ರೈಲ್ವೇ ಸಚಿವಾಲಯ
azadi ka amrit mahotsav

4.55 ಕೋಟಿ ಡೌನ್‌ಲೋಡ್‌ಗಳು ಮತ್ತು ಸರಾಸರಿ ದೈನಂದಿನ 9.65 ಲಕ್ಷ  ಟಿಕೆಟ್‌ ಬುಕಿಂಗ್‌ಗಳೊಂದಿಗೆ ಪ್ರಯಾಣಿಕರಲ್ಲಿವ್ಯಾಪಕ ಜನಪ್ರಿಯತೆಯನ್ನು ಗಳಿಸಿದ ರೈಲ್‌ಒನ್‌ ಅಪ್ಲಿಕೇಶನ್‌


ವಂಚನೆ ನಿಗ್ರಹ ಕ್ರಮಗಳನ್ನು ಬಲಪಡಿಸಿದ ಭಾರತೀಯ ರೈಲ್ವೆ 2024 ರ ಜನವರಿಯಿಂದ ಅಸಾಮಾನ್ಯ ಮೊಬೈಲ್‌ ಸಂಖ್ಯೆಗಳು, ಇಮೇಲ್‌ ಡೊಮೇನ್‌ಗಳು, ಐಪಿ ವಿಳಾಸಗಳಿಗಾಗಿ 6.68 ಕೋಟಿಗೂ ಹೆಚ್ಚು ಬಳಕೆದಾರ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ


ರಾಷ್ಟ್ರೀಯ ಸೈಬರ್‌ಅಪರಾಧ ಪೋರ್ಟಲ್‌ನಲ್ಲಿ530 ಅನುಮಾನಾಸ್ಪದ ಬುಕಿಂಗ್‌ ದೂರುಗಳು ದಾಖಲಾಗಿವೆ ಮತ್ತು 2025-26 ಮತ್ತು 2026-27ರಲ್ಲಿ(30.06.2026 ರವರೆಗೆ) 13,343 ಅನುಮಾನಾಸ್ಪದ ಇಮೇಲ್‌ ಡೊಮೇನ್‌ಗಳನ್ನು ನಿರ್ಬಂಧಿಸಲಾಗಿದೆ


2025ರ ಜೂನ್‌ -2026 ರ ಜೂನ್‌  ಅವಧಿಯಲ್ಲಿಕಾಯ್ದಿರಿಸಲಾದ 65.08 ಕೋಟಿ ಟಿಕೆಟ್‌ಗಳಲ್ಲಿಭಾರತೀಯ ರೈಲ್ವೆಯಲ್ಲಿಆನ್‌ಲೈನ್‌ನಲ್ಲಿಕಾಯ್ದಿರಿಸಲಾದ ಟಿಕೆಟ್‌ಗಳಲ್ಲಿಶೇ.89 ರಷ್ಟು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದ್ದು, ಶೇ.11ರಷ್ಟು ಕೌಂಟರ್‌ಗಳ ಮೂಲಕ ಬುಕ್‌ ಮಾಡಲಾಗಿದೆ

प्रविष्टि तिथि: 22 JUL 2026 4:28PM by PIB Bengaluru

ಪ್ರಯಾಣಿಕರ ಒಟ್ಟಾರೆ ಅನುಭವವನ್ನು ಸುಧಾರಿಸಲು, ರೈಲ್ವೆಯು 01.07.2025ರಂದು ರೈಲ್‌ಒನ್‌ ಅಪ್ಲಿಕೇಶನ್‌ಅನ್ನು ಪ್ರಾರಂಭಿಸಿದೆ. ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ… ಪ್ಲೇ ಸ್ಟೋರ್‌ಮತ್ತು ಆಪಲ್‌ ಆಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದು. ಈ ಅಪ್ಲಿಕೇಶನ್‌ ಪ್ರಯಾಣಿಕರಿಗೆ ಮೊಬೈಲ್‌ ಫೋನ್‌ನಲ್ಲಿಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್‌ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್‌ ಭಾರತೀಯ ರೈಲ್ವೆಯ ಎಲ್ಲಾಸಾರ್ವಜನಿಕ ಸೇವೆಗಳಾದ ಕಾಯ್ದಿರಿಸಿದ ಟಿಕೆಟಿಂಗ್‌, ಕಾಯ್ದಿರಿಸದ ಟಿಕೆಟಿಂಗ್‌ ಮತ್ತು ಪ್ಲಾಟ್‌ಫಾರ್ಮ್‌ ಟಿಕೆಟಿಂಗ್‌, ರೈಲು ವಿಚಾರಣೆ, ಪಿಎನ್‌ಆರ್‌ವಿಚಾರಣೆ, ರೈಲ್‌ ಮದದ್‌ ಇತ್ಯಾದಿಗಳನ್ನು ಒಂದೇ ವೇದಿಕೆಯಲ್ಲಿಸಂಯೋಜಿಸುತ್ತದೆ. ಇದು ಪ್ರಯಾಣಿಕರ ಅಂಗೈಗೆ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು ತರುತ್ತದೆ. ಇಲ್ಲಿಯವರೆಗೆ ಈ ಅಪ್ಲಿಕೇಶನ್‌ಅನ್ನು 4.55 ಕೋಟಿಗೂ ಹೆಚ್ಚು ಡೌನ್‌ಲೋಡ್‌ ಮಾಡಲಾಗಿದೆ. ರೈಲ್‌ ಒನ್‌ ಆ್ಯಪ್‌ನಲ್ಲಿಪ್ರತಿದಿನ ಸರಾಸರಿ 9.65 ಲಕ್ಷ  ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತಿದೆ (2.75 ಲಕ್ಷ  ಕಾಯ್ದಿರಿಸಲಾಗಿದೆ ಮತ್ತು 6.89 ಲಕ್ಷ  ಟಿಕೆಟ್‌ ಕಾಯ್ದಿರಿಸಲಾಗಿದೆ). ಪ್ರಯಾಣಿಕರು ಈ ಅಪ್ಲಿಕೇಶನ್‌ ಬಳಸಿ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್‌ಗಳನ್ನು ಬಹಳ ಅನುಕೂಲಕರವಾಗಿ ಕಾಯ್ದಿರಿಸಬಹುದು.

ರೈಲ್‌ ಮದದ್‌ ಭಾರತೀಯ ರೈಲ್ವೆಯ ಕುಂದುಕೊರತೆ ಪರಿಹಾರ ಕಾರ್ಯವಿಧಾನವಾಗಿದ್ದು, ಇದು ಪ್ರಯಾಣಿಕರಿಗೆ ಕುಂದುಕೊರತೆ ಪರಿಹಾರ, ಸಹಾಯ ಮತ್ತು ವಿಚಾರಣೆಗಾಗಿ ಸಮಗ್ರ ವೇದಿಕೆಯನ್ನು ಒದಗಿಸುತ್ತದೆ. ರೈಲ್‌ ಮದದ್‌ನಲ್ಲಿ, ಪ್ರಯಾಣಿಕರು ಸಹಾಯವಾಣಿ ಸಂಖ್ಯೆ -139, ರೈಲ್‌ ಮದದ್‌ ವೆಬ್‌, ಅಪ್ಲಿಕೇಶನ್‌ ಮತ್ತು ಎಸ್‌ಎಂಎಸ್‌ ನಂತಹ ಅನೇಕ ಚಾನೆಲ್‌ಗಳ ಮೂಲಕ ಪರಿಹಾರವನ್ನು ಪಡೆಯಬಹುದು. ರೈಲ್‌ ಮದದ್‌ ಸ್ವಯಂಚಾಲಿತ ದೂರು ನಿಯೋಜನೆ ಮತ್ತು ಆಟೋ-ಎಸ್ಕಲೇಶನ್‌ ವ್ಯವಸ್ಥೆಯನ್ನು ಹೊಂದಿದೆ ಮತ್ತು ಕುಂದುಕೊರತೆಗಳ ಸಮಯೋಚಿತ ಪರಿಹಾರವನ್ನು ಖಚಿತಪಡಿಸಿಕೊಳ್ಳುತ್ತದೆ. ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 30ಕ್ಕೂ ಹೆಚ್ಚು ರೈಲು ಮತ್ತು ನಿಲ್ದಾಣ ವಿಭಾಗಗಳಲ್ಲಿಕುಂದುಕೊರತೆಗಳು ಮತ್ತು ಸಹಾಯಕ್ಕಾಗಿ ಕರೆಗಳನ್ನು ಸೆರೆಹಿಡಿಯಲಾಗಿದೆ.

ಇದಲ್ಲದೆ, 2025-26ರ ಆರ್ಥಿಕ ವರ್ಷದಲ್ಲಿ, ರೈಲ್‌ ಮದದ್‌ 6,94,368 ಪ್ರಕರಣಗಳಲ್ಲಿಶೇ.89.49ರಷ್ಟು ಅತ್ಯುತ್ತಮ ಮತ್ತು ತೃಪ್ತಿದಾಯಕ ಪ್ರತಿಕ್ರಿಯೆಯೊಂದಿಗೆ ನೆರವು ನೀಡಿದೆ. ಪ್ಲಾಟ್‌ಫಾರ್ಮ್‌ ಪ್ರಯಾಣಿಕರಿಗೆ ತಮ್ಮ ಕುಂದುಕೊರತೆಗಳ ಪರಿಹಾರದ ಬಗ್ಗೆ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ, ಭಾರತೀಯ ರೈಲ್ವೆಗೆ ಸೇವೆಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರಯಾಣಿಕರ ತೃಪ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಳೆದ ಮೂರು ವರ್ಷಗಳಲ್ಲಿಪರಿಹರಿಸಲಾದ ಕುಂದುಕೊರತೆಗಳ ವಿವರಗಳು ಈ ಕೆಳಗಿನಂತಿವೆ: -

ವರ್ಷ ಒಟ್ಟು

ಕುಂದುಕೊರತೆಗಳ ಶೇಕಡಾವಾರು ಪರಿಹರಿಸಲಾಗಿದೆ

2023-2024

ಶೇ.99.98

2024-2025

ಶೇ.99.99

2025-2026

ಶೇ.99.98

ಭಾರತೀಯ ರೈಲ್ವೆಯ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯು ಉದ್ಯಮ-ಗುಣಮಟ್ಟದ, ಅತ್ಯಾಧುನಿಕ ಸೈಬರ್‌ಭದ್ರತಾ ನಿಯಂತ್ರಣಗಳನ್ನು ಹೊಂದಿರುವ ದೃಢವಾದ ಮತ್ತು ಹೆಚ್ಚು ಸುರಕ್ಷಿತ ವ್ಯವಸ್ಥೆಯಾಗಿದೆ. ಸೈಬರ್‌ದಾಳಿಯಿಂದ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಅಂತರ್ಜಾಲದ ಮೂಲಕ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ನಲ್ಲಿವಂಚನೆಗಳನ್ನು ತಡೆಯಲು ಹ್ಯಾಕಿಂಗ್‌ ಸಾಧನಗಳ ಮೂಲಕ ಫಾರ್ಮ್‌ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುವುದನ್ನು ತಡೆಯಲು ಭಾರತೀಯ ರೈಲ್ವೆ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ:

1. ತತ್ಕಾಲ್‌ ಟಿಕೆಟ್‌ ಕಾಯ್ದಿರಿಸಲು ಆಧಾರ್‌ ದೃಢೀಕರಣ - ಆಧಾರ್‌ ದೃಢೀಕೃತ ಪ್ರಯಾಣಿಕರಿಗೆ ಮಾತ್ರ ಆನ್‌ಲೈನ್‌ನಲ್ಲಿತತ್ಕಾಲ್‌ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಅನನ್ಯತೆಯ ನಿರ್ಬಂಧವನ್ನು ವಿಧಿಸುವ ಮೂಲಕ ನಕಲಿ ಅಥವಾ ಅನಧಿಕೃತ ಏಜೆಂಟ್‌-ನಿಯಂತ್ರಿತ ಬಹು ಬಳಕೆದಾರ ಖಾತೆಯ ರಚನೆ ಮತ್ತು ಕಾರ್ಯಾಚರಣೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಈ ಕ್ರಮವು ಖಾತೆ ಗುಣಾಕಾರ ಮತ್ತು ಸ್ವಯಂಚಾಲಿತ ದುರುಪಯೋಗದ ವಿರುದ್ಧ ಪರಿಣಾಮಕಾರಿ ರಕ್ಷ ಣೆಯಾಗಿ ಕಾರ್ಯನಿರ್ವಹಿಸುತ್ತದೆ, ಆ ಮೂಲಕ ತತ್ಕಾಲ್‌ ಟಿಕೆಟ್‌ಗಳ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸುತ್ತದೆ. ಇದು ಆನ್‌ಲೈನ್‌ ತತ್ಕಾಲ್‌ ಬುಕಿಂಗ್‌ ವ್ಯವಸ್ಥೆಯಲ್ಲಿಪಾರದರ್ಶಕತೆಯನ್ನು ಹೆಚ್ಚಿಸಿದೆ. ತತ್ಕಾಲ್‌ ಬುಕಿಂಗ್‌ನಲ್ಲಿದುರುಪಯೋಗವನ್ನು ತಡೆಯಲು ಮತ್ತು ನ್ಯಾಯಸಮ್ಮತತೆಯನ್ನು ಸುಧಾರಿಸಲು, ಆಯ್ದ ರೈಲುಗಳಲ್ಲಿಆನ್‌ ಲೈನ್‌ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಗಾಗಿ ಆಧಾರ್‌ಆಧಾರಿತ ಒನ್‌-ಟೈಮ್‌ ಪಾಸ್‌ ವರ್ಡ್‌ (ಒಟಿಪಿ) ಪರಿಶೀಲನೆಯನ್ನು ಸಹ ಪರಿಚಯಿಸಲಾಗಿದೆ.

2. ಅಪ್ಲಿಕೇಶನ್‌ ಲೇಯರ್‌ಸೆಕ್ಯುರಿಟಿ ಕಂಟ್ರೋಲ್‌ - ಸ್ಕ್ರಿಪ್ಟಿಂಗ್‌, ಬ್ರೂಟ್‌-ಫೋರ್ಸ್‌ ಅಟ್ಯಾಕ್‌ ಮತ್ತು ಡಿಡಿಒಎಸ್‌ (ಡಿಸ್ಟ್ರಿಬ್ಯೂಟೆಡ್‌ ಡಿನೈಯಲ್‌ ಆಫ್‌ ಸವೀರ್‍ಸ್‌) ದಾಳಿಗಳನ್ನು ತಪ್ಪಿಸಲು ಹಲವಾರು ಅಪ್ಲಿಕೇಶನ್‌ ಮಟ್ಟದ ಭದ್ರತಾ ನಿಯಂತ್ರಣಗಳನ್ನು ಅನೇಕ ಹಂತಗಳಲ್ಲಿಜಾರಿಗೆ ತರಲಾಗಿದೆ. ಅಪ್ಲಿಕೇಶನ್‌ ಭದ್ರತಾ ದುರ್ಬಲತೆಗಾಗಿ  ಓಡಬ್ಲ್ಯೂಎಎಸ್‌ಪಿ(ಓಪನ್‌ ವೆಬ್‌ ಅಪ್ಲಿಕೇಶನ್‌ ಸೆಕ್ಯುರಿಟಿ ಪ್ರಾಜೆಕ್ಟ್) ಅನ್ನು ನಿರ್ವಹಿಸಲು ಹಲವಾರು ಭದ್ರತಾ ಕ್ರಮಗಳನ್ನು ಸಹ ಅನ್ವಯಿಸಲಾಗಿದೆ.

3. ನೆಟ್ವರ್ಕ್‌ ಮತ್ತು ಇನಾಧಿಸ್ಟ್ರಕ್ಚರ್‌ಲೇಯರ್‌ಸೆಕ್ಯುರಿಟಿ ಕಂಟ್ರೋಲ್ಸ್‌ - ವೈಫಲ್ಯಗಳನ್ನು ಕಡಿಮೆ ಮಾಡಲು ಸಂಪೂರ್ಣ ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಮೂಲಸೌಕರ್ಯವನ್ನು ಹೆಚ್ಚಿನ ಲಭ್ಯತೆಯ ವಿಧಾನದಲ್ಲಿನಿಯೋಜಿಸಲಾಗಿದೆ.

ನೆಟ್ವರ್ಕ್‌ ಫೈರ್ವಾಲ್‌ಗಳು, ನೆಟ್ವರ್ಕ್‌ ಒಳನುಗ್ಗುವಿಕೆ ತಡೆಗಟ್ಟುವ ವ್ಯವಸ್ಥೆ, ಅಪ್ಲಿಕೇಶನ್‌ ಡೆಲಿವರಿ ಕಂಟ್ರೋಲರ್‌ಗಳು ಮತ್ತು ವೆಬ್‌ ಅಪ್ಲಿಕೇಶನ್‌ ಫೈರ್ವಾಲ್‌ಗಳನ್ನು ಒಳಗೊಂಡಿರುವ ಭದ್ರತಾ ಸಾಧನಗಳೊಂದಿಗೆ ಉದ್ಯಮ-ಗುಣಮಟ್ಟದ ಅತ್ಯಾಧುನಿಕ ಮತ್ತು ಡೇಟಾ ಸೆಂಟರ್‌ದರ್ಜೆಯ ನೆಟ್ವರ್ಕ್‌ನಿಂದ ಈ ವ್ಯವಸ್ಥೆಯನ್ನು ರಕ್ಷಿಸಲಾಗಿದೆ.

ಸುಮಾರು 30 ಜಿಬಿಪಿಎಸ್‌ ಒಟ್ಟುಗೂಡಿಸಿದ ಡಿಡಿಒಎಸ್‌ ತಗ್ಗಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಐಎಸ್‌ಪಿಗಳ ಮೂಲಕ ಐಎಸ್‌ಪಿ (ಇಂಟರ್ನೆಟ್‌ ಸವೀರ್‍ಸ್‌ ಪ್ರೊವೈಡರ್‌) ಲೇಯರ್‌,ಡಿಡಿಒಎಸ್‌ ಪತ್ತೆ ಮತ್ತು ತಗ್ಗಿಸುವ ಸೇವೆಗಳೊಂದಿಗೆ ಪರಿಮಾಣ-ಆಧಾರಿತ ಡಿಡಿಒಎಸ್‌ (ಡಿಸ್ಟ್ರಿಬ್ಯೂಟೆಡ್‌ ಡಿನೈಯಲ್‌ ಆಫ್‌ ಸವೀರ್‍ಸ್‌) ದಾಳಿಗಳಿಂದ ಈ ವ್ಯವಸ್ಥೆಯನ್ನು ರಕ್ಷಿಸಲಾಗಿದೆ.

ವರ್ಧಿತ ಭದ್ರತೆ, ಉತ್ತಮ ಗ್ರಾಹಕ ಅನುಭವ, ವೆಬ್‌ ಟ್ರಾಫಿಕ್‌ ಲೋಡ್‌ಅನ್ನು ನಿಯಂತ್ರಿಸುವುದು, ಸಂಪನ್ಮೂಲ ಆಪ್ಟಿಮೈಸೇಶನ್‌ ಮತ್ತು ಬೆದರಿಕೆ ತಗ್ಗಿಸುವಿಕೆಗಾಗಿ ಎಂಟರ್‌ಪ್ರೈಸ್‌ ಮಟ್ಟದ ಕಂಟೆಂಟ್‌ ಡೆಲಿವರಿ ನೆಟ್‌ ವರ್ಕ್‌ (ಸಿಡಿಎನ್‌),

ಆಂಟಿ-ಬಾಟ್‌, ಸುರಕ್ಷಿತ ಡಿಎನ್‌ ಎಸ್‌ ಮತ್ತು ವೆಬ್‌ ಅಪ್ಲಿಕೇಶನ್‌ ಫೈರ್‌ವಾಲ್‌ (ಡಬ್‌ಲ್ಯುಎಎಫ್‌) ಸೇವೆಗಳನ್ನು ನಿಯೋಜಿಸಲಾಗಿದೆ.

 

ಸಮಗ್ರ ಸೈಬರ್‌ಬೆದರಿಕೆ ಗುಪ್ತಚರ ಸೇವೆಗಳಿಗಾಗಿ, ಡೀಪ್‌-ಡಾರ್ಕ್‌ ವೆಬ್‌ ಮೇಲ್ವಿಚಾರಣೆ, ಡಿಜಿಟಲ್‌ ಅಪಾಯ ರಕ್ಷ ಣೆ ಮತ್ತು ಘಟನೆಯ ಪ್ರತಿಕ್ರಿಯೆಯನ್ನು ಸುಧಾರಿಸಲು ವಿಶೇಷ ಏಜೆನ್ಸಿಗಳನ್ನು ತೊಡಗಿಸಲಾಗಿದೆ.

 

4. ಭೌತಿಕ ಭದ್ರತಾ ನಿಯಂತ್ರಣಗಳು - ಸಿಸಿಟಿವಿ ದೃಶ್ಯಾವಳಿಗಳು ಮತ್ತು ನಿರ್ಬಂಧಿತ ಭೌತಿಕ ಪ್ರವೇಶದೊಂದಿಗೆ ಸುರಕ್ಷಿತವಾಗಿರುವ ನವದೆಹಲಿಯ ಚಾಣಕ್ಯಪುರಿಯ ಕ್ಯಾಪ್ಟಿವ್‌ ಡೇಟಾ ಸೆಂಟರ್‌ಸೌಲಭ್ಯದಲ್ಲಿಈ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸೌಲಭ್ಯವು ಐಎಸ್‌ಒ 27001 (ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆ) ಪ್ರಮಾಣೀಕರಿಸಲ್ಪಟ್ಟಿದೆ.

5. ಭದ್ರತಾ ಲೆಕ್ಕಪರಿಶೋಧನೆ ಮತ್ತು ಮೇಲ್ವಿಚಾರಣೆ - ಭದ್ರತಾ ಘಟನೆಗಳು ಮತ್ತು ಘಟನೆಗಳ ಹಗಲಿರುಡ ಮೇಲ್ವಿಚಾರಣೆಗಾಗಿ ವ್ಯವಸ್ಥೆಯನ್ನು ಸಿಇಆಟ್‌ಇ-ಇನ್‌ ಟಿಎಸ್‌ಎಪಿ (ಬೆದರಿಕೆ ಮತ್ತು ಸನ್ನಿವೇಶನಾತ್ಮಕ ಜಾಗೃತಿ ಯೋಜನೆಗಳು) ನೊಂದಿಗೆ ಸಂಯೋಜಿಸಲಾಗಿದೆ.

ಭದ್ರತಾ ಘಟನೆಗಳನ್ನು ಪತ್ತೆಹಚ್ಚಲು ಮತ್ತು ತಗ್ಗಿಸಲು ಆವರಣದ ಭದ್ರತಾ ತಂಡವು ವ್ಯವಸ್ಥೆಯ ಭದ್ರತಾ ಲಾಗ್‌ ಮೇಲ್ವಿಚಾರಣೆಯನ್ನು ಮಾಡುತ್ತಿದೆ.

6. ಆಡಳಿತಾತ್ಮಕ ಕ್ರಮಗಳು - ಅನಧಿಕೃತ ಪ್ರವೇಶವನ್ನು ತಡೆಗಟ್ಟಲು ಮತ್ತು ನಿಜವಾದ ಬಳಕೆದಾರರಿಗೆ ತಡೆರಹಿತ ಬುಕಿಂಗ್‌ ಅನ್ನು ಖಚಿತಪಡಿಸಿಕೊಳ್ಳಲು ಹಲವಾರು ವಂಚನೆ ವಿರೋಧಿ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

  • ಬಳಕೆದಾರರ ಖಾತೆಗಳ ಕಠಿಣ ಮರುಮೌಲ್ಯೀಕರಣ ಮತ್ತು ಪರಿಶೀಲನೆಯನ್ನು ಮಾಡಲಾಗಿದೆ. 01.01.2024 ರಿಂದ 30.06.2026 ರ ಅವಧಿಯಲ್ಲಿ, 6.68 ಕೋಟಿಗೂ ಹೆಚ್ಚು ಬಳಕೆದಾರ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು 6.22 ಕೋಟಿಗೂ ಹೆಚ್ಚು ಬಳಕೆದಾರರ ಖಾತೆಗಳನ್ನು ಮರುಮೌಲ್ಯೀಕರಣದ ಆಯ್ಕೆಯೊಂದಿಗೆ ತಾತ್ಕಾಲಿಕ ಅಮಾನತುಗೊಳಿಸಲಾಗಿದೆ. ಆಧಾರ್‌ಲಿಂಕ್‌ ಮಾಡದ ಕಾರಣ ಐಆರ್‌ಸಿಟಿಸಿ ಯಾವುದೇ ಬಳಕೆದಾರರ ಖಾತೆಯನ್ನು ನಿಷ್ಕ್ರಿಯಗೊಳಿಸಿಲ್ಲ. ಅಸಾಮಾನ್ಯ ಮೊಬೈಲ್‌ ಸಂಖ್ಯೆಗಳು, ಇಮೇಲ್‌ ಡೊಮೇನ್‌ಗಳು, ಐಪಿ ವಿಳಾಸಗಳು ಇತ್ಯಾದಿಗಳ ಆಧಾರದ ಮೇಲೆ ಅನುಮಾನಾಸ್ಪದ ಬಳಕೆದಾರರ ಐಡಿಗಳನ್ನು ಗುರುತಿಸಲು ಐಆರ್‌ಸಿಟಿಸಿ ವಿಶಾಲ ನಿಯತಾಂಕಗಳನ್ನು ಅಳವಡಿಸಿಕೊಳ್ಳುತ್ತದೆ.
  • ಮೀಸಲಾತಿ ವ್ಯವಸ್ಥೆಯ ನಿಯಮಿತ ಭದ್ರತಾ ಲೆಕ್ಕಪರಿಶೋಧನೆಗಳನ್ನು ಸಿಇಆರ್‌ಟಿ-ಇನ್‌ ನೋಂದಾಯಿತ ಮಾಹಿತಿ ಭದ್ರತಾ ಲೆಕ್ಕಪರಿಶೋಧನಾ ಸಂಸ್ಥೆಗಳು ನಡೆಸುತ್ತವೆ. ಇದಲ್ಲದೆ, ಸೈಬರ್‌ದಾಳಿಗಳನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಟಿಕೆಟಿಂಗ್‌ ವ್ಯವಸ್ಥೆಗೆ ಸಂಬಂಧಿಸಿದ ಇಂಟರ್ನೆಟ್‌ ದಟ್ಟಣೆಯನ್ನು ಸಿಇಆರ್‌ಇ-ಇನ್‌ ಮತ್ತು ನ್ಯಾಷನಲ್‌ ಕ್ರಿಟಿಕಲ್‌ ಇನಾಧಿರ್ಮೇಷನ್‌ ಇನಾಧಿಸ್ಟ್ರಕ್ಚರ್‌ಪ್ರೊಟೆಕ್ಷ ನ್‌ ಸೆಂಟರ್‌(ಎನ್‌ಸಿಐಐಪಿಸಿ) ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.
  • 2025-26 ಮತ್ತು 2026-27ನೇ ಸಾಲಿನಲ್ಲಿ(30.06.2026 ರವರೆಗೆ) ಅನುಮಾನಾಸ್ಪದ ಬುಕಿಂಗ್‌ ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸೈಬರ್‌ಅಪರಾಧ ಪೋರ್ಟಲ್‌ ನಲ್ಲಿ530 ದೂರುಗಳು ದಾಖಲಾಗಿವೆ.
  • 2025-26 ಮತ್ತು 2026-27ನೇ ಸಾಲಿನಲ್ಲಿ(30.06.2026 ರವರೆಗೆ) 13,343 ಅನುಮಾನಾಸ್ಪದ ಇಮೇಲ್‌ ಡೊಮೇನ್‌ಗಳನ್ನು ನಿರ್ಬಂಧಿಸಲಾಗಿದೆ.
  • ಆಧಾರ್‌ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ತತ್ಕಾಲ್‌ ಟಿಕೆಟ್‌ ಮತ್ತು ಎಆರ್‌ಪಿ (ಮುಂಗಡ ಕಾಯ್ದಿರಿಸುವಿಕೆ ಅವಧಿ) ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ.

7. ವ್ಯವಸ್ಥಿತ ಕ್ರಮಗಳು (ವಿಷಯ ವಿತರಣಾ ನೆಟ್‌ವರ್ಕ್‌ ಮತ್ತು ಆಂಟಿ ಬಿಒಟಿ) -

 

· ಸಿಸ್ಟಮ್‌ ಕಾರ್ಯಕ್ಷ ಮತೆಯನ್ನು ಉತ್ತಮಗೊಳಿಸಲು, ಭಾರತೀಯ ರೈಲ್ವೆ ಸ್ಥಿರ ವಿಷಯವನ್ನು ಆಫ್‌ ಲೋಡ್‌ ಮಾಡಲು ಮತ್ತು ಎನ್‌ಜಿಇಟಿ (ನೆಕ್ಸ್ಟ್‌ ಜನರೇಷನ್‌ ಇ-ಟಿಕೆಟಿಂಗ್‌) ವೆಬ್‌ಸೈಟ್‌ ಸರ್ವರ್‌ಗಳಲ್ಲಿನೇರ ದಟ್ಟಣೆಯನ್ನು ಕಡಿಮೆ ಮಾಡಲು ಕಂಟೆಂಟ್‌ ಡೆಲಿವರಿ ನೆಟ್ವರ್ಕ್‌ (ಸಿಡಿಎನ್‌) ಅನ್ನು ಜಾರಿಗೆ ತಂದಿದೆ.

· ಇದಲ್ಲದೆ, ಆಂಟಿ-ಬಿಒಟಿ ತಂತ್ರಜ್ಞಾನವನ್ನು ನಿಯೋಜಿಸಲಾಗಿದೆ, ಇದು ದುರುದ್ದೇಶಪೂರಿತ ಮತ್ತು ಅನುಮಾನಾಸ್ಪದ ಪ್ರಯತ್ನಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ, ಇದನ್ನು ಸರಾಸರಿ ಶೇ.64 ರಷ್ಟು ತಗ್ಗಿಸಲಾಗುತ್ತದೆ.

· ಇದು ದುರುದ್ದೇಶಪೂರಿತ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸ್ಥಿರ ವಿಷಯವನ್ನು ಒದಗಿಸಲು, ಸಿಸ್ಟಮ್‌ನಲ್ಲಿಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ನಿಜವಾದ ಮತ್ತು ಪರಿಶೀಲಿಸಿದ ಬಳಕೆದಾರರಿಗೆ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ.

 

ಕಳೆದ ಐದು ವರ್ಷಗಳಲ್ಲಿಅಂದರೆ 2021 ರಿಂದ 2025 ಮತ್ತು 2026 ರ ಜೂನ್‌ ವರೆಗೆ, 22,676 ದಲ್ಲಾಳಿಗಳನ್ನು ಆರ್‌ಪಿಎಫ್‌ (ರೈಲ್ವೆ ಸಂರಕ್ಷ ಣಾ ಪಡೆ) ಬಂಧಿಸಿದೆ ಮತ್ತು ರೈಲ್ವೆ ಕಾಯ್ದೆ, 1989 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕಳೆದ ಆರು ತಿಂಗಳಲ್ಲಿಇ-ಟಿಕೆಟಿಂಗ್‌ ವ್ಯವಸ್ಥೆಯನ್ನು ಪ್ರವೇಶಿಸಲು ನಿರಾಕರಿಸಿದ ನಕಲಿ ಪ್ರಯತ್ನಗಳ ವಿವರಗಳು ಈ ಕೆಳಗಿನಂತಿವೆ:

2026 ರ ಜೂನ್‌ 

19.12 ಶತಕೋಟಿ ವಿನಂತಿಗಳಲ್ಲಿ, 12.61 ಶತಕೋಟಿ ಬಾಟ್ಸ್‌. (ಶೇ.65.95)

2026 ರ ಮೇ 

20.07 ಶತಕೋಟಿ ವಿನಂತಿಗಳಲ್ಲಿ, 12.08 ಶತಕೋಟಿ ಬಾಟ್ಸ್‌. (ಶೇ. 60.18)

2026 ರ ಏಪ್ರಿಲ್‌ 

17.33 ಶತಕೋಟಿ ವಿನಂತಿಗಳಲ್ಲಿ, 10.64 ಶತಕೋಟಿ ಬಾಟ್ಸ್‌. (ಶೇ. 61.39)

2026 ರ ಮಾರ್ಚ್‌ 

12.44 ಶತಕೋಟಿ ವಿನಂತಿಗಳಲ್ಲಿ, 05.71 ಶತಕೋಟಿ ಬಾಟ್ಸ್‌. (ಶೇ. 45.90)

2026 ರ ಫೆಬ್ರವರಿ 

11.01 ಶತಕೋಟಿ ವಿನಂತಿಗಳಲ್ಲಿ, 05.01 ಶತಕೋಟಿ ಬಾಟ್ಸ್‌ (ಶೇ. 45.50)

2026 ರ ಜನವರಿ 

12.35 ಶತಕೋಟಿ ವಿನಂತಿಗಳಲ್ಲಿ, 07.26 ಶತಕೋಟಿ ಬಾಟ್ಸ್‌. (ಶೇ. 58.78)

ಕಳೆದ ಆರು ತಿಂಗಳ ಸರಾಸರಿ: 15.38 ಶತಕೋಟಿ ವಿನಂತಿಗಳಲ್ಲಿ, 8.88 ಶತಕೋಟಿ ಬಾಟ್ಸ್‌ (ಶೇ.57.74).

ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ನಲ್ಲಿಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಿದ ನಂತರ ಕಳೆದ ಒಂದು ವರ್ಷದಲ್ಲಿ(ಜೂನ್‌ 2025 ರಿಂದ ಜೂನ್‌ 2026 ರವರೆಗೆ) ಆನ್‌ಲೈನ್‌ ಮತ್ತು ಕೌಂಟರ್‌ಟಿಕೆಟ್‌ ಮಾರಾಟದ ತುಲನಾತ್ಮಕ ದತ್ತಾಂಶವು ಈ ಕೆಳಗಿನಂತಿದೆ:

ಆನ್‌ಲೈನ್‌ ಟಿಕೆಟಿಂಗ್‌

57.90 ಕೋಟಿ ರೂ.

89%

 

ಕೌಂಟರ್‌ಬುಕಿಂಗ್‌

07.18 ಕೋಟಿ ರೂ.

11%

ಒಟ್ಟು

65.08 ಕೋಟಿ ರೂ.

100%

 

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು ಇಂದು ಲೋಕಸಭೆಯಲ್ಲಿಪ್ರಶ್ನೆಗಳಿಗೆ ಉತ್ತರದಲ್ಲಿಈ ಮಾಹಿತಿಯನ್ನು ಒದಗಿಸಿದ್ದಾರೆ. 

 

******

 


(रिलीज़ आईडी: 2288040) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Gujarati