ಸಂವಹನ ಸಚಿವಾಲಯ
azadi ka amrit mahotsav

ಟ್ರಾಯ್ ನಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೊಬೈಲ್ ನೆಟ್‌ವರ್ಕ್ ಗುಣಮಟ್ಟ ಮೌಲ್ಯಮಾಪನ

प्रविष्टि तिथि: 16 JUL 2026 2:15PM by PIB Bengaluru

ಸಾಮಾನ್ಯ ದೂರಸಂಪರ್ಕ ಗ್ರಾಹಕರ ಮಾಹಿತಿಗಾಗಿ 2026ರ ಮೇ ತಿಂಗಳಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪರವಾನಗಿ ಸೇವಾ ಪ್ರದೇಶ (ಎಲ್ ಎಸ್ ಎ)ದಲ್ಲಿ ನಡೆಸಿದ ಸ್ವತಂತ್ರ ಡ್ರೈವ್ ಟೆಸ್ಟ್ (ಐಡಿಟಿ) ಯ ಮೌಲ್ಯಮಾಪನದ ಅಂಶಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿದೆ. ಟೆಲಿಕಾಂ ಸೇವಾ ಪೂರೈಕೆದಾರರು (TSPs) ಒದಗಿಸಿದ ಮೊಬೈಲ್ ನೆಟ್‌ವರ್ಕ್ ಸೇವೆಗಳ (ಧ್ವನಿ ಮತ್ತು ಡೇಟಾ ಎರಡೂ) ನೈಜ ಸಮಯದ ಗುಣಮಟ್ಟವನ್ನು ನಿರ್ಣಯಿಸುವುದು ಮತ್ತು ಪರಿಶೀಲಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ. ಐಡಿಟಿ ಸಮಯದಲ್ಲಿ, ಕವರೇಜ್, ಕಾಲ್ ಡ್ರಾಪ್ ದರ (ಸಿಡಿಆರ್), ಕಾಲ್ ಸೆಟಪ್ ಯಶಸ್ಸಿನ ದರ (ಸಿಎಸ್ ಎಸ್ ಆರ್), ಡೇಟಾ ಡೌನ್‌ಲೋಡ್ (ಡಿಎಲ್ ) ಮತ್ತು ಅಪ್‌ಲೋಡ್ (ಯುಎಲ್) ಥ್ರೋಪುಟ್ ಮುಂತಾದ ಪ್ರಮುಖ ಗುಣಮಟ್ಟದ ಸೇವಾ (QoS) ನಿಯತಾಂಕಗಳಿಗಾಗಿ ಟಿಎಸ್ ಪಿ ಗಳ ಕಾರ್ಯಕ್ಷಮತೆಯನ್ನು ಟ್ರಾಯ್  ಸೆರೆಹಿಡಿಯುತ್ತದೆ, ನಂತರ ಅವುಗಳನ್ನು ಗ್ರಾಹಕರಿಗೆ ತಿಳಿಸಲು ಮತ್ತು ಟಿಎಸ್ ಪಿಗಳು ತಮ್ಮ ಸೇವೆಗಳನ್ನು ಸುಧಾರಿಸುವಂತೆ ಪ್ರೋತ್ಸಾಹಿಸಲು ಆ ಮಾಹಿತಿಗಳನ್ನು ಪ್ರಕಟಿಸಲಾಗುವುದು.

ನಗರಗಳು, ಹಾಟ್‌ಸ್ಪಾಟ್‌ಗಳು, ಸಾರ್ವಜನಿಕ ಸಾರಿಗೆ ಕೇಂದ್ರಗಳು ಮುಂತಾದ ವೈವಿಧ್ಯಮಯ ಬಳಕೆಯ ಪರಿಸರದಲ್ಲಿ ಎಲ್ಲಾ ಟಿಎಸ್‌ಪಿಗಳ ಭೂಮಿಯ ಮೇಲಿನ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆ ಸೆರೆಹಿಡಿಯಲು ಈ ಐಡಿಟಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ರೀತಿಯ ಡ್ರೈವ್ ಪರೀಕ್ಷೆಯಲ್ಲಿ, 2 ಜಿ, 3 ಜಿ, 4 ಜಿ ಮತ್ತು 5 ಜಿ ನೆಟ್‌ವರ್ಕ್‌ಗಳ ಮೂಲಕ ಎಲ್ಲಾ ಟಿಎಸ್‌ಪಿಗಳಿಂದ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಲೈವ್ ಡೇಟಾ ಮತ್ತು ಧ್ವನಿ ಸೆಷನ್‌ಗಳನ್ನು ಸ್ಥಾಪಿಸಲಾಗುತ್ತದೆ. ಬಹು ಸುಧಾರಿತ ಪರೀಕ್ಷಾ ಹ್ಯಾಂಡ್‌ಸೆಟ್‌ಗಳನ್ನು ಬಳಸಲಾಗುತ್ತದೆ ಮತ್ತು ಸುಧಾರಿತ ಸಾಫ್ಟ್‌ವೇರ್ ವ್ಯವಸ್ಥೆಗಳನ್ನು ಬಳಸಿಕೊಂಡು ಸೆಷನ್‌ಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ.

ಟ್ರಾಯ್  ತನ್ನ ನಿಯೋಜಿತ ಏಜೆನ್ಸಿಯ ಮೂಲಕ, ಕಾರವಾರ ನಗರ ಮತ್ತು ಹತ್ತಿರದ ಪ್ರದೇಶಗಳಲ್ಲಿ 2026ರ ಮೇ 18 ರಿಂದ ಮೇ 21 ರವರೆಗೆ ಕರ್ನಾಟಕದ ಎಲ್‌ಎಸ್‌ಎಯಲ್ಲಿ ಸಿಟಿ ಡ್ರೈವ್ - 440.5 ಕಿಮೀ, ಹಾಟ್‌ಸ್ಪಾಟ್ ಸ್ಥಳಗಳು - 12, ವಾಕ್ ಟೆಸ್ಟ್ - 8.7 ಕಿಮೀ, ರೈಲ್ವೆ - 761.0 ಕಿಮೀಗಳಲ್ಲಿ ಡ್ರೈವ್ ಪರೀಕ್ಷೆಗಳನ್ನು ನಡೆಸಿತು. ಈ ಪರೀಕ್ಷೆಗಳನ್ನು ಬೆಂಗಳೂರಿನ ಟ್ರಾಯ್  ಪ್ರಾದೇಶಿಕ ಕಚೇರಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. ಡ್ರೈವ್ ಪರೀಕ್ಷಾ ವರದಿಗಳಲ್ಲಿ ಪ್ರಸ್ತುತಪಡಿಸಲಾದ ಅವಲೋಕನಗಳು ಡ್ರೈವ್ ಪರೀಕ್ಷೆಯನ್ನು ನಡೆಸುವ ದಿನ/ಸಮಯದಲ್ಲಿ ಪರೀಕ್ಷೆಯಲ್ಲಿರುವ ಪ್ರದೇಶ/ಮಾರ್ಗದಲ್ಲಿ ಟಿಎಸ್‌ಪಿಗಳ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುತ್ತವೆ.

ಡ್ರೈವ್ ಟೆಸ್ಟ್ ಮಾರ್ಗದ ನಕ್ಷೆ: ನಕ್ಷೆಯಲ್ಲಿ ತೋರಿಸಿರುವ ಪ್ರಕಾರ, ಸಿಟಿ ಡ್ರೈವ್, ಇಂಟರ್-ಆಪರೇಟರ್ ಕರೆ, ಹಾಟ್‌ಸ್ಪಾಟ್‌ಗಳು ಮತ್ತು ವಾಕ್ ಪರೀಕ್ಷೆಗಳನ್ನು ಸೂಚಿಸುವ ಡ್ರೈವ್ ಪರೀಕ್ಷಾ ಮಾರ್ಗಗಳ ಅವಲೋಕನವನ್ನು ಈ ಕೆಳಗಿನ ನಕ್ಷೆಯು ಒದಗಿಸುತ್ತದೆ:-

ಮೌಲ್ಯಮಾಪದನ ಪ್ರಮುಖ ಮಾನದಂಡಗಳು:

ಎ. ಕವರೇಜ್ ಗ್ಯಾಪ್ : ಸಂಬಂಧಿತ ತಂತ್ರಜ್ಞಾನಕ್ಕೆ (2G/ 3G/ 4G/ 5G) ಕನಿಷ್ಠ ನಿಗದಿತ ಸಿಗ್ನಲ್ ಸಾಮರ್ಥ್ಯಕ್ಕಿಂತ ಕಡಿಮೆ ಸಿಗ್ನಲ್ ಸಾಮರ್ಥ್ಯ ಹೊಂದಿರುವ ಮಾದರಿಗಳ ಶೇಕಡಾವಾರು.

ಬಿ. ಧ್ವನಿ ಸೇವೆಗಳು: ಕರೆ ಸೆಟಪ್ ಯಶಸ್ಸಿನ ದರ (CSSR), ಡ್ರಾಪ್ ಕಾಲ್ ದರ (DCR), ಕರೆ ಸೆಟಪ್ ಸಮಯ, ಕಾಲ್ ಸೈಲೆನ್ಸ್ ರೇಟ್ , ಮಾತಿನ ಗುಣಮಟ್ಟ (MOS).

ಸಿ. ಕಾಲ್ ಸೈಲೆನ್ಸ್ ಇನ್ ಸ್ಟಾನ್ಸ್ : ಕರೆಗಳ ಸಮಯದಲ್ಲಿ ಸಂಭವಿಸಿದ ಸೈಲೆನ್ಸ್ ಇನ್ ಸ್ಟಾನ್ಸ್ ನಿದರ್ಶನಗಳ ಸಂಖ್ಯೆ.

ಡಿ. ಡೇಟಾ ಸೇವೆಗಳು: ಡೌನ್‌ಲೋಡ್/ಅಪ್‌ಲೋಡ್ ಥ್ರೋಪುಟ್, ಲೇಟೆನ್ಸಿ, ಜಿಟರ್, ಪ್ಯಾಕೆಟ್ ಡ್ರಾಪ್ ದರ

ಪ್ರಮುಖ ನಿಯತಾಂಕಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟಾರೆ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಕೆಳಗೆ ಸಂಕ್ಷೇಪಿಸಲಾಗಿದೆ

ಎ) ಕವರೇಜ್ ಗ್ಯಾಪ್ - ಆಟೋ-ಸೆಲೆಕ್ಷನ್ ಮೋಡ್‌ನಲ್ಲಿ (5G/4G/3G/2G) ಡ್ರೈವ್ ಟೆಸ್ಟ್ ಮಾರ್ಗದಲ್ಲಿ ಧ್ವನಿ ಪರೀಕ್ಷೆಯ ಸಮಯದಲ್ಲಿ ಕಂಡುಬಂದ ಸಿಗ್ನಲ್ ಸಾಮರ್ಥ್ಯ, ಸಂಗ್ರಹಿಸಿದ ಒಟ್ಟು ಮಾದರಿಗಳಲ್ಲಿ ಕಳಪೆ ಸಿಗ್ನಲ್ ಸಾಮರ್ಥ್ಯವನ್ನು ಹೊಂದಿರುವ ಮಾದರಿಗಳ ಸಂಖ್ಯೆಯಾಗಿ ಅಳೆಯಲಾಗುತ್ತದೆ, ಏರ್‌ಟೆಲ್‌ಗೆ 5104/34323, BSNL ಗೆ 10378/35480, RJIL ಗೆ 7089/37941 ಮತ್ತು VIL ಗೆ 6626/28580. ಕವರೇಜ್ ಅಂತರಗಳ ವಿವರಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ನೀಡಲಾಗಿದೆ.

ಬಿ) ಡ್ರಾಪ್ಡ್ ಕಾಲ್ಸ್ - ಯಶಸ್ವಿಯಾಗಿ ಸ್ಥಾಪಿಸಲಾದ ಕರೆಗಳ ಸಂಖ್ಯೆಯಲ್ಲಿ ಡ್ರಾಪ್ ಮಾಡಿದ ಕರೆಗಳ ಸಂಖ್ಯೆಯಾಗಿ ಅಳೆಯಲಾದ ಡ್ರಾಪ್ಡ್ ಕರೆಗಳು, ಏರ್‌ಟೆಲ್‌ಗೆ 14/311, BSNL ಗೆ 28/306, RJIL ಗೆ 17/346 ಮತ್ತು VIL ಗೆ 12/260. ಡ್ರಾಪ್ಡ್ ಕರೆ ಸ್ಥಳಗಳ ವಿವರಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ನೀಡಲಾಗಿದೆ.

ಸಿ) ಕಾಲ್ ಸೈಲೆನ್ಸ್ ನಿದರ್ಶನ - ಕರೆ ಸೈಲೆನ್ಸ್ ನಿದರ್ಶನಗಳನ್ನು, ಸ್ಥಾಪಿಸಲಾದ ಒಟ್ಟು ಕರೆಗಳಲ್ಲಿ 3 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಗಮನಿಸಿದ ಒಟ್ಟು ಮೌನ ನಿದರ್ಶನಗಳ ಸಂಖ್ಯೆಯಾಗಿ ಅಳೆಯಲಾಗಿದೆ, ಏರ್‌ಟೆಲ್‌ಗೆ 17/304, BSNL ಗೆ 8/274, RJIL ಗೆ 12/331 ಮತ್ತು VIL ಗೆ 8/230. ಕರೆ ಸೈಲೆನ್ಸ್ ನಿದರ್ಶನ ಸ್ಥಳಗಳ ವಿವರಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ನೀಡಲಾಗಿದೆ

ಡಿ) ಡೇಟಾ ಡೌನ್‌ಲೋಡ್ ಮತ್ತು ಅಪ್‌ಲೋಡ್ ಥ್ರೋಪುಟ್:

i) ಡೇಟಾ ಡೌನ್‌ಲೋಡ್ ಕಾರ್ಯಕ್ಷಮತೆ (ಒಟ್ಟಾರೆ): ಏರ್‌ಟೆಲ್ (5G/4G) ಗೆ ಸರಾಸರಿ ಡೌನ್‌ಲೋಡ್ ವೇಗ 109.02 Mbps, BSNL (4G) ಗೆ 5.73 Mbps, RJIL (5G/4G) ಗೆ 229.12 Mbps ಮತ್ತು VIL (5G/4G/2G) ಗೆ 25.04 Mbps ಎಂದು ಗಮನಿಸಲಾಗಿದೆ. ಡೌನ್‌ಲೋಡ್ ಥ್ರೋಪುಟ್‌ನ ವಿವರವನ್ನು ಲಗತ್ತಿಸಲಾದ ನಕ್ಷೆಯಲ್ಲಿ ನೀಡಲಾಗಿದೆ.

ii) ಡೇಟಾ ಅಪ್‌ಲೋಡ್ ಕಾರ್ಯಕ್ಷಮತೆ (ಒಟ್ಟಾರೆ): ಏರ್‌ಟೆಲ್ (5G/4G) ಗೆ 26.02 Mbps, BSNL (4G) ಗೆ 2.07 Mbps, RJIL (5G/4G) ಗೆ 18.19 Mbps ಮತ್ತು VIL (5G/4G/2G) ಗೆ 10.78 Mbps ಎಂದು ಗಮನಿಸಲಾಗಿದೆ. ಅಪ್‌ಲೋಡ್ ಥ್ರೋಪುಟ್‌ನ ವಿವರವನ್ನು ಲಗತ್ತಿಸಲಾದ ನಕ್ಷೆಯಲ್ಲಿ ನೀಡಲಾಗಿದೆ.

ಡ್ರಾಪ್ ಮಾಡಿದ ಕರೆಗಳ ಸ್ಥಳಗಳು ಮತ್ತು ಕಾಲ್ ಸೈಲೆನ್ಸ್ ನಿದರ್ಶನಗಳನ್ನು ಮ್ಯಾಪ್ ಅನೆಕ್ಸ್‌ನಲ್ಲಿ ಕೆಂಪು ಚುಕ್ಕೆ ಕ್ಲಿಕ್ ಮಾಡುವ ಮೂಲಕ ನೋಡಬಹುದು.

ಐಡಿಟಿ ಸಮಯದಲ್ಲಿ ಒಳಗೊಂಡಿರುವ ಡ್ರೈವ್ ಪರೀಕ್ಷಾ ಮಾರ್ಗ ಮತ್ತು ಪ್ರದೇಶದ ವಿವರಗಳು ಕೆಳಕಂಡಂತಿವೆ:-

ಎ) ನಗರ - ಉತ್ತರ ಕನ್ನಡ ಜಿಲ್ಲೆಯ ಶಿರವಾಡ, ಕೋಡಿಬಾಗ, ಹಟ್ಟಿಕೇರಿ, ಅಂಕೋಲಾ, ಮಿರ್ಜಾನ್, ಭಟ್ಕಳ, ಅನಂತವಾಡಿ, ಕಾಸರಕೋಡ, ಕುಮಟಾ, ದೇವಿಮನೆ, ಸಿರಸಿ, ಮಂಚಿಕೆರೆ, ಯಲ್ಲಾಪುರ, ಭಗವತಿ, ಅಂಬಿಕಾನಗರ, ದಾಂಡೇಲಿ, ಬಾಪೇಲಿ, ಗಣೇಶಗುಡಿ ಮತ್ತು ಹಳಿಯಾಳ ಮೊದಲಾದ ಪ್ರದೇಶಗಳು ಸಿಟಿ ಡ್ರೈವ್‌ನಲ್ಲಿ ಒಳಗೊಂಡಿವೆ.

ಬಿ) ರೈಲ್ವೆ ಮಾರ್ಗ - ಬೆಂಗಳೂರಿನಿಂದ ಕಾರವಾರಕ್ಕೆ ಹಾಸನ, ಮಂಗಳೂರು, ಉಡುಪಿ, ಮುರ್ಡೇಶ್ವರ ಮತ್ತು ಅಂಕೋಲಾ ಇತ್ಯಾದಿಗಳ ಮೂಲಕ ಹಾದು ಹೋಗುತ್ತದೆ.

ಸಿ) ಹಾಟ್ ಸ್ಪಾಟ್ - ಬಳಕೆದಾರರ ಅನುಭವವನ್ನು ಸೆರೆಹಿಡಿಯುವ ಹಾಟ್ ಸ್ಪಾಟ್ ಸ್ಥಳಗಳು ಅಂಕೋಲಾ ಬಸ್ ನಿಲ್ದಾಣ, ಭಟ್ಕಳ ಬಸ್ ನಿಲ್ದಾಣ, ದಾಂಡೇಲಿ ಬಸ್ ನಿಲ್ದಾಣ, ಜಿಲ್ಲಾ ಆಸ್ಪತ್ರೆ ಕಾರವಾರ, ಸರ್ಕಾರಿ ಆಸ್ಪತ್ರೆ ದಾಂಡೇಲಿ, ಸರ್ಕಾರಿ ಆಸ್ಪತ್ರೆ ಹಳಿಯಾಳ, ಹಳಿಯಾಳ ಬಸ್ ನಿಲ್ದಾಣ, ಹೊನ್ನಾವರ ಬಸ್ ನಿಲ್ದಾಣ, ಕಾರವಾರ ಬಸ್ ನಿಲ್ದಾಣ, ಕುಮಟಾ ಬಸ್ ನಿಲ್ದಾಣ, ಶಿರಸಿ ಬಸ್ ನಿಲ್ದಾಣ ಮತ್ತು ಯಲ್ಲಾಪುರ ಬಸ್ ನಿಲ್ದಾಣ.

ಡಿ) ವಾಕ್ ಟೆಸ್ಟ್ - 2026 ರ ಮೇ 19 ರಿಂದ 20 ರವರೆಗೆ ನಡೆದ ನಡಿಗೆ ಪರೀಕ್ಷೆಗಳು ಭಟ್ಕಳ ಓಲ್ಡ್ ಟೌನ್ ವಾಕ್‌ವೇ, ಕಾರವಾರ ಬೀಚ್ ಪ್ರೊಮೆನೇಡ್ ಸ್ಟ್ರೆಚ್, ಕುಮಟಾ ಟೌನ್ ಬಜಾರ್ ವಾಕ್, ಮುರ್ಡೇಶ್ವರ ಬೀಚ್ ಮತ್ತು ಟೆಂಪಲ್ ವಾಕ್‌ವೇ ಮತ್ತು ಸಿರ್ಸಿ ಶ್ರೀ ಮಾರಿಕಾಂಬಾ ದೇವಸ್ಥಾನ ಇತ್ಯಾದಿಗಳನ್ನು ಒಳಗೊಂಡಿವೆ.

ಈ ಐಡಿಟಿ ವರದಿಯ ಸಂಶೋಧನೆಗಳನ್ನು ಆಯಾ ಟಿಎಸ್‌ಪಿಗಳೊಂದಿಗೆ ಅವರ ಕಡೆಯಿಂದ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಹಂಚಿಕೊಳ್ಳಲಾಗಿದೆ. ಐಡಿಟಿಯ ವಿವರವಾದ ವರದಿಗಳನ್ನು www.trai.gov.in ನಲ್ಲಿ TRAI ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚುವರಿ ಮಾಹಿತಿಗಾಗಿ, adv.bengaluru@trai.gov.in ಗೆ ಇಮೇಲ್ ಕಳುಹಿಸಬಹುದು ಅಥವಾ ಬೆಂಗಳೂರು ಆರ್‌ಒದಲ್ಲಿರುವ ಟ್ರಾಯ್ ಪ್ರಾದೇಶಿಕ ಕಚೇರಿಯನ್ನು ದೂರವಾಣಿ ಸಂಖ್ಯೆ +91-80-22865004 ನಲ್ಲಿ ಸಂಪರ್ಕಿಸಬಹುದು.

Click here for annexure

 

*****


(रिलीज़ आईडी: 2285361) आगंतुक पटल : 16
इस विज्ञप्ति को इन भाषाओं में पढ़ें: English , Urdu , हिन्दी