ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಅರೆವಾಹಕಗಳ ಮೂಲಕಚ್ಚಾಪದರು ಉತ್ಪಾದನಾ ತಂತ್ರಜ್ಞಾನವನ್ನು ಭಾರತಕ್ಕೆ ತರಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ; ಒಡಿಶಾ ಸರ್ಕಾರ, ಇಂಟೆಲ್ ಮತ್ತು 3ಡಿಜಿಎಸ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ
ಪ್ರಮುಖ ಜಾಗತಿಕ ಅರೆವಾಹಕ (ಸೆಮಿಕಂಡಕ್ಟರ್) ಕ್ಚೇತ್ರದ ಹೂಡಿಕೆಗಳು ಈ ವಲಯದಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ದೊರಕಿದ ಮಾನ್ಯತೆಯಾಗಿದೆ, ಇದು ಭಾರತದ ಮೇಲಿನ ಉದ್ಯಮದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ಭಾರತದಲ್ಲಿ ಅತಿದೊಡ್ಡ ಉನ್ನತ ತಂತ್ರಜ್ಞಾನ ಉತ್ಪಾದನಾ ಹೂಡಿಕೆಗಳಲ್ಲಿ ಒಂದಾದ ಈ ಯೋಜನೆಯು ಭಾರತ ಅರೆವಾಹಕ (ಸೆಮಿಕಂಡಕ್ಟರ್) ಮಿಷನ್ ಅಡಿಯಲ್ಲಿ ಪ್ರಯತ್ನಗಳ ಮೇಲೆ ನಿರ್ಮಿಸಲಾಗಿದೆ
ಪ್ರಕಟಣಾ ದಿನಾಂಕ:
29 MAY 2026 4:24PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್; ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ; ಇಂಟೆಲ್ ಸಿ.ಇ.ಒ. ಶ್ರೀ ಲಿಪ್-ಬು ಟಾನ್ ಮತ್ತು ಇತರ ಗಣ್ಯರ ಸಮಕ್ಷಮದಲ್ಲಿ ಭಾರತಕ್ಕೆ ಸೆಮಿಕಂಡಕ್ಟರ್ ಗಳ ಮೂಲಕಚ್ಚಾಪದರು ಉತ್ಪಾದನಾ ತಂತ್ರಜ್ಞಾನವನ್ನು ತರುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.
.
ಒಡಿಶಾದಲ್ಲಿ ಸುಧಾರಿತ ಪ್ಯಾಕೇಜಿಂಗ್ ಗ್ಲಾಸ್ ಕೋರ್ ಸಬ್ಸ್ಟ್ರೇಟ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಚೌಕಟ್ಟಿನಿಗಾಗಿ ಒಡಿಶಾ ಸರ್ಕಾರ, ಇಂಟೆಲ್ ಕಾರ್ಪೊರೇಷನ್ ಮತ್ತು 3ಡಿಜಿಎಸ್ ಇಂಕ್. ಯು.ಎಸ್.ಎ. ಸಂಸ್ಥೆ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸರಿಸುಮಾರು 3.3 ಬಿಲಿಯನ್ ಯು.ಎಸ್.ಎ. ಡಾಲರ್ ಅಂದಾಜು ಹೂಡಿಕೆಯೊಂದಿಗೆ ಈ ಯೋಜನೆಯು ದೇಶದ ಅತಿದೊಡ್ಡ ಉನ್ನತ ತಂತ್ರಜ್ಞಾನ ಉತ್ಪಾದನಾ ಹೂಡಿಕೆಗಳಲ್ಲಿ ಒಂದಾಗಿದೆ. ಭುವನೇಶ್ವರ-ಖುರ್ದಾ ಪ್ರದೇಶದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವುದು ಭಾರತದಲ್ಲಿ ಅರೆವಾಹಕ (ಸೆಮಿಕಂಡಕ್ಟರ್ ) ಉತ್ಪಾದನಾ ವ್ಯವಸ್ಥೆಯ ಸಂಪೂರ್ಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಹೇಳಿದರು. ಅಪ್ಲೈಡ್ ಮೆಟೀರಿಯಲ್ಸ್ ಇಂಕ್., ಲ್ಯಾಮ್ ರಿಸರ್ಚ್, ಟೋಕಿಯೋ ಎಲೆಕ್ಟ್ರಾನ್ ಲಿಮಿಟೆಡ್, ಮೆರ್ಕ್ ಎಲೆಕ್ಟ್ರಾನಿಕ್ಸ್ ನಂತಹ ಸಂಸ್ಥೆಗಳ ಪ್ರವೇಶ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಡಚ್ ಬಹುರಾಷ್ಟ್ರೀಯ ಎ.ಎಸ್.ಎಂ.ಎಲ್. ನಡುವಿನ ಒಪ್ಪಂದಕ್ಕೆ ಸಹಿ ಹಾಕುವುದು - ಅರೆವಾಹಕ ವಲಯದಲ್ಲಿ ಸರ್ಕಾರದ ಪ್ರಯತ್ನಗಳು ಮತ್ತು ಉದ್ಯಮವು ಭಾರತದಲ್ಲಿ ಇರಿಸುವ ನಂಬಿಕೆಗೆ ಮಾನ್ಯತೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಸ್ತಾವಿತ ಯೋಜನೆಯನ್ನು ಐದು-ಆರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಇದು ವಿಶಾಲವಾದ ಉತ್ಪಾದನೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಾದ್ಯಂತ ಗಮನಾರ್ಹ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವಾಗ 1,800 ಕ್ಕೂ ಹೆಚ್ಚು ನೇರ ಉನ್ನತ-ಕೌಶಲ್ಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಈ ಸೌಲಭ್ಯವು ಸುಧಾರಿತ ಪ್ಯಾಕೇಜಿಂಗ್ ಗ್ಲಾಸ್ ಕೋರ್ ತಲಾಧಾರಗಳು, ಹೆಚ್ಚಿನ-ಸಾಂದ್ರತೆಯ ಇಂಟರ್ಕನೆಕ್ಟ್ ತಲಾಧಾರಗಳು ಮತ್ತು ಸಂಬಂಧಿತ ಅರೆವಾಹಕ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುತ್ತದೆ, ಇಂಟೆಲ್ ತಂತ್ರಜ್ಞಾನ ಜ್ಞಾನ ಮತ್ತು ಪ್ರಕ್ರಿಯೆ ಪರಿಣತಿಯನ್ನು ಬೆಂಬಲಿಸುತ್ತದೆ. ಇದು ಭಾರತದಲ್ಲಿ ಸಾಮರ್ಥ್ಯ ಅಭಿವೃದ್ಧಿ, ಪರಿಸರ ವ್ಯವಸ್ಥೆಯ ಬೆಳವಣಿಗೆ ಮತ್ತು ರಫ್ತು-ಆಧಾರಿತ ಉತ್ಪಾದನೆಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.
ದೇಶೀಯ ಉತ್ಪಾದನೆ, ವಿನ್ಯಾಸ ಪರಿಸರ ವ್ಯವಸ್ಥೆ ಮತ್ತು ಪೂರೈಕೆ ಸರಪಳಿ ಸಾಮರ್ಥ್ಯಗಳನ್ನು ಬಲಪಡಿಸಲು ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಮೇಲೆ ಈ ಉಪಕ್ರಮ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಇದು ಅರೆವಾಹಕ ಉತ್ಪಾದನೆ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕಾಗಿ ಉದಯೋನ್ಮುಖ ಜಾಗತಿಕ ಕೇಂದ್ರಗಳಲ್ಲಿ ಒಡಿಶಾವನ್ನು ಉನ್ನತ ಸ್ಥಾನ ಪಡೆಯುವ ಹಂತಕ್ಕೇರಿಸುವ ನಿರೀಕ್ಷೆಯಿದೆ.
******
(ಪ್ರಕಟಣೆ ಐ.ಡಿ.: 2266667)
ವಿಸಿಟರ್ ಕೌಂಟರ್ : 11