ಬುಡಕಟ್ಟು ವ್ಯವಹಾರಗಳ ಸಚಿವಾಲಯ
'ಭಾರತ ಬುಡಕಟ್ಟು ಉತ್ಸವ-2026’ಕ್ಕೆ ಮಾರ್ಚ್ 18 ರಂದು ನವದೆಹಲಿಯಲ್ಲಿ ಚಾಲನೆ
ಬುಡಕಟ್ಟು ಕಲೆ, ಸಂಸ್ಕೃತಿ ಮತ್ತು ಉದ್ಯಮದ ಉತ್ಸವವನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವರಾದ ಶ್ರೀ ಜುವಾಲ್ ಓರಂ
ಪ್ರಕಟಣಾ ದಿನಾಂಕ:
17 MAR 2026 4:04PM by PIB Bengaluru
'ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ'ವು(ಟ್ರೈಫೆಡ್) ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದೊಂದಿಗೆ 2026ರ ಮಾರ್ಚ್ 18 ರಿಂದ 30 ರವರೆಗೆ ನವದೆಹಲಿಯ ಸುಂದರ್ ನರ್ಸರಿಯಲ್ಲಿ 'ಭಾರತ ಬುಡಕಟ್ಟು ಉತ್ಸವ-2026 (ಭಾರತ್ ಟ್ರೈಬ್ ಫೆಸ್ಟ್-2026) ಅನ್ನು ಆಯೋಜಿಸುತ್ತಿದೆ. ಆ ಮೂಲಕ ದೇಶಾದ್ಯಂತದ ಬುಡಕಟ್ಟು ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ಸಾಂಸ್ಕೃತಿಕ ಪ್ರದರ್ಶಕರನ್ನು ಒಟ್ಟುಗೂಡಿಸುತ್ತಿದೆ.
2026 ರ ಮಾರ್ಚ್ 18 ರಂದು ನವದೆಹಲಿಯ ಸುಂದರ್ ನರ್ಸರಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ದುರ್ಗಾದಾಸ್ ಉಯ್ಕೆ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಜುವಾಲ್ ಓರಂ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಪ್ರತಿದಿನ ಬೆಳಿಗ್ಗೆ 11:00 ರಿಂದ ರಾತ್ರಿ 08:00 ರವರೆಗೆ ಸಾರ್ವಜನಿಕರಿಗೆ ತೆರೆದಿರುವ ಈ ಉತ್ಸವವು ಕಲೆ, ಕರಕುಶಲ ವಸ್ತುಗಳು, ಕೈಮಗ್ಗಗಳು, ಪಾಕಪದ್ಧತಿ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿರಲಿದೆ. ಭಾರತದ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ಸಂಪ್ರದಾಯಗಳು, ಸೃಜನಶೀಲತೆ ಮತ್ತು ಉದ್ಯಮಶೀಲತೆಯ ಆಳ ಅನುಭವವನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.
ಭಾರತ ಬುಡಕಟ್ಟು ಉತ್ಸವವು 78 'ವನ್ ಧನ್ ವಿಕಾಸ್ ಕೇಂದ್ರ'ಗಳು (ವಿಡಿವಿಕೆ) ಮತ್ತು ಭಾರತದಾದ್ಯಂತದ 310 ಮಾಸ್ಟರ್ ಕುಶಲಕರ್ಮಿಗಳನ್ನು ಪ್ರತಿನಿಧಿಸುವ 200ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಬುಡಕಟ್ಟು ಉತ್ಕೃಷ್ಟತೆಯ ಬೃಹತ್ ಪ್ರದರ್ಶನವನ್ನು ಒಳಗೊಂಡಿದೆ. ಸಂದರ್ಶಕರು 120 ಬುಡಕಟ್ಟು ಪಾಕಪದ್ಧತಿಯಲ್ಲಿ ಭಾಗವಹಿಸುವವರ ಮೂಲಕ "ಅರಣ್ಯದಿಂದ ತಟ್ಟೆಯವರೆಗ್ಎ" (ಫಾರೆಸ್ಟ್-ಟು-ಪ್ಲೇಟ್) ಆಂದೋಲನವನ್ನು ಅನುಭವಿಸಬಹುದು ಮತ್ತು 17 ನೇರ ಪ್ರದರ್ಶನಗಳ ಮೂಲಕ ಪಾರಂಪರಿಕ ಕರಕುಶಲ ವಸ್ತುಗಳ ಸಂಕೀರ್ಣ ಪ್ರಕ್ರಿಯೆಯನ್ನು ವೀಕ್ಷಿಸಬಹುದು. ಹಬ್ಬದ ಉತ್ಸಾಹವನ್ನು ಹೆಚ್ಚಿಸಲು 400ಕ್ಕೂ ಹೆಚ್ಚು ಕಲಾವಿದರು ಸಂಜೆ ಸಾಂಪ್ರದಾಯಿಕ ನೃತ್ಯಗಳು ಮತ್ತು ಸಂಗೀತವನ್ನು ಪ್ರದರ್ಶಿಸಲಿದ್ದಾರೆ, ಇದು ನಿಜವಾಗಿಯೂ ತಲ್ಲೀನಗೊಳಿಸುವ ಸಾಂಸ್ಕೃತಿಕ ಪ್ರಯಾಣವನ್ನು ನೀಡುತ್ತದೆ.
2026ರ ಮಾರ್ಚ್ 19 ರಿಂದ 27ರವರೆಗೆ ನಿಗದಿಯಾಗಿರುವ 'ಭಾರತ ಬುಡಕಟ್ಟು ವ್ಯವಹಾರ ಸಮಾವೇಶ'ವು ನೀತಿ ನಿರೂಪಕರು, ಉದ್ಯಮದ ಪ್ರಮುಖರು ಮತ್ತು ಬುಡಕಟ್ಟು ಉದ್ಯಮಗಳಿಗೆ ಸುಸ್ಥಿರ ಜವಳಿ, ಬುಡಕಟ್ಟು ಆಹಾರ ವ್ಯವಸ್ಥೆಗಳು ಹಾಗೂ ಪರಿಸರಸ್ನೆಹಿ ಐಷಾರಾಮಿ ಮಾರುಕಟ್ಟೆಗಳ ಬಗ್ಗೆ ಉನ್ನತ ಮಟ್ಟದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಬಹುದಿನಗಳ ಕಾರ್ಯಕ್ರಮವು ನಾವೀನ್ಯತೆ, ಸ್ಥಳೀಯ ಜ್ಞಾನದ ರಕ್ಷಣೆ ಹಾಗೂ ಬುಡಕಟ್ಟು ಯುವಕರು ಮತ್ತು ಮಹಿಳೆಯರಿಗೆ ಕೌಶಲ್ಯದಂತಹ ನಿರ್ಣಾಯಕ ವಿಷಯಗಳ ಕುರಿತಾಗಿ ವ್ಯವಹರಿಸಲಿದೆ. ಇವೆಲ್ಲವೂ ಸಮುದಾಯ ನೇತೃತ್ವದ ಬುಡಕಟ್ಟು ಪ್ರವಾಸೋದ್ಯಮ ಮತ್ತು ಉದ್ಯಮ ಅಭಿವೃದ್ಧಿಗೆ ದೃಢವಾದ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಗುರಿಯನ್ನು ಹೊಂದಿವೆ. ಈ ಉಪಕ್ರಮದ ಪ್ರಮುಖ ಅಂಶವೆಂದರೆ 2026ರ ಮಾರ್ಚ್ 24 ರಂದು ನಡೆಯಲಿರುವ 'ಸಿಎಸ್ಆರ್ ಸಮಾವೇಶ’. ಇದನ್ನು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಬುಡಕಟ್ಟು ಉದ್ಯಮಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಶಾಶ್ವತ ಪಾಲುದಾರಿಕೆ ಮತ್ತು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸಲು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಇದು ಬಳಸಿಕೊಳ್ಳಲಿದೆ.
ಭಾರತ ಬುಡಕಟ್ಟು ಉತ್ಸವ -2026ರ ಪ್ರಮುಖ ಆಕರ್ಷಣೆಯೆಂದರೆ 'ರಿಸಾ' ಉಪಕ್ರಮ. ಅಲ್ಲಿ ಪ್ರಸಿದ್ಧ ವಿನ್ಯಾಸಕರಾದ ಶ್ರೀಮತಿ ಅಂಜು ಮೋದಿ, ಶ್ರೀ ಮನೀಶ್ ತ್ರಿಪಾಠಿ, ಶ್ರೀ ಗೌರವ್ ಜೈ ಗುಪ್ತಾ, ಶ್ರೀ ಸಂದೀಪ್ ಖೋಸ್ಲಾ, ಶ್ರೀಮತಿ ಸಮೀರಾ ದಲ್ವಿ ಅವರು ಬುಡಕಟ್ಟು ಕುಶಲಕರ್ಮಿಗಳೊಂದಿಗೆ ಕೈಜೋಡಿಸಲಿದ್ದಾರೆ. ಎರಿ ರೇಷ್ಮೆ, ಕೋಟ್ಪಾಡ್ ಅರಳೆ ಮತ್ತು ಡೊಂಗ್ರಿಯಾ ಕಸೂತಿಯಂತಹ ಪ್ರಾಚೀನ ಸಂಪ್ರದಾಯಗಳೊಂದಿಗೆ ಸಮಕಾಲೀನ ವಿನ್ಯಾಸವನ್ನು ಬೆರೆಸುವ ಮೂಲಕ, ಸ್ಥಳೀಯ ಜವಳಿಗಳನ್ನು ಜಾಗತಿಕ ಫ್ಯಾಷನ್ ಪರಿಸರ ವ್ಯವಸ್ಥೆಯಲ್ಲಿ 'ರಿಸಾ' ಸಂಯೋಜಿಸುತ್ತದೆ.
ಕಾರ್ಯಕ್ರಮದ ವಿವರಗಳು
ಭಾರತ ಬುಡಕಟ್ಟು ಉತ್ಸವ 2026
📍 ಸ್ಥಳ: ಸುಂದರ್ ನರ್ಸರಿ, ನವದೆಹಲಿ
📅 ದಿನಾಂಕ: 18-30 ಮಾರ್ಚ್ 2026
⏰ ಸಮಯ: ಬೆಳಿಗ್ಗೆ 11:00 ರಿಂದ ರಾತ್ರಿ 08:00
ಈ ಉತ್ಸವವು ಭಾರತದ ಬುಡಕಟ್ಟು ಸಮುದಾಯಗಳ ಸೃಜನಶೀಲತೆ, ಸುಸ್ಥಿರತೆ ಮತ್ತು ಉದ್ಯಮಶೀಲತೆಯ ಸಾಮರ್ಥ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಬುಡಕಟ್ಟು ಕುಶಲಕರ್ಮಿಗಳು ಮತ್ತು ಉದ್ಯಮಗಳಿಗೆ ಹೆಚ್ಚಿನ ಗೋಚರತೆ ಮತ್ತು ಮಾರುಕಟ್ಟೆ ಅವಕಾಶಗಳನ್ನು ಒದಗಿಸಲಿದೆ.
*****
(ಪ್ರಕಟಣೆ ಐ.ಡಿ.: 2241273)
ವಿಸಿಟರ್ ಕೌಂಟರ್ : 25