ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಮೂಲಕ ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಬಲಪಡಿಸಿದ ಸರ್ಕಾರ
ಕಾನೂನುಬಾಹಿರ ಮತ್ತು ಹಾನಿಕಾರಕ ವಿಷಯಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ
ವೇಗವಾದ ತೆರವು ಗಡುವುಗಳು ಮತ್ತು ಬಲವಾದ ಪರಿಶೀಲನಾ ಕ್ರಮಗಳಿಂದ ಇಂಟರ್ನೆಟ್ ಬಳಕೆದಾರರಿಗೆ ಹೆಚ್ಚಿದ ರಕ್ಷಣೆ
प्रविष्टि तिथि:
22 JUL 2026 3:30PM by PIB Bengaluru
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ತನ್ನ ಎಲ್ಲಾ ಬಳಕೆದಾರರಿಗೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟರ್ನೆಟ್ ಅನ್ನು ಖಚಿತಪಡಿಸುವ ಗುರಿಯನ್ನು ಸರ್ಕಾರದ ನೀತಿಗಳು ಹೊಂದಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ, ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಒಟ್ಟಾಗಿ ಡಿಜಿಟಲ್ ಕ್ಷೇತ್ರದಲ್ಲಿ ಕಾನೂನುಬಾಹಿರ ಮತ್ತು ಹಾನಿಕಾರಕ ವಿಷಯಗಳನ್ನು ನಿರ್ವಹಿಸಲು ಕಟ್ಟುನಿಟ್ಟಿನ ಚೌಕಟ್ಟನ್ನು ಜಾರಿಗೆ ತಂದಿವೆ.
ಸಾಮಾಜಿಕ ಮಾಧ್ಯಮದಲ್ಲಿ CSAM ವಿಷಯಗಳು:
ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳಿಗೆ (CSAM) ಲಿಂಕ್ ಮಾಡಲಾದ ಜಾಹೀರಾತುಗಳ ಪ್ರಸಾರವನ್ನು ಆರೋಪಿಸುವ ವರದಿಗಳನ್ನು, ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಸಂಬಂಧಪಟ್ಟ ಮಧ್ಯವರ್ತಿಯಿಂದ ವಿವರವಾದ ವರದಿಯನ್ನು ಕೋರಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ("NCPCR") ಸಂಬಂಧಪಟ್ಟ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೋಟಿಸ್ ನೀಡಿದೆ.
ಮಾಹಿತಿ ತಂತ್ರಜ್ಞಾನ (IT) ಕಾಯ್ದೆ, 2000 ("ಐಟಿ ಕಾಯ್ದೆ")
ಐಟಿ ಕಾಯ್ದೆಯು ಗುರುತು ಕಳವು (ಸೆಕ್ಷನ್ 66C), ছದ್ಮವೇಷ/ಆಳುತನದ ದುರುಪಯೋಗ (ಸೆಕ್ಷನ್ 66D), ಗೌಪ್ಯತೆ ಉಲ್ಲಂಘನೆ (ಸೆಕ್ಷನ್ 66E), ಅಶ್ಲೀಲ ಅಥವಾ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು (ಸೆಕ್ಷನ್ 67, 67A, 67B) ನಂತಹ ವಿವಿಧ ಸೈಬರ್ ಅಪರಾಧಗಳಿಗೆ ಶಿಕ್ಷೆಯನ್ನು ಒದಗಿಸುತ್ತದೆ. ಇದು ಅಪರಾಧಗಳನ್ನು ತನಿಖೆ ಮಾಡಲು ಪೊಲೀಸರಿಗೆ ಅಧಿಕಾರ ನೀಡುತ್ತದೆ (ಸೆಕ್ಷನ್ 78 ಮತ್ತು 80).
ಐಟಿ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ("ಐಟಿ ನಿಯಮಗಳು")
ಐಟಿ ನಿಯಮಗಳು, ಮಧ್ಯವರ್ತಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಸೂಕ್ತ ಪರಿಶೀಲನೆ ನಡೆಸಲು ನಿರ್ದಿಷ್ಟ ಬಾಧ್ಯತೆಗಳನ್ನು ವಿಧಿಸುತ್ತವೆ. ಮಕ್ಕಳ ಶೋಷಣೆಗೆ ಕಾರಣವಾಗುವ, ಅಶ್ಲೀಲ, ಪೋರ್ನೋಗ್ರಾಫಿಕ್, ಇನ್ನೊಬ್ಬರ ಗೌಪ್ಯತೆಗೆ ಭಂಗ ತರುವ, ಲಿಂಗದ ಆಧಾರದ ಮೇಲೆ ಅವಮಾನಿಸುವ ಅಥವಾ ಕಿರುಕುಳ ನೀಡುವ ಅಥವಾ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುವ ಯಾವುದೇ ಮಾಹಿತಿಯನ್ನು ಹೋಸ್ಟ್ ಮಾಡದಂತೆ, ಪ್ರದರ್ಶಿಸದಂತೆ, ಅಪ್‌ಲೋಡ್ ಮಾಡದಂತೆ, ಮಾರ್ಪಡಿಸದಂತೆ, ಪ್ರಕಟಿಸದಂತೆ, ರವಾನಿಸದಂತೆ, ನವೀಕರಿಸದಂತೆ ಅಥವಾ ಹಂಚಿಕೊಳ್ಳದಂತೆ ಕಂಪ್ಯೂಟರ್ ಸಂಪನ್ಮೂಲಗಳ ಬಳಕೆದಾರರಿಗೆ ತಿಳಿಸಬೇಕಾಗುತ್ತದೆ.
ವ್ಯಕ್ತಿಯ ಸಂಪೂರ್ಣ / ಭಾಗಶಃ ಬೆತ್ತಲೆ ಚಿತ್ರಗಳು, ಖಾಸಗಿ ಅಂಗಗಳನ್ನು ಪ್ರದರ್ಶಿಸುವ ಮತ್ತು ಕೃತಕವಾಗಿ ಮಾರ್ಫ್ ಮಾಡಿದ ಚಿತ್ರಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯು ಅಥವಾ ಅವರ ಪರವಾಗಿ ಯಾರಾದರೂ ನೀಡಿದ ದೂರನ್ನು ಸ್ವೀಕರಿಸಿದ ಎರಡು ಗಂಟೆಗಳ ಒಳಗೆ, ಮಧ್ಯವರ್ತಿಯು ತಾನು ಹೋಸ್ಟ್ ಮಾಡಿದ, ಸಂಗ್ರಹಿಸಿದ, ಪ್ರಕಟಿಸಿದ ಅಥವಾ ರವಾನಿಸಿದ ಅಂತಹ ವಿಷಯವನ್ನು ತೆಗೆದುಹಾಕಲು ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಎಲ್ಲಾ ಸಮಂಜಸವಾದ ಮತ್ತು ಕಾರ್ಯಸಾಧ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಐಟಿ ನಿಯಮಗಳಿಗೆ ಇತ್ತೀಚಿನ ತಿದ್ದುಪಡಿಗಳು:
ಐಟಿ ನಿಯಮಗಳ ಇತ್ತೀಚಿನ ತಿದ್ದುಪಡಿಗಳ ಪ್ರಕಾರ, ಸೂಕ್ತ ಸರ್ಕಾರ ಅಥವಾ ಅದರ ಏಜೆನ್ಸಿಯ ಸಮರ್ಥನೀಯ ಸೂಚನೆ ಅಥವಾ ಸಕ್ಷಮ ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇತರ ಮಧ್ಯವರ್ತಿಗಳು ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕಾಗುತ್ತದೆ.
ವಿಷಯದ ಉಲ್ಲಂಘನೆಯು, ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧದ ಸೃಷ್ಟಿಗೆ ಕಾರಣವಾಗಿದ್ದರೆ – ಉದಾಹರಣೆಗೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರೊಂದಿಗೆ ಓದಲಾದ ಭಾರತೀಯ ನ್ಯಾಯ ಸಂಹಿತೆ, 2023, ಅಥವಾ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 (POCSO), ಇದು ವರದಿ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ—ಅಂತಹ ಸಂದರ್ಭಗಳಲ್ಲಿ ಮಧ್ಯವರ್ತಿಗಳು ಅನ್ವಯವಾಗುವ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಸೂಕ್ತ ಅಧಿಕಾರಿಗೆ ಅಪರಾಧವನ್ನು ವರದಿ ಮಾಡಬೇಕು.
ಎಐ (AI) ನಿರ್ಮಿತ ವಿಷಯಗಳಿಂದ ಉಂಟಾಗುವ ಹಾನಿಗಳನ್ನು ತಡೆಗಟ್ಟುವುದು:
ಡೀಪ್‌ಫೇಕ್‌ಗಳು ಮತ್ತು ಎಐ-ನಿರ್ಮಿತ ವಿಷಯಗಳು ಸೇರಿದಂತೆ ಸಿಂಥೆಟಿಕ್ ಆಗಿ ರಚಿಸಲಾದ ಮಾಹಿತಿಯಿಂದ (SGI) ಉಂಟಾಗುವ ಹಾನಿಗಳನ್ನು ಪರಿಹರಿಸಲು ಐಟಿ ನಿಯಮಗಳು, 2021 ಅನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರವು ನಿಯಂತ್ರಣ ಚೌಕಟ್ಟನ್ನು ಇನ್ನಷ್ಟು ಬಲಪಡಿಸಿದೆ.
ತಿದ್ದುಪಡಿಗೆ ಸಂಬಂಧಿಸಿದ ಪ್ರಮುಖ ಅಂಶಗಳು ಕೆಳಗಿನಂತಿವೆ:-
- ಅನುಮತಿಸಬಹುದಾದ ಎಐ-ನಿರ್ಮಿತ ವಿಷಯಗಳಿಗೆ ಸ್ಪಷ್ಟ ಲೇಬಲಿಂಗ್ ಮತ್ತು ಟ್ರೇಸ್ ಮಾಡಬಹುದಾದ ಮೆಟಾಡೇಟಾವನ್ನು ಮಧ್ಯವರ್ತಿಗಳು ಖಚಿತಪಡಿಸಿಕೊಳ್ಳಬೇಕಾಗುತ್ತದೆ, ಇದರಿಂದ ಬಳಕೆದಾರರು ಕೃತಕವಾಗಿ ಸೃಷ್ಟಿಸಿದ ವಿಷಯವನ್ನು ಸುಲಭವಾಗಿ ಗುರುತಿಸಬಹುದು ಮತ್ತು ವಂಚನೆ ಅಥವಾ ದುರುಪಯೋಗವನ್ನು ತಡೆಯಬಹುದು.
- ಇದು ಬಳಕೆದಾರರ ಜವಾಬ್ದಾರಿ ಮತ್ತು ಆ ವೇದಿಕೆಯ ಸೂಕ್ತ ಪರಿಶೀಲನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರಲ್ಲಿ ಕಾನೂನುಬಾಹಿರ ಎಐ-ನಿರ್ಮಿತ ವಿಷಯಗಳ ಕಾನೂನು ಪರಿಣಾಮಗಳ ಕುರಿತು ಕಡ್ಡಾಯ ಬಳಕೆದಾರ ಜಾಗೃತಿ ಮತ್ತು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಕಟ್ಟುನಿಟ್ಟಿನ ಅನುಸರಣೆ ಬಾಧ್ಯತೆಗಳು ಸೇರಿವೆ.
- ಪ್ರಮುಖವಾಗಿ, ಈ ಮಾರ್ಗದರ್ಶಿ ಸೂತ್ರಗಳು, ಮಕ್ಕಳ ಲೈಂಗಿಕ ಶೋಷಣೆ ವಿಷಯಗಳು, ಸಮ್ಮತಿಯಿಲ್ಲದ ಆಪ್ತ ಚಿತ್ರಗಳು, ಆಳುತನದ ದುರುಪಯೋಗ (impersonation) ಮತ್ತು ಇತರ ಹಾನಿಕಾರಕ ಎಐ-ನಿರ್ಮಿತ ವಿಷಯಗಳನ್ನು ಸ್ಪಷ್ಟವಾಗಿ ಒಳಗೊಳ್ಳುತ್ತವೆ; ಪ್ಲಾಟ್‌ಫಾರ್ಮ್‌ಗಳು ಅಂತಹ ವಿಷಯಗಳನ್ನು ತಡೆಯಬೇಕು ಮತ್ತು ಪತ್ತೆಯಾದಾಗ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು.
- ಅನುಸರಣೆಗಾಗಿ ಗಡುವುಗಳನ್ನು ಬಲಪಡಿಸುವುದು, ಇದರಲ್ಲಿ ಸೂಕ್ತ ಸರ್ಕಾರ ಅಥವಾ ನ್ಯಾಯಾಲಯದ ಆದೇಶಗಳಿಂದ ಮಾನ್ಯವಾದ ಸಮರ್ಥನೀಯ ಸೂಚನೆ ದೊರೆತಾಗ ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕುವ ಗಡುವನ್ನು ಕಡಿಮೆ ಮಾಡುವುದು (ಗಡುವನ್ನು 36 ಗಂಟೆಗಳಿಂದ 3 ಗಂಟೆಗಳಿಗೆ ಇಳಿಸಲಾಗಿದೆ) ಮತ್ತು ಕುಂದುಕೊರತೆ ನಿವಾರಣೆಗೆ (ಬೆತ್ತಲೆ/ಆಳುತನದ ದುರುಪಯೋಗದಂತಹ ವಿಶೇಷ ವಿಭಾಗಗಳು ಸೇರಿದಂತೆ) (ಸೂಕ್ಷ್ಮ ವಿಷಯಗಳಿಗೆ ಗಡುವನ್ನು ಕ್ರಮವಾಗಿ 72 ಗಂಟೆಗಳಿಂದ 36 ಗಂಟೆಗಳಿಗೆ ಮತ್ತು 24 ಗಂಟೆಗಳಿಂದ 2 ಗಂಟೆಗಳಿಗೆ ಇಳಿಸಲಾಗಿದೆ).
- ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುವ ಯಾವುದೇ ಕೃತಕವಾಗಿ ಸೃಷ್ಟಿಸಿದ ಮಾಹಿತಿಯನ್ನು (SGI) ಯಾವುದೇ ಬಳಕೆದಾರರು ರಚಿಸಲು, ನಿರ್ಮಿಸಲು, ಮಾರ್ಪಡಿಸಲು, ಬದಲಾಯಿಸಲು, ಪ್ರಕಟಿಸಲು, ರವಾನಿಸಲು, ಹಂಚಿಕೊಳ್ಳಲು ಅಥವಾ ಪ್ರಸಾರ ಮಾಡಲು ಅವಕಾಶ ನೀಡದಿರಲು ಸ್ವಯಂಚಾಲಿತ ಪರಿಕರಗಳು ಅಥವಾ ಇತರ ಸೂಕ್ತ ವ್ಯವಸ್ಥೆಗಳು ಸೇರಿದಂತೆ ಸಮಂಜಸವಾದ ಮತ್ತು ಸೂಕ್ತವಾದ ತಾಂತ್ರಿಕ ಕ್ರಮಗಳನ್ನು ನಿಯೋಜಿಸಲು ಮಧ್ಯವರ್ತಿಗಳು ಬದ್ಧರಾಗಿದ್ದಾರೆ.
ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಅತ್ಯಾಚಾರ, ಬಾಲ್ಯ ಲೈಂಗಿಕ ದೌರ್ಜನ್ಯ ಅಥವಾ ನಡವಳಿಕೆಯನ್ನು ಯಾವುದೇ ರೂಪದಲ್ಲಿ ಚಿತ್ರಿಸುವ ಅಥವಾ ಅನುಕರಿಸುವ ಮಾಹಿತಿಯನ್ನು ಅಥವಾ ಈ ಹಿಂದೆ ತೆಗೆದುಹಾಕಲಾದ ಮಾಹಿತಿಗೆ ಸಂಪೂರ್ಣವಾಗಿ ಹೋಲುವ ಮಾಹಿತಿಯನ್ನು ಸಕ್ರಿಯವಾಗಿ ಗುರುತಿಸಲು ಸ್ವಯಂಚಾಲಿತ ಪರಿಕರಗಳು ಅಥವಾ ಇತರ ಸೂಕ್ತ ವ್ಯವಸ್ಥೆಗಳು ಸೇರಿದಂತೆ ಸೂಕ್ತ ತಾಂತ್ರಿಕ ಕ್ರಮಗಳನ್ನು ನಿಯೋಜಿಸಲು ಸಮಂಜಸವಾದ ಪ್ರಯತ್ನಗಳನ್ನು ಮಾಡುವುದನ್ನು ಐಟಿ ನಿಯಮಗಳು ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ (SSMIs) ಕಡ್ಡಾಯಗೊಳಿಸುತ್ತವೆ.
ಪ್ರಮುಖವಾಗಿ ಸಂದೇಶ ಕಳುಹಿಸುವ ಸ್ವರೂಪದಲ್ಲಿ, ಸೇವೆಗಳನ್ನು ಒದಗಿಸುವ ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸೌಹಾರ್ದಯುತ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಅಪರಾಧದ ತಡೆಗಟ್ಟುವಿಕೆ, ಪತ್ತೆ, ತನಿಖೆ, ಅಭಿಯೋಗ ಅಥವಾ ಶಿಕ್ಷೆಗಾಗಿ, ಅಥವಾ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದ ಅಪರಾಧದ ಪ್ರಚೋದನೆಗಾಗಿ ಅಥವಾ ಅತ್ಯಾಚಾರ, ಲೈಂಗಿಕವಾಗಿ ಸ್ಪಷ್ಟವಾದ ವಿಷಯಗಳು ಅಥವಾ ಬಾಲ್ಯ ಲೈಂಗಿಕ ದೌರ್ಜನ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳಿಗೆ ಸಂಬಂಧಿಸಿದಂತೆ ತನ್ನ ಕಂಪ್ಯೂಟರ್ ಸಂಪನ್ಮೂಲದಲ್ಲಿ ಮಾಹಿತಿಯ ಮೂಲ ಸೃಷ್ಟಿಕರ್ತನನ್ನು ಗುರುತಿಸಲು ಅನುವು ಮಾಡಿಕೊಡಬೇಕು.
ಐಟಿ ನಿಯಮಗಳಲ್ಲಿ ಒದಗಿಸಲಾದ ಕಾನೂನುಬದ್ಧ ಬಾಧ್ಯತೆಗಳನ್ನು ಪಾಲಿಸುವಲ್ಲಿ ಮಧ್ಯವರ್ತಿಗಳು ವಿಫಲವಾದರೆ, ಅವರು ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಒದಗಿಸಲಾದ ಮೂರನೇ ವ್ಯಕ್ತಿಯ ಮಾಹಿತಿಯಿಂದ ವಿಲೇವಾರಿ ವಿನಾಯಿತಿಯನ್ನು ಕಳೆದುಕೊಳ್ಳುತ್ತಾರೆ. ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ಅವರು ಪರಿಣಾಮಕಾರಿ ಕ್ರಮ ಅಥವಾ ಅಭಿಯೋಗಕ್ಕೆ ಭಾಜನರಾಗುತ್ತಾರೆ.
ಸಲಹೆಗಳು ಮತ್ತು ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP):
ಐಟಿ ಕಾಯ್ದೆ ಮತ್ತು ಐಟಿ ನಿಯಮಗಳ ಅಡಿಯಲ್ಲಿ ಸೂಕ್ತ ಪರಿಶೀಲನಾ ಬಾಧ್ಯತೆಗಳನ್ನು ಪಾಲಿಸುವುದನ್ನು ಒತ್ತುಪಡಿಸಿ ಸರ್ಕಾರವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಸೇರಿದಂತೆ ಮಧ್ಯವರ್ತಿಗಳಿಗೆ ಕಟ್ಟುನಿಟ್ಟಿನ ಹಲವು ಸಲಹೆಗಳನ್ನು ನೀಡಿದೆ. ಹೊರಡಿಸಲಾದ ಸಲಹೆಗಳು ಮತ್ತು ರೂಪಿಸಲಾದ 'ಎಸ್‌ಒಪಿ'ಗಳ (SOP) ವಿವರಗಳು ಕೆಳಗಿನಂತಿವೆ:
- ದಿನಾಂಕ 29.12.2025 ರ ಸಲಹೆಯ ಮೂಲಕ, ಮಧ್ಯವರ್ತಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಅಭದ್ರ, ಪೋರ್ನೋಗ್ರಾಫಿಕ್ ಮತ್ತು ಇತರ ಕಾನೂನುಬಾಹಿರ ವಿಷಯಗಳನ್ನು ಹೋಸ್ಟ್ ಮಾಡುವುದು, ಪ್ರಕಟಿಸುವುದು, ರವಾನಿಸುವುದು, ಹಂಚಿಕೊಳ್ಳುವುದು ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಯಲು ಐಟಿ ಕಾಯ್ದೆ ಮತ್ತು ಐಟಿ ನಿಯಮಗಳ ಅಡಿಯಲ್ಲಿ ಶಾಸನಬದ್ಧ ಸೂಕ್ತ ಪರಿಶೀಲನಾ ಬಾಧ್ಯತೆಗಳನ್ನು ಪಾಲಿಸುವಂತೆ ಸರ್ಕಾರವು ಪುನರುಚ್ಚರಿಸಿದೆ. ತಮ್ಮ ಆಂತರಿಕ ಅನುಸರಣಾ ಚೌಕಟ್ಟುಗಳು, ವಿಷಯ ಮಾಡರೇಶನ್ ಪದ್ಧತಿಗಳು ಮತ್ತು ಬಳಕೆದಾರರ ಜಾರಿ ವ್ಯವಸ್ಥೆಗಳ ತಕ್ಷಣದ ವಿಮರ್ಶೆಯನ್ನು ಕೈಗೊಳ್ಳಲು ಮತ್ತು ಐಟಿ ಕಾಯ್ದೆ ಹಾಗೂ ಐಟಿ ನಿಯಮಗಳ ನಿಬಂಧನೆಗಳಿಗೆ ಕಟ್ಟುನಿಟ್ಟಾದ ಮತ್ತು ನಿರಂತರ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯವರ್ತಿಗಳಿಗೆ ಸಲಹೆ ನೀಡಲಾಗಿದೆ.
- ನಿಂದನೀಯ, ನಿಂದನಾತ್ಮಕ, ಆಕ್ಷೇಪಾರ್ಹ, ನಿಕೃಷ್ಟ ಮತ್ತು ದಾರಿತಪ್ಪಿಸುವ ಕೃತಕವಾಗಿ ಸೃಷ್ಟಿಸಿದ ಮಾಹಿತಿಯ (SGI) ಉತ್ಪಾದನೆ, ಹೋಸ್ಟಿಂಗ್, ಪ್ರಕಟಣೆ, ರವಾನೆ, ಹಂಚಿಕೆ ಅಥವಾ ಅಪ್‌ಲೋಡ್ ಮಾಡುವಿಕೆಗೆ ಸಂಬಂಧಿಸಿದಂತೆ ಮಧ್ಯವರ್ತಿಗಳಿಗೆ 16.03.2026 ರಂದು ಸಲಹೆಯನ್ನು ಹೊರಡಿಸಲಾಗಿದೆ.
- ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಮ್ಮತಿಯಿಲ್ಲದ ಆಪ್ತ ಚಿತ್ರಗಳ (NCII) ವಿಷಯಗಳ ಪ್ರಸಾರವನ್ನು ತಡೆಯಲು 'ಪ್ರಮಾಣಿತ ಕಾರ್ಯಾಚರಣೆ ವಿಧಾನ'ವನ್ನು ("SoP") ರೂಪಿಸಲಾಗಿದ್ದು, ಅದನ್ನು 11.11.2025 ರಂದು ಬಿಡುಗಡೆ ಮಾಡಲಾಗಿದೆ. ಈ 'ಎಸ್‌ಒಪಿ'ಯು ಸಂಮತಿಯಿಲ್ಲದೆ ಹಂಚಿಕೊಳ್ಳಲಾದ ಆಪ್ತ ಅಥವಾ ಮಾರ್ಫ್ ಮಾಡಿದ ಚಿತ್ರಗಳು ಸೇರಿದಂತೆ 'ಎನ್‌ಸಿಐಐ' ವಿಷಯಗಳ ಆನ್‌ಲೈನ್ ಪ್ರಸಾರದ ವಿರುದ್ಧ ತಕ್ಷಣದ ಮತ್ತು ಏಕರೂಪದ ಕ್ರಮವನ್ನು ಖಚಿತಪಡಿಸಿಕೊಳ್ಳಲು ಸಂತ್ರಸ್ತರು, ಮಧ್ಯವರ್ತಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ವಿವರವಾದ ಮಾರ್ಗದರ್ಶನವನ್ನು ನೀಡುತ್ತದೆ.
ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ್ ಅವರು ಇಂದು (22.07.2026) ಲೋಕಸಭೆಯಲ್ಲಿ ಈ ಮಾಹಿತಿಯನ್ನು ಮಂಡಿಸಿದ್ದಾರೆ.
*****
(रिलीज़ आईडी: 2287704)
आगंतुक पटल : 21