ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಮೈ ಭಾರತ್‌ನ ಚಿಂತನ್ ಶಿಬಿರ "ಸಂಪರ್ಕ್ ಸೇ ಸಂವಾದ್, ಸಂವಾದ್ ಸೇ ಸಮಾಧಾನ್, ಮತ್ತು ಸಮಾಧಾನ್ ಸೇ ಸಂಕಲ್ಪ್" ಎಂಬ ಹುರುಪಿನೊಂದಿಗೆ ಮುಕ್ತಾಯಗೊಂಡಿತು
ಸವಾಲುಗಳು ಮತ್ತು ಅಡೆತಡೆಗಳು ಎದುರಾಗುತ್ತವೆ , ಆದರೆ ಅವುಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ: ಕೇಂದ್ರ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ
ಪ್ರಕಟಣಾ ದಿನಾಂಕ:
07 MAR 2026 6:30PM by PIB Bengaluru
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ಮೈ ಭಾರತ್–ಎನ್ ಎಸ್ ಎಸ್ ಚಿಂತನ ಶಿಬಿರವು ಇಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಸೈನ್ಸ್ ಅಂಡ್ ರಿಜೆನೆರೇಟಿವ್ ಮೆಡಿಸಿನ್ (ಇನ್‌ಸ್ಟೆಮ್) ನಲ್ಲಿ ಮುಕ್ತಾಯಗೊಂಡಿತು. ಚಿಂತನ ಶಿಬಿರದಲ್ಲಿ ಮೈ ಭಾರತ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ನ ಹಿರಿಯ ಅಧಿಕಾರಿಗಳು ಮತ್ತು ಕ್ಷೇತ್ರ ಕಾರ್ಯಕರ್ತರನ್ನು ಒಗ್ಗೂಡಿಸಿ, ಯುವಜನರು ಪಾಲ್ಗೊಳ್ಳುವ ಚೌಕಟ್ಟುಗಳಿಗೆ ಪುಷ್ಟಿ ನೀಡುವ ಮತ್ತು Viksit Bharat@2047 ರ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾರ್ಯಕ್ರಮ ಅನುಷ್ಠಾನವನ್ನು ಸುಧಾರಿಸುವ ಕುರಿತು ಚರ್ಚಿಸಲಾಯಿತು.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ. ರಕ್ಷಾ ಖಡ್ಸೆ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಂವಾದಗಳಲ್ಲಿ ಭಾಗವಹಿಸಿದರು ಮತ್ತು ದೇಶಾದ್ಯಂತ ಯುವ ಕಾರ್ಯಕ್ರಮಗಳಿಗೆ ಪುಷ್ಟಿ ನೀಡಲು ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಂಡರು.
"ಸಂವಾದ್ ಸೆ ಸಮಾಧಾನ್" ಎಂಬ ವಿಷಯದ ಅಡಿಯಲ್ಲಿ ಮೊದಲ ದಿನದಂದು ನಡೆದ ಚರ್ಚೆಗಳ ಆಧಾರದ ಮೇಲೆ, ಎರಡನೇ ದಿನವು "ಸಮಾಧಾನ್ ಸೆ ಸಂಕಲ್ಪ್" ಎಂಬ ವಿಷಯದ ಮೇಲೆ ಕೇಂದ್ರೀಕರಿಸಿತು, ಇದು ಕಾರ್ಯಸಾಧ್ಯ ತಂತ್ರಗಳ ಬಗ್ಗೆ ವಿಚಾರಗಳು ಮತ್ತು ಒಳನೋಟಗಳ ಬಗ್ಗೆ ಬೆಳಕು ಚೆಲ್ಲಿತು. ಯುವಜನರ ಸಂಪರ್ಕವನ್ನು ಬಲಪಡಿಸಲು, ಸ್ವಯಂಸೇವಕರ ಜಾಲಗಳನ್ನು ವಿಸ್ತರಿಸಲು ಮತ್ತು ರಾಜ್ಯಗಳಾದ್ಯಂತ ಕಾರ್ಯಕ್ರಮ ವಿತರಣಾ ಕಾರ್ಯವಿಧಾನಗಳನ್ನು ಸುಧಾರಿಸಲು, ಪರಿಹಾರಗಳು ಮತ್ತು ಕ್ರಿಯಾ ಯೋಜನೆಗಳನ್ನು ವಿನ್ಯಾಸಗೊಳಿಸಿದ ಸಹಯೋಗಿ ನೀತಿ ಪ್ರಯೋಗಾಲಯಗಳ ರೂಪದಲ್ಲಿ ವಿಷಯಾಧಾರಿತ ಸಂವಾದಗಳೊಂದಿಗೆ ದಿನವು ಪ್ರಾರಂಭವಾಯಿತು.

ಚರ್ಚೆಗಳ ಸಂದರ್ಭದ ವೇಳೆ, ಯುವಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ನಡುವೆ ಸಮನ್ವಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಮತ್ತು ಯುವಜನರ ಸಜ್ಜುಗೊಳಿಸುವಿಕೆಯನ್ನು ಬಲಪಡಿಸುವ ಮತ್ತು ಪ್ರಕರಣ ಅಧ್ಯಯನಗಳು ಹಾಗೂ ಶಿಫಾರಸುಗಳನ್ನು ವಿಷಯಾಧಾರಿತ ತಂಡಗಳು ಪ್ರಸ್ತುತಪಡಿಸಿದೆವು. ಈ ಪ್ರಸ್ತುತಿಗಳ ನಂತರ ಪ್ರಸ್ತಾವಿತ ಕಾರ್ಯತಂತ್ರಗಳನ್ನು ಪರಿಷ್ಕರಿಸಲು ಮತ್ತು ಅನುಷ್ಠಾನ ವಿಧಾನಗಳನ್ನು ಜೋಡಿಸಲು ಸಾಮೂಹಿಕ ಚರ್ಚೆಗಳು ನಡೆದವು.

ಅಧಿಕಾರಿಗಳು ಮತ್ತು ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ, ಮೈ ಭಾರತ್ ಮತ್ತು ಎನ್‌ಎಸ್‌ಎಸ್ ನ ಜಿಲ್ಲಾ ಮತ್ತು ಪ್ರಾದೇಶಿಕ ಕಚೇರಿಗಳು, ಧನ ಸಹಾಯದ ಬದಲು ಕ್ರಿಯಾತ್ಮಕತೆಯ ಮೇಲೆ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು, ಪರಿಣಾಮಕಾರಿ ಅನುಷ್ಠಾನ ಮತ್ತು ತಳಮಟ್ಟದ ತೊಡಗಿಸಿಕೊಳ್ಳುವಿಕೆ ಅರ್ಥಪೂರ್ಣ ಯುವ ಅಭಿವೃದ್ಧಿಗೆ ಇದು ಪ್ರಮುಖವಾಗಿದೆ ಎಂದು ಅವರು ಒತ್ತಿ ಹೇಳಿದರು. ಗ್ರಾಮ ಸಭೆ ಮಟ್ಟದವರೆಗೆ ತಮ್ಮ ಸಂಪರ್ಕವನ್ನು ವಿಸ್ತರಿಸಲು ಹಾಗೂ ಯುವಜನರ ಅಭಿವೃದ್ಧಿ ಉಪಕ್ರಮಗಳು ಗ್ರಾಮಗಳನ್ನು ತಲುಪುವುದನ್ನು ಮತ್ತು ತಳಮಟ್ಟದಲ್ಲಿ ಯುವಜನರನ್ನು ಸಬಲೀಕರಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮಗಳನ್ನು ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಲ್ಲಿನ ಸವಾಲುಗಳನ್ನು ಒಪ್ಪಿಕೊಂಡ ಅವರು, ಸವಾಲುಗಳು ಮತ್ತು ಅಡೆತಡೆಗಳು ಎದುರಾಗುತ್ತವೆ, ಆದರೆ ಅವುಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ ಎಂದು ಹೇಳಿದ ಅವರು ಸಬಲೀಕೃತ ಯುವಕರ ಮೂಲಕ ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ದೃಢ ನಿರ್ಧಾರ ಮತ್ತು ಬದ್ಧತೆಯೊಂದಿಗೆ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಕರೆ ನೀಡಿದರು.
ಇದಕ್ಕೂ ಮೊದಲು, BRIC–inStem ನ ನಿರ್ದೇಶಕಿ ಪ್ರೊ. ಮನೀಷಾ ಎಸ್. ಇನಾಮದಾರ್, ಮೈ ಭಾರತ್ ಮತ್ತು ಎನ್‌ಎಸ್‌ಎಸ್ ನ ಕಚೇರಿಗಳ ತಳಮಟ್ಟದ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಂವಾದಕ್ಕಾಗಿ ವೇದಿಕೆಯನ್ನು ಸೃಷ್ಟಿಸಲು ಆಯೋಜಿಸಲಾದ ಚಿಂತನ ಶಿಬಿರದ ಪರಿಕಲ್ಪನೆಯನ್ನು ಶ್ಲಾಘಿಸಿದರು. ಪಾಲುದಾರರ ನಡುವಿನ ಸಂವಾದದ ಮೂಲಕ, ವಿಜ್ಞಾನದಲ್ಲಿನ ವಿಚಾರಗಳು ಹೊರಹೊಮ್ಮುವಂತೆಯೇ, ಇಂತಹ ಚರ್ಚೆಗಳು ಸ್ಥಳೀಯ ಮಟ್ಟದಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಸೂಚಿಸಲು ಸಹಾಯ ಮಾಡುತ್ತವೆ ಎಂಬುದನ್ನು ಅವರು ತಿಳಿಸಿದರು.
ಚರ್ಚೆಗಳ ಒಟ್ಟಾರೆ ಫಲಿತಾಂಶಗಳ ಕುರಿತು ಸಂಕ್ಷಿಪ್ತವಾಗಿ ಹೇಳುವುದರೊಂದಿಗೆ, ಯುವಜನ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಡಾ. ಪಲ್ಲವಿ ಜೈನ್ ಗೋವಿಲ್, ಯುವ ಅಭಿವೃದ್ಧಿ ಉಪಕ್ರಮಗಳಿಗೆ ನಿರಂತರ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಇಲಾಖೆಗಳು ಮತ್ತು ಸಂಸ್ಥೆಗಳು ಮೈ ಭಾರತ್ ವೇದಿಕೆಗೆ ಸೇರಲು ಮತ್ತು ದೇಶಾದ್ಯಂತ ಯುವಜನರ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಜೊತೆಗೂಡಿ ಕೆಲಸ ನಿರ್ವಹಿಸಲು ಪ್ರೋತ್ಸಾಹಿಸುವ "ಯುವಕರಿಗಾಗಿ ಸಹಕರಿಸೋಣ" ಎಂಬ ಮನೋಭಾವದೊಂದಿಗೆ ಮುನ್ನಡೆಯುವಂತೆ ಅವರು ಒತ್ತಿ ಹೇಳಿದರು.




ಸಮಾರೋಪ ಸಮಾರಂಭದ ಭಾಗವಾಗಿ ರಾಷ್ಟ್ರೀಯ ಮತದಾರರ ದಿನ ಮತ್ತು ಬಜೆಟ್ ಕ್ವೆಸ್ಟ್ 2026 ರಂತಹ ಕಾರ್ಯಕ್ರಮಗಳ ಅಡಿಯಲ್ಲಿ ಅನುಕರಣೀಯ ಉಪಕ್ರಮಗಳನ್ನು ಗುರುತಿಸಲಾಯಿತು, ಇದು ಯುವಜನರ ಭಾಗವಹಿಸುವಿಕೆಯನ್ನು ಬಲಪಡಿಸುವಲ್ಲಿ ಅಧಿಕಾರಿಗಳು ಮತ್ತು ಜಿಲ್ಲೆಗಳ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸಿತು. 2026 ರ ರಾಷ್ಟ್ರೀಯ ಮತದಾರರ ದಿನದಂದು ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಕೇರಳದ, ರಾಜ್ಯ ನಿರ್ದೇಶಕ ಶ್ರೀ. ಅನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು ಮತ್ತು ಬಜೆಟ್ ಕ್ವೆಸ್ಟ್ 2026 ರ ರಸಪ್ರಶ್ನೆಯಲ್ಲಿ ಅತ್ಯುತ್ತಮ ರಾಜ್ಯ ಪ್ರದರ್ಶನ ನೀಡಿದಕ್ಕಾಗಿ ತಮಿಳುನಾಡಿನ, ರಾಜ್ಯ ನಿರ್ದೇಶಕರಾದ ಶ್ರೀ. ಸೆಂಥಿಲ್ ಕುಮಾರ್ ಅವರನ್ನು ಗುರುತಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ, ಕರ್ನಾಟಕದ ಬೆಂಗಳೂರು ನಗರದ ಡಿವೈಒ ಶ್ರೀಮತಿ. ಎ. ನಾಗಲಕ್ಷ್ಮಿ ಅವರನ್ನು ಬಜೆಟ್ ಕ್ವೆಸ್ಟ್ 2026 ರಲ್ಲಿ ಅತ್ಯುತ್ತಮ ಜಿಲ್ಲಾ ಪ್ರದರ್ಶನಕ್ಕಾಗಿ ಸನ್ಮಾನಿಸಲಾಯಿತು, ನಂತರ ಎರಡನೇ ಅತ್ಯುತ್ತಮ ಜಿಲ್ಲಾ ಪ್ರದರ್ಶನಕ್ಕಾಗಿ ತಮಿಳುನಾಡಿನ ಚೆನ್ನೈನ ಡಿವೈಒ ಶ್ರೀ. ಶಿವ ಎಂಎಸ್ ಅವರನ್ನು ಮತ್ತು ಈ ಉಪಕ್ರಮದಲ್ಲಿ ಮೂರನೇ ಅತ್ಯುತ್ತಮ ಜಿಲ್ಲಾ ಪ್ರದರ್ಶನಕ್ಕಾಗಿ ತೆಲಂಗಾಣದ ಹೈದರಾಬಾದ್‌ನ ಡಿವೈಒ ಶ್ರೀಮತಿ. ಖುಷ್ಬೂ ಗುಪ್ತಾ ಅವರನ್ನು ಸನ್ಮಾನಿಸಲಾಯಿತು.
ಈ ಪ್ರಯತ್ನಗಳನ್ನು ಗುರುತಿಸುವ ಮೂಲಕ, ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಯುವಕರು ತೊಡಗಿಸಿಕೊಳ್ಳುವಂತಹ ಉಪಕ್ರಮಗಳು ವೇಗವಾಗಿ ಬೆಳೆಯುತ್ತಿರುವದನ್ನು ಪ್ರತಿಬಿಂಬಿಸಿತು ಮತ್ತು ಯುವಕರನ್ನು ಸಜ್ಜುಗೊಳಿಸುವಲ್ಲಿ ಅಧಿಕಾರಿಗಳ ಸಮರ್ಪಿತ ಪಾತ್ರವನ್ನು ಎತ್ತಿ ತೋರಿಸಿತು. ಚರ್ಚೆಗಳು ಪ್ರಮುಖ ಒಳನೋಟಗಳ ಸಂಶ್ಲೇಷಣೆ ಮತ್ತು ಯುವ ಭಾಗವಹಿಸುವಿಕೆ ಹಾಗೂ ಸ್ವಯಂಸೇವಕತೆಯನ್ನು ಮತ್ತಷ್ಟು ಬಲಪಡಿಸಲು ಸಾಮೂಹಿಕ ಬದ್ಧತೆಯನ್ನು ಒಳಗೊಂಡಿತ್ತು.
ಚಿಂತನ ಶಿಬಿರವು "ಸಂಪರ್ಕ್ ಸೆ ಸಂವಾದ್, ಸಂವಾದ್ ಸೆ ಸಮಾಧಾನ್, ಮತ್ತು ಸಮಾಧಾನ್ ಸೆ ಸಂಕಲ್ಪ್" ಎಂಬ ಮಾರ್ಗದರ್ಶಿ ಮನೋಭಾವದೊಂದಿಗೆ ಮುಕ್ತಾಯವಾಯಿತು, ಇದು ಭಾರತದ ಅಮೃತ್ ಪೀಢಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡುವ ಮತ್ತು Viksit Bharat@2047 ರ ದೃಷ್ಟಿಕೋನವನ್ನು ಮುನ್ನಡೆಸುವ ಸಂಕಲ್ಪವನ್ನು ಪುನರುಚ್ಚರಿಸಿತು.
*****
(ಪ್ರಕಟಣೆ ಐ.ಡಿ.: 2236519)
ವಿಸಿಟರ್ ಕೌಂಟರ್ : 23