ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಹೆದ್ದಾರಿ ಮತ್ತು ರೈಲ್ವೆ ಯೋಜನೆಗಳಲ್ಲಿ ಆರ್.ಒ.ಬಿ.(ಮೇಲ್ಸೇತುವೆ ರಸ್ತೆ) ಗಾಗಿ ಅನುಮೋದನೆ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ವೇಗಗೊಳಿಸಲು PRISM-SG ಪೋರ್ಟಲ್ ಆರಂಭ
ಪ್ರಕಟಣಾ ದಿನಾಂಕ:
25 MAR 2026 6:26PM by PIB Bengaluru
ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಅಂತರ-ಸಂಸ್ಥೆಗಳ ಸಮನ್ವಯವನ್ನು ಹೆಚ್ಚಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೊಂದಿಗೆ ಇಂದು ಹೊಸದಿಲ್ಲಿಯಲ್ಲಿ PRISM-SG- ಎಂಬ ರೈಲು-ರಸ್ತೆ ತಪಾಸಣೆ ಮತ್ತು ಹಂತಗಳ ನಿರ್ವಹಣೆಗಾಗಿ ಪೋರ್ಟಲ್ - ಸ್ಟೀಲ್ ಗರ್ಡರ್‌ಗಳು) ಪೋರ್ಟಲ್ ಪ್ರಾರಂಭಿಸಿದರು.

PRISM-SG ಪೋರ್ಟಲನ್ನು ಮೇಲ್ಸೇತುವೆಗಳ ರಸ್ತೆ (ROBs) ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮುಖ ಅನುಮೋದನೆ ಮತ್ತು ತಪಾಸಣೆ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಅಭಿವೃದ್ಧಿಪಡಿಸಲಾಗಿದೆ ಮತ್ತು ಗುಣಮಟ್ಟ ಭರವಸೆ ಯೋಜನೆ (ಕ್ಯೂ.ಎ.ಪಿ-QAP), ವೆಲ್ಡಿಂಗ್ ಕಾರ್ಯವಿಧಾನದ ನಿರ್ದಿಷ್ಟತೆಯ ಹಾಳೆ (ಡಬ್ಲ್ಯು.ಪಿ.ಎಸ್.ಎಸ್.) ಮತ್ತು ಉಕ್ಕಿನ ಗಿರ್ಡರ್‌ಗಳ ತಯಾರಿಕೆ ಹಂತದ ತಪಾಸಣೆಯನ್ನು ಸಹ ಒಳಗೊಂಡಿದೆ. ಪೋರ್ಟಲ್ ದಾಖಲೆಗಳ ಆರಂಭದಿಂದ ಕೊನೆಯವರೆಗೆ ಆನ್‌ಲೈನ್ ಸಲ್ಲಿಕೆ, ಪರಿಶೀಲನೆ, ಪ್ರಶ್ನೆಗಳ ಎತ್ತುವಿಕೆ ಮತ್ತು ಪರಿಹಾರ, ಅನುಮೋದನೆಗಳು, ತಪಾಸಣೆಗಳ ವೇಳಾಪಟ್ಟಿ ಹಾಗು ತಪಾಸಣೆ ವರದಿಗಳು, ಛಾಯಾಚಿತ್ರಗಳು, ಪರೀಕ್ಷಾ ಫಲಿತಾಂಶಗಳನ್ನು ಅಪ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ, ಇದನ್ನು ಸಂಪೂರ್ಣ ಆಡಿಟ್ ಟ್ರಯಲ್ ಮತ್ತು ನೈಜ-ಸಮಯದ ಮೇಲ್ವಿಚಾರಣಾ ಸಾಮರ್ಥ್ಯಗಳಿಂದ ಬೆಂಬಲಿಸಲಾಗುತ್ತದೆ.
ಪ್ರಸ್ತುತ, ಆರ್.ಒ.ಬಿ. ಗಳ ನಿರ್ಮಾಣಕ್ಕೆ ಭಾರತೀಯ ರೈಲ್ವೆಯಿಂದ ಜನರಲ್ ಅರೇಂಜ್ಮೆಂಟ್ ಡ್ರಾಯಿಂಗ್ (ಜಿ.ಎ.ಡಿ.-GAD), ಸ್ಟ್ರಕ್ಚರಲ್ ಡ್ರಾಯಿಂಗ್ಸ್, ಕ್ವಾಲಿಟಿ ಅಶ್ಯೂರೆನ್ಸ್ ಪ್ಲಾನ್ (ಕ್ಯೂ.ಎ.ಪಿ.), ವೆಲ್ಡಿಂಗ್ ಪ್ರೊಸೀಜರ್ ಸ್ಪೆಸಿಫಿಕೇಶನ್ ಶೀಟ್ (ಡಬ್ಲ್ಯು.ಪಿ.ಎಸ್.ಎಸ್.) ಮತ್ತು ಸ್ಟೀಲ್ ಗಿರ್ಡರ್‌ಗಳ ಫ್ಯಾಬ್ರಿಕೇಶನ್ ಹಂತದ ತಪಾಸಣೆಯಂತಹ ಬಹು ಅನುಮೋದನೆಗಳು ಬೇಕಾಗುತ್ತವೆ. ಜಿ.ಎ.ಡಿ ಮತ್ತು ಸ್ಟ್ರಕ್ಚರಲ್ ಡ್ರಾಯಿಂಗ್‌ಗಳಿಗೆ ಅನುಮೋದನೆಗಳನ್ನು ಆರ್.ಆರ್.ಸಿ.ಎ.ಎಸ್. ಪೋರ್ಟಲ್ ಮೂಲಕ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆಯಾದರೂ, ಕ್ಯು.ಎ.ಪಿ, ಡಬ್ಲ್ಯು.ಪಿ.ಎಸ್.ಎಸ್. ಮತ್ತು ಫ್ಯಾಬ್ರಿಕೇಶನ್ ತಪಾಸಣೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಹೆಚ್ಚಾಗಿ ಆಫ್‌ಲೈನ್ ಅಥವಾ ಭೌತಿಕ ವಿಧಾನಗಳ ಮೂಲಕ ಕೈಗೊಳ್ಳಲಾಗುತ್ತದೆ. ಇದು ಸಾಮಾನ್ಯವಾಗಿ ಸೀಮಿತ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಪಾಲುದಾರರಲ್ಲಿ ಸಮನ್ವಯಕ್ಕೆ ಸಂಬಂಧಿಸಿ ವಿಳಂಬಕ್ಕೆ ಕಾರಣವಾಗುತ್ತದೆ.
ಹೊಸದಾಗಿ ಪ್ರಾರಂಭಿಸಲಾದ PRISM-SG ಪೋರ್ಟಲ್ ರಸ್ತೆ ಮಾಲೀಕತ್ವ ಹೊಂದಿರುವ ಇಲಾಖೆಗಳು, ಭಾರತೀಯ ರೈಲ್ವೆಗಳು, ಗುತ್ತಿಗೆದಾರರು, ಫ್ಯಾಬ್ರಿಕೇಟರ್‌ಗಳು ಮತ್ತು ತಪಾಸಣೆ ಏಜೆನ್ಸಿಗಳು ಸೇರಿದಂತೆ ಎಲ್ಲಾ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುವ ಸಂಯೋಜಿತ ಡಿಜಿಟಲ್ ವೇದಿಕೆಯನ್ನು ಒದಗಿಸುವ ಮೂಲಕ ಈ ಸವಾಲುಗಳನ್ನು ಪರಿಹರಿಸುತ್ತದೆ.
ಈ ಉಪಕ್ರಮವು ಅನುಮೋದನೆ ಮತ್ತು ತಪಾಸಣೆ ಸಮಯವನ್ನು ಸರಿಸುಮಾರು 12 ತಿಂಗಳುಗಳಿಂದ ಸುಮಾರು 3 ರಿಂದ 4 ತಿಂಗಳುಗಳಿಗೆ ಇಳಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಯೋಜನೆಯ ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ/ಉತ್ತರದಾಯಿತ್ವ ಸುಧಾರಿಸುತ್ತದೆ. ಇದು ಆರ್‌ಒಬಿಗಳು ಮತ್ತು ರೈಲ್ವೆ ಸೇತುವೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದು, ಮೂಲಸೌಕರ್ಯ ವಿತರಣೆಯನ್ನು ಬಲಪಡಿಸುವುದು ಮತ್ತು ದೇಶಾದ್ಯಂತ ಸಂಪರ್ಕವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
*****
(ಪ್ರಕಟಣೆ ಐ.ಡಿ.: 2245476)
ವಿಸಿಟರ್ ಕೌಂಟರ್ : 13