ರೈಲ್ವೇ ಸಚಿವಾಲಯ
ಒಟ್ಟಾಗಿ ಸಹಕರಿಸಿ ಸಾಮರ್ಥ್ಯ ನಿರ್ಮಾಣ ಪ್ರಯತ್ನಗಳಿಗಾಗಿ ಸಾಮರ್ಥ್ಯ ನಿರ್ಮಾಣ ಆಯೋಗದೊಂದಿಗೆ ಗತಿ ಶಕ್ತಿ ವಿಶ್ವವಿದ್ಯಾಲಯ ಕೈಜೋಡಿಸಿದೆ
ತರಬೇತಿ ಸಂಸ್ಥೆಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ಬಲಪಡಿಸಲು ಸುಸ್ಥಿರ ಹಣಕಾಸು, ಆದಾಯ ಉತ್ಪಾದನೆ, ಆಡಳಿತ ಮತ್ತು ಸಂಪನ್ಮೂಲ ಕ್ರೋಢೀಕರಣದ ಕುರಿತು ಜಿ.ಎಸ್.ವಿ-ಸಿಬಿಸಿ ಕಾರ್ಯಾಗಾರ ಚರ್ಚಿಸುತ್ತದೆ
ಪ್ರಕಟಣಾ ದಿನಾಂಕ:
10 MAR 2026 7:50PM by PIB Bengaluru
ಭಾರತ ಸರ್ಕಾರದ ಸಾಮರ್ಥ್ಯ ನಿರ್ಮಾಣ ಆಯೋಗವು (ಸಿಬಿಸಿ), ಇಂದು (10.03.2026) ವಡೋದರಾದಲ್ಲಿ ತರಬೇತಿ ಸಂಸ್ಥೆಗಳಿಗೆ ಸುಸ್ಥಿರ ಹಣಕಾಸು, ಆಡಳಿತ ಮತ್ತು ಸಂಪನ್ಮೂಲ ಕ್ರೋಢೀಕರಣದ ಕುರಿತು ಪಶ್ಚಿಮ ಪ್ರಾದೇಶಿಕ ಸಮಾಲೋಚನಾ ಕಾರ್ಯಾಗಾರವನ್ನು ಆಯೋಜಿಸಿದೆ. ಗತಿ ಶಕ್ತಿ ವಿಶ್ವವಿದ್ಯಾಲಯ ಆಯೋಜಿಸಿದ ಈ ಕಾರ್ಯಾಗಾರವು ಸಾಂಸ್ಥಿಕ ಹಣಕಾಸು ಮತ್ತು ಆಡಳಿತದಲ್ಲಿನ ಪ್ರಮುಖ ಸುಧಾರಣೆಗಳ ಕುರಿತು ಚರ್ಚಿಸಲು ಪಶ್ಚಿಮ ರಾಜ್ಯಗಳಾದ್ಯಂತ ನಾಗರಿಕ ಸೇವಾ ತರಬೇತಿ ಸಂಸ್ಥೆಗಳಿಂದ (ಸಿ.ಎಸ್.ಟಿ.ಐ.) 26 ಭಾಗವಹಿಸುವವರನ್ನು ಒಟ್ಟುಗೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿಬಿಸಿ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಇದು ಸಹಯೋಗದ ಸಾಮರ್ಥ್ಯ ನಿರ್ಮಾಣ ಪ್ರಯತ್ನಗಳಿಗೆ ಗಮನಾರ್ಹವಾದ ಔಪಚಾರಿಕ ಬದ್ಧತೆಯನ್ನು ಗುರುತಿಸುತ್ತದೆ.

ಕಾರ್ಯಾಗಾರದ ಅವಧಿಗಳು ಕರಡು ಚೌಕಟ್ಟಿನ ರಚನೆ ಮತ್ತು ನೀತಿ ನಿರ್ದೇಶನದ ಕುರಿತು ಹಂಚಿಕೆಯ ಜೋಡಣೆಯನ್ನು ಸ್ಥಾಪಿಸಿದವು. ಕಾರ್ಯಾಗಾರದಲ್ಲಿ ಎರಡು ವಿಷಯಾಧಾರಿತ ತಂಡ(ಗುಂಪು)ಗಳ ಮೂಲಕ ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು.
ಮೊದಲ ತಂಡ ಸುಸ್ಥಿರ ಹಣಕಾಸು ಮತ್ತು ಬಜೆಟ್ ಮಾದರಿಗಳ ಮೇಲೆ ಕೇಂದ್ರೀಕರಿಸಿದೆ. ಇದು ಹಣಕಾಸು ರಚನೆಗಳು ಮತ್ತು ಬಜೆಟ್ ಮಾದರಿಗಳನ್ನು ಚರ್ಚಿಸಿದೆ. ಆದಾಯ ಧಾರಣ, ಮರು-ವಿನಿಯೋಗ ಮತ್ತು ಮುಂದಕ್ಕೆ ಸಾಗಿಸುವ ಕಾರ್ಯವಿಧಾನಗಳನ್ನು ಪರಿಶೀಲಿಸಲಾಗಿದೆ. ಈ ತಂಡ ಆದಾಯ ಉತ್ಪಾದನೆಯ ಮಾರ್ಗಗಳನ್ನು ಸಹ ಅನ್ವೇಷಿಸಿದೆ.
ಎರಡನೇ ಗುಂಪು ಆಡಳಿತ ಮತ್ತು ಸಂಪನ್ಮೂಲ ಕ್ರೋಢೀಕರಣದ ಮೇಲೆ ಕೇಂದ್ರೀಕರಿಸಿದೆ. ಇದು ಅಧಿಕಾರಗಳ ನಿಯೋಜನೆ ಮತ್ತು ಆಡಳಿತ ಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿತು. ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ ಚರ್ಚೆಯ ಪ್ರಮುಖ ಕ್ಷೇತ್ರಗಳಾಗಿದ್ದವು. ಗುಂಪು ಮೂಲಸೌಕರ್ಯ ಬಳಕೆಯ ನೀತಿಯನ್ನು ಸಹ ನೋಡಿದೆ. ಸಾಂಸ್ಥಿಕ ಪರಿಣತಿ ಮತ್ತು ಡಿಜಿಟಲ್ ಸ್ಕೇಲಿಂಗ್ ಮತ್ತು ಪಾಲುದಾರಿಕೆಗಳನ್ನು ಸಹ ಚರ್ಚಿಸಲಾಯಿತು.

ಕಾರ್ಯಾಗಾರವು ಸಿಬಿಸಿಯ ಪ್ರಧಾನ ಸಲಹೆಗಾರ್ತಿ ಶ್ರೀಮತಿ ಚಂದ್ರಲೇಖಾ ಮುಖರ್ಜಿ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ಇದರ ನಂತರ ಗತಿ ಶಕ್ತಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. (ಡಾ.) ಮನೋಜ್ ಚೌಧರಿ ಅವರು ಭಾಷಣ ಮಾಡಿದರು, ಅವರು ಉದಯೋನ್ಮುಖ ಸಾಮರ್ಥ್ಯ-ನಿರ್ಮಾಣ ಭೂದೃಶ್ಯದಲ್ಲಿ ಜಿಎಸ್‌ವಿ ಪಾತ್ರದ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಸಿಬಿಸಿಯ ಅಧ್ಯಕ್ಷರಾದ ಶ್ರೀಮತಿ ಎಸ್. ರಾಧಾ ಚೌಹಾಣ್ ಅವರು ಸಾಂಸ್ಥಿಕ ಬಲವರ್ಧನೆಯ ಮೂಲಕ ನಾಗರಿಕ ಸೇವಾ ತರಬೇತಿ ಸಂಸ್ಥೆ (ಸಿ.ಎಸ್.ಟಿ.ಐ.) ಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, 2047ರಲ್ಲಿ ವಿಕಸಿತ ಭಾರತ ಕಡೆಗೆ ದೃಢವಾದ ನಾಗರಿಕ ಸೇವಾ ತರಬೇತಿ ಸಂಸ್ಥೆಗಳಿಂದ (ಸಿ.ಎಸ್.ಟಿ.ಐ.) ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸಿಬಿಸಿಯ ಅನುಕೂಲಕರ ಪಾತ್ರವನ್ನು ಒತ್ತಿ ಹೇಳಿದರು.
ಪಶ್ಚಿಮ ಪ್ರಾದೇಶಿಕ ಸಮಾಲೋಚನೆಯ ಒಳನೋಟಗಳು ಸುಸ್ಥಿರ ಹಣಕಾಸು ಕಾರ್ಯವಿಧಾನಗಳನ್ನು ಬಲಪಡಿಸುವುದು, ಆಡಳಿತ ರಚನೆಗಳನ್ನು ಸುಧಾರಿಸುವುದು ಮತ್ತು ನಾಗರಿಕ ಸೇವೆಗಳ ತರಬೇತಿ ಪರಿಸರ ವ್ಯವಸ್ಥೆಯಾದ್ಯಂತ ಸಂಪನ್ಮೂಲ ಕ್ರೋಢೀಕರಣ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಏಕೀಕೃತ ರಾಷ್ಟ್ರೀಯ ಮಟ್ಟದ ಶಿಫಾರಸುಗಳಿಗೆ ಪೂರಕವಾಗುತ್ತವೆ ಎಂದು ಸಿಬಿಸಿ ಗಮನಿಸಿದೆ.
*****
(ಪ್ರಕಟಣೆ ಐ.ಡಿ.: 2237928)
ವಿಸಿಟರ್ ಕೌಂಟರ್ : 7