ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂತರಿಕ ಜ್ಞಾನದ ಮಹತ್ವವನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 09 APR 2026 8:04AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಮ್ಮ ಆಂತರಿಕ ಜ್ಞಾನವು ವಿಶ್ವದ ನಿಜವಾದ ಸಾರವೆಂಬುದನ್ನು ಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. 

ನಿಜವಾದ ಜ್ಞಾನ ಹಾಗೂ ಅದರ ಸಮರ್ಪಕ ಉಪಯೋಗವೇ ದೇಶದ ಪ್ರಗತಿಯ ಆಧಾರವೆಂದು ಭಾರತದ ಪರಂಪರೆ ಮತ್ತು ಸಂಸ್ಕೃತಿ ಸದಾ ನಮಗೆ ಬೋಧನೆ ಮಾಡುತ್ತಾ ಬಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಮಾರ್ಗವನ್ನು ಅನುಸರಿಸುವ ಮೂಲಕ ದೇಶದ ಯುವಕರು ಸಮೃದ್ಧ ಮತ್ತು ಶಕ್ತಿಶಾಲಿ ಭಾರತ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸಾಮಾನ್ಯ ಜ್ಞಾನವನ್ನು ಮೀರಿಸುವ ಈ ಆಂತರಿಕ ಜ್ಞಾನ ನಮ್ಮೊಳಗೇ ಅಡಗಿದ್ದು, ಅದನ್ನು ಮಹಾನ್ ವ್ಯಕ್ತಿಗಳು ಮತ್ತು ಜ್ಞಾನಿಗಳು ಆರಾಧಿಸುತ್ತಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. 

ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:

"हमारी विरासत और संस्कृति हमें यही सिखाती आई है कि सच्चा ज्ञान और उसका सदुपयोग ही राष्ट्र की प्रगति का आधार है। इसी मार्ग पर चलकर आज हमारे देश के युवा समृद्ध और सशक्त भारत को गढ़ने में जुटे हैं।

अन्तःस्थमेव यज्ज्ञानं ज्ञानादपि च यत्परम्।
तदेव सर्वसंसारसारं सद्भिरुपास्यते॥"

ನಮ್ಮೊಳಗೆ ನೆಲೆಸಿರುವ, ಸಾಮಾನ್ಯ ಅಥವಾ ಬಾಹ್ಯ ಜ್ಞಾನವನ್ನು ಮೀರಿಸುವ ಜ್ಞಾನವೇ ಈ ಸಂಪೂರ್ಣ ಬ್ರಹ್ಮಾಂಡದ ನಿಜವಾದ ಸಾರವಾಗಿದೆ. ಇದೇ ಆಂತರಿಕ ಜ್ಞಾನವನ್ನು ಮಹಾನ್ ವ್ಯಕ್ತಿಗಳು ಮತ್ತು ಜ್ಞಾನಿಗಳು ಆರಾಧಿಸುತ್ತಾರೆ.

 

*****


(ಪ್ರಕಟಣೆ ಐ.ಡಿ.: 2250368) ವಿಸಿಟರ್ ಕೌಂಟರ್ : 15