ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ಸಂಶೋಧನೆ, ಉದ್ಯಮ, ಸ್ಟಾರ್ಟ್-ಅಪ್ ಗಳು ಮತ್ತು ನೀತಿ ನಿರೂಪಕರನ್ನು ಒಂದೆಡೆ ಸೇರಿಸಲಿರುವ ರೈಸ್ ಸಮಾವೇಶ 2026

प्रविष्टि तिथि: 12 JUN 2026 6:44PM by PIB Bengaluru

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐ ಆರ್), ತನ್ನ ಅಂಗಸಂಸ್ಥೆ ಪ್ರಯೋಗಾಲಯಗಳಾದ ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಪ್ರಯೋಗಾಲಯಗಳು (ಸಿಎಸ್ ಐ ಆರ್- ಎನ್ ಎ ಎಲ್), ಸಿಎಸ್ಐಆರ್- ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಸ್  ಆರ್- ಸಿ ಎಫ್ ಟಿ ಆರ್ ಐ)  ಮತ್ತು ಸಿಎಸ್ಐಆರ್-ಫೋರ್ತ್ ಪ್ಯಾರಾಡೈಮ್ ಇನ್ಸ್ಟಿಟ್ಯೂಟ್ (ಸಿಎಸ್ ಐ ಆರ್-4ಪಿಐ) ಗಳ ಮೂಲಕ 13-14 ಜೂನ್ 2026 ರಂದು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ವಿ.ಎಂ. ಘಾಟಗೆ ಕನ್ವೆನ್ಷನ್ ಸೆಂಟರ್‌ ನಲ್ಲಿ ‘ಸಂಶೋಧನೆ, ಉದ್ಯಮ, ನವೋದ್ಯಮ ಮತ್ತು ಉದ್ಯಮಶೀಲತೆ’ (RISE - Research, Industry, Start-up and Entrepreneurship) ಸಮಾವೇಶ 2026 ಅನ್ನು ಆಯೋಜಿಸಲಿದೆ.

"ವಿಕಸಿತ ಭಾರತ 2047ಕ್ಕಾಗಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಆಧಾರಿತ ಬೆಳವಣಿಗೆ" ಎಂಬ ವಿಷಯದೊಂದಿಗೆ, ಈ ಸಮ್ಮೇಳನವು ನಾವೀನ್ಯತೆ ಆಧಾರಿತ ಬೆಳವಣಿಗೆ ಮತ್ತು ತಂತ್ರಜ್ಞಾನದ ವಾಣಿಜ್ಯೀಕರಣವನ್ನು ವೇಗಗೊಳಿಸಲು ಸಂಶೋಧನಾ ಸಂಸ್ಥೆಗಳು, ಉದ್ಯಮದ ಪ್ರಮುಖರು, ನವೋದ್ಯಮಗಳು, ಶೈಕ್ಷಣಿಕ ವಲಯ, ಹೂಡಿಕೆದಾರರು ಮತ್ತು ನೀತಿ ನಿರೂಪಕರ ನಡುವೆ ಸಹಯೋಗವನ್ನು ಬೆಳೆಸಲು ಒಂದು ರಾಷ್ಟ್ರೀಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಎರಡು ದಿನಗಳ ಈ ಸಮಾವೇಶವನ್ನು ಗೌರವಾನ್ವಿತ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಉದ್ಘಾಟಿಸಲಿದ್ದು, ಹಿರಿಯ ಸರ್ಕಾರಿ ಅಧಿಕಾರಿಗಳು, ವೈಜ್ಞಾನಿಕ ಮುಖಂಡರು, ಉದ್ಯಮದ ಪ್ರತಿನಿಧಿಗಳು ಮತ್ತು ಉದ್ಯಮಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಡಿ ಎಸ್ ಐ ಆರ್ ಕಾರ್ಯದರ್ಶಿ ಮತ್ತು ಸಿ ಎಸ್ ಐ ಆರ್ ಮಹಾನಿರ್ದೇಶಕರಾದ ಡಾ. ಎನ್. ಕಲೈಸೆಲ್ವಿ ಅವರು ಸಿ ಎಸ್ ಐ ಆರ್ ಪ್ರಯೋಗಾಲಯಗಳ ನಿರ್ದೇಶಕರೊಂದಿಗೆ ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಸಿಎಸ್ ಐಆರ್, ಇಸ್ರೋ, ಡಿಎಸ್ ಟಿ, ಡಿಬಿಟಿ, ಐಸಿಎಆರ್, ಐಸಿಎಂಆರ್ ಮತ್ತು ಭೂವಿಜ್ಞಾನ ಸಚಿವಾಲಯ (ಎಂಒಇಎಸ್) ದಿಂದ  ಬೆಂಬಲಿತ 100 ಕ್ಕೂ ಹೆಚ್ಚು ನವೋದ್ಯಮಗಳು ಎಂಎಸ್ಎಂಇಗಳು  ಮತ್ತು ನಾವೀನ್ಯಕಾರರು ಪ್ರದರ್ಶನದ ಸಂದರ್ಭದಲ್ಲಿ ತಮ್ಮ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಈ ಕಾರ್ಯಕ್ರಮವು ನೆಟ್ವರ್ಕಿಂಗ್, ಉದ್ಯಮದ ಒಡನಾಟ, ತಂತ್ರಜ್ಞಾನ ವರ್ಗಾವಣೆ ಮತ್ತು ಹೂಡಿಕೆ ಪಾಲುದಾರಿಕೆಗೆ ಅವಕಾಶಗಳನ್ನು ಒದಗಿಸುತ್ತದೆ.

13 ಮತ್ತು 14 ಜೂನ್ 2026 ರಂದು ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮವು ಏರೋಸ್ಪೇಸ್ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ, ಕೃಷಿ-ಆಹಾರ ನಾವೀನ್ಯತೆ, ವಿಜ್ಞಾನ ಸಂವಹನ, ಉದ್ಯಮಶೀಲತೆ, ವೆಂಚರ್ ಕ್ಯಾಪಿಟಲ್ ಮತ್ತು ಉದ್ಯಮ-ಶೈಕ್ಷಣಿಕ ಸಹಯೋಗದ ಕುರಿತು ವಿಷಯಾಧಾರಿತ ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಪ್ರಮುಖ ಸಂಶೋಧನಾ ಸಂಸ್ಥೆಗಳು, ಉದ್ಯಮಗಳು, ನವೋದ್ಯಮಗಳು ಮತ್ತು ಹೂಡಿಕೆ ಪರಿಸರ ವ್ಯವಸ್ಥೆಗಳ ಪ್ರಮುಖ ತಜ್ಞರು ಉದಯೋನ್ಮುಖ ತಂತ್ರಜ್ಞಾನಗಳು, ನಾವೀನ್ಯತೆ ಮಾರ್ಗಗಳು ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.

ಉದ್ಯಮದ ಮುಖಂಡರು, ಸಂಶೋಧಕರು ಮತ್ತು ನವೋದ್ಯಮಗಳ ನಡುವಿನ ಮೀಸಲಾದ ಸಂವಹನಗಳು ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿದ್ದು, ಇದರಲ್ಲಿ ತಂತ್ರಜ್ಞಾನ ವರ್ಗಾವಣೆ, ವಾಣಿಜ್ಯೀಕರಣ, ಬೌದ್ಧಿಕ ಆಸ್ತಿ, ಧನಸಹಾಯದ ಅವಕಾಶಗಳು ಮತ್ತು ಡೀಪ್-ಟೆಕ್ ನಾವೀನ್ಯತೆಗಳನ್ನು ವಿಸ್ತರಿಸುವ ಕುರಿತು ಚರ್ಚೆಗಳು ನಡೆಯಲಿವೆ. ಈ ಕಾರ್ಯಕ್ರಮವು ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ಉದ್ಯಮದ ಪಾಲುದಾರರೊಂದಿಗೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳ ವಿನಿಮಯವನ್ನು ಸುಗಮಗೊಳಿಸುತ್ತದೆ.

ರೈಸ್ ಸಮಾವೇಶ 2026 ವಿವಿಧ ವಲಯಗಳ ನಡುವೆ ಸಹಯೋಗವನ್ನು ಉತ್ತೇಜಿಸುವ ಮೂಲಕ, ಉದ್ಯಮಶೀಲತೆಯನ್ನು ಬೆಂಬಲಿಸುವ ಮೂಲಕ, ಸಂಶೋಧನೆಗಳನ್ನು ಉತ್ಪನ್ನಗಳು ಮತ್ತು ಸೇವೆಗಳಾಗಿ ಪರಿವರ್ತಿಸುವುದನ್ನು ವೇಗಗೊಳಿಸುವ ಮೂಲಕ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

ಈ ಸಮಾವೇಶವು, 'ವಿಕಸಿತ ಭಾರತ 2047' ರತ್ತ ಭಾರತದ ಪಯಣದಲ್ಲಿ ವಿಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪ್ರಮುಖ ಚಾಲನಾ ಶಕ್ತಿಗಳಾಗಿ ಮುನ್ನಡೆಸುವಲ್ಲಿ ಸಿ ಎಸ್ ಐ ಆರ್ ನ ಬದ್ಧತೆಯನ್ನು ಬಿಂಬಿಸುತ್ತದೆ.

ಸ್ಥಳ: ವಿ.ಎಂ. ಘಾಟಗೆ ಕನ್ವೆನ್ಷನ್ ಸೆಂಟರ್, ಎಚ್ ಎಎಲ್ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು
ದಿನಾಂಕಗಳು: 13–14 ಜೂನ್ 2026

 

*****


(रिलीज़ आईडी: 2272407) आगंतुक पटल : 24
इस विज्ञप्ति को इन भाषाओं में पढ़ें: English , Urdu , हिन्दी , Tamil