ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಈಶಾನ್ಯ ರಾಜ್ಯಗಳಾದ್ಯಂತ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಕಲ್ಯಾಣ ಉಪಕ್ರಮಗಳನ್ನು ವಿಸ್ತರಿಸಿದ ಸರ್ಕಾರ


ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ₹63.67 ಕೋಟಿ ಮೌಲ್ಯದ ಸಹಾಯಕ ಸಾಧನಗಳ ವಿತರಣೆ; ಈಶಾನ್ಯದಾದ್ಯಂತ 11 ಪಿಎಂ ದಿವ್ಯಾಶಾ-ವಯೋಶ್ರೀ ಕೇಂದ್ರಗಳು ಕಾರ್ಯನಿರ್ವಹಣೆ

प्रविष्टि तिथि: 27 JUL 2026 6:23PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಭಾರತ ಸರ್ಕಾರವು ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಾದ್ಯಂತ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಸಮಗ್ರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯಸಭೆಯಲ್ಲಿ ಶ್ರೀ ತೇರಾಶ್ ಗೊವಾಲ್ಲಾ ಅವರ ಲಿಖಿತ ಪ್ರಶ್ನೆಗೆ ಉತ್ತರವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಈ ವಿವರಗಳನ್ನು ಹಂಚಿಕೊಂಡಿದ್ದಾರೆ

ಅಟಲ್ ವಯೋ ಅಭ್ಯುದಯ್ ಯೋಜನೆ (ಎವಿವೈಎವೈ) ಅಡಿಯಲ್ಲಿ, ಸಚಿವಾಲಯವು 'ಹಿರಿಯ ನಾಗರಿಕರ ಸಂಯೋಜಿತ ಕಾರ್ಯಕ್ರಮ'ದ (ಐ ಪಿ ಎಸ್‌ ಆರ್‌ ಸಿ) ಮೂಲಕ ನಿರ್ಗತಿಕ ಹಿರಿಯ ನಾಗರಿಕರಿಗೆ ವಸತಿ, ಪೋಷಣೆ, ಆರೋಗ್ಯ ರಕ್ಷಣೆ ಮತ್ತು ಮನರಂಜನಾ ಸೌಲಭ್ಯಗಳಿಗಾಗಿ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಿದೆ. ಕಳೆದ ಐದು ಹಣಕಾಸು ವರ್ಷಗಳಲ್ಲಿ, ಅಸ್ಸಾಂ ಒಂದರಲ್ಲೇ ಐ ಪಿ ಎಸ್‌ ಆರ್‌ ಸಿ ಅಡಿಯಲ್ಲಿ 1.03 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ದಾಖಲಾಗಿದ್ದಾರೆ. ಜೊತೆಗೆ ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತು ಇತರ ಈಶಾನ್ಯ ರಾಜ್ಯಗಳಿಗೂ ಅನುದಾನದ ನೆರವಿನ ಮೂಲಕ ಗಮನಾರ್ಹ ಬೆಂಬಲವನ್ನು ವಿಸ್ತರಿಸಲಾಗಿದೆ.

ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯು (ಎಸ್ ಎ ಪಿ ಎಸ್‌ ಆರ್‌ ಸಿ) ಜಾಗೃತಿ ಮೂಡಿಸುವಿಕೆ, ಕಣ್ಣಿನ ಪೋರೆ ಶಸ್ತ್ರಚಿಕಿತ್ಸೆಗಳು ಮತ್ತು ಇತರ ಕಲ್ಯಾಣ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ರಾಜ್ಯ ನೇತೃತ್ವದ ಉಪಕ್ರಮಗಳನ್ನು ಮತ್ತಷ್ಟು ಬಲಪಡಿಸಿದೆ. ಕಳೆದ ಐದು ವರ್ಷಗಳಲ್ಲಿ, ದೇಶಾದ್ಯಂತ ಎಸ್‌ ಎ ಪಿ ಎಸ್‌ ಆರ್‌ ಸಿ ಅಡಿಯಲ್ಲಿ ₹48 ಕೋಟಿಗೂ ಹೆಚ್ಚು ಒಟ್ಟು ನೆರವನ್ನು ಬಿಡುಗಡೆ ಮಾಡಲಾಗಿದ್ದು, ವಿವಿಧ ರಾಜ್ಯ-ನಿರ್ದಿಷ್ಟ ಮಧ್ಯಸ್ಥಿಕೆಗಳ ಮೂಲಕ ಈಶಾನ್ಯ ರಾಜ್ಯಗಳಿಗೆ ಪ್ರಯೋಜನವಾಗಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಸೇರಿದ ಅಥವಾ ₹15,000 ವರೆಗೆ ಮಾಸಿಕ ಆದಾಯವನ್ನು ಹೊಂದಿರುವ ಮತ್ತು ವಯೋಸಹಜ ಅಂಗವಿಕಲತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಉಚಿತ ಸಹಾಯಕ ಜೀವನೋಪಾಯ ಸಾಧನಗಳನ್ನು ಒದಗಿಸಲು ಸಚಿವಾಲಯವು ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು (ಆರ್‌ ವಿ ವೈ) ಅನುಷ್ಠಾನಗೊಳಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಈಶಾನ್ಯ ವಲಯದಾದ್ಯಂತ 73,572 ಹಿರಿಯ ನಾಗರಿಕರು ಈ ಯೋಜನೆಯಡಿ ₹63.67 ಕೋಟಿ ಮೌಲ್ಯದ 3,57,242 ಸಹಾಯಕ ಸಾಧನಗಳನ್ನು ಪಡೆದುಕೊಂಡಿದ್ದಾರೆ.

ವಿಕಲಚೇತನರ ಸಬಲೀಕರಣಕ್ಕಾಗಿ, ವಿಕಲಚೇತನರ ಸಬಲೀಕರಣ ಇಲಾಖೆಯು (DEPwD) 'ವಿಕಲಚೇತನರಿಗೆ ಸಹಾಯಕ ಉಪಕರಣಗಳ ಖರೀದಿ/ಅಳವಡಿಕೆಗೆ ನೆರವು' (ಎಡಿಐಪಿ), ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ, ವಿಕಲಚೇತನರ ಹಕ್ಕುಗಳ ಕಾಯ್ದೆಯ ಅನುಷ್ಠಾನ ಯೋಜನೆ (ಎಸ್‌ ಐ ಪಿ ಡಿ ಎ), ದಿವ್ಯಾಂಗಜನರ ಕೌಶಲ್ಯಾಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ ಎ ಪಿ-ಎಸ್‌ ಡಿ ಪಿ), ವಿಶಿಷ್ಟ ಅಂಗವಿಕಲತೆಯ ಗುರುತಿನ ಚೀಟಿ (ಯುಡಿಐಡಿ) ಮತ್ತು ದೀನದಯಾಳ್ ದಿವ್ಯಾಂಗಜನ ಪುನರ್ವಸತಿ ಯೋಜನೆ (ಡಿ‌ ಡಿ ಆರ್‌ ಎಸ್) ಸೇರಿದಂತೆ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಎಡಿಐಪಿ ಯೋಜನೆಯಡಿ, ಅಸ್ಸಾಂನಲ್ಲಿ ₹6199.86 ಲಕ್ಷಗಳ ಬಳಕೆಯೊಂದಿಗೆ 71,131 ಫಲಾನುಭವಿಗಳು ದಾಖಲಾಗಿದ್ದರೆ, ಈಶಾನ್ಯ ವಲಯವು ಒಟ್ಟಾರೆಯಾಗಿ ಸಹಾಯಕ ಪರಿಕರಗಳು ಮತ್ತು ಉಪಕರಣಗಳ ವಿತರಣೆಯ ಮೂಲಕ 81,551 ವ್ಯಕ್ತಿಗಳಿಗೆ ಪ್ರಯೋಜನ ತಲುಪಿಸಿದೆ.

ಸಚಿವಾಲಯವು ವಿಕಲಚೇತನರಿಗೆ ಜಾಗೃತಿ ಮತ್ತು ಆರಂಭಿಕ ಸೇವೆಗಳನ್ನು ಸಹ ಬಲಪಡಿಸಿದೆ. ಸಿಪ್ಡಾ (SIPDA) ದ ಜಾಗೃತಿ ಮೂಡಿಸುವಿಕೆ ಮತ್ತು ಪ್ರಚಾರ (ಎಜಿಪಿ) ಘಟಕದ ಅಡಿಯಲ್ಲಿ, 2022-23 ಮತ್ತು 10 ಜುಲೈ 2026 ರ ನಡುವೆ ಈಶಾನ್ಯ ವಲಯದಲ್ಲಿ 26 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ₹₹1.01 ಕೋಟಿಗೂ ಹೆಚ್ಚಿನ ಅನುದಾನದ ನೆರವು ನೀಡಲಾಗಿದೆ.

ಸಮಗ್ರ ಶಿಕ್ಷಣವನ್ನು ಉತ್ತೇಜಿಸಲು, ಎಲ್ಲಾ ಈಶಾನ್ಯ ರಾಜ್ಯಗಳ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲಾಗಿದೆ. 2025–26 ರ ಅವಧಿಯಲ್ಲಿ, ಅಸ್ಸಾಂನ 545 ವಿದ್ಯಾರ್ಥಿಗಳು ವಿಕಲಚೇತನ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಯೋಜನೆಯ ವಿವಿಧ ಘಟಕಗಳ ಅಡಿಯಲ್ಲಿ ₹₹2.01 ಕೋಟಿ ಮೊತ್ತದ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.

ಈಶಾನ್ಯ ಪ್ರದೇಶದಲ್ಲಿ ಎರಡು 'ವಿವಿಧ ವಿಕಲಚೇತನಗಳ ಆರಂಭಿಕ ಹಸ್ತಕ್ಷೇಪ ಕೇಂದ್ರಗಳು' (CDEIC) ಕಾರ್ಯನಿರ್ವಹಿಸುತ್ತಿವೆ—ಸಿ ಆರ್‌ ಸಿ ಗುವಾಹಾಟಿ (ಅಸ್ಸಾಂ) ಮತ್ತು ಸಿ ಆರ್‌ ಸಿ ಇಂಫಾಲ (ಮಣಿಪುರ). ಕಳೆದ ಐದು ವರ್ಷಗಳಲ್ಲಿ, ವಿಕಲಚೇತನ ಮಕ್ಕಳಿಗೆ ಆರಂಭಿಕ ತಪಾಸಣೆ, ಚಿಕಿತ್ಸಕ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸಲು ಸಿ ಆರ್‌ ಸಿ ಗುವಾಹಾಟಿ ₹72,07,540 ಮತ್ತು ಸಿ ಆರ್‌ ಸಿ ಇಂಫಾಲ ₹36,73,132 ನೆರವು ಪಡೆದುಕೊಂಡಿವೆ.

ಹೆಚ್ಚುವರಿಯಾಗಿ, ನ್ಯಾಷನಲ್ ಟ್ರಸ್ಟ್ ಈಶಾನ್ಯ ರಾಜ್ಯಗಳಾದ್ಯಂತ 'ದಿಶಾ', 'ಸಮರ್ಥ್' ಮತ್ತು 'ನಿರಾಮಯ' ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸುವುದನ್ನು ಮುಂದುವರಿಸಿದೆ. ಈ ವಲಯವು ಪ್ರಸ್ತುತ ಅಸ್ಸಾಂನಲ್ಲಿ ಆರು ದಿಶಾ ಕೇಂದ್ರಗಳು ಮತ್ತು ಒಂದು ಸಮರ್ಥ್ ಕೇಂದ್ರವನ್ನು ಹೊಂದಿದೆ. 2025-26 ರ ಅವಧಿಯಲ್ಲಿ ನಿರಾಮಯ ಯೋಜನೆಯಡಿ, ಅಸ್ಸಾಂನಲ್ಲಿ 331, ಮಣಿಪುರದಲ್ಲಿ 493, ಮೇಘಾಲಯದಲ್ಲಿ 329, ತ್ರಿಪುರಾದಲ್ಲಿ 301, ಮಿಜೋರಾಂನಲ್ಲಿ 88, ಸಿಕ್ಕಿಂನಲ್ಲಿ 76, ನಾಗಾಲ್ಯಾಂಡ್‌ ನಲ್ಲಿ 18 ಮತ್ತು ಅರುಣಾಚಲ ಪ್ರದೇಶದಲ್ಲಿ 4 ಫಲಾನುಭವಿಗಳು ಸೇರಿದ್ದಾರೆ.

ಪುನರ್ವಸತಿ ಮೂಲಸೌಕರ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀ ರಾಮದಾಸ್ ಅಠಾವಳೆ, ಭಾರತೀಯ ಕೃತಕ ಅಂಗಗಳ ತಯಾರಿಕಾ ನಿಗಮವು (ಅಲಿಮ್ಕೋ) ಈಶಾನ್ಯ ವಲಯದಾದ್ಯಂತ 11 ಪ್ರಧಾನಮಂತ್ರಿ ದಿವ್ಯಾಶಾ-ವಯೋಶ್ರೀ ಕೇಂದ್ರಗಳನ್ನು (PMDVK) ಸ್ಥಾಪಿಸಿದೆ ಎಂದು ತಿಳಿಸಿದರು. ಅಲಿಮ್ಕೋ ಹೆಚ್ಚುವರಿ ಕೇಂದ್ರಗಳನ್ನು ತೆರೆಯುವ ಅಗತ್ಯವನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡುತ್ತದೆ ಮತ್ತು ಉದಯೋನ್ಮುಖ ಅಗತ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತದೆ.

ಈಶಾನ್ಯ ಪ್ರದೇಶದಾದ್ಯಂತ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಕಲ್ಯಾಣ ಯೋಜನೆಗಳ ದೃಢವಾದ ಜಾಲದ ಮೂಲಕ ಸುಲಭವಾಗಿ ಸಿಗುವ ಆರೋಗ್ಯ ರಕ್ಷಣೆ, ಪುನರ್ವಸತಿ, ಶಿಕ್ಷಣ, ಸಹಾಯಕ ಸಾಧನಗಳು, ಜೀವನೋಪಾಯದ ಅವಕಾಶಗಳು ಮತ್ತು ಸಾಮಾಜಿಕ ಭದ್ರತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ಬದ್ಧವಾಗಿದೆ, ಆ ಮೂಲಕ ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸಮಾನ ಅಭಿವೃದ್ಧಿಯ ಸರ್ಕಾರದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ.

 

*****

 


(रिलीज़ आईडी: 2290307) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी