ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ವರುಣಾ ನದಿ ದಂಡೆ ಮತ್ತು ಅದರ ಇಳಿಜಾರು/ಲೂಪ್‌ಗಳು ಸೇರಿ ಉತ್ತರ ಪ್ರದೇಶದಲ್ಲಿ 6/4 ಪಥದ ಎತ್ತರದ ಕಾರಿಡಾರ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.

प्रविष्टि तिथि: 15 JUL 2026 3:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆ ನಿವಾರಿಸಲು ವರುಣಾ ನದಿಯ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ-31 ಮತ್ತು ವಾರಣಾಸಿ ರಿಂಗ್ ರಸ್ತೆಯನ್ನು ಸಂಪರ್ಕಿಸುವ 43.218 ಕಿ.ಮೀ. ಲಿಂಕ್/ಕನೆಕ್ಟರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಮುಖ್ಯ ಸರಕು ಸಾಗಾಣೆ ಮಾರ್ಗ (ಕ್ಯಾರೇಜ್‌ವೇ), ಮೇಲು ಸೇತುವೆಗಳು,  ಲೂಪ್‌ಗಳು, ರ‍್ಯಾಂಪ್‌ಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಂತೆ 6/4 ಪಥದ ಪ್ರಧಾನವಾಗಿ ಎತ್ತರದ ಕಾರಿಡಾರ್ ಅನ್ನು ಒಳಗೊಂಡಿದೆ ಮತ್ತು ಇದನ್ನು ಹೈಬ್ರಿಡ್ ಅನ್ಯುಟಿ ಮಾದರಿ (ಎಚ್ ಎಎಂ) ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಒಟ್ಟು ಬಂಡವಾಳ ವೆಚ್ಚ 10,998.32 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳ ವೆಚ್ಚ 4,565.33 ಕೋಟಿ ರೂ. ಮತ್ತು ಭೂ ಸ್ವಾಧೀನ ವೆಚ್ಚ ರೂ.934.91 ಕೋಟಿ ರೂ. ಸೇರಿದೆ.

ಈ ಕಾರಿಡಾರ್ ವಾರಣಾಸಿಯನ್ನು ವಾಹನದಟ್ಟಣೆ ಮುಕ್ತ ಮಾಡುವ ಯೋಜನೆಯ ಪ್ರಮುಖ ಅಂಶವಾಗಿದೆ ಮತ್ತು ರಾಷ್ಟ್ರೀಯ ಹೆದ್ದಾರಿ-31 ಮತ್ತು ಕಾಶಿ ರೈಲು ನಿಲ್ದಾಣದ ನಡುವೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ, ಜೊತೆಗೆ ವಾರಣಾಸಿ ರಿಂಗ್ ರಸ್ತೆ, ವಾರಣಾಸಿ ವಿಮಾನ ನಿಲ್ದಾಣ, ಕಾಶಿ ರೈಲು ನಿಲ್ದಾಣ, ವಾರಣಾಸಿ ನಗರ ರೈಲು ನಿಲ್ದಾಣ, ವಾರಣಾಸಿ ಜಂಕ್ಷನ್, ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ರಾಮ್ ನಗರ್  ಬಂದರು, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿಯ ಘಾಟ್‌ಗಳು ಮತ್ತು ಪಕ್ಕದ ಚಂದೌಲಿ ಪ್ರದೇಶಕ್ಕೆ ಸುಲಭ ಪ್ರವೇಶವನ್ನು ಒದಗಿಸಲಿದೆ.  

ಗಂಟೆಗೆ 80–100 ಕಿಮೀ ಕಾರ್ಯಾಚರಣೆಯ ವೇಗಕ್ಕಾಗಿ ವಿನ್ಯಾಸಗೊಳಿಸಲಾದ ಈ ಯೋಜನೆಯು NH-31 ಮತ್ತು ಕಾಶಿ ರೈಲು ನಿಲ್ದಾಣದ ನಡುವಿನ ಪ್ರಯಾಣದ ಸಮಯವನ್ನು ಸರಿಸುಮಾರು 40 ನಿಮಿಷಗಳಿಂದ 20 ನಿಮಿಷಗಳವರೆಗೆ ತಗ್ಗಿಸುತ್ತದೆ, ಇದರಿಂದ ಸುಮಾರು ಶೇ.50ರಷ್ಟು ಸಮಯ ಕಡಿತವಾಗುತ್ತದೆ. ಇದು ನಗರದ ರಸ್ತೆ ಜಾಲವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ, ರಸ್ತೆ ಸುರಕ್ಷತೆ ಸುಧಾರಿಸುತ್ತದೆ, ವಾಹನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರು ಮತ್ತು ಸರಕು ಸಾಗಣೆಯ ವೇಗವಾದ, ಅಡೆತಡೆಯಿಲ್ಲದ ಚಲನೆಯನ್ನು ಸುಗಮಗೊಳಿಸುತ್ತದೆ.

ಈ ಯೋಜನೆಯು ಒಂದು ಆರ್ಥಿಕ ವಲಯ (ಚಂದೌಲಿ ಸಾಮಾಜಿಕ ಆರ್ಥಿಕ ವಲಯ), ಒಂದು ಸಾಮಾಜಿಕ ವಲಯ(ಚಂದೌಲಿ) ಮತ್ತು ಆರು ಪ್ರಮುಖ ಲಾಜಿಸ್ಟಿಕ್ಸ್ ವಲಯಗಳಿಗೆ ಪ್ರವೇಶ ಸುಧಾರಿಸುವ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಬಲವರ್ಧನೆಗೊಳಿಸುತ್ತದೆ. ಇದರಿಂದಾಗಿ ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಬಹುಮಾದರಿ ಸಂಯೋಜನೆಯನ್ನು ಹೆಚ್ಚಿಸುತ್ತದೆ. ಇದು ಕೃಷಿ ಉತ್ಪನ್ನಗಳು, ಕೈಗಾರಿಕಾ ಸರಕುಗಳು, ನಿರ್ಮಾಣ ಸಾಮಗ್ರಿಗಳು ಮತ್ತು ಖನಿಜಗಳ ಪರಿಣಾಮಕಾರಿ ಸಾಗಣೆ ಸುಗಮಗೊಳಿಸುತ್ತದೆ, ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪೂರ್ವ ಉತ್ತರ ಪ್ರದೇಶದಾದ್ಯಂತ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಒಟ್ಟಾರೆ, ಯೋಜನೆಯು ಸಂಪರ್ಕವನ್ನು ಹೆಚ್ಚಿಸುವ, ಬಹುಮಾದರಿ ಸಾರಿಗೆ ಏಕೀಕರಣವನ್ನು ಬಲಪಡಿಸುವ, ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಮತ್ತು ವಾರಣಾಸಿಗೆ ಭೇಟಿ ನೀಡುವ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಜೀವನದ ಗುಣಮಟ್ಟವನ್ನು ಸುಧಾರಿಸುವ ಆಧುನಿಕ, ಸುಲಭ ಅನಿಯಂತ್ರಿತ ನಗರ ಸಾರಿಗೆ ಕಾರಿಡಾರ್  ಸೃಷ್ಟಿಸುತ್ತದೆ.

ಕಾರಿಡಾರ್ ನಕ್ಷೆ:

 

*****


(रिलीज़ आईडी: 2285167) आगंतुक पटल : 4
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Tamil