ಪ್ರಧಾನ ಮಂತ್ರಿಯವರ ಕಛೇರಿ
ಸೋಮನಾಥದಲ್ಲಿ ಐಎಎಫ್ ನ ಸೂರ್ಯಕಿರಣ್ ತಂಡದ ಮೈಪುಳಕಿತಗೊಳಿಸುವ ಹಾರಾಟವನ್ಮು ವೀಕ್ಷಿಸಿದ ಪ್ರಧಾನಮಂತ್ರಿ
ಪ್ರದರ್ಶನವು ಹೆಮ್ಮೆ ಮತ್ತು ಶೌರ್ಯದ ಭವ್ಯ ಸಂಗಮ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು
ಪ್ರಕಟಣಾ ದಿನಾಂಕ:
11 MAY 2026 4:13PM by PIB Bengaluru
ಸೋಮನಾಥ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಮೈಪುಳಕಿತಗೊಳಿಸುವ ಹಾರಾಟವನ್ಮು ಪ್ರಧಾನಮಂತ್ರಿ ಅವರು ವೀಕ್ಷಿಸಿದರು.
ಆಕಾಶದಲ್ಲಿ ಹೆಮ್ಮೆ ಮತ್ತು ಶೌರ್ಯದ ಭವ್ಯ ಸಂಗಮವು ಸೋಮನಾಥ ದೇವಾಲಯದ ಮೇಲೆ ಕೇಸರಿ ಮತ್ತು ತ್ರಿವರ್ಣ ಧ್ವಜದ ಪ್ರಭಾವಲಯವನ್ನು ಹರಡಿತು ಎಂದು ಪ್ರಧಾನಮಂತ್ರಿಯವರು ವಿಶೇಷವಾಗಿ ವರ್ಣನೆ ಮಾಡಿದರು. ಭಕ್ತಿ (ಪೂಜ್ಯತೆ) ಮತ್ತು ಶಕ್ತಿಯ ಈ ಅದ್ಭುತ ದೃಶ್ಯ ಮತ್ತು ಚೈತನ್ಯವು ಪ್ರತಿಯೊಬ್ಬ ಹೃದಯವನ್ನೂ ಆಳವಾದ ಸಂತೋಷದಿಂದ ತುಂಬಿತು ಮತ್ತು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿತು ಎಂದು ಶ್ರೀ ಮೋದಿ ಅವರು ತಿಳಿಸಿದರು.
ಎಕ್ಸ್ ತಾಣದ ಸಂದೇಶಗಳ ಸರಣಿಯಲ್ಲಿ, ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ:
"ಸೋಮನಾಥದಲ್ಲಿ ಇಂದು, ಆಕಾಶವು ಹೆಮ್ಮೆ ಮತ್ತು ಶೌರ್ಯದ ಭವ್ಯ ಸಂಗಮಕ್ಕೆ ಸಾಕ್ಷಿಯಾಯಿತು. ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡವು ಮೈಪುಳಕಿತಗೊಳಿಸುವ ಹಾರಾಟವನ್ನು ಪ್ರದರ್ಶಿಸಿತು. ಭಕ್ತಿ ಮತ್ತು ಶಕ್ತಿಯ ಈ ಚೈತನ್ಯವು ಪ್ರತಿಯೊಬ್ಬ ಹೃದಯವನ್ನೂ ಆಳವಾದ ಸಂತೋಷದಿಂದ ತುಂಬಿತು."
"सोमनाथ अमृत महोत्सव के पावन अवसर पर आकाश में गौरव और शौर्य का अद्भुत संगम देखने को मिला। भारतीय वायु सेना की 'सूर्य किरण' एरोबेटिक टीम ने सोमनाथ मंदिर के ऊपर अपने फ्लाईपास्ट से केसरिया और तिरंगे की आभा बिखेर दी। श्रद्धा और शक्ति के इस दृश्य ने हर भारतीय के मन को गर्व से भर दिया!"
*****
(ಪ್ರಕಟಣೆ ಐ.ಡಿ.: 2259853)
ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam