ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

"ನನ್ನ  ಭಾರತ, ನನ್ನ ಜವಾಬ್ದಾರಿ" ಎಂಬ ಪರಿಕಲ್ಪನೆಯಡಿಯಲ್ಲಿ ದೇಶದಾದ್ಯಂತ 763 ಜಿಲ್ಲೆಗಳಲ್ಲಿ "ಶಹೀದ್ ದಿವಸ್ ಪಾದಯಾತ್ರೆ 2026" ಅನ್ನು "ನನ್ನ ಯುವ ಭಾರತ (ಮೈ ಭಾರತ್)" ಆಯೋಜಿಸಲಿದೆ


ಕೇಂದ್ರ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಾಡ್ಸೆ ಮತ್ತು ಹರಿಯಾಣ ಕ್ರೀಡಾ ಸಚಿವರಾದ ಶ್ರೀ ಗೌರವ್ ಗೌತಮ್ ಅವರು ಮಾರ್ಚ್ 23, 2026 ರಂದು ಫರಿದಾಬಾದ್‌ ನಲ್ಲಿ ಯುವಜನರ ನೇತೃತ್ವದ ರಾಷ್ಟ್ರವ್ಯಾಪಿ "ಶಹೀದ್ ದಿವಸ್ ಪಾದಯಾತ್ರೆ"ಯ ನೇತೃತ್ವ ವಹಿಸಲಿದ್ದಾರೆ

ಪ್ರಕಟಣಾ ದಿನಾಂಕ: 21 MAR 2026 4:38PM by PIB Bengaluru

ಭಾರತದ ಯುವ ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ಶಹೀದ್ ಶಿವರಾಮ್ ರಾಜಗುರು ಮತ್ತು ಶಹೀದ್ ಸುಖದೇವ್ ಥಾಪರ್ ಅವರ ಅಪ್ರತಿಮ ತ್ಯಾಗಕ್ಕೆ ಗೌರವ ಸಲ್ಲಿಸುವ ಸಲುವಾಗಿ, ಮೇರಾ ಯುವ ಭಾರತ್ (ನನ್ನ ಯುವ ಭಾರತ - ಎಂ.ವೈ.ಭಾರತ್) ಉಪಕ್ರಮದ ಮೂಲಕ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಮಾರ್ಚ್ 23, 2026 ರಂದು "ಶಹೀದ್ ದಿವಸ್" ಅನ್ನು ಆಚರಿಸಲು ದೇಶದಾದ್ಯಂತ ಪಾದಯಾತ್ರೆಯನ್ನು ಆಯೋಜಿಸಲಿದೆ. ಈ ಉಪಕ್ರಮವನ್ನು "ನನ್ನ ಭಾರತ, ನನ್ನ ಜವಾಬ್ದಾರಿ" ಎಂಬ ಪರಿಕಲ್ಪನೆಯ ವಿಷಯದಡಿಯಲ್ಲಿ ನಡೆಸಲಾಗುವುದು.

ಭಾರತದ ಸ್ವಾತಂತ್ರ್ಯವನ್ನು ತ್ಯಾಗ ಮತ್ತು ಧೈರ್ಯದ ಮೂಲಕ ಗಳಿಸಲಾಗಿದೆ ಎಂಬುದರ ಪ್ರಬಲ ಜ್ಞಾಪನೆಯಾಗಿ ಪ್ರತಿ ವರ್ಷ, "ಶಹೀದ್ ದಿವಸ್" ಆಚರಣೆ ಕಾರ್ಯನಿರ್ವಹಿಸುತ್ತದೆ. ಸ್ವಾತಂತ್ರ್ಯವು ಕೇವಲ ಆನುವಂಶಿಕವಾಗಿ ಬಂದದ್ದಲ್ಲ, ನಿರಂತರ ಸಾಮೂಹಿಕ ಪ್ರಯತ್ನದ ಮೂಲಕ ಬಲಪಡಿಸಬೇಕು ಮತ್ತು ಸಂರಕ್ಷಿಸಬೇಕು ಎಂಬ ಕಲ್ಪನೆಯನ್ನು ಇದು ಬಲಪಡಿಸುತ್ತದೆ. ಈ ಸಂದರ್ಭದಲ್ಲಿ, "ಶಹೀದ್ ದಿವಸ್ ಪಾದಯಾತ್ರೆ"ಯು ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವ ಮೂಲಕ ಸ್ಮರಣೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತದೆ.

ವಿಶ್ವದ ಅತ್ಯಂತ ಯುವ ರಾಷ್ಟ್ರಗಳಲ್ಲಿ ಒಂದಾದ ಭಾರತದ ಜನಸಂಖ್ಯಾ ಶಕ್ತಿಯನ್ನು ಗುರುತಿಸುವ ಈ ಉಪಕ್ರಮವು, ಯುವಕರ ಶಕ್ತಿ, ಆದರ್ಶವಾದ ಮತ್ತು ಆಕಾಂಕ್ಷೆಗಳನ್ನು ಜವಾಬ್ದಾರಿಯುತ ಪೌರತ್ವದ ಕಡೆಗೆ ಹರಿಸುವ ಗುರಿಯನ್ನು ಹೊಂದಿದೆ. "ನನ್ನ ಭಾರತ, ನನ್ನ ಜವಾಬ್ದಾರಿ" ಎಂಬ ವಿಷಯವು ಹಿಂದಿನ ತ್ಯಾಗಗಳನ್ನು ಗೌರವಿಸುವುದರಿಂದ ಹಿಡಿದು ಭವಿಷ್ಯಕ್ಕಾಗಿ ಕರ್ತವ್ಯಗಳನ್ನು ಸ್ವೀಕರಿಸುವವರೆಗಿನ ಈ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ.

ದೇಶದ ಎಲ್ಲಾ 763 ಜಿಲ್ಲೆಗಳಲ್ಲಿ ಪಾದಯಾತ್ರೆಗಳನ್ನು ಆಯೋಜಿಸಲಾಗುವುದು, ಹರಿಯಾಣದ ಫರಿದಾಬಾದ್‌ ನಲ್ಲಿ 10,000 ಕ್ಕೂ ಹೆಚ್ಚು ಯುವಕರು ಭಾಗವಹಿಸುವ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಪ್ರತಿ ಜಿಲ್ಲೆಯು ಯುವ-ನೇತೃತ್ವದ ಏಕೀಕೃತ ರಾಷ್ಟ್ರವ್ಯಾಪಿ ಆಂದೋಲನವನ್ನು ರಚಿಸುವ ಮೆರವಣಿಗೆಯನ್ನು ಆಯೋಜಿಸುತ್ತದೆ.

ಫರಿದಾಬಾದ್‌ ನಲ್ಲಿ ನಡೆಯುವ ಪಾದಯಾತ್ರೆಯು ರಾಷ್ಟ್ರವ್ಯಾಪಿ ಪಾದಯಾತ್ರೆಯ ಕೇಂದ್ರ ಕಾರ್ಯಕ್ರಮವಾಗಿದ್ದು, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ಖಾಡ್ಸೆ ಮತ್ತು ಹರಿಯಾಣದ ಕ್ರೀಡಾ ಸಚಿವ ಶ್ರೀ ಗೌರವ್ ಗೌತಮ್ ಅವರ ಉಪಸ್ಥಿತಿಯಿಂದ ನಡೆಯಲಿದೆ, ಅವರ ಉಪಸ್ಥಿತಿಯು ಯುವ ಭಾಗವಹಿಸುವಿಕೆಯನ್ನು ಮತ್ತಷ್ಟು ಪ್ರೇರೇಪಿಸುತ್ತದೆ ಮತ್ತು ಸಾಮೂಹಿಕ ಜವಾಬ್ದಾರಿಯ ಮನೋಭಾವವನ್ನು ಬಲಪಡಿಸುತ್ತದೆ.

ಫರಿದಾಬಾದ್‌ ನಲ್ಲಿ, ಪಾದಯಾತ್ರೆಯು ಕೆ.ಎಲ್. ಮೆಹ್ತಾ ದಯಾನಂದ ಕಾಲೇಜು (ಸ್ಟಾರ್ಟ್ ಪಾಯಿಂಟ್) ನಿಂದ ಪ್ರಾರಂಭವಾಗಿ ಘಂಟಾ ಘರ್, ಮಾರುಕಟ್ಟೆ ಸಂಖ್ಯೆ 5 (ಕೆಸಿ ರಸ್ತೆ) ಸೇರಿದಂತೆ ಪ್ರಮುಖ ಪ್ರಮುಖ ಸ್ಥಳಗಳ ಮೂಲಕ ಸಾಗಿ, ಶಹೀದ್ ಭಗತ್ ಸಿಂಗ್ ಚೌಕ್ (ಎನ್‌ಎಚ್-5) ನಲ್ಲಿ ಮುಕ್ತಾಯಗೊಳ್ಳುತ್ತದೆ, ಈ ಪಾದಯಾತ್ರೆಯು ಅಂದಾಜು 2.31 ಕಿ.ಮೀ ದೂರವನ್ನು ಕ್ರಮಿಸುತ್ತದೆ.

ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯ ದೃಷ್ಟಿಕೋನದಿಂದ ಪ್ರೇರಿತವಾಗಿರುವ "ನನ್ನ ಯುವ ಭಾರತ (ಎಂ.ವೈ ಭಾರತ್)" ಉಪಕ್ರಮ, ಯುವಕರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಇಂತಹ ಉಪಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಇಲ್ಲಿಯವರೆಗೆ, 13 ರಾಷ್ಟ್ರೀಯ ಮಟ್ಟದ ವಿಕಸಿತ ಭಾರತ ಪಾದಯಾತ್ರೆಗಳು, 108 ರಾಜ್ಯ ಮಟ್ಟದ ಪಾದಯಾತ್ರೆಗಳು ಮತ್ತು 1,573 ಜಿಲ್ಲಾ ಮಟ್ಟದ ಪಾದಯಾತ್ರೆಗಳನ್ನು ನಡೆಸಲಾಗಿದ್ದು, 21 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದಾರೆ.  ಈ ಪ್ರಯತ್ನಗಳು ಯುವ ನಾಗರಿಕರಲ್ಲಿ ಸ್ವಯಂಸೇವೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಬಲವಾದ ಸಂಸ್ಕೃತಿಯನ್ನು ನಿರ್ಮಿಸಲು ಸಾಮೂಹಿಕವಾಗಿ ಕೊಡುಗೆ ನೀಡಿವೆ.

ಪಾದಯಾತ್ರೆಗೆ ಮುಂಚಿತವಾಗಿ, ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಹಲವಾರು ಪೂರ್ವ-ಕಾರ್ಯಕ್ರಮ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇವುಗಳಲ್ಲಿ "ಎಂ.ವೈ. ಭಾರತ್" (mybharat.gov.in) ಪೋರ್ಟಲ್ ನಲ್ಲಿ ಪ್ರಸಿದ್ಧ ವೀರರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ರಸಪ್ರಶ್ನೆಗಳನ್ನು ಒಳಗೊಂಡ ರಾಷ್ಟ್ರವ್ಯಾಪಿ ಡಿಜಿಟಲ್ ಅಭಿಯಾನ, ಜೊತೆಗೆ ಸೃಜನಶೀಲ ಯುವ ಅಭಿವ್ಯಕ್ತಿಯನ್ನು ಉತ್ತೇಜಿಸುವ "ಹೀಗೊಂದು ಯುವಜನತೆ(ಏಕ್ ಯುವ ಐಸಾ ಭಿ)" ಎಂಬ ವಿಷಯದ ರೀಲ್ ಸ್ಪರ್ಧೆ ಕೂಡ ಸೇರಿವೆ.

ಹೆಚ್ಚುವರಿಯಾಗಿ, ರಾಷ್ಟ್ರವ್ಯಾಪಿ ಪ್ರಯತ್ನದ ಭಾಗವಾಗಿ, ಮಾರ್ಚ್ 22, 2026 ರಂದು ಎಂವೈ ಭಾರತ್ ಸಿವಿಕ್ ಸೆನ್ಸ್ ಚಾಲೆಂಜ್ ಅನ್ನು ನಡೆಸಲಾಗುವುದು, ಇದು ಸ್ವಚ್ಛತಾ ಅಭಿಯಾನಗಳು ಮತ್ತು ರಸ್ತೆ ಸುರಕ್ಷತಾ ಜಾಗೃತಿ ಉಪಕ್ರಮಗಳು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಶ್ರಮದಾನ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ, ಇದು ಸಾಮೂಹಿಕ ಜವಾಬ್ದಾರಿಯ ಮನೋಭಾವವನ್ನು ಬಲಪಡಿಸುತ್ತದೆ. ವಿಶೇಷ "ನನ್ನ ಭಾರತ, ನನ್ನ ಜವಾಬ್ದಾರಿ" ಪ್ರತಿಜ್ಞೆ ಗೋಡೆಯನ್ನು ಸ್ಥಾಪಿಸಲಾಗುವುದು, ಭಾಗವಹಿಸುವವರು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರಕ್ಕೆ ಸಾರ್ವಜನಿಕವಾಗಿ ಬದ್ಧರಾಗಲು ಅನುವು ಮಾಡಿಕೊಡುತ್ತದೆ.

ಶಹೀದ್ ದಿವಸ್ ಪಾದಯಾತ್ರೆಯು ಭಾರತದ ಬೆಳವಣಿಗೆಯ ಕಥೆಗೆ ಸಕ್ರಿಯ ಕೊಡುಗೆದಾರರಾಗಿ ಮುಂದೆ ಬರಲು ಯುವಕರಿಗೆ ರಾಷ್ಟ್ರವ್ಯಾಪಿ ಕರೆಯಾಗಿದೆ.  ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ಪುನರುಚ್ಚರಿಸಲು, ಏಕತೆಯ ಬಂಧಗಳನ್ನು ಬಲಪಡಿಸಲು ಮತ್ತು ದೇಶಭಕ್ತಿಯ ಮನೋಭಾವವನ್ನು ಎತ್ತಿಹಿಡಿಯಲು ಯುವ ನಾಗರಿಕರಿಗೆ ಇದು ಅರ್ಥಪೂರ್ಣ ವೇದಿಕೆಯನ್ನು ನೀಡುತ್ತದೆ. ದೇಶಾದ್ಯಂತದ ಯುವಕರು ಭಾಗವಹಿಸಲು, ಜವಾಬ್ದಾರಿಯುತ ಪೌರತ್ವದ ಕಡೆಗೆ ಪ್ರತಿಜ್ಞೆ ಮಾಡಲು ಮತ್ತು ಸಕಾರಾತ್ಮಕ ಬದಲಾವಣೆಯ ವೇಗವರ್ಧಕರಾಗಲು ಈ ಮೂಲಕ ಈ ಪಾದಯಾತ್ರೆ ಒತ್ತಾಯಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ,  MY Bharat Portal. ಪೋರ್ಟಲ್‌ ಗೆ ಭೇಟಿ ನೀಡಿ.

 

*****


(ಪ್ರಕಟಣೆ ಐ.ಡಿ.: 2243416) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: Gujarati , English , Urdu , हिन्दी