ಹಣಕಾಸು ಸಚಿವಾಲಯ
azadi ka amrit mahotsav

ಎಸ್ ಐ ಡಿ ಬಿ ಐ ಮತ್ತು ಇ ಸಿ ಎಲ್ ಜಿ ಎಸ್ (ECLGS) 5.0 ಮೂಲಕ ಎಂ ಎಸ್ ಎಂ ಇಗಳಿಗೆ  ಹಣಕಾಸಿನ ನೆರವು  ಹೆಚ್ಚಿಸಿದ ಕೇಂದ್ರ ಸರ್ಕಾರ


ಎಸ್ ಐ ಡಿ ಬಿ ಐ 71 ಹೊಸ ಶಾಖೆಗಳೊಂದಿಗೆ ರಾಷ್ಟ್ರವ್ಯಾಪಿ ಉಪಸ್ಥಿತಿ ವಿಸ್ತರಣೆ; ನೇರ ಸಾಲ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಶೇ.36.8ರಷ್ಟು ಬೆಳವಣಿಗೆ

ಅರ್ಹ ಎಂ ಎಸ್ ಎಂ ಇ ಗಳಿಗೆ ಶೇ.100ರ ವರೆಗಿನ ಖಾತರಿ ವ್ಯಾಪ್ತಿಯೊಂದಿಗೆ 2.55 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಸಾಲ ನೀಡಲು ಉದ್ದೇಶಿಸಿದ ಇಸಿಎಲ್ ಜಿಎಸ್ 5.0

प्रविष्टि तिथि: 04 AUG 2026 3:51PM by PIB Bengaluru

ದೇಶಾದ್ಯಂತ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ ಎಸ್ ಎಂ ಇ) ಸಾಲದ ಹರಿವನ್ನು ಸುಧಾರಿಸಲು ಕಳೆದ ಐದು ವರ್ಷಗಳಲ್ಲಿ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ ಐ ಡಿ ಬಿ ಐ) ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ.

ಅವುಗಳಲ್ಲಿ ಈ ಕೆಳಗಿನ ಉಪಕ್ರಮಗಳು ಸೇರಿವೆ:

  1. 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಘೋಷಣೆಯ ನಂತರ, ಎಸ್ ಐಡಿಬಿಐ 01.04.2024 ರಿಂದ 29.07.2026 ರವರೆಗೆ ದೇಶಾದ್ಯಂತ 71 ಹೊಸ ಶಾಖೆಗಳನ್ನು ತೆರೆದಿದ್ದು, ಪ್ರಮುಖ ಎಂಎಸ್ ಎಂಇ ಕ್ಲಸ್ಟರ್‌ಗಳಿಗೆ ಸೇವೆ ಸಲ್ಲಿಸಲು ಮತ್ತು ಎಂಎಸ್ ಎಂಇ ಗಳಿಗೆ ನೇರ ಸಾಲವನ್ನು ಒದಗಿಸಲು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.
  2. 2026ರ ಮಾರ್ಚ್ 31ರ ವೇಳೆಗೆ SIDBI ಯ ನೇರ ಸಾಲ ಬಾಕಿ ಬಂಡವಾಳವು 51,687 ಕೋಟಿ ರೂಪಾಯಿಗಳಷ್ಟಿದ್ದು, 2025ರ ಮಾರ್ಚ್ 31ರ ಹೊತ್ತಿಗೆ 37,781 ಕೋಟಿ ರೂಪಾಯಿಗಳಷ್ಟಿದ್ದು, ವರ್ಷದಿಂದ ವರ್ಷಕ್ಕೆ ಶೇ.36.8 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
  3. ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳ (ಪಿ ಎಲ್ ಐ ಗಳು) ಸಂಪನ್ಮೂಲಗಳನ್ನು ವೃದ್ಧಿಸಲು ಬ್ಯಾಂಕ್ ಮರುಹಣಕಾಸು ಸಹಾಯವನ್ನು ಸಹ ಒದಗಿಸುತ್ತದೆ, ಇದರಿಂದಾಗಿ ಎಂಎಸ್ ಎಂಇ ಗಳಿಗೆ ಸಾಲದ ಹರಿವನ್ನು ಹೆಚ್ಚಿಸುತ್ತದೆ. 2026ರ ಮಾರ್ಚ್ 31ರ ವೇಳಗೆ  SIDBI ಯ ಮರು ಹಣಕಾಸು ಬಾಕಿ ಬಂಡವಾಳವು 4,50,571 ಕೋಟಿ ರೂಪಾಯಿಗಳಷ್ಟಿದ್ದು, 2025ರ ಮಾರ್ಚ್ 31ರ ಹೊತ್ತಿಗೆ 3,85,327 ಕೋಟಿ ರೂಪಾಯಿಗಳಷ್ಟಿದ್ದು, ವರ್ಷದಿಂದ ವರ್ಷಕ್ಕೆ ಶೇ.16.9 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
  4. ನಿರೀಕ್ಷಿತ ಸೇವೆ ಪಡೆಯದ/ ಸಂಪೂರ್ಣ ಸೇವೆ ಪಡೆಯದ  ಎಂಎಸ್ ಎಂಇಗಳನ್ನು ತಲುಪುವ ಪ್ರಯತ್ನದ ಭಾಗವಾಗಿ, ಸಣ್ಣ MSME ಗಳಿಗೆ, ವಿಶೇಷವಾಗಿ ಹೊಸ ಸಾಲಗಾರರಿಗೆ ಕೈಗೆಟುಕುವ ಸಾಲವನ್ನು ಒದಗಿಸಲು SIDBI ಬ್ಯಾಂಕೇತರ ಹಣಕಾಸು ಕಂಪನಿಗಳೊಂದಿಗೆ (NBFC ಗಳು) ಸಹ-ಸಾಲ ವ್ಯವಸ್ಥೆಆರಂಭಿಸಿದೆ. 2025-26 ರ ಹಣಕಾಸು ವರ್ಷದಲ್ಲಿ, ಸಾಲ ವಿತರಣೆಯನ್ನು ಬಲಪಡಿಸಲು ಮತ್ತು ಸೇವೆ ಪಡೆಯದ ಮತ್ತು ಬಳಸದ ಪ್ರದೇಶಗಳಲ್ಲಿ ಆರ್ಥಿಕ ಲಭ್ಯತೆಯನ್ನು ವಿಸ್ತರಿಸಲು ಬ್ಯಾಂಕ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳೊಂದಿಗೆ (RRB ಗಳು) ಸಹ-ಸಾಲ ವ್ಯವಸ್ಥೆಯನ್ನು ಆರಂಭಿಸಿವೆ.
  5. ಅನೌಪಚಾರಿಕ ಅತಿಸಣ್ಣ ಉದ್ಯಮಿಗಳು/ಸಣ್ಣ ಉದ್ಯಮಗಳು (ಐಎಂಇ ಗಳು), ವಿಶೇಷವಾಗಿ ಮಹಿಳೆಯರು ಮತ್ತು ಬಡವರಿಗೆ ಕೈಗೆಟುಕುವ ಸಾಲವನ್ನು ಪಡೆಯಲು SIDBI ಪ್ರಯಾಸ್ ಯೋಜನೆಯನ್ನು ಆರಂಭಿಸಿದೆ.
  6. ವ್ಯಾಪಾರ ಡೇಟಾ ಮತ್ತು ಡಿಜಿಟಲ್ ಚೌಕಟ್ಟುಗಳನ್ನು ಬಳಸಿಕೊಂಡು ಸಣ್ಣ ಉದ್ಯಮಗಳಿಗೆ 'ಆನ್ ಟ್ಯಾಪ್' ಇನ್‌ವಾಯ್ಸ್ ಆಧಾರಿತ (ನಗದು ಹರಿವು ಆಧಾರಿತ) ಸಣ್ಣ ಮೌಲ್ಯದ ಕ್ರೆಡಿಟ್‌ಗಾಗಿ SIDBI GST ಸಹಾಯ್ ಅಪ್ಲಿಕೇಶನ್ ಅನ್ನು ಆರಂಭಿಸಿದೆ.

ಸರ್ಕಾರವು 2026ರ ಮೇ ತಿಂಗಳಲ್ಲಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) 5.0 ಅನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ, MSMEಗಳು 2025–26ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬಾಕಿ ಇರುವ ಗರಿಷ್ಠ ನಿಧಿ ಆಧಾರಿತ ಕಾರ್ಯನಿರತ ಬಂಡವಾಳದ ಶೇ.20 ವರೆಗೆ ಹೆಚ್ಚುವರಿ ಸಾಲಕ್ಕೆ ಅರ್ಹವಾಗಿವೆ.

ಈ ಯೋಜನೆಯು ಸದಸ್ಯ ಸಾಲ ನೀಡುವ ಸಂಸ್ಥೆಗಳಿಗೆ (MLIs) ಅರ್ಹ MSME ಸಾಲಗಾರರಿಗೆ ವಿಸ್ತರಿಸಲಾದ ಅಂತಹ ಹೆಚ್ಚುವರಿ ಸಾಲ ಸೌಲಭ್ಯಕ್ಕಾಗಿ ಡೀಫಾಲ್ಟ್ ಆಗಿರುವ ಮೊತ್ತಕ್ಕೆ ಶೇ.100 ರಷ್ಟು ಗ್ಯಾರಂಟಿ ವ್ಯಾಪ್ತಿಯನ್ನು ಒದಗಿಸುತ್ತದೆ. ನಿಗದಿತ ಪ್ರಯಾಣಿಕ ವಿಮಾನಯಾನ ಸಂಸ್ಥೆಗಳಿಗೆ, ಗ್ಯಾರಂಟಿ ವ್ಯಾಪ್ತಿಶೇ. 90 ರಷ್ಟಾಗಿದೆ.

ಆದರೂ ನಿಗದಿತ ಪ್ರಯಾಣಿಕ ವಿಮಾನಯಾನ ಸಂಸ್ಥೆಗಳು 2025-26ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ಗರಿಷ್ಠ ಸಾಲದ (ನಿಧಿ ಆಧಾರಿತ ಮತ್ತು ನಿಧಿ ಆಧಾರಿತವಲ್ಲದ ಎರಡೂ) ಶೇ. 100ರ ವರೆಗೆ ಹೆಚ್ಚುವರಿ ಸಾಲಕ್ಕೆ ಅರ್ಹವಾಗಿವೆ. ಈ ಯೋಜನೆಯಡಿಯಲ್ಲಿ ಎಂಎಸ್ ಎಂಇಗಳು, ಎಂಎಸ್ ಎಂಇಗಳಲ್ಲದ ಮತ್ತು ನಿಗದಿತ ಪ್ರಯಾಣಿಕ ವಿಮಾನಯಾನ ಸಂಸ್ಥೆಗಳಿಗೆ  2,55,000 ಕೋಟಿ ರೂಪಾಯಿಗಳ ಹೆಚ್ಚುವರಿ ಸಾಲದ ಹರಿವನ್ನು ಕಲ್ಪಿಸಲಾಗಿದೆ.

ಹಣಕಾಸು ರಾಜ್ಯ ಖಾತೆ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ಈ ಮಾಹಿತಿಯನ್ನು ನೀಡಿದರು.

 

*****


(रिलीज़ आईडी: 2294349) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Gujarati