ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ರಜತ ಪದಕ ಜಯಿಸಿರುವ ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕತ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 30 JUL 2026 5:25PM by PIB Bengaluru

ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ರಜತ ಪದಕ ಜಯಿಸಿರುವ ಮೊಹಮ್ಮದ್ ಬಾಸಿಲ್ ಮೋರ್ಸಿಂಗನಕತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಮೊಹಮ್ಮದ್ ಬಾಸಿಲ್ ಅವರ ವೇಗ ಮತ್ತು ದೃಢನಿಶ್ಚಯವನ್ನು ಶ್ಲಾಘಿಸಿರುವ ಪ್ರಧಾನಮಂತ್ರಿಗಳು, ಈ  ಪ್ರದರ್ಶನವು ಅವರ ಈ ಋತುವಿನ ಅತ್ಯುತ್ತಮ ಪ್ರದರ್ಶನ ಎಂದು ಬಣ್ಣಿಸಿದ್ದಾರೆ.

ಈ ಯಶಸ್ಸು ಮೊಹಮ್ಮದ್ ಬಾಸಿಲ್ ಮೋರ್ಸಿಂಗನಕತ್ ಅವರ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯ ಪ್ರತಿಬಿಂಬವಾಗಿದೆ. ಭವಿಷ್ಯದಲ್ಲಿ ಅವರು ಇನ್ನೂ ಅನೇಕ ಸಾಧನೆಗಳನ್ನು ಮಾಡಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

"ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕತ್ ಅವರಿಗೆ ಅಮೋಘ ಬೆಳ್ಳಿ ಪದಕ! ಎಂತಹ ಓಟ ಮತ್ತು ದೃಢನಿಶ್ಚಯದ ಪ್ರದರ್ಶನ! ಅವರ ಈ ಯಶಸ್ಸಿಗೆ ಮತ್ತು ಋತುವಿನ ಅತ್ಯುತ್ತಮ ಸಾಧನೆಗೆ ಅವರಿಗೆ ಅಭಿನಂದನೆಗಳು. ಈ ಯಶಸ್ಸು ಅವರ ಕಠಿಣ ಪರಿಶ್ರಮ ಮತ್ತು ಗಮನಕೇಂದ್ರೀಕರಣದ ಪ್ರತಿಬಿಂಬವಾಗಿದೆ. ಮುಂಬರುವ ದಿನಗಳಲ್ಲಿ ಅವರು ಇನ್ನಷ್ಟು ಹೊಸ ಎತ್ತರಕ್ಕೇರಲಿ."

#CWG2026”

 

*****


(रिलीज़ आईडी: 2292093) आगंतुक पटल : 10
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Malayalam