ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಮಂಗಳೂರು ಮೀನುಗಾರಿಕೆ ಬಂದರು

प्रविष्टि तिथि: 21 JUL 2026 3:09PM by PIB Bengaluru

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ (DoF,GoI), ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳು) ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ) ಅಡಿಯಲ್ಲಿ ಅನುಮೋದಿಸಲಾದ ಯೋಜನೆಗಳ ಜಾರಿಯನ್ನು ಭೌತಿಕ ಸಭೆಗಳು, ವರ್ಚುವಲ್ ಸಭೆಗಳು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವುದು ಮತ್ತು ಯೋಜನೆಯ ಅನುಷ್ಠಾನಕ್ಕಾಗಿ ಮೀಸಲಾದ ಕೇಂದ್ರೀಕೃತ ಡಿಜಿಟಲ್ ವೇದಿಕೆಯ ಮೂಲಕ ಡಿಜಿಟಲ್ ಮೇಲ್ವಿಚಾರಣೆಯ ಮೂಲಕ ನಿಯಮಿತವಾಗಿ ಪರಿಶೀಲಿಸುತ್ತದೆ. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು 2024 ರಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ) ಅಡಿಯಲ್ಲಿ 22.48 ಕೋಟಿ ರೂ. ಕೇಂದ್ರ ಪಾಲನ್ನು ಹೊಂದಿರುವ 37.47 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಮೀನುಗಾರಿಕೆ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು 2023-24 ರಿಂದ 2026-27 ರವರೆಗೆ ಕರ್ನಾಟಕ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿ ಯೋಜನೆಗಳಿಗಾಗಿ 126.01 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದು ಮಂಗಳೂರು ಮೀನುಗಾರಿಕೆ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವ ಯೋಜನೆ ಸೇರಿ ಮೀನುಗಾರಿಕೆ ಬಂದರಿನ ಮೂಲಸೌಕರ್ಯಕ್ಕಾಗಿ ಹಣವನ್ನು ಸಹ ಪರಿಗಣಿಸಲಾಗಿದೆ. ಕರ್ನಾಟಕ ಸರ್ಕಾರವು ಮಂಗಳೂರು ಮೀನುಗಾರಿಕೆ ಬಂದರು ಯೋಜನೆಯಲ್ಲಿ ಶೇ.25ರಷ್ಟು ಭೌತಿಕ ಪ್ರಗತಿ ಮತ್ತು 6.31 ಕೋಟಿ ರೂ. ಖರ್ಚು ಮಾಡಿರುವುದಾಗಿದೆ ವರದಿ ಮಾಡಿದೆ. ಈ ಯೋಜನೆಯನ್ನು 1600 ಮೀನುಗಾರಿಕಾ ಹಡಗುಗಳಿಗೆ ನಿಲುಗಡೆ  ಸೌಲಭ್ಯಗಳನ್ನು ಸುಗಮಗೊಳಿಸಲು ಮತ್ತು ಮೀನುಗಾರಿಕೆ ವಲಯದ ಸುಮಾರು 18000 ಮೀನುಗಾರರು ಮತ್ತು ಸಂಬಂಧಿತ ಪಾಲುದಾರರಿಗೆ ಪ್ರಯೋಜನ ಒದಗಿಸಲು ಉದ್ದೇಶಿಸಲಾಗಿತ್ತು. ಮಂಗಳೂರು ಮೀನುಗಾರಿಕೆ ಬಂದರು ಯೋಜನೆಯ ಆಧುನೀಕರಣ ಮತ್ತು ಉನ್ನತೀಕರಣದ ಯೋಜನೆಯಲ್ಲಿ ಬಾಕಿ ಉಳಿದಿರುವ ಘಟಕಗಳನ್ನು 2027ರ ಮೇ 21 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ವರದಿ ಮಾಡಿದೆ.

ಪಿಎಂಎಂಎಸ್ ವೈ ಅಡಿಯಲ್ಲಿ, ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು 2020-21 ರಿಂದ 2026-2027 ರವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 1,053.60 ಕೋಟಿ ರೂ. ವೆಚ್ಚದಲ್ಲಿ ವಿವಿಧ ಮೀನುಗಾರಿಕೆ ಅಭಿವೃದ್ಧಿ ಯೋಜನೆಗಳನ್ನು ಅನುಮೋದಿಸಿದ್ದು, ಅವುಗಳು ವಿವಿಧ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಪಿಎಂಎಂಎಸ್ ವೈ ಅಡಿಯಲ್ಲಿ, ಫಲಾನುಭವಿಗಳ ಆಯ್ಕೆಯನ್ನು ಆಯಾ ರಾಜ್ಯ ಸರ್ಕಾರವು ನಡೆಸುತ್ತದೆ. ಅದರಂತೆ, ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿ 212 ಫಲಾನುಭವಿಗಳನ್ನು ಆಳ ಸಮುದ್ರದ ಮೀನುಗಾರಿಕೆ ಹಡಗುಗಳು, ಐಸ್ ಪ್ಲಾಂಟ್‌ಗಳು, ಕೋಲ್ಡ್ ಸ್ಟೋರೇಜ್‌ಗಳು, ರೆಫ್ರಿಜರೇಟೆಡ್ ವಾಹನಗಳು, ಇನ್ಸುಲೇಟೆಡ್ ವಾಹನಗಳು, ಐಸ್ ಬಾಕ್ಸ್‌ಗಳನ್ನು ಹೊಂದಿರುವ ತ್ರಿಚಕ್ರ ವಾಹನಗಳು ಮತ್ತು ಐಸ್ ಬಾಕ್ಸ್‌ಗಳನ್ನು ಹೊಂದಿರುವ ಮೋಟಾರ್‌ಸೈಕಲ್‌ಗಳು ಸೇರಿದಂತೆ ಫಲಾನುಭವಿ-ಆಧಾರಿತ ಚಟುವಟಿಕೆಗಳ ಅಡಿಯಲ್ಲಿ ಒಳಗೊಳ್ಳಲಾಗಿದೆ ಎಂದು ಕರ್ನಾಟಕ ಸರ್ಕಾರ ವರದಿ ಮಾಡಿದೆ.

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ ಪಿಎಂಎಂಎಸ್ ವೈ ಯೋಜನೆಯಡಿಯಲ್ಲಿ, ಬಂದರುಗಳು ಮತ್ತು ಮೀನು ಇಳಿಯುವ ಕೇಂದ್ರಗಳ ಅಭಿವೃದ್ಧಿ ಮತ್ತು ಆಧುನೀಕರಣ, ಕೋಲ್ಡ್ ಚೈನ್ ಮೂಲಸೌಕರ್ಯ, ಆರೋಗ್ಯಕರ ಮೀನು ನಿರ್ವಹಣಾ ಸೌಲಭ್ಯಗಳು, ಮೀನು ಸಾಗಣೆ ಮತ್ತು ಮಾರುಕಟ್ಟೆ ಮೂಲಸೌಕರ್ಯ, ಗುಣಮಟ್ಟದ ಮೀನು ಬೀಜ ಉತ್ಪಾದನೆ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ ಐಡಿಇ) ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೂಲಕ ಸಾಂಸ್ಥಿಕ ಸಾಲದ ಲಭ್ಯತೆ, ಜಲಚರ ಪ್ರಾಣಿಗಳ ಆರೋಗ್ಯ ಮತ್ತು ಜೈವಿಕ ಸುರಕ್ಷತೆಯನ್ನು ಬಲಪಡಿಸುವುದು, ಕ್ರಮಗಳು, ವಿಮಾ ರಕ್ಷಣೆಯ ಪ್ರಚಾರ ಮತ್ತು ಮೀನುಗಾರರ ಸಾಮರ್ಥ್ಯ ವೃದ್ಧಿ ಸೇರಿದಂತೆ ಮೀನುಗಾರಿಕೆ ವಲಯದ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ಅಗತ್ಯಗಳನ್ನು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

 

*****


(रिलीज़ आईडी: 2287098) आगंतुक पटल : 20
इस विज्ञप्ति को इन भाषाओं में पढ़ें: English , Urdu , हिन्दी , Tamil