ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯಲ್ಲಿ ಅನಧಿಕೃತ ಮಾರಾಟವನ್ನು ತೊಡೆದುಹಾಕಲು ಮತ್ತು ರೈಲು ಪ್ರಯಾಣಿಕರಿಗೆ ಪ್ರಾಯಾಣ ವೇಳೆಯಲ್ಲಿ ರೈಲಿನೊಳಗೆ ಪರಿಶೀಲಿಸಲಾದ ಉತ್ತಮ ಅಡುಗೆ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಕ್ಯೂಆರ್  ಕೋಡ್-ಸಕ್ರಿಯಗೊಳಿಸಿದ ಗುರುತಿನ ಚೀಟಿಗಳು ಮತ್ತು ಡಿಜಿಟಲ್ ಆಗಿ ಪತ್ತೆಹಚ್ಚಬಹುದಾದ ಆಹಾರ ಪ್ಯಾಕೆಟ್‌ಗಳು ವ್ಯವಸ್ಥೆ ಮಾಡಲಾಗಿದೆ 


ಆಧುನಿಕ ಮೂಲದ ಅಡುಗೆಮನೆಗಳು, ಕಡ್ಡಾಯ ಎಫ್.ಎಸ್.ಎಸ್.ಎ. ಪ್ರಮಾಣೀಕರಣ, ಸಿ‌ಇಟಿವಿ ಮೇಲ್ವಿಚಾರಣೆ, ಅನಿರೀಕ್ಷಿತ ತಪಾಸಣೆಗಳು ಮತ್ತು ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆಗಳು ಪ್ರಯಾಣಿಕರಿಗೆ ನೈರ್ಮಲ್ಯ ಮತ್ತು ಉತ್ತಮ-ಗುಣಮಟ್ಟದ ಊಟವನ್ನು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ತಲುಪಿಸುತ್ತಿವೆ

ಪ್ರಕಟಣಾ ದಿನಾಂಕ: 19 MAR 2026 1:37PM by PIB Bengaluru

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಪ್ರದೇಶದಲ್ಲಿ ಅನಧಿಕೃತ ಬಿಡಿ ವ್ಯಾಪಾರ  ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಇದು ರೈಲ್ವೆ ಕಾಯ್ದೆ, 1989ರ ಸೆಕ್ಷನ್ - 144ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ರೈಲುಗಳಲ್ಲಿ ಅನಧಿಕೃತ ಮಾರಾಟಗಾರರ ಪ್ರವೇಶವನ್ನು ಪರಿಶೀಲಿಸಲು ಮತ್ತು ತಡೆಯಲು ಗೊತ್ತುಪಡಿಸಿದ ಅಧಿಕಾರಿಗಳು ಮತ್ತ ಆರ್.ಟಿ.ಎಫ್. ನಿಯಮಿತ ತಪಾಸಣೆಗಳನ್ನು ನಡೆಸುತ್ತದೆ. ಕಾಲಕಾಲಕ್ಕೆ ರೈಲ್ವೆ ಆವರಣದಲ್ಲಿ ಅನಧಿಕೃತ ಮಾರಾಟವನ್ನು ತಡೆಯಲು ರೈಲ್ವೆ ಮತ್ತು ಐಆರ್ ಸಿಟಿಸಿ ಅಧಿಕಾರಿಗಳು ವಿಶೇಷ ದಾಳಿಗಳನ್ನು ಸಹ ನಡೆಸುತ್ತಾರೆ. 

ರೈಲುಗಳಲ್ಲಿ ಅಧಿಕೃತ ಮಾರಾಟಗಾರರ ಗುರುತನ್ನು ಸ್ಥಾಪಿಸಲು, ರೈಲು ಪ್ರಯಾಣ ಮಾಡುವಾಗ ಅಡುಗೆ ಸೇವೆಗಳನ್ನು ನಿರ್ವಹಿಸಲು ನಿಯೋಜಿಸಲಾದ ವೈಯಕ್ತಿಕ ಮಾರಾಟಗಾರರು/ಸಹಾಯಕರು/ಸಿಬ್ಬಂದಿಗಳ ಹೆಸರಿನಲ್ಲಿ ಕ್ಯೂ ಆರ್ ಕೋಡ್-ಸಕ್ರಿಯಗೊಳಿಸಿದ ಗುರುತಿನ ಚೀಟಿಗಳನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.  ಈ ಕ್ಯೂ ಆರ್ ಕೋಡ್ ಅನ್ನು ಮಾರಾಟಗಾರರ ಹೆಸರು, ಆಧಾರ್ ಸಂಖ್ಯೆ, ವೈದ್ಯಕೀಯ ಫಿಟ್‌ನೆಸ್, ಪೊಲೀಸ್ ಪರಿಶೀಲನೆ ವಿವರಗಳು ಇತ್ಯಾದಿಗಳನ್ನು ಪ್ರದರ್ಶಿಸುವ ಮೂಲಕ ಸಿಬ್ಬಂದಿಯ ಸತ್ಯಾಸತ್ಯತೆಯನ್ನು ಸ್ಥಾಪಿಸಲು ಲಿಂಕ್ ಮಾಡಲಾಗಿದೆ. ಅನಧಿಕೃತ ಮಾರಾಟವನ್ನು ತಡೆಯಲು ತೆಗೆದುಕೊಂಡ ಇತರ ಕ್ರಮಗಳಲ್ಲಿ ಆಹಾರ ಪ್ಯಾಕೆಟ್‌ಗಳ ಮೇಲೆ ಕ್ಯೂ ಆರ್ ಕೋಡ್ ಸೇರಿದೆ, ಇದು ಅಡುಗೆಮನೆಯ ಹೆಸರು ಮತ್ತು ಉತ್ಪಾದನಾ ದಿನಾಂಕ ಇತ್ಯಾದಿ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ರೈಲಿನಲ್ಲಿ ಆಹಾರ ಗುಣಮಟ್ಟ, ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯನ್ನು ಸುಧಾರಿಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

● ಗೊತ್ತುಪಡಿಸಿದ ಬೇಸ್ ಕಿಚನ್‌ಗಳಿಂದ ಊಟದ ಪೂರೈಕೆ.

● ಗುರುತಿಸಲಾದ ಸ್ಥಳಗಳಲ್ಲಿ ಆಧುನಿಕ ಬೇಸ್ ಕಿಚನ್‌ಗಳನ್ನು ನಿಯೋಜಿಸುವುದು.

● ಆಹಾರ ತಯಾರಿಕೆಯ ಉತ್ತಮ ಮೇಲ್ವಿಚಾರಣೆಗಾಗಿ ಬೇಸ್ ಕಿಚನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ.

● ಆಹಾರ ಉತ್ಪಾದನೆಗಾಗಿ ಅಡುಗೆ ಎಣ್ಣೆ, ಅಟ್ಟಾ, ಅಕ್ಕಿ, ಬೇಳೆಕಾಳುಗಳು, ಮಸಾಲಾ ವಸ್ತುಗಳು, ಪನೀರ್, ಡೈರಿ ಉತ್ಪನ್ನಗಳು ಮುಂತಾದ ಜನಪ್ರಿಯ ಮತ್ತು ಬ್ರಾಂಡ್ ಕಚ್ಚಾ ವಸ್ತುಗಳ ಕಿರುಪಟ್ಟಿ ಮತ್ತು ಬಳಕೆ.

● ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಮೇಲ್ವಿಚಾರಣೆ ಮಾಡಲು ಬೇಸ್ ಕಿಚನ್‌ಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರ ನಿಯೋಜನೆ

● ರೈಲುಗಳಲ್ಲಿ ಆನ್-ಬೋರ್ಡ್ ಐ.ಆರ್.ಸಿ.ಟಿ.ಸಿ. ಮೇಲ್ವಿಚಾರಕರ ನಿಯೋಜನೆ.

● ಬೇಸ್ ಕಿಚನ್‌ ಗಳು ಮತ್ತು ಪ್ಯಾಂಟ್ರಿ ಕಾರ್‌ ಗಳಲ್ಲಿ ನಿಯಮಿತ ಆಳವಾದ ಶುಚಿಗೊಳಿಸುವಿಕೆ ಮತ್ತು ನಿಯತಕಾಲಿಕ ಕೀಟ ನಿಯಂತ್ರಣ.

●ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಕ್ಯಾಟರಿಂಗ್ ಘಟಕದ ಗೊತ್ತುಪಡಿಸಿದ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ.

●ರೈಲುಗಳಲ್ಲಿ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನದ ಭಾಗವಾಗಿ ನಿಯಮಿತ ಆಹಾರ ಮಾದರಿ ಸಂಗ್ರಹಣೆ.

●ಪ್ಯಾಂಟ್ರಿ ಕಾರ್‌ ಗಳು ಮತ್ತು ಬೇಸ್ ಕಿಚನ್‌ ಗಳಲ್ಲಿ ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆಯನ್ನು ಮಾಡಲಾಗುತ್ತದೆ. ಗ್ರಾಹಕ ತೃಪ್ತಿ ಸಮೀಕ್ಷೆಯನ್ನು ಸಹ ನಡೆಸಲಾಗುತ್ತದೆ.

● ಆಹಾರ ಸುರಕ್ಷತಾ ಅಧಿಕಾರಿಗಳಿಂದ ಅನಿರೀಕ್ಷಿತ ತಪಾಸಣೆ.

●ಗ್ರಾಹಕ ಸೇವಾ ಕ್ಷೇತ್ರಗಳಾದ ಸಂವಹನ, ವಿನಯಶೀಲ ನಡವಳಿಕೆ, ಸೇವಾ ಮಾನದಂಡಗಳು, ವೈಯಕ್ತಿಕ ಅಂದಗೊಳಿಸುವಿಕೆ ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸುವ ಅಡುಗೆ ಸಿಬ್ಬಂದಿಯ ಕೌಶಲ್ಯಗಳನ್ನು ಹೆಚ್ಚಿಸಲು ಐ.ಆರ್.ಸಿ.ಟಿ.ಸಿ.ಯಿಂದ ನಿಯಮಿತ ತರಬೇತಿಯನ್ನು ನಡೆಸಲಾಗುತ್ತದೆ.

ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನೀಡಿದರು.

 

*****


(ಪ್ರಕಟಣೆ ಐ.ಡಿ.: 2242645) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati