ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಪ್ರಧಾನಮಂತ್ರಿ ಶುಭಾಶಯ
ಸಂಸ್ಕೃತ ಸುಭಾಷಿತ ಮತ್ತು ಸ್ತುತಿ ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
19 MAR 2026 9:48AM by PIB Bengaluru
ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭಾಶಯ ಕೋರುತ್ತಾ, ಸಮೃದ್ಧಿ, ಆರೋಗ್ಯ ಮತ್ತು ವಿಕಸಿತ ಭಾರತಕ್ಕಾಗಿನ ಸಂಕಲ್ಪದ ಈಡೇರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಚೈತ್ರ ನವರಾತ್ರಿ ಪವಿತ್ರ ಹಬ್ಬ ಪ್ರಾರಂಭವಾಗಿರುವ ಈ ಸಂದರ್ಭದಲ್ಲಿ ದೇವಿ ಶೈಲಪುತ್ರಿಯ ದೈವಿಕ ಮತ್ತು ದಯಾಮಯ ಅನುಗ್ರಹವನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಅವರು ಹಂಚಿಕೊಂಡಿದ್ದಾರೆ. ದೇವಿಯ ಅಮಿತ ಕರುಣೆಯಿಂದ ಎಲ್ಲಾ ನಾಗರಿಕರ ಕಲ್ಯಾಣ ಖಾತರಿಪಡಿಸಿಕೊಳ್ಳಲಾಗುತ್ತಿದ್ದು ಇದು ಅಭಿವೃದ್ಧಿ ಹೊಂದಿದ ಭಾರತದ ಸಾಮೂಹಿಕ ಗುರಿಗೆ ಪ್ರಬಲ ಉತ್ತೇಜನೆ ನೀಡಿದೆ ಎಂದು ತಿಳಿಸುತ್ತಾ ಪ್ರಧಾನಮಂತ್ರಿ ಮೋದಿ ಅವರು ಈ ಸಂದರ್ಭದಲ್ಲಿ ದೇವಿಗೆ ಅರ್ಪಿತವಾದ ಶ್ಲೋಕವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನ ಸರಣಿ ಪೋಸ್ಟ್ ಗಳಲ್ಲಿ ಹೀಗೆ ಬರೆದಿದ್ದಾರೆ:
"देशभर के मेरे परिवारजनों को नवरात्रि की हार्दिक मंगलकामनाएं। शक्ति की आराधना का यह दिव्य अवसर आप सभी के लिए सुख, सौभाग्य, समृद्धि और उत्तम स्वास्थ्य लेकर आए। शक्तिस्वरूपा मां दुर्गा की असीम कृपा से सबका कल्याण हो, जिससे विकसित भारत के हमारे संकल्प को भी नई ऊर्जा मिले। जय अंबे जगदंबे मां!"
"नवरात्रि के पहले दिन मां दुर्गा के प्रथम स्वरूप देवी शैलपुत्री की पूजा का विधान है। उनके आशीर्वाद से हर किसी के जीवन में संयम, शांति और सकारात्मक ऊर्जा का संचार हो, यही कामना है।
वन्दे वाञ्छितलाभाय चन्द्रार्धकृतशेखराम्।
वृषारूढां शूलधरां शैलपुत्रीं यशस्विनीम्॥"
ಭಕ್ತರ ಇಷ್ಟಾರ್ಥ ನೆರವೇರಿಸುವ, ಹಣೆಯ ಮೇಲೆ ಅರ್ಧಚಂದ್ರನನ್ನು ಹೊಂದಿರುವ, ವೃಷಭವಾಹನಾರೂಢಳಾಗಿ ಕೈಯಲ್ಲಿ ತ್ರಿಶೂಲವನ್ನು ಹಿಡಿದಿರುವ ಭವ್ಯ ಮತ್ತು ಪೂಜ್ಯ ದೇವಿ ಶೈಲಪುತ್ರಿಗೆ ನಾನು ನಮಿಸುತ್ತೇನೆ.
"जगतजननी मां दुर्गा के चरणों में कोटि-कोटि देशवासियों की ओर से मेरा नमन और वंदन! नवरात्रि के पावन पर्व पर देवी मां से विनती है कि वे हर किसी को अपने स्नेह और अनुकंपा का आशीर्वाद प्रदान करें। जय माता दी!"
*****
(ಪ್ರಕಟಣೆ ಐ.ಡಿ.: 2242356)
ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Telugu