ಕೃಷಿ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಪುಸ್ತಕ "ಅಪ್ನಾಪನ್" ಮೇ 26, 2026 ರಂದು ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ
ಪ್ರಕಟಣಾ ದಿನಾಂಕ:
25 MAY 2026 8:20PM by PIB Bengaluru
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದಿರುವ ನೂತನ ಪುಸ್ತಕ 'ಅಪ್ನಾಪನ್' ಅನ್ನು ಮೇ 26, 2026 ರಂದು ನವದೆಹಲಿಯ ಪುಸಾದಲ್ಲಿರುವ ಎನ್ ಎ ಎಸ್ ಸಿ ಕಾಂಪ್ಲೆಕ್ಸ್ ನಲ್ಲಿರುವ ಭಾರತ ರತ್ನ ಸಿ. ಸುಬ್ರಮಣಿಯಂ ಸಭಾಂಗಣದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಾಗುವುದು.
ಈ ಪುಸ್ತಕವನ್ನು ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಮತ್ತು ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಕೇಂದ್ರ ಸಚಿವರು, ರಾಜ್ಯಪಾಲರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಗಣ್ಯ ಸಾಮಾಜಿಕ ಮುಖಂಡರು, ಖ್ಯಾತ ಬರಹಗಾರರು ಮತ್ತು ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ.
'ಅಪ್ನಾಪನ್' ಎಂಬುದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅನುಭವಗಳು, ಕಲಿಕೆಗಳು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗಿನ ಅವರ ದೀರ್ಘ ಕಾಲೀನ ಸಾರ್ವಜನಿಕ ಒಡನಾಟದಿಂದ ಬಂದ ಅವಲೋಕನಗಳನ್ನು ಸೆರೆಹಿಡಿಯುವ ಆಳವಾದ ವೈಯಕ್ತಿಕ ಮತ್ತು ಸ್ಪೂರ್ತಿದಾಯಕ ಕೃತಿಯಾಗಿದೆ. ಮೂರು ದಶಕಗಳಿಗೂ ಹೆಚ್ಚಿನ ರಾಜಕೀಯ ಮತ್ತು ಸಾಂಸ್ಥಿಕ ಒಡನಾಟದಿಂದ ಬಂದ ಈ ಪುಸ್ತಕವು, ಶ್ರೀ ಚೌಹಾಣ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವಾಗ ಕಂಡ ಮತ್ತು ಅಳವಡಿಸಿಕೊಂಡ ಮೌಲ್ಯಗಳು, ನಾಯಕತ್ವ ವಿಧಾನ ಮತ್ತು ಆಡಳಿತ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಆರಂಭಿಕ ದಿನಗಳಿಂದ ಹಿಡಿದು, ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವವರೆಗೆ, ಶ್ರೀ ಚೌಹಾಣ್ ಅವರು ಮಧ್ಯಪ್ರದೇಶವನ್ನು ಮುನ್ನಡೆಸಿದಾಗ ಶ್ರೀ ಮೋದಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದಾಗ ಮತ್ತು ಈಗ ಶ್ರೀ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅವಧಿಯವರೆಗೆ - ಪುಸ್ತಕವು ವಿವಿಧ ಹಂಚಿಕೆಯ ಸಾರ್ವಜನಿಕ ಜೀವನದ ಮಜಲು ಮತ್ತು ಸೈದ್ಧಾಂತಿಕ ಬದ್ಧತೆಯ ದೀರ್ಘ ಪ್ರಯಾಣವನ್ನು ಗುರುತಿಸುತ್ತದೆ.
ವಿವಿಧ ಘಟನೆಗಳ ಸ್ಮರಣೆಗಿಂತ ಹೆಚ್ಚಾಗಿ, 'ಅಪ್ನಾಪನ್' ವಿಚಾರಗಳು ಮತ್ತು ಮೌಲ್ಯಗಳ ದೊಡ್ಡ ಪ್ರಯಾಣವನ್ನು ಪ್ರಸ್ತುತಪಡಿಸುತ್ತದೆ. ಕಥೆಗಳು, ಅನುಭವಗಳು ಮತ್ತು ಪ್ರತಿಬಿಂಬಗಳ ಮೂಲಕ, ಪುಸ್ತಕವು ಸಂಘಟನೆ, ಸಮರ್ಪಣೆ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಬೇರೂರಿರುವ ನಾಯಕತ್ವ, ಸೇವೆ ಮತ್ತು ರಾಷ್ಟ್ರ ನಿರ್ಮಾಣದ ತತ್ವಗಳನ್ನು ಎತ್ತಿ ತೋರಿಸುತ್ತದೆ.
'ಸೇವೆ', 'ಅಂತ್ಯೋದಯ', 'ಜನ್ ಭಾಗೀದಾರಿ', 'ರಾಷ್ಟ್ರ ಮೊದಲು' ಮತ್ತು 'ಲೋಕ ಕಲ್ಯಾಣ್' ಮುಂತಾದ ಪರಿಕಲ್ಪನೆಗಳು ಪುಸ್ತಕದ ಕೇಂದ್ರ ಚೈತನ್ಯವನ್ನು ರೂಪಿಸುತ್ತವೆ. ಈ ತತ್ವಗಳು, ಪುಸ್ತಕವು ಸೂಚಿಸುವಂತೆ, ಆಡಳಿತಕ್ಕೆ ಅಡಿಪಾಯ ಮಾತ್ರವಲ್ಲದೆ ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶಿ ಆದರ್ಶಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ನಿರೂಪಣೆಯು ದೃಢನಿಶ್ಚಯ, ದೃಷ್ಟಿಕೋನದ ಸ್ಪಷ್ಟತೆ ಮತ್ತು ದಣಿವರಿಯದ ಬದ್ಧತೆಯು ಮಹತ್ವಾಕಾಂಕ್ಷೆಯ ಗುರಿಗಳನ್ನು ವಾಸ್ತವಕ್ಕೆ ಹೇಗೆ ಪರಿವರ್ತಿಸಬಹುದು ಎಂಬುದನ್ನು ತೋರಿಸುತ್ತದೆ.
ಈ ಪುಸ್ತಕವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಾರ್ವಜನಿಕ ಜೀವನದ ವಿವಿಧ ಆಯಾಮಗಳು, ಅವರ ನೀತಿ ಉಪಕ್ರಮಗಳು, ಅವುಗಳ ಅನುಷ್ಠಾನ ಮತ್ತು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ನೀತಿ, ಪರಿಕಲ್ಪನೆಯ ದೃಷ್ಟಿಕೋನ,ತತ್ವಶಾಸ್ತ್ರವನ್ನು ಮತ್ತಷ್ಟು ಪರಿಶೋಧಿಸುತ್ತದೆ. ಇದು ರಾಜಕೀಯ ಕಾರ್ಯಕರ್ತರು, ಯುವಕರು, ಮಹಿಳೆಯರು, ಉದ್ಯಮಿಗಳು ಮತ್ತು ಜೀವನದ ಎಲ್ಲಾ ಹಂತಗಳ ಓದುಗರಿಗೆ ಸ್ಪೂರ್ತಿದಾಯಕ ಮತ್ತು ಒಳನೋಟವುಳ್ಳ ಓದುಗವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಮಾರ್ಚ್ 5, 1959 ರಂದು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಬುಧ್ನಿ ತಹಸಿಲ್ ನ ಜೈತ್ ಗ್ರಾಮದಲ್ಲಿ ಜನಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು 15 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿದರು, ಅಲ್ಲಿ ಅವರು ಶಿಸ್ತು, ದೇಶಭಕ್ತಿ ಮತ್ತು ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಂಡರು. 1975 ರಲ್ಲಿ, ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಸಕ್ರಿಯರಾದರು ಮತ್ತು ನಂತರ ಭಾರತೀಯ ಜನತಾ ಯುವ ಮೋರ್ಚಾದಲ್ಲಿ ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರು.
ವರ್ಷಗಳಲ್ಲಿ, ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಸಂಸದೀಯ ಮಂಡಳಿಯ ಕಾರ್ಯದರ್ಶಿ ಸೇರಿದಂತೆ ಹಲವಾರು ಪ್ರಮುಖ ಸಾಂಸ್ಥಿಕ ಪಾತ್ರಗಳಲ್ಲಿ ಸೇವೆ ಸಲ್ಲಿಸಿದರು.
1990ರಲ್ಲಿ ಬುಧ್ನಿಯಿಂದ ಶಾಸಕರಾಗಿ ಆಯ್ಕೆಯಾದಾಗ ಅವರ ಚುನಾವಣಾ ಪ್ರಯಾಣದ ಮೊದಲ ಹೆಜ್ಜೆ ಪ್ರಾರಂಭವಾಯಿತು. ಒಂದು ವರ್ಷದ ನಂತರ, 1991ರಲ್ಲಿ, ಅವರು ವಿದಿಶಾದಿಂದ ಲೋಕಸಭೆಗೆ ಆಯ್ಕೆಯಾದರು, ಸತತ ಐದು ಬಾರಿ ಸಂಸತ್ತಿಗೆ ಆಯ್ಕೆಯಾದ ಕ್ಷೇತ್ರದೊಂದಿಗೆ ದೀರ್ಘ ಮತ್ತು ಶಾಶ್ವತವಾದ ಸಂಬಂಧವನ್ನು ಪ್ರಾರಂಭಿಸಿದರು.
ನವೆಂಬರ್ 2005 ರಲ್ಲಿ, ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2005 ರಿಂದ 2018 ರವರೆಗೆ ಮತ್ತು ಮತ್ತೆ ಪುನಃ 2020 ರಿಂದ 2023 ರವರೆಗೆ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾದರು.
2024ರಲ್ಲಿ, ಅವರು ಮತ್ತೊಮ್ಮೆ ವಿದಿಶಾದಿಂದ ಲೋಕಸಭೆಗೆ ಆಯ್ಕೆಯಾದರು ಮತ್ತು ಪ್ರಸ್ತುತ ಭಾರತ ಸರ್ಕಾರದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
*****
(ಪ್ರಕಟಣೆ ಐ.ಡಿ.: 2265300)
ವಿಸಿಟರ್ ಕೌಂಟರ್ : 2