ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಿ ಎಂ ಎಫ್ ಎಂ ಇ ಯೋಜನೆಯು ಹೇಗೆ ಉದ್ಯಮಗಳನ್ನು ಸಾಂಸ್ಥೀಕರಣಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೇಗೆ ಬಲಪಡಿಸುತ್ತಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಕೇಂದ್ರ ಸಚಿವರ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 21 JUL 2026 3:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.

ಭಾರತದ ಸಣ್ಣ ಆಹಾರ ಸಂಸ್ಕರಣಾ ವಲಯವು ತಳಮಟ್ಟದ ಹೇಗೆ ಉದ್ಯಮಶೀಲತೆಯನ್ನು, ವಿಶೇಷವಾಗಿ ಮಹಿಳೆಯರನ್ನು ಬಲವರ್ಧನೆಗೊಳಿಸುತ್ತಿದೆ ಎಂಬುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ. ಪಿ ಎಂ ಎಫ್ ಎಂ ಇ ಯೋಜನೆಯು ಕೈಗೆಟುಕುವ ಹಣಕಾಸು, ತಂತ್ರಜ್ಞಾನ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ಉದ್ಯಮಗಳನ್ನು ಹೇಗೆ ಸಾಂಸ್ಥೀಕರಣಗೊಳಿಸುತ್ತಿದೆ, ಸ್ಥಳೀಯ ಉತ್ಪಾದಕರು ಉದ್ಯೋಗ ಸೃಷ್ಟಿಕರ್ತರಾಗಲು, ಗ್ರಾಮೀಣ ಆರ್ಥಿಕತೆಗಳನ್ನು ಬಲವರ್ಧನೆಗೊಳಿಸಲು ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಹೇಗೆ ಅನುವು ಮಾಡಿಕೊಡುತ್ತಿದೆ ಎಂಬುದನ್ನು ಲೇಖನವು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ :

“ಭಾರತದ ಸಣ್ಣ ಆಹಾರ ಸಂಸ್ಕರಣಾ ವಲಯವು ತಳಮಟ್ಟದ ಉದ್ಯಮಶೀಲತೆಯನ್ನು ವಿಶೇಷವಾಗಿ ಮಹಿಳೆಯರನ್ನು ಬಲವರ್ಧನೆಗೊಳಿಸುತ್ತಿದೆ. ಪಿಎಂಎಫ್ ಎಂಇ ಯೋಜನೆಯು ಕೈಗೆಟುಕುವ ಹಣಕಾಸು, ತಂತ್ರಜ್ಞಾನ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ಉದ್ಯಮಗಳನ್ನು ಹೇಗೆ ಸಾಂಸ್ಥೀಕರಣಗೊಳಿಸುತ್ತಿದೆ ಎಂಬುದನ್ನು ಕೇಂದ್ರ ಸಚಿವರಾದ ಶ್ರೀ @iChiragPaswan ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಇದು ಸ್ಥಳೀಯ ಉತ್ಪಾದಕರು ಉದ್ಯೋಗ ಸೃಷ್ಟಿಕರ್ತರಾಗಲು, ಗ್ರಾಮೀಣ ಆರ್ಥಿಕತೆಗಳನ್ನು ಬಲಪಡಿಸಲು ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.’’

 

*****


(रिलीज़ आईडी: 2287028) आगंतुक पटल : 17
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Bengali , Bengali-TR , Gujarati , Tamil , Malayalam