ರೈಲ್ವೇ ಸಚಿವಾಲಯ
ಬಿಹಾರದ ದಾನಾಪುರ ಮತ್ತು ಫತುಹಾ ನಡುವೆ ಪೂರ್ವ ಮಧ್ಯ ರೈಲ್ವೆಯ ₹976 ಕೋಟಿ ವೆಚ್ಚದ ಮಲ್ಟಿಟ್ರ್ಯಾಕಿಂಗ್ ಯೋಜನೆಗೆ ಭಾರತೀಯ ರೈಲ್ವೆ ಅನುಮೋದನೆ ನೀಡಿದೆ
ಪ್ರತಿದಿನ 22 ಹೆಚ್ಚುವರಿ ಪ್ರಯಾಣಿಕ ರೈಲುಗಳು ಮತ್ತು 18 ಹೆಚ್ಚುವರಿ ಸರಕು ರೈಲುಗಳನ್ನು ನಿರ್ವಹಿಸುವ 29 ಕಿ.ಮೀ. ಯೋಜನೆ ಇದಾಗಿದೆ
प्रविष्टि तिथि:
01 AUG 2026 12:10PM by PIB Bengaluru
ಬಿಹಾರದಲ್ಲಿ ರೈಲು ಸೇವೆಯ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತೀಯ ರೈಲ್ವೆ ಪೂರ್ವ ಮಧ್ಯ ರೈಲ್ವೆಯ 29 ಕಿಮೀ ದಾನಾಪುರದಿಂದ ಫತುಹಾ ವಿಭಾಗದ ಮಲ್ಟಿಟ್ರ್ಯಾಕಿಂಗ್ ಅನ್ನು ₹976 ಕೋಟಿ ವೆಚ್ಚದಲ್ಲಿ ಅನುಮೋದಿಸಿದೆ. ಈ ಯೋಜನೆಯು ಪಾಟ್ನಾ ರೈಲು ಕಾರಿಡಾರ್ ನಲ್ಲಿ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕ ಮತ್ತು ಸರಕು ಸೇವೆಗಳಲ್ಲಿ ದೊಡ್ಡ ಹೆಚ್ಚಳಕ್ಕೆ ಅವಕಾಶವನ್ನು ಸೃಷ್ಟಿಸುತ್ತದೆ.
ಮಂಜೂರಾದ ಕೆಲಸವು ಮೂರು ಘಟಕಗಳನ್ನು ಒಳಗೊಂಡಿದೆ. ಮೂರನೇ ಮತ್ತು ನಾಲ್ಕನೇ ಮಾರ್ಗಗಳನ್ನು ದಾನಾಪುರ ಮತ್ತು ಪಾಟ್ನಾ ನಡುವೆ ನಿರ್ಮಿಸಲಾಗುವುದು. ರಾಜೇಂದ್ರ ನಗರ ಮತ್ತು ಪಾಟ್ನಾ ಸಾಹೇಬ್ ನಡುವೆ ಮೂರನೇ ಮಾರ್ಗವನ್ನು ಹಾಕಲಾಗುವುದು. ಮೂರನೇ ಮತ್ತು ನಾಲ್ಕನೇ ಮಾರ್ಗಗಳನ್ನು ಪಾಟ್ನಾ ಸಾಹೇಬ್ ಮತ್ತು ಫತುಹಾ ನಡುವೆ ನಿರ್ಮಿಸಲಾಗುದು. ಹೆಚ್ಚುವರಿ ಮಾರ್ಗಗಳು ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಪಾಟ್ನಾ ಪ್ರದೇಶದಾದ್ಯಂತ ಸಮಯಪಾಲನೆಯನ್ನು ಸುಧಾರಿಸುತ್ತದೆ.
ಕಾರ್ಯಾಚರಣೆಯ ಮೊದಲ ವರ್ಷದಲ್ಲಿ, ಯೋಜನೆಯು ಪ್ರತಿದಿನ 22 ಹೆಚ್ಚುವರಿ ಪ್ರಯಾಣಿಕ ರೈಲುಗಳು ಮತ್ತು 18 ಹೆಚ್ಚುವರಿ ಸರಕು ರೈಲುಗಳನ್ನು ಅನುಮತಿಸುತ್ತದೆ. ಇದು ವರ್ಷಕ್ಕೆ ಹೆಚ್ಚುವರಿಯಾಗಿ 5.2 ಮಿಲಿಯನ್ ಟನ್ ಸರಕು ಸಾಗಣೆಯನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಈ ಯೋಜನೆಯು ದೆಹಲಿ, ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಪಾಟ್ನಾ, ಕಿಯುಲ್, ಭಾಗಲ್ಪುರ್, ಖನ್ನಾ ಮತ್ತು ಹೌರಾ ಮಾರ್ಗದಲ್ಲಿ ನಾಲ್ಕು ಪಟ್ಟು ಹೆಚ್ಚಿಸುವ ಉಪಕ್ರಮದ ಭಾಗವಾಗಿದೆ. ಈ ಮಾರ್ಗವನ್ನು ಭಾರತೀಯ ರೈಲ್ವೆಯ ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್ ಅಡಿಯಲ್ಲಿ ಗುರುತಿಸಲಾಗಿದೆ. ಬಕ್ಸಾರ್ ಜಿಲ್ಲೆಯ ಚೌಸಾದಲ್ಲಿ ಮುಂಬರುವ 2120 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರಕ್ಕೂ ಈ ಬಲವರ್ಧಿತ ವಿಭಾಗವು ಅತ್ಯಗತ್ಯವಾಗಿದೆ, ಇದು ಬೃಹತ್ ಒಳಹರಿವುಗಳ ರೈಲು ಚಲನೆಯನ್ನು ಅವಲಂಬಿಸಿರುತ್ತದೆ.
ಹೆಚ್ಚಿನ ಸಾಂದ್ರತೆಯ ಮಾರ್ಗಗಳಲ್ಲಿ ಸಾಮರ್ಥ್ಯವನ್ನು ವಿಸ್ತರಿಸುವುದು, ಇಂಧನ ಮತ್ತು ಕೈಗಾರಿಕೆಗಳಿಗೆ ಸಾಗಣಿಕೆ (ಲಾಜಿಸ್ಟಿಕ್ಸ್) ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಬಿಹಾರದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಈ ಅನುಮೋದನೆಯು ಪುನರುಚ್ಚರಿಸುತ್ತದೆ.
*****
(रिलीज़ आईडी: 2292941)
आगंतुक पटल : 10