ಇಂಧನ ಸಚಿವಾಲಯ
ಭಾರತದ ಚೊಚ್ಚಲ ಅತಿದೊಡ್ಡ ವಿದ್ಯುತ್ ಪ್ರದರ್ಶನದ ಮೊದಲ ಆವೃತ್ತಿ - ಭಾರತ್ ವಿದ್ಯುತ್ ಶೃಂಗಸಭೆ 2026 ಆರಂಭ
ಎರಡು ಪ್ರಮುಖ ವರದಿಗಳು - 2035-36 ರ ವೇಳೆಗೆ 900 ಗಿಗಾ ವ್ಯಾಟ್ ಗಿಂತ ಹೆಚ್ಚಿನ ಬಳಸಿದರೆ ಬರಿದಾಗದೇ ಇರುವ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ ರಾಷ್ಟ್ರೀಯ ಸಂಪನ್ಮೂಲ ಸಮರ್ಪಕತೆ ಯೋಜನೆ ಮತ್ತು ಪ್ರಸರಣ ಯೋಜನೆ ಬಿಡುಗಡೆ
ಭಾರತವು ಈ ವಲಯದಲ್ಲಿ ನಾವೀನ್ಯತೆ, ಕೈಗೆಟುಕುವ ದರದಲ್ಲಿ ಲಭ್ಯತೆ ಮತ್ತು ಜಾಗತಿಕ ಸಹಯೋಗದ ಮೇಲೆ ಹೆಚ್ಚಿನ ಗಮನ ಹರಿಸುತ್ತದೆ- ಶ್ರೀ ಮನೋಹರ್ ಲಾಲ್ ಹೇಳಿದರು
ಪ್ರಕಟಣಾ ದಿನಾಂಕ:
19 MAR 2026 7:24PM by PIB Bengaluru
ವಿದ್ಯುತ್ ವಲಯಕ್ಕಾಗಿ ನಾಲ್ಕು ದಿನಗಳ ಜಾಗತಿಕ ಸಮ್ಮೇಳನ ಮತ್ತು ಪ್ರದರ್ಶನವಾದ 'ಭಾರತ್ ವಿದ್ಯುತ್ ಶೃಂಗಸಭೆ 2026' ಅನ್ನು ಕೇಂದ್ರ ಇಂಧನ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ನವದೆಹಲಿಯ ಯಶೋಭೂಮಿಯಲ್ಲಿಂದು ಉದ್ಘಾಟಿಸಿದರು. ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ; ಭಾರತ ಸರ್ಕಾರದ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ನಾಯಕ್; ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಶ್ರೀ ಪಂಕಜ್ ಅಗರ್ವಾಲ್; ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ಅಧ್ಯಕ್ಷರಾದ ಶ್ರೀ ಘನಶ್ಯಾಮ್ ಪ್ರಸಾದ್ ಸಹ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆ (ಎನ್ ಡಿಸಿ) ಗುರಿಯಾದ ಶೇ.50 ರಷ್ಟು ಸಂಚಿತ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯವನ್ನು ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮುಂಚಿತವಾಗಿ ಸಾಧಿಸುವುದು, ಶಾಂತಿ ಕಾಯ್ದೆ 2025, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ, ವಿದ್ಯುತ್ ಕೊರತೆಯಿಂದ ವಿದ್ಯುತ್ ಹೆಚ್ಚುವರಿ ರಾಷ್ಟ್ರಕ್ಕೆ ಪರಿವರ್ತನೆ, 2.8 ಗಿಗಾವ್ಯಾಟ್ ಸೌರ ಸಾಮರ್ಥ್ಯದಿಂದ ಇಂದು 143 ಗಿಗಾವ್ಯಾಟ್ ಗಿಂತ ಹೆಚ್ಚಿನ ಸೌರಶಕ್ತಿ ಸಾಮರ್ಥ್ಯದಲ್ಲಿ ಗಣನೀಯ ಬೆಳವಣಿಗೆ ಮುಂತಾದ ಸಾಧನೆಗಳನ್ನು ಶ್ಲಾಘಿಸಿದ ಶ್ರೀ ಮನೋಹರ್ ಲಾಲ್, ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಮುಂದಿನ ಎರಡು ದಶಕಗಳಲ್ಲಿ ಸುಮಾರು 200 ಲಕ್ಷ ಕೋಟಿ ರೂಪಾಯಿಗಳ ಅಭೂತಪೂರ್ವ ಹೂಡಿಕೆ ಅವಕಾಶಗಳಿವೆ ಎಂದು ಪ್ರತಿಪಾದಿಸಿದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಭಾರತದ ಗಮನಾರ್ಹ ಪ್ರಗತಿಯನ್ನು 5 ಲಕ್ಷ ಸರ್ಕ್ಯೂಟ್ ಕಿಲೋಮೀಟರ್‌ಗಳಿಗೂ ಹೆಚ್ಚು ಪ್ರಸರಣ ಮೂಲಸೌಕರ್ಯದಲ್ಲಿ ಶೇ.72ರಷ್ಟು ವಿಸ್ತರಣೆ, 2024-25ರಲ್ಲಿ 250 ಗಿಗಾವ್ಯಾಟ್ ಗರಿಷ್ಠ ಬೇಡಿಕೆಯನ್ನು ಪೂರೈಸುವುದು ಮತ್ತು 270 ಗಿಗಾವ್ಯಾಟ್ ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ಬೇಡಿಕೆಯನ್ನು ಪೂರೈಸಲು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ ಎಂದರು. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ದೂರದೃಷ್ಟಿಯ ಬೆನ್ನೆಲುಬಾಗಿ ಕೈಗೆಟುಕುವ ಇಂಧನದ ಭವಿಷ್ಯದ ಜಾಗತಿಕ ರಫ್ತುದಾರನಾಗಿ ತನ್ನನ್ನು ತಾನು ಇರಿಸಿಕೊಳ್ಳುವಾಗ, ಗಡಿಯಾಚೆಗಿನ ಇಂಧನ ಸಂಪರ್ಕ, ಸಾಗರದೊಳಗಿನ ಪ್ರಸರಣ ಜಾಲಗಳಂತಹ ಉಪಕ್ರಮಗಳನ್ನು ಸಹ ಅವರು ವಿವರಿಸಿದರು.

"ಇಂದು ಕೇವಲ ಒಂದು ದಿನವಲ್ಲ, ಭಾರತದ ಇಂಧನ ಪರಿವರ್ತನೆಗೆ ಸಂಕಲ್ಪದ ದಿನ. ಸಾಂಪ್ರದಾಯಿಕ ಸಂಪನ್ಮೂಲಗಳನ್ನು ಅವಲಂಬಿಸುವುದರಿಂದ ಹಿಡಿದು ಈಗ ಸೂರ್ಯನ ಶಕ್ತಿಗೆ ಮರಳುವವರೆಗೆ, ನಾವು ಪೂರ್ಣ ವೃತ್ತವನ್ನು ಪೂರ್ಣಗೊಳಿಸುತ್ತಿದ್ದೇವೆ. ಅಭಿವೃದ್ಧಿಯ ಕೇಂದ್ರಭಾಗದಲ್ಲಿದೆ ಮತ್ತು 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವಾಗ, ನಮ್ಮ ಗಮನ ನಾವೀನ್ಯತೆ, ಕೈಗೆಟುಕುವಿಕೆ ಮತ್ತು ಜಾಗತಿಕ ಸಹಯೋಗದ ಮೇಲೆ. ಈ 'ಬೆಳಕಿನ ಸಮ್ಮೇಳನ' ಕೇವಲ ಒಂದು ಘಟನೆಯಲ್ಲ, ಆದರೆ ಭಾರತದ ಇಂಧನ ನಾಯಕತ್ವವನ್ನು ಜಗತ್ತಿಗೆ ಕೊಂಡೊಯ್ಯುವ ಒಂದು ಚಳವಳಿಯಾಗಿದೆ’’.
ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಉಷ್ಣ ಶಕ್ತಿಯು ಇಂಧನ ವ್ಯವಸ್ಥೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ, ನವೀಕರಿಸಬಹುದಾದ ಇಂಧನವು ಏಕೈಕ ಸುಸ್ಥಿರ ದೀರ್ಘಕಾಲೀನ ಮಾರ್ಗವನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದರು, ಇದರ ವ್ಯಾಪ್ತಿ, ವೇಗ ಮತ್ತು ಕೌಶಲ್ಯದಿಂದ ನಡೆಸಲ್ಪಡುವ ಸಮತೋಲಿತ ಪರಿವರ್ತನೆಯ ಅಗತ್ಯವನ್ನು ಒತ್ತಿಹೇಳುತ್ತದೆ ಎಂದರು.
ಆ ದೂರದೃಷ್ಟಿಯನ್ನು ಶ್ಲಾಘಿಸಿದ ಶ್ರೀ ಶ್ರೀಪಾದ ನಾಯಕ್ ಅವರು 2014 ರಿಂದ ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ದ್ವಿಗುಣಗೊಂಡಿದೆ, ನವೀಕರಿಸಬಹುದಾದ ಶಕ್ತಿಯು 2.8 ಗಿಗಾವ್ಯಾಟ್ ಸೌರ ಸಾಮರ್ಥ್ಯದಿಂದ ಇಂದು 143 ಗಿಗಾವ್ಯಾಟ್ ಗಿಂತ ಹೆಚ್ಚಿನ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. 32 ಲಕ್ಷಕ್ಕೂ ಅಧಿಕ ಕುಟುಂಬಗಳು ಮತ್ತು 23 ಲಕ್ಷ ರೈತರು ಈಗಾಗಲೇ ಶುದ್ಧ ಇಂಧನ ಉತ್ಪಾದನೆಗೆ ಕೊಡುಗೆ ನೀಡುತ್ತಿದ್ದಾರೆ, ಇದು ಭಾಗವಹಿಸುವ ಇಂಧನ ಆರ್ಥಿಕತೆಯತ್ತ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಅದಕ್ಕೆ ಮತ್ತಷ್ಟು ಅಂಶಗಳನ್ನು ಸೇರಿಸಿದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಪಂಕಜ್ ಅಗರ್ವಲ್, ಭಾರತವು ಈಗ ವಿಶ್ವದ ಅತಿದೊಡ್ಡ ಸಿಂಕ್ರೊನೈಸ್ಡ್ ಗ್ರಿಡ್‌ಗಳಲ್ಲಿ ಒಂದನ್ನು ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಇದು ಸುಧಾರಿತ ಸಮತೋಲನ ವ್ಯವಸ್ಥೆಗಳು, ದೊಡ್ಡ ಪ್ರಮಾಣದ ಸ್ಮಾರ್ಟ್ ಮೀಟರ್ ನಿಯೋಜನೆ ಮತ್ತು ಬಲವಾದ ನೀತಿ ಚೌಕಟ್ಟುಗಳಿಂದ ಬೆಂಬಲಿತವಾಗಿದೆ ಎಂದರು.
”ಕಳೆದ ದಶಕದಲ್ಲಿ ಭಾರತದ ವಿದ್ಯುತ್ ವಲಯದ ರೂಪಾಂತರವು ನೀತಿ ಸ್ಪಷ್ಟತೆ, ಪ್ರಮಾಣ ಮತ್ತು ನಾವೀನ್ಯತೆಯಿಂದ ನಡೆಸಲ್ಪಡುವ ಬಲವಾದ ಜಾಗತಿಕ ಮಾದರಿ ನೀಡುತ್ತದೆ. ಶೂನ್ಯಕ್ಕೆ ಹತ್ತಿರವಿರುವ ಗರಿಷ್ಠ ಕೊರತೆಗಳಿಂದ ವಿಶ್ವದ ಅತಿದೊಡ್ಡ ಸಿಂಕ್ರೊನೈಸ್ಡ್ ಗ್ರಿಡ್‌ಗಳಲ್ಲಿ ಒಂದಕ್ಕೆ ಮತ್ತು ಬೀಳುವ ಸೌರ ಸುಂಕಗಳಿಂದ ಸ್ಮಾರ್ಟ್ ಮೂಲಸೌಕರ್ಯ ಬಿಡುಗಡೆಯವರೆಗೆ, ನಾವು ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ಹೂಡಿಕೆಗೆ ಸಿದ್ಧವಾಗಿರುವ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ಹಂತವನ್ನು ತಂತ್ರಜ್ಞಾನ, ಡೇಟಾ ಮತ್ತು ಜಾಗತಿಕ ಪಾಲುದಾರಿಕೆಗಳಿಂದ ವ್ಯಾಖ್ಯಾನಿಸಲಾಗುತ್ತದೆ’’ ಎಂದು ಅವರು ಹೇಳಿದರು.
ಉದ್ಘಾಟನಾ ಗೋಷ್ಠಿಯಲ್ಲಿ, ಇಂಧನ ಸಚಿವಾಲಯವು ರಾಷ್ಟ್ರೀಯ ಸಂಪನ್ಮೂಲ ಸಮರ್ಪಕ ಯೋಜನೆ ಸೇರಿದಂತೆ ಪ್ರಮುಖ ಕಾರ್ಯತಂತ್ರದ ವರದಿಗಳನ್ನು ಬಿಡುಗಡೆ ಮಾಡಿತು. ಇದು ಸಮತೋಲಿತ ಇಂಧನ ಮಿಶ್ರಣದ ಮೂಲಕ ಭಾರತದ ಬೆಳೆಯುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಮಗ್ರ ಮಾರ್ಗಸೂಚಿಯನ್ನು ವಿವರಿಸುತ್ತದೆ ಮತ್ತು 2035-36 ರ ವೇಳೆಗೆ 900 ಗಿಗಾವ್ಯಾಟ್ ಗಿಂತ ಹೆಚ್ಚಿನ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ ಪ್ರಸರಣ ಯೋಜನೆಯನ್ನು ವಿವರಿಸುತ್ತದೆ. ಪ್ರಸರಣ ನೀಲನಕ್ಷೆಯು 1,37,500 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮಾರ್ಗಗಳು ಮತ್ತು 8,27,600 MVA ಸಬ್‌ಸ್ಟೇಷನ್ ಸಾಮರ್ಥ್ಯದ ಅಭಿವೃದ್ಧಿಯನ್ನು 7.93 ಲಕ್ಷ ಕೋಟಿ ರೂ. ಅಂದಾಜು ಹೂಡಿಕೆಯೊಂದಿಗೆ ಕಲ್ಪಿಸುತ್ತದೆ, ನವೀಕರಿಸಬಹುದಾದ ಇಂಧನದ ತಡೆರಹಿತ ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ಗ್ರಿಡ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ.

ಭಾರತ್ ವಿದ್ಯುತ್ ಶೃಂಗಸಭೆ 2026 ಇಂಧನ ಸಚಿವಾಲಯ ಮತ್ತು ಕೈಗಾರಿಕೆಗಳ ನೇತೃತ್ವದ ಉಪಕ್ರಮವಾಗಿದೆ. ಈ ಶೃಂಗಸಭೆಯು 300 ಕ್ಕೂ ಅಧಿಕ ಭಾಷಣಕಾರರು, 80 ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು, 100 ಕ್ಕೂ ಅಧಿಕ ನವೋದ್ಯಮಗಳು ಮತ್ತು 25,000 ಕ್ಕೂ ಅಧಿಕ ಸಂದರ್ಶಕರು ಸೇರಿ 500ಕ್ಕೂ ಅಧಿಕ ಪ್ರದರ್ಶಕರನ್ನು ಒಳಗೊಂಡ 100ಕ್ಕೂ ಅಧಿಕ ಉನ್ನತ ಮಟ್ಟದ ಸಮ್ಮೇಳನ ಗೋಷ್ಠಿಗಳನ್ನು ಆಯೋಜಿಸುತ್ತದ್ದು, ಇದು ಜಾಗತಿಕವಾಗಿ ಅತಿದೊಡ್ಡ ವಿದ್ಯುತ್ ಗೆ ಸಂಬಂಧಿಸಿದ ವೇದಿಕೆಗಳಲ್ಲಿ ಒಂದಾಗಿದೆ.
*****
(ಪ್ರಕಟಣೆ ಐ.ಡಿ.: 2242855)
ವಿಸಿಟರ್ ಕೌಂಟರ್ : 10