ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಸಬ್ಸಿಡಿ ಬೆಂಬಲ ಮತ್ತು ಕಡಿಮೆ ಬಡ್ಡಿದರದ ಆರ್ಥಿಕ ನೆರವಿನೊಂದಿಗೆ ಎಲ್ಲರಿಗೂ ಮೇಲ್ಛಾವಣಿ ಸೌರಶಕ್ತಿ ಲಭ್ಯವಾಗುವಂತೆ ಮಾಡಿದ ಪಿಎಂ ಸೂರ್ಯ ಘರ್: ಮಫ್ಟ್ ಬಿಜ್ಲಿ ಯೋಜನೆ

प्रविष्टि तिथि: 28 JUL 2026 3:41PM by PIB Bengaluru

ಮಧ್ಯಮ-ಆದಾಯದ ಮತ್ತು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಮೇಲ್ಛಾವಣಿ ಸೌರಶಕ್ತಿ (ಆರ್ ಟಿಎಸ್) ವ್ಯವಸ್ಥೆಗಳ ಕೈಗೆಟುಕುವುದನ್ನು ಖಾತ್ರಿಪಡಿಸಿಕೊಳ್ಳಲು ಪಿಎಂ ಸೂರ್ಯ ಘರ್: ಮಫ್ಟ್ ಬಿಜ್ಲಿ ಯೋಜನೆ (ಪಿಎಂಎಸ್ ಜಿ-ಎಂಬಿವೈ) ಅಡಿಯಲ್ಲಿ ಈ ಕೆಳಗಿನ ನಿಬಂಧನೆಗಳನ್ನು ಮಾಡಲಾಗಿದೆ:

i. ಆರ್ ಟಿಎಸ್ ಸಾಮರ್ಥ್ಯದ ಮೊದಲ ಎರಡು kWp ಗಳಿಗೆ ಹೆಚ್ಚಿನ ಕೇಂದ್ರ ಹಣಕಾಸು ನೆರವು.

ii. ರಾಷ್ಟ್ರೀಕೃತ ಬ್ಯಾಂಕುಗಳಿಂದ ರೆಪೊ-ದರದ ರಿಯಾಯಿತಿ ಬಡ್ಡಿದರದಲ್ಲಿ ಮೇಲಾಧಾರ-ಮುಕ್ತ ಸಾಲದ ಲಭ್ಯತೆ, ಅಂದರೆ, ಪ್ರಸ್ತುತ 50 bps, ಅಂದರೆ, 10 ವರ್ಷಗಳ ಅವಧಿಯೊಂದಿಗೆ ವಾರ್ಷಿಕ ಶೇ.5.75ರಷ್ಟು ಬಡ್ಡಿ.

iii. RESCO/ಯುಟಿಲಿಟಿ-ಲೆಡ್ ಒಟ್ಟುಗೂಡಿಸುವಿಕೆ (ಯುಎಲ್ ಎ) ಮಾದರಿಗಳನ್ನು ಒಳಗೊಂಡಿದೆ.

ಪಿಎಂಎಸ್ ಜಿ-ಎಂಬಿವೈ ಅಡಿಯಲ್ಲಿ ವರ್ಷವಾರು ಬಜೆಟ್ ಹಂಚಿಕೆ ಮತ್ತು ಬಿಡುಗಡೆಯಾದ ಹಣವನ್ನು ಕೆಳಗೆ ನೀಡಲಾಗಿದೆ: -

ಹಣಕಾಸು ವರ್ಷ

ಬಜೆಟ್ ಅಂದಾಜು (ಕೋಟಿ ರೂ.ಗಳಲ್ಲಿ)

ವೆಚ್ಚ ಮಾಡಿರುವುದು

(ಕೋಟಿ ರೂ.ಗಳಲ್ಲಿ)

2024-25

6,250

7,822.92

2025-26

20,000

16,166.23

2026-27

22000

10,392.48

(22.7.2026 ರಂತೆ)

ಯೋಜನೆಯಡಿಯಲ್ಲಿ ಆರ್‌ಟಿಎಸ್ ವ್ಯವಸ್ಥೆಗಳ ನಿಯೋಜನೆಯನ್ನು ವೇಗಗೊಳಿಸಲು ತೆಗೆದುಕೊಂಡ ವಿವಿಧ ಕ್ರಮಗಳ ಪರಿಣಾಮವಾಗಿ 2026ರ ಜುಲೈ 22 ರ ವೇಳೆಗೆ ಒಟ್ಟು 39,72,447 ಆರ್‌ಟಿಎಸ್ ವ್ಯವಸ್ಥೆಯನ್ನು 48,02,717 ಮನೆಗಳಿಗೆ ಅಳವಡಿಸಲಾಗಿದೆ.

ಯೋಜನೆಯಡಿಯಲ್ಲಿ ಆರ್‌ಟಿಎಸ್ ಅಳವಡಿಸಿಕೊಂಡ ಗ್ರಾಹಕರ ವಿದ್ಯುತ್ ಬಿಲ್‌ಗಳು ಹೆಚ್ಚಾಗಿ ಕಡಿಮೆಯಾಗಿದ್ದರೂ, 18.93 ಕ್ಕೂ ಅಧಿಕ ಮನೆಗಳು ತಮ್ಮ ಸ್ವಯಂ ವಿದ್ಯುತ್ ಬಳಕೆಯನ್ನು ಅವಲಂಬಿಸಿ ಕೆಲವು ತಿಂಗಳುಗಳವರೆಗೆ ಶೂನ್ಯ ವಿದ್ಯುತ್ ಬಿಲ್‌ಗಳನ್ನು ಪಡೆದುಕೊಂಡಿವೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಖಾತೆ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರು ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.

 

*****


(रिलीज़ आईडी: 2290511) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Tamil