ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಯುವಜನ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಕೈಗಾರಿಕಾ ಪಾಲುದಾರಿಕೆಯನ್ನು ಸದೃಢಪಡಿಸಲು ಯುವಜನ ವ್ಯವಹಾರಗಳ ಇಲಾಖೆಯು ಕೈಗಾರಿಕಾ ಸಂಘಗಳ ಸಮಾವೇಶವನ್ನು ಆಯೋಜಿಸಲಿದೆ


ಯುವಜನರ ನೇತೃತ್ವದ ರಾಷ್ಟ್ರ ನಿರ್ಮಾಣಕ್ಕಾಗಿ ಮೇರಾ ಯುವ ಭಾರತ್‌ನೊಂದಿಗೆ ಕೈಗಾರಿಕಾ ಸಂಘಗಳು, ಕಾರ್ಪೊರೇಟ್‌ ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಪಾಲುದಾರಿಕೆಯಲ್ಲಿ ಭಾಗವಹಿಸಲಿವೆ

प्रविष्टि तिथि: 02 JUL 2026 4:52PM by PIB Bengaluru

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯು ಜುಲೈ 3, 2026ರಂದು ನವದೆಹಲಿಯ ಡಾ. ಬಿ. ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಅಂಬೇಡ್ಕರ್ ಭವನ) ಕೈಗಾರಿಕಾ ಸಂಘದ ಸಮಾವೇಶವನ್ನು ಆಯೋಜಿಸಿದೆ. ಹಿರಿಯ ಸರ್ಕಾರಿ ಅಧಿಕಾರಿಗಳು, ಉದ್ಯಮ ಮುಖಂಡರು, ಕಾರ್ಪೊರೇಟ್ ಪ್ರತಿಷ್ಠಾನಗಳು ಮತ್ತು ಅಭಿವೃದ್ಧಿ ಪಾಲುದಾರರನ್ನು ಒಟ್ಟುಗೂಡಿಸಿ ಮೈ ಭಾರತ್ (ಮೇರಾ ಯುವ ಭಾರತ್) ಪರಿಸರ ವ್ಯವಸ್ಥೆಯ ಮೂಲಕ ಭಾರತದ ಯುವಕರನ್ನು ಸಬಲೀಕರಣಗೊಳಿಸಲು ಸಹಯೋಗದ ಮಾರ್ಗಸೂಚಿಯನ್ನು ರೂಪಿಸಲಿದೆ.

ಈ ಸಮಾವೇಶದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆಯಾದ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವ ವ್ಯವಹಾರ ಇಲಾಖೆಯ ಕಾರ್ಯದರ್ಶಿಯವರಾದ ಡಾ. ಪಲ್ಲವಿ ಜೈನ್ ಗೋವಿಲ್, ಯುವ ವ್ಯವಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರಾದ ಶ್ರೀ ನಿತೇಶ್ ಕುಮಾರ್ ಮಿಶ್ರಾ, ಯುವ ವ್ಯವಹಾರ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಶಿವ ರತನ್, ಮೇರಾ ಯುವ ಭಾರತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಡಾ. ಪ್ರಿಯಾಂಕಾ ಶುಕ್ಲಾ ಮತ್ತು ಕಾರ್ಪೊರೇಟ್ ವ್ಯವಹಾರ ಸಚಿವಾಲಯ ಮತ್ತು ಮೇರಾ ಯುವ ಭಾರತ್ ಪರಿಸರ ವ್ಯವಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಯುವಜನರ ನೇತೃತ್ವದ ಅಭಿವೃದ್ಧಿಯನ್ನು ತೀವ್ರಗೊಳಿಸುವ ಉದ್ದೇಶದಿಂದ, ಸರ್ಕಾರ, ಕೈಗಾರಿಕಾ ಸಂಘಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ನಡುವೆ ಒಂದು ವ್ಯವಸ್ಥಿತ ಪಾಲುದಾರಿಕೆಯನ್ನು ರೂಪಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ. ಸ್ವಯಂಸೇವಕ ಅವಕಾಶಗಳು, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು, ಉದ್ಯಮಶೀಲತೆಗೆ ಬೆಂಬಲ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಕಾರ್ಯಕ್ರಮಗಳು ಮತ್ತು ಇತರ ಯುವ-ಕೇಂದ್ರಿತ ಯೋಜನೆಗಳ ವ್ಯಾಪ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ' ಮೇರಾ ಯುವ ಭಾರತ್' ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತಾಗಿ ಈ ಸಮಾವೇಶದಲ್ಲಿ ಚರ್ಚೆಗಳು ನಡೆಯಲಿವೆ.

ಈ ಕಾರ್ಯಕ್ರಮವು CII, FICCI, ASSOCHAM, NASSCOM, PHDCCI, CREDAI, Indian Banks' Association, IPA, NHRDN, WTC Mumbai, AIAI, SHRM, India SME Forum, CAIT ಮತ್ತು SCOPE ನಂತಹ ಪ್ರಮುಖ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳನ್ನು ಹಾಗೂ SBI Foundation, Reliance Foundation, Paytm Foundation, HCL Foundation, Bisleri Foundation ಮತ್ತು Pratham ನಂತಹ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯುಕ್ತ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳನ್ನು ಒಂದೆಡೆ ಒಗ್ಗೂಡಿಸಿ; ಆ ಮೂಲಕ ಯುವ ಸಬಲೀಕರಣ ಕುರಿತಾದ ಸಂವಾದ ಮತ್ತು ಸಹಯೋಗಕ್ಕಾಗಿ ಈ ಸಮಾವೇಶವು ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸಲಿದೆ.

ಈ ಸಮಾವೇಶದಲ್ಲಿ ಮೇರಾ ಯುವ ಭಾರತ್ ಪರಿಸರ ವ್ಯವಸ್ಥೆಯ ಅವಲೋಕನ, ಕೈಗಾರಿಕಾ ಸಂಘಗಳಿಂದ ಅವುಗಳ ಪ್ರಸ್ತುತ ಮತ್ತು ಪ್ರಸ್ತಾವಿತ ಯುವ ಉಪಕ್ರಮಗಳ ಕುರಿತಾಗಿ ಪ್ರಸ್ತುತಿಗಳು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ ಸಹಯೋಗಿ ಮಾದರಿಗಳು, ಸ್ವಯಂಸೇವೆ, ಇಂಟರ್ನ್‌ಶಿಪ್‌ಗಳು ಮತ್ತು ಕೌಶಲ್ಯೀಕರಣದ ಕುರಿತು ಚರ್ಚೆಗಳನ್ನು ಆಯೋಜಿಸಲಾಗಿದೆ. ನಂತರ ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಮುಕ್ತ ಪಾಲುದಾರರ ಚರ್ಚೆ ನಡೆಯಲಿದ್ದು, ಈ ಚರ್ಚೆಗಳು ಉದ್ಯಮ ನೇತೃತ್ವದ ಉಪಕ್ರಮಗಳನ್ನು ರಾಷ್ಟ್ರೀಯ ಯುವ ಅಭಿವೃದ್ಧಿ ಆದ್ಯತೆಗಳೊಂದಿಗೆ ಜೋಡಿಸುವ ನಿರಂತರ ಸಾಂಸ್ಥಿಕ ಪಾಲುದಾರಿಕೆಗಳೊಂದಿಗೆ ಹೊಂದಿಸುವ ನಿರೀಕ್ಷೆಯಿದೆ.

ನಿರೀಕ್ಷಿತ ಫಲಿತಾಂಶಗಳಲ್ಲಿ ಪ್ರಮುಖವಾಗಿ ಕೈಗಾರಿಕಾ ಸಂಘಗಳು ಮತ್ತು ಅವುಗಳ ಸದಸ್ಯ ಸಂಸ್ಥೆಗಳ ಮೇರಾ ಯುವ ಭಾರತ್ ವೇದಿಕೆಗೆ ಸೇರ್ಪಡೆ, ಯುವ-ಕೇಂದ್ರಿತ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಸಮನ್ವಯ ಬಲಪಡಿಸುವಿಕೆ, ಕೈಗಾರಿಕಾ ಸಂಸ್ಥೆಗಳೊಂದಿಗೆ ನೋಡಲ್ ಪಾಲುದಾರಿಕೆಗಳ ಸ್ಥಾಪನೆ ಮತ್ತು ಮೇರಾ ಯುವ ಭಾರತ್ ಅನ್ನು ಯುವ ಅವಕಾಶಗಳು ಮತ್ತು ಸಹಯೋಗದ ಸಂಪರ್ಕಕ್ಕೆ ರಾಷ್ಟ್ರೀಯ ಭಂಡಾರವಾಗಿ ಇರಿಸುವುದು ಸೇರಿವೆ. ತನ್ನ ವ್ಯಾಪಕ ಕ್ಷೇತ್ರಗಳು, ಸಾಂಸ್ಥಿಕ ಜಾಲ ಮತ್ತು ಡಿಜಿಟಲ್ ವೇದಿಕೆಯ ಮೂಲಕ, ಮೇರಾ ಯುವ ಭಾರತ್ ಲಕ್ಷಾಂತರ ಯುವ ಭಾರತೀಯರನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಅರ್ಥಪೂರ್ಣ ಅವಕಾಶಗಳೊಂದಿಗೆ ಸಂಪರ್ಕಿಸುವ ಏಕೀಕೃತ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ.

ದಿನವಿಡೀ ನಡೆಯುವ ಈ ಸಮಾವೇಶವು ಗೌರವಾನ್ವಿತ ಸಚಿವರ ಉದ್ಘಾಟನಾ ಭಾಷಣಗಳು ಮತ್ತು ಮುಖ್ಯ ಭಾಷಣಗಳೊಂದಿಗೆ ಪ್ರಾರಂಭವಾಗಲಿದ್ದು, ನಂತರ ವಿಷಯಾಧಾರಿತ ಪ್ರಸ್ತುತಿಗಳು, ಪಾಲುದಾರರ ಸಮಾಲೋಚನೆಗಳು ಮತ್ತು ನೆಟ್‌ವರ್ಕಿಂಗ್ ಇವೆಂಟ್ ಗಳು ನಡೆಯಲಿವೆ. ವಿಕಸಿತ ಭಾರತ್@2047ರ ದೃಷ್ಟಿಕೋನದಲ್ಲಿ ಯುವ ವ್ಯವಹಾರಗಳ ಇಲಾಖೆ ಮತ್ತು ಕೈಗಾರಿಕಾ ಪಾಲುದಾರರ ನಡುವಿನ ನಿರಂತರ ಸಹಯೋಗಕ್ಕಾಗಿ ಮಾರ್ಗಸೂಚಿಯಾಗಿ ಇದನ್ನು ಮುಕ್ತಾಯಗೊಳಿಸಲಾಗುವುದು.

 

*****

 


(रिलीज़ आईडी: 2280531) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Tamil