ಪ್ರಧಾನ ಮಂತ್ರಿಯವರ ಕಛೇರಿ
ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
प्रविष्टि तिथि:
02 AUG 2026 8:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ರಾಷ್ಟ್ರಕ್ಕೆ ತ್ರಿವರ್ಣ ಧ್ವಜ ನೀಡುವಲ್ಲಿ ಪಿಂಗಳಿ ವೆಂಕಯ್ಯನವರ ಅಮೂಲ್ಯ ಪಾತ್ರವನ್ನು ಸ್ಮರಿಸಿರುವ ಪ್ರಧಾನಮಂತ್ರಿಗಳು, ಸಮರ್ಪಣಾಭಾವ ಮತ್ತು ದೇಶಭಕ್ತಿಯ ಭಾವದೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಲು ವೆಂಕಯ್ಯನವರ ಪ್ರಯತ್ನಗಳು ಜನರನ್ನು ಪ್ರೇರೇಪಿಸುತ್ತಲಿರಲಿವೆ ಎಂದು ಹೇಳಿದ್ದಾರೆ.
ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಅಪಾರ ಹೆಮ್ಮೆಯನ್ನು ತುಂಬುತ್ತಾ, ರಾಷ್ಟ್ರ ನಿರ್ಮಾಣದತ್ತ ಕಾರ್ಯಪ್ರವೃತ್ತರಾಗಲು ದೇಶವಾಸಿಗಳನ್ನು ಪ್ರೇರೇಪಿಸಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ಪಿಂಗಳಿ ವೆಂಕಯ್ಯನವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. ನಮ್ಮ ರಾಷ್ಟ್ರಕ್ಕೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿ ಅವರ ಅಮೂಲ್ಯ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಜನರು ಸಮರ್ಪಣಾಭಾವ ಮತ್ತು ದೇಶಭಕ್ತಿಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಲು ಅವರ ಪ್ರಯತ್ನಗಳು ಸದಾ ಸ್ಫೂರ್ತಿದಾಯಕವಾಗಿರಲಿ.
ತ್ರಿವರ್ಣ ಧ್ಬಜವು ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಅಪಾರ ಹೆಮ್ಮೆಯನ್ನು ತುಂಬಲಿದೆ ಮತ್ತು ರಾಷ್ಟ್ರ ನಿರ್ಮಾಣದತ್ತ ಕಾರ್ಯಪ್ರವೃತ್ತರಾಗಲು ನಮಲ್ಲಿ ಸ್ಫೂರ್ತಿ ತುಂಬಲಿದೆ."
*****
(रिलीज़ आईडी: 2293723)
आगंतुक पटल : 8
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Manipuri
,
Bengali
,
Punjabi
,
Gujarati
,
Telugu
,
Malayalam