ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಜೂನ್ 30, 2026 ರ ವೇಳೆಗೆ ಭಾರತದ ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯವು 57,443 ಮೆಗಾವಾಟ್‌ಗೆ ಏರಿಕೆ

प्रविष्टि तिथि: 22 JUL 2026 4:32PM by PIB Bengaluru

 

ದೇಶದಲ್ಲಿ ಪವನ ಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿಗಾಗಿ ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ವಿವರಗಳನ್ನು ಅನುಬಂಧ-I ರಲ್ಲಿ ನೀಡಲಾಗಿದೆ.

30.06.2026 ರ ವೇಳೆಗೆ, ದೇಶದಲ್ಲಿ ಪವನ ವಿದ್ಯುತ್ ಯೋಜನೆಗಳ ಒಟ್ಟು ಸ್ಥಾಪಿತ ಸಾಮರ್ಥ್ಯವು 57,443 ಮೆಗಾವಾಟ್ ತಲುಪಿದೆ. ಪವನ ವಿದ್ಯುತ್ ಯೋಜನೆಗಳ ಸ್ಥಾಪಿತ ಸಾಮರ್ಥ್ಯದ ರಾಜ್ಯವಾರು ವಿವರಗಳನ್ನು ಅನುಬಂಧ-II ರಲ್ಲಿ ನೀಡಲಾಗಿದೆ.

ಇದಲ್ಲದೆ, ಆರ್ಥಿಕ ವರ್ಷ 2025-26 ರಲ್ಲಿ ಪವನ ವಿದ್ಯುತ್ ಯೋಜನೆಗಳಿಂದ 106 ಬಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಆರ್ಥಿಕ ವರ್ಷ 2025-26 ರ ಅವಧಿಯಲ್ಲಿ ಪವನ ವಿದ್ಯುತ್ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯ ರಾಜ್ಯವಾರು ವಿವರಗಳನ್ನು ಅನುಬಂಧ-III ರಲ್ಲಿ ನೀಡಲಾಗಿದೆ.

ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಪವನ ವಿದ್ಯುತ್ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯು ಹೆಚ್ಚಾಗಿದೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಪವನ ವಿದ್ಯುತ್ ಉತ್ಪಾದನೆ ಮತ್ತು ವಾರ್ಷಿಕ ಪವನ ಸಾಮರ್ಥ್ಯದ ಸೇರ್ಪಡೆಯ ವಿವರಗಳು ಈ ಕೆಳಗಿನಂತಿವೆ:

ಕ್ರ.ಸಂ.

ವರ್ಷ

ಪವನ ಸಾಮರ್ಥ್ಯ ಸೇರ್ಪಡೆ (ಮೆಗಾವಾಟ್‌ನಲ್ಲಿ)

ಪವನ ವಿದ್ಯುತ್ ಉತ್ಪಾದನೆ (ಬಿಲಿಯನ್ ಯೂನಿಟ್‌ಗಳಲ್ಲಿ)

1

2023-24

3253

83

2

2024-25

4151

83

3

2025-26

6057

106

ಜಿ ಡಬ್ಲ್ಯೂ ಇ ಸಿ ವರದಿ 2026 ರ ಪ್ರಕಾರ, 31 ಡಿಸೆಂಬರ್ 2025 ರವರೆಗೆ ಪವನ ಶಕ್ತಿ ಸ್ಥಾಪನೆಯಲ್ಲಿ ಭಾರತವು ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ.

ಅನುಬಂಧ-I

ದೇಶದಲ್ಲಿ ಪವನ ಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಇತರವುಗಳ ಜೊತೆಗೆ ಕೆಳಗಿನವುಗಳು ಸೇರಿವೆ:

ನವೀಕರಿಸಬಹುದಾದ ವಿದ್ಯುತ್ ಪ್ರಸರಣಕ್ಕಾಗಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿಯಲ್ಲಿ ಹೊಸ ಪ್ರಸರಣ ಮಾರ್ಗಗಳನ್ನು ಹಾಕುವುದು ಮತ್ತು ಹೊಸ ಸಬ್-ಸ್ಟೇಷನ್ ಸಾಮರ್ಥ್ಯವನ್ನು ಸೃಷ್ಟಿಸಲು ಧನಸಹಾಯ ನೀಡಲಾಗಿದೆ.

ಜೂನ್ 30, 2025 ರ ವೇಳೆಗೆ ಕಾರ್ಯಾರಂಭ ಮಾಡಿದ ಮತ್ತು ತದನಂತರ ಹಂತ ಹಂತದ ಐಎಸ್‌ಟಿಎಸ್ ದರಗಳೊಂದಿಗೆ ಕಾರ್ಯಾರಂಭ ಮಾಡಲಿರುವ ಯೋಜನೆಗಳಿಗೆ ಸೌರ ಮತ್ತು ಪವನ ವಿದ್ಯುತ್‌ನ ಅಂತರ-ರಾಜ್ಯ ಮಾರಾಟಕ್ಕೆ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ (ISTS) ಶುಲ್ಕಡಾ ಮೇಲೆ ವಿನಾಯಿತಿ ನೀಡಲಾಗಿದೆ.

ತ್ವರಿತ ಆರ್‌ಇ (RE) ಪಥಕ್ಕೆ ಅಗತ್ಯವಿರುವ ಪ್ರಸರಣ ಮೂಲಸೌಕರ್ಯವನ್ನು ಹೆಚ್ಚಿಸಲು, 2030 ರವರೆಗೆ ಪ್ರಸರಣ ಯೋಜನೆಯನ್ನು ತಯಾರಿಸಲಾಗಿದೆ.

ಸ್ವಯಂಚಾಲಿತ ಮಾರ್ಗದ ಅಡಿಯಲ್ಲಿ ಶೇಕಡಾ 100 ರವರೆಗೆ ವಿದೇಶಿ ನೇರ ಹೂಡಿಕೆಗೆ (FDI) ಅನುಮತಿ ನೀಡಲಾಗಿದೆ.

ಆರ್‌ಇ ಬಳಕೆಯನ್ನು ಹೆಚ್ಚಿಸಲು, 2029-30 ರವರೆಗೆ ನವೀಕರಿಸಬಹುದಾದ ಖರೀದಿ ಬಾಧ್ಯತೆ (RPO) ಹಾಗೂ ನಂತರದ ನವೀಕರಿಸಬಹುದಾದ ಬಳಕೆ ಬಾಧ್ಯತೆ (RCO) ಪಥವನ್ನು ಅಧಿಸೂಚಿಸಲಾಗಿದೆ.

ಇಂಧನ ಸಂರಕ್ಷಣಾ ಕಾಯ್ದೆ 2001 ರ ಅಡಿಯಲ್ಲಿ ನಿಯೋಜಿಸಲಾದ ಎಲ್ಲಾ ಬಳಕೆದಾರರಿಗೆ ಅನ್ವಯವಾಗುವ ಆರ್‌ಸಿಒ (RCO), ನಿಯಮ ಪಾಲಿಸದಿದ್ದಲ್ಲಿ ದಂಡವನ್ನು ವಿಧಿಸುತ್ತದೆ. ಆರ್‌ಸಿಒ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಮೂಲಗಳಿಂದ ನಿರ್ದಿಷ್ಟ ಪ್ರಮಾಣದ ಬಳಕೆಯನ್ನು ಸಹ ಒಳಗೊಂಡಿದೆ.

ಗ್ರಿಡ್ ಸಂಪರ್ಕಿತ ಸೌರ, ಪವನ, ಪವನ-ಸೌರ ಹೈಬ್ರಿಡ್ ಮತ್ತು ಫರ್ಮ್ & ಡಿಸ್ಪ್ಯಾಚಬಲ್ ಆರ್‌ಇ (FDRE) ಯೋಜನೆಗಳಿಂದ ವಿದ್ಯುತ್ ಸಂಗ್ರಹಣೆಗಾಗಿ ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಗಾಗಿ ಪರಿಷ್ಕೃತ ಪ್ರಮಾಣಿತ ಬಿಡ್ಡಿಂಗ್ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ.

ಕರಾವಳಿ ಆಚೆಗಿನ (ಆಫ್‌ಶೋರ್) ಪವನ ಶಕ್ತಿ ಯೋಜನೆಗಳಿಗಾಗಿ ವೈಯಾಬಿಲಿಟಿ ಗ್ಯಾಪ್ ಫಂಡಿಂಗ್ (VGF) ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಐನೂರು ಕಿಲೋವ್ಯಾಟ್ ಅಥವಾ ಅನುಮೋದಿತ ವಿದ್ಯುತ್ ಲೋಡ್‌ನಲ್ಲಿ ಯಾವುದು ಕಡಿಮೆಯೋ ಅಲ್ಲಿಯವರೆಗೆ ನೆಟ್-ಮೀಟರಿಂಗ್‌ಗಾಗಿ ವಿದ್ಯುತ್ (ಬಳಕೆದಾರರ ಹಕ್ಕುಗಳು) ನಿಯಮಗಳು, 2020 ಅನ್ನು ಹೊರಡಿಸಲಾಗಿದೆ.

"ಪವನ ವಿದ್ಯುತ್ ಯೋಜನೆಗಳಿಗೆ ರಾಷ್ಟ್ರೀಯ ಮರು-ಸಾಮರ್ಥ್ಯಗೊಳಿಸುವಿಕೆ ಮತ್ತು ಜೀವಿತಾವಧಿ ವಿಸ್ತರಣೆ ನೀತಿ, 2023" ಅನ್ನು ಹೊರಡಿಸಲಾಗಿದೆ.

ಆಫ್‌ಶೋರ್ ಪವನ ಶಕ್ತಿ ಯೋಜನೆಗಳ ಅಭಿವೃದ್ಧಿಗಾಗಿ ಆಫ್‌ಶೋರ್ ಪ್ರದೇಶಗಳ ಗುತ್ತಿಗೆ ಮಂಜೂರಾತಿಯನ್ನು ನಿಯಂತ್ರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ 19 ಡಿಸೆಂಬರ್ 2023 ರ ಅಧಿಸೂಚನೆಯ ಮೂಲಕ ಆಫ್‌ಶೋರ್ ಪವನ ಶಕ್ತಿ ಗುತ್ತಿಗೆ ನಿಯಮಗಳು, 2023 ಅನ್ನು ಅಧಿಸೂಚಿಸಲಾಗಿದೆ.

ಪ್ರೊಟೊಟೈಪ್ ಪವನ ಟರ್ಬೈನ್ ಮಾದರಿಗಳ ಸ್ಥಾಪನೆಗಾಗಿ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು 12 ಜೂನ್ 2025 ರಂದು ಹೊರಡಿಸಲಾಗಿದೆ.

ಪವನ ಟರ್ಬೈನ್‌ಗಳು ಮತ್ತು ಪವನ ಟರ್ಬೈನ್ ಬಿಡಿಭಾಗಗಳಿಗೆ ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿಯ (ALMM) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

"ವಿದ್ಯುತ್ (ತಡವಾಗಿ ಪಾವತಿಸುವ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) ನಿಯಮಗಳನ್ನು (LPS ನಿಯಮಗಳು) ಅಧಿಸೂಚಿಸಲಾಗಿದೆ.

ಎಲ್ಲರಿಗೂ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ಹಸಿರು ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ 06 ಜೂನ್ 2022 ರಂದು 'ವಿದ್ಯುತ್ (ಹಸಿರು ಇಂಧನ ಮುಕ್ತ ಪ್ರವೇಶದ ಮೂಲಕ ನವೀಕರಿಸಬಹುದಾದ ಇಂಧನ ಪ್ರಚಾರ) ನಿಯಮಗಳು, 2022' ಅನ್ನು ಅಧಿಸೂಚಿಸಲಾಗಿದೆ. ವಿತರಣಾ ಪರವಾನಗಿದಾರರ ಒಂದೇ ವಿದ್ಯುತ್ ವಿಭಾಗದಲ್ಲಿ ಇರುವ, 100 kW ಅಥವಾ ಅದಕ್ಕಿಂತ ಹೆಚ್ಚಿನ ಕಾಂಟ್ರಾಕ್ಟ್ ಡಿಮ್ಯಾಂಡ್ ಹೊಂದಿರುವ ಯಾವುದೇ ಗ್ರಾಹಕರಿಗೆ ಒಟ್ಟು ನೂರು kW ಅಥವಾ ಅದಕ್ಕಿಂತ ಹೆಚ್ಚಿನ ಏಕ ಅಥವಾ ಬಹು ಸಂಪರ್ಕಗಳ ಮೂಲಕ 'ಗ್ರೀನ್ ಎನರ್ಜಿ ಓಪನ್ ಆಕ್ಸೆಸ್' ಗೆ ಅನುಮತಿಸಲಾಗಿದೆ.

ವಿನಿಮಯ ಕೇಂದ್ರಗಳ ಮೂಲಕ ನವೀಕರಿಸಬಹುದಾದ ಇಂಧನ ವಿದ್ಯುತ್ ಮಾರಾಟವನ್ನು ಸುಗಮಗೊಳಿಸಲು ಗ್ರೀನ್ ಟರ್ಮ್ ಅಹೆಡ್ ಮಾರ್ಕೆಟ್ (GTAM) ಅನ್ನು ಪ್ರಾರಂಭಿಸಲಾಗಿದೆ.

ವಿತರಣಾ ಪರವಾನಗಿದಾರರು ನವೀಕರಿಸಬಹುದಾದ ಇಂಧನ ಉತ್ಪಾದಕರಿಗೆ ಸಮಯೋಚಿತ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಸಾಲದ ಪತ್ರ (LC) ಅಥವಾ ಮುಂಗಡ ಪಾವತಿಯ ವಿರುದ್ಧ ವಿದ್ಯುತ್ ವಿತರಿಸಬೇಕು ಎಂದು ಸರ್ಕಾರ ಆದೇಶಗಳನ್ನು ಹೊರಡಿಸಿದೆ.

ಅನುಬಂಧ-II

30.06.2026 ರಂತೆ ಪವನ ವಿದ್ಯುತ್ ಯೋಜನೆಗಳ ಸ್ಥಾಪಿತ ಸಾಮರ್ಥ್ಯದ ರಾಜ್ಯವಾರು ವಿವರಗಳು

ರಾಜ್ಯ

30.06.2026 ರ ವೇಳೆಗೆ ಪವನ ಸ್ಥಾಪಿತ ಸಾಮರ್ಥ್ಯ (ಮೆಗಾವಾಟ್‌ಗಳಲ್ಲಿ)

ಗುಜರಾತ್

16086

ತಮಿಳುನಾಡು

12273

ಕರ್ನಾಟಕ

8896

ಮಹಾರಾಷ್ಟ್ರ

6318

ರಾಜಸ್ಥಾನ

5516

ಆಂಧ್ರಪ್ರದೇಶ

4461

ಮಧ್ಯಪ್ರದೇಶ

3686

ತೆಲಂಗಾಣ

128

ಕೇರಳ

71

ಇತರರು

4

ಒಟ್ಟು

57443

ಅನುಬಂಧ-III

ಆರ್ಥಿಕ ವರ್ಷ 2025-26 ರಲ್ಲಿ ಪವನ ವಿದ್ಯುತ್ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯ ರಾಜ್ಯವಾರು ವಿವರಗಳು

ರಾಜ್ಯ

ಆರ್ಥಿಕ ವರ್ಷ 2025-26 ರಲ್ಲಿ ಪವನ ವಿದ್ಯುತ್ ಉತ್ಪಾದನೆ (ಮಿಲಿಯನ್ ಯೂನಿಟ್‌ಗಳಲ್ಲಿ - MUs)

ಗುಜರಾತ್

33706

ತಮಿಳುನಾಡು

24200

ಕರ್ನಾಟಕ

18804

ಮಹಾರಾಷ್ಟ್ರ

8610

ರಾಜಸ್ಥಾನ

7345

ಆಂಧ್ರಪ್ರದೇಶ

8902

ಮಧ್ಯಪ್ರದೇಶ

4706

ತೆಲಂಗಾಣ

292

ಕೇರಳ

130

ಒಟ್ಟು

106699

 

ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಅವರು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಮಂಡಿಸಿದ್ದಾರೆ.

 

*****


(रिलीज़ आईडी: 2287791) आगंतुक पटल : 12
इस विज्ञप्ति को इन भाषाओं में पढ़ें: English , Urdu