ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ದೇಶಾದ್ಯಂತ ನಾಳೆ ಏಪ್ರಿಲ್ 24, 2026 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುವುದು


ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂದೇಶವನ್ನು ಓದಲಾಗುವುದು

ಪ್ರಕಟಣಾ ದಿನಾಂಕ: 23 APR 2026 7:27PM by PIB Bengaluru

ಪಂಚಾಯತ್ ರಾಜ್ ಸಚಿವಾಲಯವು ಏಪ್ರಿಲ್ 24, 2026 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು (ಎನ್.ಟಿ.ಆರ್.ಡಿ.) ಆಚರಿಸಲಿದೆ. ಪ್ರತಿ ವರ್ಷ ಏಪ್ರಿಲ್ 24 ರಂದು ಆಚರಿಸಲಾಗುವ ಈ ದಿನವು ಭಾರತದಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳಿಗೆ (ಟಿ.ಆರ್.ಐ.) ಸಾಂವಿಧಾನಿಕ ಸ್ಥಾನಮಾನ ಮತ್ತು ಕಾನೂನು ಮಾನ್ಯತೆಯನ್ನು ನೀಡಿದ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಜಾರಿಗೆ ಬಂದ ದಿನವಾಗಿದೆ. ಈ ವರ್ಷ ಭಾರತದ ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಆ ನಿರ್ಣಾಯಕ ಮೈಲಿಗಲ್ಲಿನ 33 ವರ್ಷಗಳನ್ನು ಸೂಚಿಸುತ್ತದೆ.

ರಾಷ್ಟ್ರೀಯ ಕಾರ್ಯಕ್ರಮದ ಮಹತ್ವದ ಅಂಶವೆಂದರೆ, ನವದೆಹಲಿಯಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಂದೇಶವನ್ನು ಓದಲಾಗುವುದು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ ರಾಜ್ ಇಲಾಖೆಗಳ ಮೂಲಕ, ದೇಶಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಪ್ರಧಾನಮಂತ್ರಿಯವರ ಸಂದೇಶವನ್ನು ಪ್ರಸಾರ ಮಾಡಲಾಗುತ್ತದೆ. ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಘೇಲ್ ಭಾಗವಹಿಸಲಿದ್ದಾರೆ. ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹರಿಯಾಣದ ಪಿ.ಆರ್‌.ಐ.ಗಳ ಚುನಾಯಿತ ಪ್ರತಿನಿಧಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ, "ಪಂಚಾಯತ್ ಅಡ್ವಾನ್ಸ್‌ಮೆಂಟ್ ಇಂಡೆಕ್ಸ್ (ಪಿಎಐ)-2.0 ವರದಿ" ಮತ್ತು 'ನನ್ನ ಪಂಚಾಯತ್ ನನ್ನ ಪರಂಪರೆ(ಮೇರಿ ಪಂಚಾಯತ್ ಮೇರಿ ಧರೋಹರ್)' ಕುರಿತು 3 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸಚಿವಾಲಯದ 'ಪಂಚಾಯತ್ ಧರೋಹರ್ ಇನಿಶಿಯೇಟಿವ್' ಅಡಿಯಲ್ಲಿ,  ತ್ರಿಪುರದ ಗ್ರಾಮೀಣ ಪರಂಪರೆಯ ಕುರಿತು ಪ್ರಬಂಧ, ತಿರುಪತಿಯ ಗ್ರಾಮೀಣ ಪರಂಪರೆಯ ಕುರಿತು ಪ್ರಬಂಧ ಮತ್ತು 'ಉತ್ತರಕಾಶಿ: ಸೌಮ್ಯ ಕಾಶಿ: ಹಿಮಾಲಯನ್ ಪರಂಪರೆಯ ಆತ್ಮ' - ಎಂಬ ಗ್ರಾಮೀಣ ಪರಂಪರೆಯ ಕುರಿತು ಮೂರು ಸಚಿತ್ರ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗುವುದು.

ದೇಶಾದ್ಯಂತ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುವುದು, ಇದರಲ್ಲಿ ಗ್ರಾಮ ಪಂಚಾಯತ್‌ ಗಳು ಗ್ರಾಮ ಸಭಾ ಸಭೆಗಳನ್ನು ನಡೆಸುತ್ತವೆ, ತಳಮಟ್ಟದಲ್ಲಿ ಭಾಗವಹಿಸುವ ಪ್ರಜಾಪ್ರಭುತ್ವದ ಮನೋಭಾವವನ್ನು ಪುನರುಚ್ಚರಿಸುತ್ತವೆ. ವಿಕಸಿತ  ಭಾರತದ ಕಡೆಗೆ ಪ್ರಗತಿಯನ್ನು ತೀವ್ರಗೊಳಿಸುವಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಪಾತ್ರವನ್ನು ಗುರುತಿಸಲು ಈ ದಿನವು ಒಂದು ವಿಶೇಷ ಸಂದರ್ಭವನ್ನು ಒದಗಿಸಿಕೊಡುತ್ತದೆ.

MoPR Highlights

 

*****


(ಪ್ರಕಟಣೆ ಐ.ಡಿ.: 2255018) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: Gujarati , English , Urdu , हिन्दी