ಹಣಕಾಸು ಸಚಿವಾಲಯ
azadi ka amrit mahotsav

ನಾಗರಿಕರ ಕ್ಲೈಮು ಪಡೆಯದ ಠೇವಣಿಗಳನ್ನು ಹಿಂದಿರುಗಿಸಲು ಆರ್‌ಬಿಐ, ಐಆರ್‌ಡಿಎಐ ಮತ್ತು ಸೆಬಿಯಿಂದ ಕ್ರಮಗಳು ತೀವ್ರ


ಕ್ಲೈಮ್ ವಿಧಾನಗಳ ಸರಳೀಕರಣ, ಡಿಜಿಟಲ್ ಪೋರ್ಟಲ್‌ಗಳು ಮತ್ತು ನಿಯಂತ್ರಕ ಸುಧಾರಣೆಗಳ ಪ್ರವೇಶ ಹೆಚ್ಚಳ, ಪಾರದರ್ಶಕತೆ ಮತ್ತು ತ್ವರಿತ ಕ್ಲೈಮ್ ಇತ್ಯರ್ಥಕ್ಕೆ ಅವಕಾಶ

"ನಿಮ್ಮ ಹಣ, ನಿಮ್ಮ ಹಕ್ಕು" ಎಂಬ ರಾಷ್ಟ್ರವ್ಯಾಪಿ ಅಭಿಯಾನದಡಿ 22.95 ಲಕ್ಷ ಕ್ಲೈಮ್‌ಗಳಿಗೆ ಸೇರಿರುವ 5,777 ಕೋಟಿ ರೂ. ಮೌಲ್ಯದ ಕ್ಲೈಮ್ ಮಾಡದ ಹಣಕಾಸು ಸ್ವತ್ತುಗಳನ್ನು ಹಿಂತಿರುಗಿಸಲಾಗಿದೆ

ಪ್ರಕಟಣಾ ದಿನಾಂಕ: 24 MAR 2026 4:06PM by PIB Bengaluru

ಹಣಕಾಸು ವಲಯದ ನಿಯಂತ್ರಕ ಸಂಸ್ಥೆಗಳಾದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ), ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮತ್ತು ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ(ಸೆಬಿ) ಸೇರಿ 28.02.2026ರ ವರೆಗೆ ಅನ್ವಯವಾಗುವಂತೆ, ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿಗಳು) ಆರ್‌ಬಿಐನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ(ಡಿಇಎ) ನಿಧಿಗೆ ವರ್ಗಾಯಿಸಿದ ಕ್ಲೈಮ್ ಮಾಡದ ಮೊತ್ತವೇ 60,518 ಕೋಟಿ ರೂ.(31.1.2026ರ ವರೆಗೆ ಅನ್ವಯವಾಗುವಂತೆ) ಇದೆ ಎಂದು ತಿಳಿಸಿವೆ. ಇದಲ್ಲದೆ, ವಿಮಾದಾರರ ಬಾಕಿ ಇರುವ ಕ್ಲೈಮ್ ಮಾಡದ ವಿಮಾ ಮೊತ್ತವೇ 8,973.89 ಕೋಟಿ (28.2.2026ರ ವರೆಗೆ ಅನ್ವಯವಾಗುವಂತೆ) ರೂ. ಇದೆ. ಅಲ್ಲದೆ, ಸೆಬಿ ನಿಯಂತ್ರಕಗಳ ಅಡಿ, ಮ್ಯೂಚುವಲ್ ಫಂಡ್‌ಗಳಲ್ಲಿ ಕ್ಲೈಮ್ ಮಾಡದ ಮೊತ್ತದ ಮೌಲ್ಯವೇ 3,749.34 ಕೋಟಿ ರೂ.(28.2.2026ರ ವರೆಗೆ ಅನ್ವಯವಾಗುವಂತೆ) ಬಾಕಿ ಇದೆ.

ಕ್ಲೈಮುದಾರರನ್ನು ಸಕಾಲದಲ್ಲಿ ಗುರುತಿಸುವುದನ್ನು ಖಚಿತಪಡಿಸಿಕೊಳ್ಳಲು, ಕ್ಲೇಮು ಪಡೆಯದ ಹಣಕಾಸು ಸ್ವತ್ತುಗಳ ಹಾಲಿ ಇರುವ ಬಾಕಿ ಮೊತ್ತ ಮತ್ತು ಕ್ಲೇಮುದಾರರ ತಾಜಾ ಬಾಕಿ ಮೊತ್ತವನ್ನು ಕಡಿಮೆ ಮಾಡಲು ಮತ್ತು ನಾಗರಿಕರಿಗೆ ಕ್ಲೇಮು ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ತ್ವರಿತಗೊಳಿಸಲು, ಹಣಕಾಸು ವಲಯದ ನಿಯಂತ್ರಕ ಸಂಸ್ಥೆಗಳು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಅವುಗಳೆಂದರೆ, ಇತರೆ ವಿಷಯಗಳ ನಡುವೆ, ಈ ಕೆಳಗಿನವುಗಳು ಆಗಿವೆ:

  1. ಬ್ಯಾಂಕ್‌ಗಳ ಮೃತ ಗ್ರಾಹಕರಿಗೆ ಸಂಬಂಧಿಸಿದ ಕ್ಲೈಮ್‌ಗಳ ಇತ್ಯರ್ಥ ಕುರಿತು ಆರ್‌ಬಿಐ ಸಮಗ್ರ ನಿರ್ದೇಶನಗಳನ್ನು ಹೊರಡಿಸಿದೆ, ಇವುಗಳನ್ನು ಈಗ ಆರ್‌ಬಿಐ ಜವಾಬ್ದಾರಿಯುತ ವ್ಯವಹಾರ ನಡವಳಿಕೆ ನಿರ್ದೇಶನಗಳು- 2025ರ ಅಡಿ ಸಂಯೋಜಿಸಲಾಗಿದೆ, ಇದು 1.10.2025ರಿಂದ ಜಾರಿಗೆ ಬರುವ ಉತ್ತೇಜಕ ಯೋಜನೆಯಾಗಿದ್ದು, ಕ್ಲೈಮ್‌ಗಳ ಯಶಸ್ವಿ ಇತ್ಯರ್ಥಕ್ಕಾಗಿ ಕ್ಲೈಮ್ ಮಾಡದ ಠೇವಣಿ ಮೊತ್ತದ 5%-7.5% (ಒಂದು ಮಿತಿಗೆ ಒಳಪಟ್ಟಿರುತ್ತದೆ) ಪಾವತಿ ಒದಗಿಸುತ್ತದೆ. ಠೇವಣಿದಾರರು ಅಥವಾ ನಾಮನಿರ್ದೇಶಿತರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಪತ್ತೆ ಹಚ್ಚುವ ಸಲುವಾಗಿ, ಕ್ಲೇಮ್ ಮಾಡದ ಠೇವಣಿಗಳ ಪಟ್ಟಿಗಳನ್ನು ಪ್ರಕಟುವಂತೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. 2025ರ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆಯು ಬ್ಯಾಂಕ್ ಖಾತೆಗಳಲ್ಲಿ ಬಹು ನಾಮನಿರ್ದೇಶನಗಳನ್ನು ಸಕ್ರಿಯಗೊಳಿಸಿದೆ, ಇದರಲ್ಲಿ 4ರ ವರೆಗೆ ಸತತ ಮತ್ತು ಏಕಕಾಲಿಕ ನಾಮನಿರ್ದೇಶನಗಳು ಸೇರಿವೆ. ಇದಲ್ಲದೆ, ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಬ್ಯಾಂಕ್‌ಗಳ ಸಮರ್ಪಿತ ಪೋರ್ಟಲ್ ಮೂಲಕ ಕ್ಲೈಮ್ ಮಾಡದ ಠೇವಣಿಗಳ ಇತ್ಯರ್ಥಕ್ಕಾಗಿ ಸಾಮಾನ್ಯ ಅರ್ಜಿ ನಮೂನೆ ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‌ಒಪಿ)ವನ್ನು ಪರಿಚಯಿಸಿದೆ.
  2. ಪ್ರಸ್ತಾವಿತ ಮತ್ತು ನಾಮನಿರ್ದೇಶಿತರ ವಿವರಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ ಮತ್ತು ಪ್ರಸ್ತಾವನೆ ಹಂತದಲ್ಲೇ ಸಂಗ್ರಹಿಸುವುದು ಕಡ್ಡಾಯವಾಗಿದೆ ಎಂದು ಐಆರ್‌ಡಿಎಐ ತಿಳಿಸಿದೆ. ವಿಮಾದಾರರು ತಮ್ಮ ಕ್ಲೇಮ್‌ಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಕಳುಹಿಸುವ ಮೂಲಕ ತಮ್ಮ ಗ್ರಾಹಕರನ್ನು ತಲುಪಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಆರಂಭಿಸಲು ಮತ್ತು ಪಾವತಿಸದ ಮೊತ್ತದ ಸರಿಯಾದ ಫಲಾನುಭವಿಯನ್ನು ಪತ್ತೆ ಹಚ್ಚುವಲ್ಲಿ ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವಂತೆ ಮತ್ತು ಅದರ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದಲ್ಲದೆ, ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‌ಒಪಿ)ಗಳು, ಪದೇಪದೆ ಕೇಳಲಾಗುವ ಪ್ರಶ್ನೆ(ಎಫ್ಎಕ್ಯು)ಗಳು ಮತ್ತು ಜಾಗೃತಿ ವೀಡಿಯೊಗಳನ್ನು ಐಆರ್‌ಡಿಎಐ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
  3. ನಾಮನಿರ್ದೇಶನದ ಉತ್ತೇಜನ(ಪ್ರಚಾರ), 5 ಲಕ್ಷ ರೂ.ವರೆಗಿನ ಕ್ಲೈಮ್‌ಗಳಿಗೆ ಸರಳೀಕೃತ ದಸ್ತಾವೇಜು ಮತ್ತು ಭಾರತದಲ್ಲಿ ಮ್ಯೂಚುಯಲ್ ಫಂಡ್‌ಗಳ ಸಂಘದ ವೆಬ್‌ಸೈಟ್‌ನಲ್ಲಿ ವಿವಿಧ ಸನ್ನಿವೇಶಗಳಿಗೆ ಅಗತ್ಯವಿರುವ ನಮೂನೆಗಳು ಮತ್ತು ದಾಖಲೆಗಳನ್ನು ಒಳಗೊಂಡ ವಿವರವಾದ ಮಾರ್ಗಸೂಚಿಗಳ ಲಭ್ಯತೆ ಸೇರಿದಂತೆ ಪ್ರಸರಣ ಕಾರ್ಯವಿಧಾನಗಳನ್ನು ಸರಳೀಕರಿಸಲು ಸೆಬಿ, ಬಹು ಕ್ರಮಗಳನ್ನು ಪರಿಚಯಿಸಿದೆ. ಇದಲ್ಲದೆ, 27.6.2024ರಂದು ಸೆಬಿಯ ಮ್ಯೂಚುಯಲ್ ಫಂಡ್‌ಗಳ ಮೇಲಿನ ಮಾಸ್ಟರ್ ಸುತ್ತೋಲೆಯ ಪ್ರಕಾರ, ಬದಲಾವಣೆ(ಟರ್ನ್‌ಅರೌಂಡ್) ಸಮಯ ಸುಧಾರಿಸಲು ಮತ್ತು ಪ್ರಸರಣ ಪ್ರಕ್ರಿಯೆಯಲ್ಲಿ ಹೂಡಿಕೆದಾರರಿಗೆ ಸಹಾಯ ಮಾಡಲು ಸನರ್ಪಿತ ಸಹಾಯ ಕೇಂದ್ರ ಮತ್ತು ವೆಬ್‌ಪುಟ ಸ್ಥಾಪಿಸಲು ಸ್ವತ್ತು ನಿರ್ವಹಣಾ ಕಂಪನಿಗಳು(ಎಎಂಸಿಗಳು) ನಾಮಿನಿ/ಜಂಟಿ ಹೋಲ್ಡರ್ ಕ್ಲೈಮ್‌ಗಳಿಗಾಗಿ ಚಿತ್ರ ಆಧಾರಿತ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವ ಅಗತ್ಯವಿದೆ.

ಇದಲ್ಲದೆ, ನಾಗರಿಕರು ತಮ್ಮ ಕ್ಲೇಮು ಪಡೆಯದ ಹಣಕಾಸು ಸ್ವತ್ತುಗಳನ್ನು ಸರಳವಾಗಿ ಪತ್ತೆ ಹಚ್ಚಲು ಮತ್ತು ಕ್ಲೇಮು ಪಡೆಯಲು ಅನುವು ಮಾಡಿಕೊಡುವ ಉದ್ದೇಶದಿಂದ, ಹಣಕಾಸು ಸೇವೆಗಳ ಇಲಾಖೆಯು 2025 ಅಕ್ಟೋಬರ್–ಡಿಸೆಂಬರ್ ನಲ್ಲಿ ಆರ್‌ಬಿಐ, ಸೆಬಿ, ಐಆರ್‌ಡಿಎಐ ಸಹಭಾಗಿತ್ವದೊಂದಿಗೆ “ನಿಮ್ಮ ಹಣ, ನಿಮ್ಮ ಹಕ್ಕು” ಎಂಬ ಶೀರ್ಷಿಕೆಯ ರಾಷ್ಟ್ರವ್ಯಾಪಿ ಅಭಿಯಾನ ಆಯೋಜಿಸಿತ್ತು. 748 ಜಿಲ್ಲೆಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಿದೆ. 28.2.2026ರ ಹೊತ್ತಿಗೆ, 22.95 ಲಕ್ಷ ಕ್ಲೇಮುಗಳಿಗೆ ಸಂಬಂಧಿಸಿದಂತೆ 5,777 ಕೋಟಿ ರೂ. ಮೊತ್ತದ ಕ್ಲೈಮು ಪಡೆಯದ ಹಣಕಾಸು ಸ್ವತ್ತುಗಳನ್ನು ಸರಿಯಾದ ಮಾಲೀಕರಿಗೆ ಅಥವಾ ಫಲಾನುಭವಿಗಳಿಗೆ ಮರುಹಂಚಿಕೆ ಮಾಡಲಾಗಿದೆ.

2014ರ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ(ಡಿಇಎ) ಯೋಜನೆ ಪ್ರಕಾರ, ಬ್ಯಾಂಕುಗಳು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕಾರ್ಯ ನಿರ್ವಹಿಸದ ಖಾತೆಗಳಲ್ಲಿನ ಕ್ರೆಡಿಟ್ ಬ್ಯಾಲೆನ್ಸ್ ಅನ್ನು ಡಿಇಎ ನಿಧಿಗೆ ವರ್ಗಾಯಿಸುವುದು ಕಡ್ಡಾಯವಾಗಿದೆ. ಇದಲ್ಲದೆ, ಡಿಇಎ ನಿಧಿಗೆ ವರ್ಗಾಯಿಸಲಾದ ಠೇವಣಿದಾರರಿಗೆ ಬಾಕಿ ಇರುವ ಒಟ್ಟು ಕ್ಲೈಮ್ ಮಾಡದ ಠೇವಣಿಗಳ ಮೊತ್ತವು ಆಯಾ ಬ್ಯಾಂಕುಗಳ ಅನಿಶ್ಚಿತ ಹೊಣೆಗಾರಿಕೆಯ ಭಾಗವಾಗಿದೆ (ಬ್ಯಾಲೆನ್ಸ್ ಶೀಟ್‌ನಿಂದ ಹೊರಗಿರುವ ಐಟಂ ಆಗಿರುತ್ತದೆ).

ಆರ್‌ಬಿಐ ಕೇಂದ್ರೀಕೃತ ವೆಬ್ ಪೋರ್ಟಲ್ ಯುಡಿಜಿಎಎಂ (ಅನ್‌ಕ್ಲೇಮ್ಡ್ ಡೆಪಾಸಿಟ್ಸ್ - ಗೇಟ್‌ವೇ ಟು ಆಕ್ಸೆಸ್ ಇನ್‌ಫಾರ್ಮೇಷನ್) ಅಭಿವೃದ್ಧಿಪಡಿಸಿದೆ, ಇದು ನೋಂದಾಯಿತ ಬಳಕೆದಾರರಿಗೆ ಬಹು ಬ್ಯಾಂಕ್‌ಗಳಲ್ಲಿ ಕ್ಲೈಮು ಮಾಡದ ಠೇವಣಿಗಳು/ಖಾತೆಗಳನ್ನು ಒಂದೇ ಸ್ಥಳದಲ್ಲಿ ಹುಡುಕಲು ಅನುಕೂಲ ಕಲ್ಪಿಸುತ್ತದೆ. 1.3.2026ರ ಹೊತ್ತಿಗೆ ಯುಡಿಜಿಎಎಂ ಪೋರ್ಟಲ್‌ನಲ್ಲಿ 18.86 ಲಕ್ಷ ನೋಂದಾಯಿತ ಬಳಕೆದಾರರಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.

ಕ್ಲೈಮು ಪಡೆಯದ ವಿಮಾ ಆದಾಯ ಮತ್ತು ಮ್ಯೂಚುವಲ್ ಫಂಡ್ ಮೊತ್ತಗಳನ್ನು ಪತ್ತೆ ಹಚ್ಚಲು ಕ್ರಮವಾಗಿ ಐಆರ್‌ಡಿಎಐಯ ಬಿಮಾ ಭರೋಸಾ ಪೋರ್ಟಲ್ ಮತ್ತು ಸೆಬಿಯ ಮಿತ್ರ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೆ, ನಾಗರಿಕರು ತಮ್ಮ ಕ್ಲೈಮು ಪಡೆಯದ ಹಣಕಾಸು ಸ್ವತ್ತುಗಳನ್ನು ಹುಡುಕಲು ಮತ್ತು ಹಕ್ಕು ಪಡೆಯಲು ಅನುವು ಮಾಡಿಕೊಡುವ ಏಕೀಕೃತ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲು ಆರ್‌ಬಿಐ, ಅಂತರ-ನಿಯಂತ್ರಕ ಕಾರ್ಯ ಸಮೂಹವನ್ನು ರಚಿಸಿದೆ.

ಹಣಕಾಸು ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿಂದು ಸದನಕ್ಕೆ ಈ ಮಾಹಿತಿ ಒದಗಿಸಿದರು.

 

*****


(ಪ್ರಕಟಣೆ ಐ.ಡಿ.: 2244588) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu