ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಇಂಧನ ಅಂಕಿ-ಅಂಶಗಳ ಕುರಿತ ತಜ್ಞರ ಸಮಿತಿಯ ವರದಿ ಬಿಡುಗಡೆ ಬಗ್ಗೆ ಪತ್ರಿಕಾ ಪ್ರಕಟಣೆ
प्रविष्टि तिथि:
06 JUL 2026 2:34PM by PIB Bengaluru
- ಇಂಧನ ಸಚಿವಾಲಯಗಳೊಂದಿಗೆ ಸಮಾಲೋಚನೆಯೊಂದಿಗೆ ಇಂಧನ ಅಂಕಿ-ಅಂಶಗಳ ದತ್ತಾಂಶವನ್ನು ಸಮನ್ವಯಗೊಳಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ ಅಂಕಿ-ಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ(ಎಂ.ಒ.ಎಸ್.ಪಿ.ಐ.)
- ಇಂಧನ ಅಂಕಿ-ಅಂಶಗಳ ತಜ್ಞರ ಸಮಿತಿಯು ಮಾಡಿದ ಪ್ರಮುಖ ಶಿಫಾರಸುಗಳು ಜೈವಿಕ ಇಂಧನಗಳ ಕೊಡುಗೆಯ ಕಾರ್ಯವಿಧಾನಗಳು, ಬೇಡಿಕೆ ಮತ್ತು ಪೂರೈಕೆಯ ಅಂತರದ ನಿವಾರಣೆ, ವಿಶೇಷವಾಗಿ ಕ್ಯಾಪ್ಟಿವ್ ವಿದ್ಯುತ್ ಮತ್ತು ಎಲೆಕ್ಟ್ರಿಕ್ ವಾಹನಗಳಿಂದ ವಿದ್ಯುತ್ ಬಳಕೆಗೆ ಸಂಬಂಧಿಸಿದ ಅಂತರ ನಿವಾರಣೆಗೆ ಸಂಬಂಧಿಸಿವೆ.
ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (ಎಂ.ಒ.ಎಸ್.ಪಿ.ಐ.) ಈ ಪತ್ರಿಕಾ ಪ್ರಕಟಣೆಯ ಮೂಲಕ ಇಂಧನ ಅಂಕಿ-ಅಂಶಗಳ ತಜ್ಞರ ಸಮಿತಿಯ ವರದಿಯನ್ನು ಬಿಡುಗಡೆ ಮಾಡುತ್ತಿದೆ.
ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ಇಂಧನವು ಪ್ರಮುಖ ಪಾತ್ರ ವಹಿಸುತ್ತದೆ. ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ (ಎಂ.ಒ.ಎಸ್.ಪಿ.ಐ) ವಾರ್ಷಿಕ ಪ್ರಕಟಣೆಯಾದ "ಎನರ್ಜಿ ಸ್ಟ್ಯಾಟಿಸ್ಟಿಕ್ಸ್ ಇಂಡಿಯಾ" ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಯ ಹರಿವನ್ನು ಚಿತ್ರಿಸುತ್ತದೆ. ವೈವಿಧ್ಯಮಯ ಕೋಷ್ಟಕಗಳು, ಗ್ರಾಫ್‌ಗಳು ಮತ್ತು ಸುಸ್ಥಿರ ಇಂಧನ-ಸೂಚಕಗಳ ಮೂಲಕ ಇದು ಇಂಧನ ಹರಿವಿನ ಕುರಿತಾದ ಚಿತ್ರಣವನ್ನು ಒದಗಿಸುತ್ತದೆ. ಭಾರತವು ತನ್ನ ನವೀಕರಿಸಬಹುದಾದ ಇಂಧನ ಗುರಿಗಳು ಮತ್ತು ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಆಕಾಂಕ್ಷೆಗಳತ್ತ ಸಾಗುತ್ತಿರುವ ಈ ಸಮಯದಲ್ಲಿ, ಪುರಾವೆ ಆಧಾರಿತ ನೀತಿ ನಿರೂಪಣೆಯನ್ನು ಬೆಂಬಲಿಸಲು ದೃಢ, ಸಮಗ್ರ ಮತ್ತು ಸಮನ್ವಯಕಾರಿ ಇಂಧನ ಅಂಕಿ-ಅಂಶಗಳ ನೀತಿಯ ಅಗತ್ಯವು ಮಹತ್ವದ್ದಾಗಿದೆ. ಜೊತೆಗೆ, ಹಾಲಿ ಇಂಧನ ಪರಿವರ್ತನೆಯ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಸುಗಮಗೊಳಿಸಲು ಸಹ ಇದು ಅತ್ಯಗತ್ಯವಾಗಿದೆ.
ಈ ಅಗತ್ಯವನ್ನು ಮನಗಂಡು, ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಐಐಟಿ-ದೆಹಲಿಯ ನಿರ್ದೇಶಕ ಡಾ. ರಂಗನ್ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ʻಇಂಧನ ಅಂಕಿ-ಅಂಶಗಳ ತಜ್ಞರ ಸಮಿತಿʼಯನ್ನು ರಚಿಸಿತು. ಇಂಧನ ಸಚಿವಾಲಯದ ಹಿರಿಯ ಪ್ರತಿನಿಧಿಗಳು ಹಾಗೂ ʻಇಂಧನ ಸಂಶೋಧನಾ ಸಂಸ್ಥೆಯ(ಟಿ.ಇ.ಆರ್.ಐ) ಮತ್ತು ʻಇಂಧನ ದಕ್ಷ ಆರ್ಥಿಕತೆಯ ಮೈತ್ರಿಕೂಟʼದಂತಹ(ಎಇಇಇ) ಸಂಶೋಧನಾ ಸಂಸ್ಥೆಗಳ ವಿಷಯ ತಜ್ಞರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಮಿತಿಯು "ಭಾರತದ ಇಂಧನ ಅಂಕಿ-ಅಂಶಗಳು" ಪ್ರಕಟಣೆ ಹಾಗೂ ಮತ್ತು ಭಾರತದ ಇಂಧನ-ಅಂಕಿ-ಅಂಶ ದತ್ತಾಂಶದ ಸಮಗ್ರ ಪರಾಮರ್ಶೆಯನ್ನು ಕೈಗೊಂಡಿದೆ. ಅದರ ವ್ಯಾಪ್ತಿ, ವ್ಯಾಖ್ಯಾನಗಳು, ವರ್ಗೀಕರಣ ವ್ಯವಸ್ಥೆಗಳು, ದತ್ತಾಂಶ ಮೂಲಗಳು ಮತ್ತು ಅಂದಾಜು ವಿಧಾನಗಳನ್ನೂ ಸಮಿತಿಯು ಪರಾಮರ್ಶೆಗೆ ಒಳಪಡಿಸಿದೆ. ಇಂಧನ ಅಂಕಿ-ಅಂಶಗಳ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವುದು, ಪ್ರಮುಖ ದತ್ತಾಂಶ-ಅಂತರವನ್ನು ಪರಿಹರಿಸುವುದು ಮತ್ತು ಇಂಧನ ಸಚಿವಾಲಯಗಳಲ್ಲಿ ಭಾರತದ ಇಂಧನ ಅಂಕಿ-ಅಂಶ ದತ್ತಾಂಶದಲ್ಲಿನ ಅಸಂಗತತೆಗಳನ್ನು ಪರಿಹರಿಸುವುದು ಮುಂತಾದ ವಿಷಯಗಳ ಬಗ್ಗೆ ಗಮನ ಹರಿಸಲಾಗಿದೆ.
ಸಮಿತಿಯು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವ ಮೊದಲು ಸಚಿವಾಲಯಗಳು, ಏಜೆನ್ಸಿಗಳು ಮತ್ತು ವಿಷಯ ತಜ್ಞರೊಂದಿಗೆ ಹಲವಾರು ಸುತ್ತಿನ ತಾಂತ್ರಿಕ ಸಮಾಲೋಚನೆಗಳನ್ನು ನಡೆಸಿದೆ. ಸಮಿತಿಯ ಪ್ರಮುಖ ಶಿಫಾರಸುಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ:
- ʻಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಶನ್ (ಐಎಸ್ಐಸಿ) ರಿ.5, ʻನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಶನ್(ಎನ್ಐಸಿ) -2025ʼ, ʻಸ್ಟ್ಯಾಂಡರ್ಡ್ಸ್ ಇಂಟರ್‌ನ್ಯಾಷನಲ್ ಎನರ್ಜಿ-ಪ್ರಾಡಕ್ಟ್ ಕ್ಲಾಸಿಫಿಕೇಶನ್ʼ (ಎಸ್ಐಇಸಿ) ಇತ್ಯಾದಿಗಳೊಂದಿಗೆ ಹೊಂದಿಕೆಯಾಗುವ ಕೋಷ್ಟಕ ವಿಭಾಗಗಳಲ್ಲಿ ಇಂಧನ ಕುರಿತಾದ ಅಂಕಿ-ಅಂಶಗಳ ಸಂಗ್ರಹಣೆ ಮತ್ತು ಪ್ರಕಟಣೆಯಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಸಮಿತಿಯು ಶಿಫಾರಸು ಮಾಡಿದೆ. ಜೊತೆಗೆ ಅಂತರ-ಸಚಿವಾಲಯಗಳು ತಾವು ಸೃಷ್ಟಿಸುವ ಇಂಧನ ಅಂಕಿ-ಅಂಶಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇಂಧನಕ್ಕೆ ಸಂಬಂಧಿಸಿದ ಎಲ್ಲಾ ಸಚಿವಾಲಯಗಳು ಏಕರೂಪದ ಪರಿವರ್ತನೆ ಅಂಶಗಳನ್ನು (ಕನ್ವರ್ಷನ್ ಫ್ಯಾಕ್ಟರ್ಸ್) ಅಳವಡಿಸಿಕೊಳ್ಳಬೇಕೆಂದು ಸಮಿತಿಯು ಒತ್ತಾಯಿಸಿದೆ.
- ಆಮದು ಮಾಡಿದ ಕಲ್ಲಿದ್ದಲಿನ (ಇದು ಭಾರತದ ಒಟ್ಟು ಕಲ್ಲಿದ್ದಲು ಬಳಕೆಯ ಸುಮಾರು ಶೇ.20 ರಷ್ಟಿದೆ) ವಲಯವಾರು ಅಂತಿಮ ಬಳಕೆ ಮಾಪನ ಕಾರ್ಯವಿಧಾನವನ್ನು ಸುಧಾರಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. ಜೊತೆಗೆ, ಹರಾಜಿನ ಮೂಲಕ ಕಳುಹಿಸಲಾದ ದೇಶೀಯ ಕಲ್ಲಿದ್ದಲನ್ನು ʻಇತರೆʼ ವರ್ಗದ ಅಡಿಯಲ್ಲಿ ಸಂಯೋಜಿಸುವಂತೆ ಸಮಿತಿಯು ಸೂಚಿಸಿದೆ. ಈ ವಿಧಾನವು ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ಎಎಸ್ಐ) ದತ್ತಾಂಶ ಭಂಡಾರವನ್ನು ಬಳಸುತ್ತದೆ, ಇದು ಸೀಮಿತ ಉದ್ಯಮವಾರು ಕಲ್ಲಿದ್ದಲಿನ ಬಳಕೆಯನ್ನು ಸೆರೆಹಿಡಿಯುತ್ತದೆ. ಕಾರ್ಯಕ್ಷಮತೆ, ಸಾಧನೆ ಮತ್ತು ವ್ಯಾಪಾರ (ಪಿಎಟಿ) ಯೋಜನೆಯಡಿ ಸಮಗ್ರ ದತ್ತಾಂಶವನ್ನು ಅನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಸಮಿತಿಯು ʻಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿʼಗೆ (ಬಿಇಇ) ಶಿಫಾರಸು ಮಾಡಿದೆ.
- ಉದ್ಯಮದ ವಾರ್ಷಿಕ ಸಮೀಕ್ಷೆ (ಎಎಸ್ಐ) ದತ್ತಾಂಶವನ್ನು ಬಳಸಿಕೊಂಡು ಭಾರತದಲ್ಲಿ ಕೈಗಾರಿಕೆವಾರು ಅಂತಿಮ ಬಳಕೆಯ ಸೆರೆಹಿಡಿಯಲು ಮತ್ತು ಪ್ರಕಟಿಸಲು ಮಾಡಲು ಇದೇ ರೀತಿಯ ವಿಧಾನವನ್ನು ಸಮಿತಿಯು ಶಿಫಾರಸು ಮಾಡಿದೆ.
- ಏಕೀಕೃತ ರಾಷ್ಟ್ರೀಯ ಮಟ್ಟದ ದತ್ತಾಂಶದ ಅನುಪಸ್ಥಿತಿಯಲ್ಲಿ, ʻವಿಶ್ವಸಂಸ್ಥೆಯ ಅಂಕಿ-ಅಂಶ ವಿಭಾಗʼವು(ಯುಎನ್ಎಸ್‌ಡಿ) ತನ್ನ ʻವಿಶ್ವ ಇಂಧನ ಸಮತೋಲನʼ ಹೆಸರಿನ ವಾರ್ಷಿಕ ಪ್ರಕಟಣೆಯಲ್ಲಿ, ಭಾರತದ ಜೈವಿಕ ಇಂಧನದ ಬಳಕೆಯು ದೇಶದ ಒಟ್ಟು ವಾರ್ಷಿಕ ಇಂಧನ ಬಳಕೆಯ ಸುಮಾರು 31-34% ನಷ್ಟಿದೆ ಎಂದು ಅಂದಾಜಿಸಿದೆ; ತಮ್ಮದೇ ಆದ ಅಂದಾಜಿನ ಆಧಾರದ ಮೇಲೆ ಈ ಲೆಕ್ಕವನ್ನು ನೀಡಿದೆ. ಭಾರತದ ಇಂಧನ-ಸಮತೋಲನ ಕೋಷ್ಟಕದಲ್ಲಿ ಜೈವಿಕ ಇಂಧನದ ಘಟಕವನ್ನು ಸೇರಿಸುವ ನಿಟ್ಟಿನಲ್ಲಿ ಇರುವ ಈ ಪ್ರಮುಖ ದತ್ತಾಂಶ-ಅಂತರವನ್ನು ಪರಿಹರಿಸಲು ಸಮಿತಿಯು ಸಮಗ್ರ ಕಾರ್ಯವಿಧಾನವನ್ನು ಶಿಫಾರಸು ಮಾಡಿದೆ.
- ಕ್ಯಾಪ್ಟಿವ್/ಆಫ್-ಗ್ರಿಡ್ ಮಾದರಿಯಲ್ಲಿ ವಿದ್ಯುತ್ ಬಳಕೆ ಹಾಗೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಂದ ವಿದ್ಯುತ್ ಬಳಕೆಯು ಇಂಧನ ಕ್ಷೇತ್ರದಲ್ಲಿನ ಎದುರಿಸುತ್ತಿರುವ ಮಹತ್ವದ ದತ್ತಾಂಶ-ಅಂತರಗಳಲ್ಲಿ ಒಂದಾಗಿದೆ. ಇದನ್ನು ಈ ವರದಿಯ ಅಡಿಯಲ್ಲಿ ಪರಿಹರಿಸಲಾಗಿದೆ. ಸಮಿತಿಯು ಇವುಗಳಿಗೆ ಆರಂಭಿಕ ಕ್ರಮಬದ್ಧ ಚೌಕಟ್ಟನ್ನು ಶಿಫಾರಸು ಮಾಡಿದೆ, ಇದನ್ನು ಭಾರತದ ಇಂಧನ-ಸಮತೋಲನ ದತ್ತಾಂಶದಲ್ಲಿ ಸಂಯೋಜಿಸಲು ಬಳಕೆದಾರರು ಮತ್ತು ಸಂಶೋಧಕರು ಮತ್ತಷ್ಟು ಪರಿಷ್ಕರಿಸುವ ಅಗತ್ಯವಿದೆ.
ಭಾರತದ ಇಂಧನ ಅಂಕಿ-ಅಂಶಗಳ ವ್ಯವಸ್ಥೆಯ ದೃಢತೆ, ವಿಶ್ಲೇಷಣಾತ್ಮಕ ಉಪಯುಕ್ತತೆ ಮತ್ತು ಅಂತರ-ಏಜೆನ್ಸಿ ಸ್ಥಿರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕ್ರಿಯಾತ್ಮಕ ಶಿಫಾರಸುಗಳೊಂದಿಗೆ ಈ ಚರ್ಚೆಗಳ ವಿವರವಾದ ವಿವರವನ್ನು ವರದಿಯು ಪ್ರಸ್ತುತಪಡಿಸುತ್ತದೆ. ಈ ಶಿಫಾರಸುಗಳು ಸಾಕ್ಷ್ಯಾಧಾರಿತ ನೀತಿ ನಿರೂಪಣೆಯನ್ನು ಬೆಂಬಲಿಸುತ್ತವೆ, ದತ್ತಾಂಶದ ಗುಣಮಟ್ಟ ಮತ್ತು ಹೋಲಿಕೆಯನ್ನು ಸುಧಾರಿಸುತ್ತವೆ. ಜೊತೆಗೆ ವಿಕಸನಗೊಳ್ಳುತ್ತಿರುವ ಭಾರತದ ಇಂಧನ ವಲಯದ ಉತ್ತಮ ಮೇಲ್ವಿಚಾರಣೆಯನ್ನು ಸುಗಮಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ದೇಶಕ್ಕೆ ಹೆಚ್ಚು ಸಂಯೋಜಿತ, ವಿಶ್ವಾಸಾರ್ಹ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋಲಿಸಬಹುದಾದ ಇಂಧನ ಅಂಕಿ-ಅಂಶಗಳ ನೀತಿಯನ್ನು ರೂಪಿಸು ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳು ಮತ್ತು ಮಧ್ಯಸ್ಥಗಾರರ ನಡುವೆ ನಿರಂತರ ಸಹಯೋಗ ಮತ್ತು ಸಮನ್ವಯದ ಅಗತ್ಯವಿರುತ್ತದೆ ಎಂದು ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಒತ್ತಿಹೇಳುತ್ತದೆ.
*****
(रिलीज़ आईडी: 2281661)
आगंतुक पटल : 19