ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
AI-ಚಾಲಿತ ಸೈಬರ್ ಬೆದರಿಕೆಗಳ ವಿರುದ್ಧ ಎ.ಐ. ಚಾಲಿತ ಪತ್ತೆ, ಸಂಭಾವ್ಯ ಅಪಾಯ/ದುರ್ಬಲತೆ ಮೌಲ್ಯಮಾಪನ ಮತ್ತು ಬೆದರಿಕೆ ಗುಪ್ತಚರ ವ್ಯವಸ್ಥೆ ಮೂಲಕ ಸರ್ಕಾರ ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ
345 ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಭಾಗವಹಿಸಿದ 1,470 ಮಂದಿಗೆ ಎ.ಐ. (AI)-ಚಾಲಿತ ಸೈಬರ್ ಬೆದರಿಕೆಗಳ ಕುರಿತು ಸಿ.ಇ.ಆರ್.ಟಿ.ಇನ್ (CERT-In) 10 ಸೈಬರ್ ಭದ್ರತಾ ಕವಾಯತುಗಳನ್ನು ಆಯೋಜಿಸಿದೆ
प्रविष्टि तिथि:
30 JUL 2026 2:55PM by PIB Bengaluru
ಕೃತಕ ಬುದ್ಧಿಮತ್ತೆ (AI) ಸಕ್ರಿಯಗೊಳಿಸಿದ ಸೈಬರ್ ಬೆದರಿಕೆಗಳಿಂದ ಉಂಟಾಗುವ ಸೈಬರ್ ಭದ್ರತಾ ಬೆದರಿಕೆಗಳು ಮತ್ತು ಸವಾಲುಗಳನ್ನು ಸರ್ಕಾರವು ಅರಿತುಕೊಂಡಿದೆ. ಸ್ವಯಂಚಾಲಿತ ವಿಚಕ್ಷಣ, ತ್ವರಿತರೀತಿಯಲ್ಲಿ ದುರ್ಬಲತೆಯ ದುರ್ಬಳಕೆ/ಶೋಷಣೆ, ದೃಢೀಕರಣದಲ್ಲಿ ಚೌಕಾಶಿ/ನಿರ್ಲಕ್ಷ ಮತ್ತು ಹೆಚ್ಚು ಮನವರಿಕೆಯಾಗುವ ಬಹುಭಾಷಾ ಸಾಮಾಜಿಕ ಎಂಜಿನಿಯರಿಂಗ್ ಅಭಿಯಾನಗಳನ್ನು ಸಕ್ರಿಯಗೊಳಿಸುವ ಮೂಲಕ ಎ.ಐ. ತಂತ್ರಜ್ಞಾನಗಳು ವ್ಯವಸ್ಥಿತ ಸೈಬರ್ ಅಪಾಯಗಳನ್ನು ಹೆಚ್ಚಿಸಬಹುದು. ಈ ಸಾಮರ್ಥ್ಯಗಳು ದಾಳಿಯ ವೆಚ್ಚವನ್ನು ಕಡಿಮೆ ಮಾಡುತ್ತವೆ, ಶಸ್ತ್ರೀಕರಣವನ್ನು ವೇಗಗೊಳಿಸುತ್ತದೆ ಮತ್ತು ಬೇಟೆ (ಫಿಶಿಂಗ್) ಹಾಗು ಅನುಕರಣೆ/ನಕಲೀಕರಣದ ದಾಳಿಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ ಮತ್ತು ಪತ್ತೆಹಚ್ಚುವಿಕೆಯನ್ನು ಕಷ್ಟಕರವಾಗಿಸುತ್ತವೆ.
ಸರ್ಕಾರವು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಸೈಬರ್‌ಸ್ಪೇಸ್ ಅನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. AI- ಸಕ್ರಿಯಗೊಳಿಸಿದ ಸೈಬರ್ ಬೆದರಿಕೆಗಳಿಂದ ಉಂಟಾಗುವ ಅಪಾಯಗಳನ್ನು ಪರಿಹರಿಸಲು, ಸೈಬರ್ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಘಟನಾ ಪ್ರತಿಕ್ರಿಯಾ ಸಾಮರ್ಥ್ಯಗಳನ್ನು ಬಲಪಡಿಸಲು ಹಲವಾರು ಕಾನೂನು, ತಾಂತ್ರಿಕ ಮತ್ತು ಆಡಳಿತಾತ್ಮಕ ನೀತಿ ಕ್ರಮಗಳನ್ನು ಜಾರಿಗೆ ತರಲಾಗಿದೆ, ಅವುಗಳೆಂದರೆ:
- AI-ಚಾಲಿತ ಸಾಂದರ್ಭಿಕ ಜಾಗೃತಿ ವ್ಯವಸ್ಥೆಗಳನ್ನು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In)ನಿಯೋಜಿಸುತ್ತದೆ. ದುರುದ್ದೇಶಪೂರಿತ ಡೊಮೇನ್‌ಗಳು ಮತ್ತು ಫಿಶಿಂಗ್ ಚಟುವಟಿಕೆಗಳನ್ನು ಅಂದರೆ ನಂಬಿಸುವಂತಹ ನಕಲಿ ಸಂದೇಶಗಳನ್ನು ಕಳುಹಿಸಿ ಗ್ರಾಹಕರನ್ನು ಬೇಟೆಯಾಡುವಿಕೆಯನ್ನು ಪತ್ತೆಹಚ್ಚಲು ಹಾಗು ಅವುಗಳ ನಿವಾರಣೆಗಾಗಿ ಈ ನಿಯೋಜನೆಯನ್ನು ಮಾಡುತ್ತದೆ..
2. CERT-In, ಸ್ಯಾಂಡ್‌ಬಾಕ್ಸ್ ಪರಿಸರದಲ್ಲಿ ಡಿಜಿಟಲ್ ಸ್ವತ್ತುಗಳಿಗೆ ಎದುರಾಗುವ ಅಪಾಯ/ದುರ್ಬಲತೆಗಳನ್ನು ಪತ್ತೆಹಚ್ಚಲು ಮತ್ತು ತಗ್ಗಿಸಲು AI-ಸಕ್ರಿಯಗೊಳಿಸಿದ ದುರ್ಬಲತೆ ಮೌಲ್ಯಮಾಪನವನ್ನು ವಿಸ್ತರಿಸಿದೆ.
3. CERT-In, ಪೂರ್ವಭಾವಿಯಾಗಿ ಬೆದರಿಕೆ ತಗ್ಗಿಸುವ ಕ್ರಮಗಳಿಗಾಗಿ ವಿವಿಧ ವಲಯಗಳ ಸಂಸ್ಥೆಗಳೊಂದಿಗೆ ಸೂಕ್ತವಾದ ಎಚ್ಚರಿಕೆಗಳನ್ನು ಹಂಚಿಕೊಳ್ಳಲು ಸ್ವಯಂಚಾಲಿತ ಸೈಬರ್ ಬೆದರಿಕೆ ಗುಪ್ತಚರ ವಿನಿಮಯ ವೇದಿಕೆಯನ್ನು ನಿರ್ವಹಿಸುತ್ತದೆ.
4. CERT-In ಜೂನ್-ಜುಲೈ 2026 ರ ಅವಧಿಯಲ್ಲಿ "ಗಡಿಯಾಚೆಗಿನ AI-ಚಾಲಿತ ಸೈಬರ್ ಬೆದರಿಕೆಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು" ಎಂಬ ವಿಷಯದ ಮೇಲೆ 10 ಸೂಕ್ತವಾದ ಸೈಬರ್ ಭದ್ರತಾ ಕ್ರಮಗಳು ಮತ್ತು ಡ್ರಿಲ್‌ಗಳನ್ನು ನಡೆಸಿದೆ. ಈ ತಪಾಸಣೆ/ಮುನ್ನೆಚ್ಚರಿಕೆಗಳ ಕವಾಯತುಗಳು ವಿದ್ಯುತ್, ಟೆಲಿಕಾಂ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI), ಸಾರಿಗೆ, ಶಿಕ್ಷಣ, ಆರೋಗ್ಯ ಮತ್ತು ಬಾಹ್ಯಾಕಾಶದಂತಹ ವಲಯಗಳಾದ್ಯಂತ 345 ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ 1,470 ಭಾಗವಹಿಸುವವರನ್ನು ಒಳಗೊಂಡಿವೆ.
5. ಸರ್ಟಿಫೈಡ್ ಸೆಕ್ಯುರಿಟಿ ಪ್ರೊಫೆಷನಲ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (CSPAI) ಕಾರ್ಯಕ್ರಮವನ್ನು ಸೆಪ್ಟೆಂಬರ್ 2024 ರಲ್ಲಿ CERT-In ಮತ್ತು ಎಸ್.ಐ.ಎಸ್.ಎ. (SISA) ಪ್ರಾರಂಭಿಸಿದವು. ಈ ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಟ್ (ANSI) ರಾಷ್ಟ್ರೀಯ ಮಾನ್ಯತೆ ಮಂಡಳಿ (ANAB) ಅನುಮೋದಿತ ಕಾರ್ಯಕ್ರಮವು ಸೈಬರ್ ಭದ್ರತಾ ವೃತ್ತಿಪರರನ್ನು AI ವ್ಯವಸ್ಥೆಗಳನ್ನು ಸುರಕ್ಷಿತಗೊಳಿಸಲು, AI-ಸಂಬಂಧಿತ ಬೆದರಿಕೆಗಳನ್ನು ಪೂರ್ವಭಾವಿಯಾಗಿ ಪರಿಹರಿಸಲು ಮತ್ತು ವ್ಯಾಪಾರ ಪರಿಸರದಲ್ಲಿ ವಿಶ್ವಾಸಾರ್ಹ AI ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.
6. CERT-In ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸೈಬರ್ ಭದ್ರತಾ ಕಾರ್ಯಪಡೆಯ ಕೌಶಲ್ಯವನ್ನು ಹೆಚ್ಚಿಸಲು ಕೈಗಾರಿಕಾ ಪಾಲುದಾರರ ಸಹಯೋಗದೊಂದಿಗೆ ಸೈಬರ್ ಭದ್ರತಾ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ.
7. ಫೆಬ್ರವರಿ 2025 ರಲ್ಲಿ ಫ್ರಾನ್ಸ್ನ್ನ ರಾಷ್ಟ್ರೀಯ ಸೈಬರ್‌ಸೆಕ್ಯುರಿಟಿ ಏಜೆನ್ಸಿ (ANSSI) ಪ್ರಕಟಿಸಿದ “ಸೈಬರ್-ಅಪಾಯ-ಆಧಾರಿತ ವಿಧಾನದ ಮೂಲಕ AI ನಲ್ಲಿ ನಂಬಿಕೆಯನ್ನು ಬೆಳೆಸುವುದು” ಎಂಬ ಶೀರ್ಷಿಕೆಯ ಕೃತಕ ಬುದ್ಧಿಮತ್ತೆ (AI) ಕುರಿತ ಜಂಟಿ ಉನ್ನತ ಮಟ್ಟದ ಅಪಾಯ ವಿಶ್ಲೇಷಣಾ ವರದಿಗೆ ಸಹ-ಸಹಿ ಹಾಕುವ ಅಂತರರಾಷ್ಟ್ರೀಯ ಪಾಲುದಾರರಲ್ಲಿ CERT-In ಒಂದಾಗಿದೆ.
8. ಸಲಹೆಗಳು ಮತ್ತು ಮಾರ್ಗಸೂಚಿಗಳು:
i. ಕಂಪ್ಯೂಟರ್‌ಗಳು, ನೆಟ್‌ವರ್ಕ್‌ಗಳು ಮತ್ತು ಡೇಟಾವನ್ನು ರಕ್ಷಿಸಲು ಇತ್ತೀಚಿನ ಸೈಬರ್ ಬೆದರಿಕೆಗಳು, ಸಂಭಾವ್ಯ ಅಪಾಯದ ದುರ್ಬಲತೆಗಳು ಮತ್ತು ಪ್ರತಿಕ್ರಮಗಳ ಕುರಿತು CERT-In ನಿರಂತರವಾಗಿ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ನೀಡುತ್ತದೆ.
ii. CERT-In ಜೂನ್ 2026 ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, AI- ಚಾಲಿತ ಸೈಬರ್ ಬೆದರಿಕೆಗಳ ವಿರುದ್ಧ ರಕ್ಷಣೆಗೆ ಎಲ್ಲಾ ಮೂಲ ಸಲಕರಣೆ ತಯಾರಕರು (OEM ಗಳು) ಮತ್ತು ತಂತ್ರಜ್ಞಾನ ಪೂರೈಕೆದಾರರು AI- ವೇಗವರ್ಧಿತ ದುರ್ಬಲತೆ ರಕ್ಷಣೆಯನ್ನು ಕಾರ್ಯಗತಗೊಳಿಸಲು, AI- ನೆರವಿನ ಭದ್ರತಾ ಪರೀಕ್ಷೆ, ನಿರಂತರ ಮೇಲ್ವಿಚಾರಣೆ, ಪ್ಯಾಚ್ ನಿರ್ವಹಣೆ ಮತ್ತು ಘಟನಾ ಪ್ರತಿಕ್ರಿಯಾ ಚೌಕಟ್ಟುಗಳನ್ನು ರೂಪಿಸುವ ಅಗತ್ಯವಿದೆ..
iii. CERT-In ಮೇ 2026 ರಲ್ಲಿ "ಡಿಜಿಟಲ್ ಮೂಲಸೌಕರ್ಯದಲ್ಲಿ AI- ನೆರವಿನ ದುರ್ಬಲತೆಗಳ ಶೋಷಣೆಗೆ ಅವಕಾಶ ಲಭ್ಯತೆಯ ವಿರುದ್ಧ ಮತ್ತು ರಕ್ಷಣೆಗಾಗಿ ನೀಲನಕ್ಷೆ"ಯನ್ನು ಬಿಡುಗಡೆ ಮಾಡಿದೆ, ಇದು ವೇಗವಾಗಿ ವಿಕಸನಗೊಳ್ಳುತ್ತಿರುವ AI- ಚಾಲಿತ ಸೈಬರ್ ಬೆದರಿಕೆಗಳ ವಿರುದ್ಧ ಡಿಜಿಟಲ್ ಮೂಲಸೌಕರ್ಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
iv. CERT-In ಏಪ್ರಿಲ್ 2026 ರಲ್ಲಿ "ಫ್ರಾಂಟಿಯರ್ AI ಚಾಲಿತ ಸೈಬರ್ ಅಪಾಯಗಳ ವಿರುದ್ಧ ರಕ್ಷಣೆ" ಎಂಬ ಶೀರ್ಷಿಕೆಯ ಸಲಹಾ ಪತ್ರವನ್ನು ಬಿಡುಗಡೆ ಮಾಡಿದೆ, ಇದು ಮುಂದುವರಿದ ಆಧುನಿಕ AI-ಸಕ್ರಿಯಗೊಳಿಸಿದ ಬೆದರಿಕೆಗಳ ವಿರುದ್ಧ ರಕ್ಷಣೆಯನ್ನು ಬಲಪಡಿಸಲು ಸಂಸ್ಥೆಗಳು, ಎಂ.ಎಸ್.ಎಂ.ಇ.(MSME) ಗಳು ಮತ್ತು ವ್ಯಕ್ತಿಗಳಿಗೆ ಸಮಗ್ರ ಕ್ರಮಗಳನ್ನು ವಿವರಿಸುತ್ತದೆ.
v. ಪೂರೈಕೆ ಸರಪಳಿಗಳ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಸಾಫ್ವೇರ್, ಹಾರ್ಡ್‌ವೇರ್, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕ್ರಿಪ್ಟೋಗ್ರಫಿ ಅವಶ್ಯಕತೆಗಳಿಗಾಗಿ ಬಿಲ್ ಆಫ್ ಮೆಟೀರಿಯಲ್ಸ್ (BOM) ಗಾಗಿ ಜುಲೈ 2025 ರಲ್ಲಿ CERT-In ತಾಂತ್ರಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
vi. ಜನರೇಟಿವ್ AI ಪರಿಹಾರಗಳ ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಬಳಕೆಗಾಗಿ ಉತ್ತಮ ಅಭ್ಯಾಸಗಳನ್ನು ವಿವರಿಸುವ ಸಲಹಾ ಪತ್ರವನ್ನು ಮಾರ್ಚ್ 2025 ರಲ್ಲಿ CERT-In ಬಿಡುಗಡೆ ಮಾಡಿದೆ.
vii. ಸಿ.ಇ.ಆರ್ಟಿ.ಇನ್ (CERT-In) ಫೆಬ್ರವರಿ 2025 ರಲ್ಲಿ "ಸ್ಮಾರ್ಟ್ ಸಿಟಿ ಮೂಲಸೌಕರ್ಯಕ್ಕಾಗಿ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು” ಪ್ರಕಟಿಸಿದೆ, ಇದರಲ್ಲಿ ಸ್ಮಾರ್ಟ್ ಸಿಟಿ ಮೂಲಸೌಕರ್ಯ ಮತ್ತು ಅಪ್ಲಿಕೇಶನ್‌ಗಳಿಗಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ನ ಸುರಕ್ಷಿತ ಬಳಕೆಗೆ ಕ್ರಮಗಳು ಸೇರಿವೆ.
viii. ಸಿ.ಇ.ಆರ್ಟಿ.ಇನ್ (CERT-In) ನವೆಂಬರ್ 2024 ರಲ್ಲಿ ಡೀಪ್‌ಫೇಕ್ ಬೆದರಿಕೆಗಳು ಮತ್ತು ಡೀಪ್‌ಫೇಕ್‌ಗಳಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆಯನ್ನು ನೀಡಿದೆ.
ix. ಸಿ.ಇ.ಆರ್ಟಿ.ಇನ್ CERT-In ಆಗಸ್ಟ್ 2023 ರಲ್ಲಿ ಮಾಸ್ಟರ್‌ಕಾರ್ಡ್ ಸಹಯೋಗದೊಂದಿಗೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಕುರಿತು ಶ್ವೇತಪತ್ರವನ್ನು ಪ್ರಕಟಿಸಿದೆ, ಈ ದಾಳಿಗಳನ್ನು ತಗ್ಗಿಸುವಲ್ಲಿ ಎ.ಐ.(AI) ಬಳಕೆಯನ್ನು ಇದು ಎತ್ತಿ ತೋರಿಸುತ್ತದೆ.
x. ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪ್ಲಿಕೇಶನ್‌ಗಳಿಂದ ಉಂಟಾಗುವ ಪ್ರತಿಕೂಲ ಬೆದರಿಕೆಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಿ.ಇ.ಆರ್ಟಿ.ಇನ್ (CERT-In) ಮೇ 2023 ರಲ್ಲಿ ಸಲಹೆಯನ್ನು ನೀಡಿದೆ.
ಈ ಮಾಹಿತಿಯನ್ನು ಕೇಂದ್ರ ಸಹಾಯಕ ಸಚಿವರಾದ ಶ್ರೀ ಜಿತಿನ್ ಪ್ರಸಾದ್ ಅವರು 29.07.2026 ರಂದು ಲೋಕಸಭೆಯಲ್ಲಿ ಸಲ್ಲಿಸಿದರು.
*****
(रिलीज़ आईडी: 2292114)
आगंतुक पटल : 11