,289.09

ಗಮನಿಸಬೇಕಾದ ಸಂಗತಿಯೆಂದರೆ, ಜಲ ಜೀವನ್ ಮಿಷನ್ (ಜೆಜೆಎಮ್) 2.0 ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗಿದ್ದ ವಿಧಾನದಿಂದ ಖಚಿತ ಸೇವಾ ವಿತರಣೆಯತ್ತ ಮಹತ್ವದ ಪರಿವರ್ತನೆಯನ್ನು ಸೂಚಿಸುತ್ತದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ನೇತೃತ್ವದ ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ನೀರಿನ ಮೂಲಗಳ ಸುಸ್ಥಿರತೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ, ಸಮುದಾಯದ ಮಾಲೀಕತ್ವ ಹಾಗೂ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಒತ್ತು ನೀಡಲಾಗಿದೆ.

ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಪರಿಚಯಿಸಲಾದ ಪ್ರಮುಖ ಸುಧಾರಣೆಗಳಲ್ಲಿ ಒಂದೆಂದರೆ ಎಸ್‌ಎನ್‌ಎ ಸ್ಪರ್ಶ್ (SNA SPARSH) ವೇದಿಕೆಯ ಮೂಲಕ ಯೋಜನೆ ಆಧಾರಿತ ಪಾವತಿ ಮತ್ತು ನಿಧಿ ಬಿಡುಗಡೆ ವ್ಯವಸ್ಥೆ. ಈ ವ್ಯವಸ್ಥೆಯು ಯೋಜನೆವಾರು ನಿಧಿ ಬಿಡುಗಡೆ, ವೆಚ್ಚದ ಮೇಲ್ವಿಚಾರಣೆ ಹಾಗೂ ಹಣಕಾಸಿನ ಪ್ರಗತಿಯ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಾಧ್ಯವಾಗಿಸುತ್ತದೆ. ಎಸ್‌ಎನ್‌ಎ ಸ್ಪರ್ಶ್ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದ ಪಾವತಿಗಳನ್ನು ಸುಗಮಗೊಳಿಸುವುದರ ಮೂಲಕ ಸಾರ್ವಜನಿಕ ನಿಧಿಯ ಬಳಕೆಯಲ್ಲಿ ಹೊಣೆಗಾರಿಕೆ, ಪಾರದರ್ಶಕತೆ, ಲೆಕ್ಕಪರಿಶೋಧನೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಇದಲ್ಲದೆ, 2026–27ನೇ ಹಣಕಾಸು ವರ್ಷದ ಪ್ರಸ್ತುತ ದಿನಾಂಕದವರೆಗೆ, 13 ರಾಜ್ಯಗಳಿಗೆ ಒಟ್ಟು ₹865.87 ಕೋಟಿ ಮೊತ್ತವನ್ನು ಎಸ್‌ಎನ್‌ಎ ಸ್ಪರ್ಶ್ ಮೂಲಕ ಬಿಡುಗಡೆ ಮಾಡಲಾಗಿದೆ. ಅದರ ವಿವರಗಳು ಈ ಕೆಳಗಿನಂತಿವೆ:

ಕ್ರ.ಸಂ.

ರಾಜ್ಯ

ಮೊತ್ತ (₹ ಕೋಟಿಗಳಲ್ಲಿ)

1

ಅಸ್ಸಾಂ

669.92

2

ತ್ರಿಪುರ

5.98

3

ಹಿಮಾಚಲ ಪ್ರದೇಶ

2.02

4

ಪಶ್ಚಿಮ ಬಂಗಾಳ

30.45

5

ಉತ್ತರ ಪ್ರದೇಶ

90.98

6

ಒಡಿಶಾ

0.51

7

ಕರ್ನಾಟಕ

47.30

8

ರಾಜಸ್ಥಾನ

3.88

9

ಛತ್ತೀಸಗಢ

3.88

10

ಆಂಧ್ರಪ್ರದೇಶ

10.58

11

ಪಂಜಾಬ್

0.01

12

ಜಾರ್ಖಂಡ್

0.35

13

ತಮಿಳುನಾಡು

0.01

ಒಟ್ಟು

 

865.87

ಭಾರತ ಸರ್ಕಾರವು ದೇಶಾದ್ಯಂತ ಗ್ರಾಮೀಣ ಕುಟುಂಬಗಳಿಗೆ ದೀರ್ಘಕಾಲೀನ ನೀರಿನ ಭದ್ರತೆ, ಡಿಜಿಟಲ್ ಆಡಳಿತ, ಸಮುದಾಯದ ಮಾಲೀಕತ್ವ ಹಾಗೂ ಸುಸ್ಥಿರ ಸೇವಾ ವಿತರಣೆಗೆ ಹೊಸ ಒತ್ತು ನೀಡುತ್ತಾ ಜಲ ಜೀವನ್ ಮಿಷನ್ (ಜೆಜೆಎಮ್) 2.0ರ ಅನುಷ್ಠಾನವನ್ನು ವೇಗಗೊಳಿಸುತ್ತಿದೆ. ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಈ ಕೆಳಗಿನ ಮಹತ್ವದ ಪರಿವರ್ತನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಲಾಗುತ್ತಿದೆ:

  • ಪೂರ್ಣಗೊಂಡ ಯೋಜನೆಗಳನ್ನು ಗ್ರಾಮ ಪಂಚಾಯಿತಿಗಳು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ (ವಿಡಬ್ಲ್ಯುಎಸ್‌ಸಿ - VWSC) ಅಧಿಕೃತವಾಗಿ ಹಸ್ತಾಂತರಿಸುವ ‘ಜಲ್ ಅರ್ಪಣ್’ ಕಾರ್ಯಕ್ರಮ.

  • ಕುಡಿಯುವ ನೀರಿನ ಆಸ್ತಿಗಳಿಗೆ ವಿಶಿಷ್ಟ ‘ಸುಜಲಂ ಭಾರತ್ ಐಡಿ’ ಸೃಷ್ಟಿ.

  • ಪಿಎಂ ಗತಿ ಶಕ್ತಿ ವೇದಿಕೆಯಲ್ಲಿ ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯದ ಜಿಯೋ-ಟ್ಯಾಗಿಂಗ್ ಮತ್ತು ಡಿಜಿಟಲ್ ಮ್ಯಾಪಿಂಗ್.

  • ‘ಜಲ ಸೇವಾ ಆಂಕಲನ’ ಮೂಲಕ ಸಮುದಾಯದ ನೇತೃತ್ವದಲ್ಲಿ ಮೌಲ್ಯಮಾಪನ.

  • ದೀರ್ಘಕಾಲೀನ ಸುಸ್ಥಿರತೆ ಮತ್ತು ನಿರಂತರ ಸೇವಾ ವಿತರಣೆಗೆ ಹೆಚ್ಚಿನ ಆದ್ಯತೆ.

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು, ಕ್ಷೇತ್ರಮಟ್ಟದ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸುವ ಹಾಗೂ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ಕ್ಷೇತ್ರ-ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುವ ಉದ್ದೇಶದಿಂದ, ವಿವಿಧ ರಾಜ್ಯಗಳ ಗೌರವಾನ್ವಿತ ಸಂಸತ್ ಸದಸ್ಯರೊಂದಿಗೆ ರಾಜ್ಯವಾರು ಸಂವಾದ ಸಭೆಗಳನ್ನು ನಡೆಸುತ್ತಿದ್ದಾರೆ.

ಇಲ್ಲಿಯವರೆಗೆ ಸಚಿವರು ಛತ್ತೀಸಗಢ, ಗುಜರಾತ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಸಂಸತ್ ಸದಸ್ಯರೊಂದಿಗೆ ಕ್ರಮವಾಗಿ 2026ರ ಜುಲೈ 27, ಜುಲೈ 29, ಜುಲೈ 30 ಮತ್ತು ಆಗಸ್ಟ್ 5ರಂದು ಸಂವಾದ ಸಭೆಗಳನ್ನು ನಡೆಸಿದ್ದಾರೆ.

ಮುಂದಿನ ಹಂತದ ಸಭೆಗಳನ್ನು ಹರಿಯಾಣ (2026ರ ಆಗಸ್ಟ್‌ 6), ಉತ್ತರ ಪ್ರದೇಶ (2026ರ ಆಗಸ್ಟ್‌ 10), ಮಧ್ಯಪ್ರದೇಶ (2026ರ ಆಗಸ್ಟ್‌ 11) ಮತ್ತು ಮಹಾರಾಷ್ಟ್ರ (2026ರ ಆಗಸ್ಟ್‌ 12) ರಾಜ್ಯಗಳ ಸಂಸತ್ ಸದಸ್ಯರೊಂದಿಗೆ ನಡೆಸಲು ನಿಗದಿಪಡಿಸಲಾಗಿದೆ.

ಈ ಸಂವಾದ ಸಭೆಗಳ ಉದ್ದೇಶ ಜಲ ಜೀವನ್ ಮಿಷನ್ 2.0ರ ಪ್ರಗತಿಯನ್ನು ಪರಿಶೀಲಿಸುವುದು, ಗ್ರಾಮೀಣ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸುವುದು ಹಾಗೂ ಮಿಷನ್‌ನ ಯೋಜನೆ ರೂಪಿಸುವಿಕೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಗೌರವಾನ್ವಿತ ಸಂಸತ್ ಸದಸ್ಯರಿಂದ ಅಮೂಲ್ಯ ಸಲಹೆಗಳನ್ನು ಪಡೆಯುವುದಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಹಭಾಗಿತ್ವದ ಮನೋಭಾವದಿಂದ ಕಾರ್ಯನಿರ್ವಹಿಸಲು ಭಾರತ ಸರ್ಕಾರ ಬದ್ಧವಾಗಿದೆ. ಜಲ ಜೀವನ್ ಮಿಷನ್ 2.0ರ ಉದ್ದೇಶ ಕೇವಲ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವುದಲ್ಲ; ದೇಶದ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಮುಂದಿನ ಪೀಳಿಗೆಗಳಿಗೂ ಸುರಕ್ಷಿತ, ಸಮರ್ಪಕ ಹಾಗೂ ವಿಶ್ವಾಸಾರ್ಹ ಕುಡಿಯುವ ನೀರಿನ ಸೇವೆಗಳು ನಿರಂತರವಾಗಿ ದೊರೆಯುವಂತೆ ಖಚಿತಪಡಿಸುವುದಾಗಿದೆ.

 

******


(रिलीज़ आईडी: 2295702) आगंतुक पटल : 12
इस विज्ञप्ति को इन भाषाओं में पढ़ें: English , हिन्दी