ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ʻಸ್ವಾಮಿತ್ವʼ ಆಸ್ತಿ ಕಾರ್ಡ್‌ಗಳ ವಿತರಣೆ

ಪ್ರಕಟಣಾ ದಿನಾಂಕ: 25 MAR 2026 1:58PM by PIB Bengaluru

ʻಸ್ವಾಮಿತ್ವ ಯೋಜನೆʼ ಅಡಿಯಲ್ಲಿ, 19ನೇ ಮಾರ್ಚ್ 2026ರಂತೆ, ಉದ್ದೇಶಿತ 3.44 ಲಕ್ಷ ಹಳ್ಳಿಗಳ ಪೈಕಿ 3.29 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. 1.87 ಲಕ್ಷ ಗ್ರಾಮಗಳಿಗೆ 3.10 ಕೋಟಿ ಆಸ್ತಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ ಮತ್ತು 2.65 ಕೋಟಿ ಆಸ್ತಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸಿದ್ಧಪಡಿಸಿದ ಮತ್ತು ವಿತರಿಸಿದ ಆಸ್ತಿ ಕಾರ್ಡ್‌ಗಳ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳನ್ನು ಅನುಬಂಧ-I ರಲ್ಲಿ ನೀಡಲಾಗಿದೆ.

19 ಮಾರ್ಚ್ 2026 ರಂತೆ, ಉದ್ದೇಶಿತ 3.44 ಲಕ್ಷ ಹಳ್ಳಿಗಳ ಪೈಕಿ 3.29 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. ಡ್ರೋನ್ ಸಮೀಕ್ಷೆ ಮತ್ತು ನಕ್ಷೆ ತಯಾರಿಕೆಗಾಗಿ ಪಂಚಾಯತ್ ರಾಜ್ ಸಚಿವಾಲಯವು ಸರ್ವೇಕ್ಷಣಾ ಇಲಾಖೆಗೆ ಹಣವನ್ನು ಒದಗಿಸುತ್ತದೆ. ಆಸ್ತಿ ಕಾರ್ಡ್‌ಗಳ ತಯಾರಿಕೆ ಮತ್ತು ವಿತರಣೆಯಂತಹ ನಂತರದ ಚಟುವಟಿಕೆಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತವೆ. ಆಸ್ತಿ ಕಾರ್ಡ್‌ಗಳ ವಿತರಣೆಯನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಒಪ್ಪಿಗೆಯೊಂದಿಗೆ ಮಾಡಲಾಗುತ್ತದೆ. ಯೋಜನೆಯ ಪ್ರಗತಿ ಮತ್ತು ಸಮಯೋಚಿತ ಪೂರ್ಣಗೊಳಿಸುವಿಕೆಯ ನಿಯಮಿತ ಮೇಲ್ವಿಚಾರಣೆಗಾಗಿ ಪಂಚಾಯತ್ ರಾಜ್ ಸಚಿವಾಲಯವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಹಾಗೂ ಭಾರತೀಯ ಸರ್ವೇಕ್ಷಣಾ ಇಲಾಖೆಯೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದೆ.

ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಆಸ್ತಿ ಮಾಲೀಕರಿಗೆ ಹಕ್ಕುಗಳ ದಾಖಲೆಯನ್ನು ಒದಗಿಸುವುದು ʻಸ್ವಾಮಿತ್ವ ಯೋಜನೆʼಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ, ಗ್ರಾಮೀಣ ಜನವಸತಿ ಭೂಮಿಯನ್ನು 'ಡ್ರೋನ್ ಸಮೀಕ್ಷೆ' ಮತ್ತು 'ನಿರಂತರ ಕಾರ್ಯಾಚರಣಾ ಪರಾಮರ್ಶೆ ಕೇಂದ್ರ' (ಸಿಒಆರ್‌ಎಸ್) ತಂತ್ರಜ್ಞಾನವನ್ನು ಬಳಸಿಕೊಂಡು ಗುರುತಿಸಲಾಗಿದೆ. ಗ್ರಾಮಗಳ ʻಆಬಾದಿʼ ಪ್ರದೇಶಗಳ ಹೆಚ್ಚಿನ ನಿಖರತೆಯ ನಕ್ಷೆಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ. ಈ ಹೆಚ್ಚು ನಿಖರವಾದ ನಕ್ಷೆಗಳು ಆಸ್ತಿ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸುವ ಮೂಲಕ ಮತ್ತು ಹಕ್ಕುಗಳ ದಾಖಲೆಯನ್ನು ರಚಿಸುವ ಮೂಲಕ ಆಸ್ತಿ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದಲ್ಲದೆ, ಪಾರದರ್ಶಕ ನೆಲದ ಪರಿಶೀಲನೆ ಮತ್ತು ವಿವಾದ ಪರಿಹಾರ ಪ್ರಕ್ರಿಯೆಯು ಮಾಲೀಕತ್ವದ ದಾಖಲೆಗಳನ್ನು ನ್ಯಾಯಯುತವಾಗಿ ಮತ್ತು ನಿಖರವಾಗಿ ಅಂತಿಮಗೊಳಿಸುವುದನ್ನು ಖಚಿತಪಡಿಸುತ್ತದೆ.

ಈ ಯೋಜನೆಯನ್ನು ಸಂಪೂರ್ಣವಾಗಿ ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತರಲಾಗಿದೆ. ಇದರಲ್ಲಿ ಆಸ್ತಿ ಕಾರ್ಡ್‌ಗಳನ್ನು ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ನೀಡುವುದರಿಂದ ವಿವಾದದ ಸಾಧ್ಯತೆ ನಗಣ್ಯವಾಗಿದೆ. ಆಸ್ತಿ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡಲು ʻಸ್ವಾಮಿತ್ವ ಆಸ್ತಿ ಕಾರ್ಡ್ʼ ಸಹಾಯ ಮಾಡಿದೆ ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾದ ವಿವಿಧ ಪ್ರಕರಣಗಳು ಸೂಚಿಸುತ್ತವೆ. ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಹಳ್ಳಿಯೊಂದರ ಮನೆ ಮಾಲೀಕರೊಬ್ಬರು, ಸ್ವಾಮಿತ್ವ ಯೋಜನೆಯ ಸಹಾಯದಿಂದ ಅಂತಿಮವಾಗಿ ತಮ್ಮ ಕುಟುಂಬವನ್ನು ವರ್ಷಗಳಿಂದ ತೊಂದರೆಗೀಡು ಮಾಡುತ್ತಿದ್ದ ಆಸ್ತಿ ವಿವಾದವನ್ನು ಪರಿಹರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಸ್ಪಷ್ಟ ಮತ್ತು ಪಾರದರ್ಶಕ ಮ್ಯಾಪಿಂಗ್ ಪ್ರಕ್ರಿಯೆಯು ಭೂಮಿಯ ನ್ಯಾಯಯುತ ವಿಭಜನೆಯನ್ನು ಖಚಿತಪಡಿಸಿತು ಮತ್ತು ಅಧಿಕೃತ ಆಸ್ತಿ ಕಾರ್ಡ್ ಮೂಲಕ ಅವರು ಈಗ ತಮ್ಮ ಪಾಲಿನ ಕಾನೂನುಬದ್ಧ ಮಾಲೀಕತ್ವವನ್ನು ಹೊಂದಿದ್ದಾರೆ. ಇದು ಕುಟುಂಬಗಳು ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಿದೆ. ʻಸ್ವಾಮಿತ್ವ ಆಸ್ತಿ ಕಾರ್ಡ್‌ʼಗಳ ಆಧಾರದ ಮೇಲೆ ಬ್ಯಾಂಕುಗಳಿಂದಲೂ ಸಾಲ ಪಡೆಯಬಹುದು.

ಪಂಚಾಯತ್ ರಾಜ್ ಸಚಿವಾಲಯವು ಫಲಾನುಭವಿಗಳ ಸಂಖ್ಯೆಯ ಲಿಂಗವಾರು ದಾಖಲೆಯನ್ನು ನಿರ್ವಹಿಸುವುದಿಲ್ಲ. ಆದರೆ ರಾಜ್ಯಗಳು ಮಹಿಳೆಯರಿಗೆ ಸಹ-ಮಾಲೀಕತ್ವದ ಹಕ್ಕುಗಳನ್ನು ಒದಗಿಸುವ ಆಸ್ತಿ ಕಾರ್ಡ್‌ಗಳನ್ನು ನೀಡುವ ಅಧಿಕಾರ ಹೊಂದಿವೆ. ಅದರಂತೆ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ, ಮಿಜೋರಾಂ, ಛತ್ತೀಸ್‌ಗಢದಂತಹ ಕೆಲವು ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ದಿಯು ಮತ್ತು ದಮನ್ ಹಾಗೂ ದಾದ್ರಾ ಮತ್ತು ನಗರ್ ಹವೇಲಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಸ್ತಿ ಕಾರ್ಡ್‌ಗಳಲ್ಲಿ ಮಹಿಳೆಯರ ಸಹ-ಮಾಲೀಕತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅನುಬಂಧ-I

ಕ್ರ.ಸಂ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು

ಅಧಿಸೂಚಿತ ಗ್ರಾಮಗಳು

ಡ್ರೋನ್ ಸಮೀಕ್ಷೆ ಪೂರ್ಣಗೊಂಡ ಗ್ರಾಮಗಳು

ಆಸ್ತಿ ಕಾರ್ಡ್ ಸಿದ್ಧಪಡಿಸಿದ ಗ್ರಾಮಗಳ ಸಂಖ್ಯೆ

ಸಿದ್ಧಪಡಿಸಿದ ಆಸ್ತಿ ಕಾರ್ಡ್‌ಗಳ ಸಂಖ್ಯೆ

ವಿತರಿಸಿದ ಆಸ್ತಿ ಕಾರ್ಡ್‌ಗಳ ಸಂಖ್ಯೆ

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

186

186

141

7409

7409

2

ಆಂಧ್ರ ಪ್ರದೇಶ

13321

13321

1067

530351

0

3

ಅರುಣಾಚಲ ಪ್ರದೇಶ

3647

3647

0

0

0

4

ಅಸ್ಸಾಂ

946

946

0

0

0

5

ಛತ್ತೀಸ್‌ಗಢ

15791

15791

2557

196757

92545

6

ದಾದ್ರಾ ನಗರ್ ಹವೇಲಿ ಮತ್ತು ದಿಯು ದಮನ್

80

80

75

4397

4397

7

ದೆಹಲಿ

31

31

0

0

0

8

ಗೋವಾ

410

410

410

672646

672646

9

ಗುಜರಾತ್

15025

14900

10122

1658089

1232223

10

ಹರಿಯಾಣ

6260

6260

6260

2515646

2515646

11

ಹಿಮಾಚಲ ಪ್ರದೇಶ

15196

14108

364

5419

5395

12

ಜಮ್ಮು ಮತ್ತು ಕಾಶ್ಮೀರ

4429

4402

1294

43910

39418

13

ಜಾರ್ಖಂಡ್

757

240

0

0

0

14

ಕರ್ನಾಟಕ

30715

26039

5032

1054754

336779

15

ಕೇರಳ

597

597

0

0

0

16

ಲಡಾಖ್

232

232

225

18788

15623

17

ಲಕ್ಷದ್ವೀಪ ದ್ವೀಪಗಳು

10

10

10

13563

13563

18

ಮಧ್ಯಪ್ರದೇಶ

43014

43014

39813

6576707

5418319

19

ಮಹಾರಾಷ್ಟ್ರ

37819

37612

22609

3785481

3785481

20

ಮಣಿಪುರ

2555

207

0

0

0

21

ಮಿಜೋರಾಂ

568

568

30

4041

1,155

22

ಒಡಿಶಾ

2724

2724

43

1716

1,716

23

ಪುದುಚೇರಿ

96

96

92

2801

2,801

24

ಪಂಜಾಬ್

12083

10283

386

53591

4581

25

ರಾಜಸ್ಥಾನ

36,300

35929

15163

1443423

1443423

26

ಸಿಕ್ಕಿಂ

1

1

0

0

0

27

ತಮಿಳುನಾಡು

3

3

0

0

0

28

ತೆಲಂಗಾಣ

5

5

0

0

0

29

ತ್ರಿಪುರಾ

898

19

893

571783

571783

30

ಉತ್ತರ ಪ್ರದೇಶ

90573

90573

73713

11582743

10131232

31

ಉತ್ತರಾಖಂಡ

7441

7441

7441

278229

278,229

 

ಒಟ್ಟು

3,44,001

3,29,675

1,87,665

3,10,10,249

2,65,70,115

ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು 2026ರ ಮಾರ್ಚ್ 25ರಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2245005) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी